Latest Updates
-
ಕೋಲ್ಕತ್ತಾದಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಸುರಕ್ಷಿತ ಸಮಯ ಮತ್ತು ಮಾರ್ಗಗಳನ್ನು ತಪ್ಪದೇ ತಿಳಿಯಿರಿ -
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ!
ಒತ್ತಡವೆಂದು ಅತಿಯಾಗಿ ಸಿಗರೇಟ್ ಸೇದುತ್ತಿದ್ದೀರಾ? ಹಾಗಾದರೆ ಈ ವಿಚಾರನೂ ತಿಳಿದಿರಲಿ
ಒತ್ತಡ, ಆತಂಕ, ನೋವು, ಚಿಂತೆ, ದುಃಖ ಇಂತಹ ಪರಿಸ್ಥಿತಿ ಎದುರಾದಾಗ ಧೂಮಪಾನಿಗಳ ಮೊದಲ ಆಯ್ಕೆಯೇ ಸಿಗರೇಟ್. ಅದೇನೋ ಗೊತ್ತಿಲ್ಲ ಸಿಗರೇಟ್ ಸೇದಿದ ತಕ್ಷಣ ಆ ಎಲ್ಲಾ ರೀತಿಯ ಗೊಂದಲಗಳಿಂದ ಹೊರಬಂದ ಹಾಗೆ ವರ್ತಿಸುತ್ತಾರೆ.

ಆದರೆ ನಿಮಗೊತ್ತಾ ನೀವು ಸೇದೋ ಸಿಗರೇಟ್ ನಿಮ್ಮ ಒತ್ತಡವನ್ನು ಕಡಿಮೆ ಮಾಡೋ ಬದಲು ಅದು ನಿಮ್ಮ ಒತ್ತಡವನ್ನು ಮತ್ತಷ್ಟು ಹೆಚ್ಚು ಮಾಡುತ್ತಂತೆ. ಹಾಗಾದ್ರೆ ಸಿಗರೇಟ್ ಸೇದಿದ್ರೆ ನಮ್ಮ ಒತ್ತಡ ಹೆಚ್ಚಾಗೋದು ಹೇಗೆ? ಒತ್ತಡದಿಂದ ಹೊರ ಬರಲು ಸಿಗರೇಟ್ ಒಂದೇ ಪರಿಹಾರವಲ್ಲ. ಒತ್ತಡದಿಂದ ಆಚೆ ಬರಲು ಬೇರೆ ಏನು ಮಾಡಬಹುದು ಅನ್ನೋದನ್ನ ಹೇಳ್ತೀವಿ.
ಸಿಗರೇಟ್ ಸೇವನೆಯಿಂದ ಒತ್ತಡ ಹೆಚ್ಚಾಗುತ್ತಾ?
ಅನೇಕ ಜನ ಸಿಗರೇಟ್ ಸೇದುವವರು ಒತ್ತಡ ಕಡಿಮೆ ಮಾಡುತ್ತೆ ಅನ್ನೋ ಕಾರಣಕ್ಕೆ ಸಿಗರೇಟ್ ಸೇದುತ್ತಾರೆ. ಅದರೆ ನಿಜಾ ಏನಂದರೆ ಸಿಗರೇಟ್‌ನಲ್ಲಿರುವ ನಿಕೋಟಿನ್ ಅಂಶ ನಮ್ಮ ಮೂಡ್ ಅನ್ನು ಮಾರ್ಪಡಿಸುವ ಶಕ್ತಿ ಹೊಂದಿದೆ ಅಷ್ಟೇ. ಅದನ್ನು ಸೇದಿದಾಗ ಹತಾಶೆ, ಕೋಪ ಮತ್ತು ಆತಂಕದ ಭಾವನೆಗಳನ್ನು ಬೇರೆಡೆಗೆ ತಿರುಗಿಸುತ್ತೆ ಅಷ್ಟೇ. ಹಾಗಂತ ಈ ಅಭ್ಯಾಸ ಖಂಡಿತ ಒಳ್ಳೆಯದಲ್ಲ.
ಒಂದು ಅಧ್ಯಯನದ ಪ್ರಕಾರ ಧೂಮಪಾನದಿಂದ ಒತ್ತಡ ಕಡಿಮೆಯಾಗುವುದಿಲ್ಲ. ಇದರಿಂದ ನಿಮ್ಮ ಮೇಲೆ ನಕಾರಾತ್ಮಕ ಪರಿಣಾಮಗಳೇ ಹೆಚ್ಚಾಗುತ್ತದೆ. ಅವುಗಳೆಂದರೆ :
* ಸ್ನಾಯುಗಳ ಒತ್ತಡ ಹೆಚ್ಚಾಗುತ್ತದೆ
* ರಕ್ತದೊತ್ತಡದಲ್ಲಿ ಹೆಚ್ಚಳ
* ಸಂಕುಚಿತ ರಕ್ತನಾಳಗಳು
* ಹೃದಯ ಬಡಿತದಲ್ಲಿ ಹೆಚ್ಚಳ
* ಮೆದುಳು ಮತ್ತು ದೇಹಕ್ಕೆ ಲಭ್ಯವಿರುವ ಆಮ್ಲಜನಕದ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ
ನೀವು ಧೂಮಪಾನ ಸೇವನೆ ಮಾಡುವಾಗ, ನಿಕೋಟಿನ್ ನಿಮ್ಮ ಮೆದುಳನ್ನು ಸೇರುತ್ತದೆ. ಹಾಗೂ ಮೆದುಳಿನಲ್ಲಿ ಡೋಪಮಿನ್ ಬಿಡುಗಡೆಯಾಗುತ್ತದೆ. ಡೋಪಮೈನ್ ಬಿಡುಗಡೆಯಾದಾಗ ನೀವು ಅನುಭವಿಸುವ ಸಕಾರಾತ್ಮಕ ಭಾವನೆಗಳು ಅಲ್ಪಕಾಲಿಕವಾಗಿರುತ್ತವೆ. ಒಮ್ಮೆ ಡೋಪಮೈನ್ ಮಟ್ಟಗಳು ಕಡಿಮೆಯಾದಾಗ, ನೀವು ಮೊದಲಿಗಿಂತ ಕೆಟ್ಟ ಪರಿಸ್ಥಿತಿಗೆ ಹೋಗುತ್ತೀರಿ. ಮತ್ತು ಒತ್ತಡ ಇನ್ನಷ್ಟು ಜಾಸ್ತಿಯಾಗುತ್ತದೆ.
ಒತ್ತಡದಿಂದ ಹೊರ ಬರಲು ಬೇರೆ ಮಾರ್ಗಗಳು ಯಾವುದು?
ನೀವೇನಾದರೂ ಚೈನ್ ಸ್ಮೂಕರ್ ಆಗಿದ್ದರೆ ಖಂಡಿತ ನಿಮಗೆ ಸಿಗರೇಟ್ ಸೇವನೆಯನ್ನು ಬಿಡುವುದು ಕಷ್ಟ ಅನ್ನಿಸಬಹುದು. ಆದ್ರೆ ನಾವು ಈಗ ಹೇಳೋ ಕೆಲವೊಂದು ಟಿಪ್ಸ್ ನಿಮನ್ನು ಸಿಗರೇಟ್ ಸೇವನೆಯ ಚಟದಿಂದ ದೂರ ಮಾಡುತ್ತದೆ. ಹಾಗೂ ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ.

ಚುರುಕು ನಡಿಗೆ ಅಭ್ಯಾಸ ಮಾಡಿ
ಚುರುಕು ನಡಿಗೆಯನ್ನು ಅಭ್ಯಾಸ ಮಾಡಿದರೆ ನಿಮಗೆ ಅದು ಒಂದು ರೀತಿಯ ವಿಶ್ರಾಂತಿಯನ್ನು ನೀಡುತ್ತದೆ. ಕೆಲವೊಮ್ಮೆ, ವಾಕಿಂಗ್ ನಿಮ್ಮ ಆಲೋಚನೆಗಳನ್ನು ಸಂಘಟಿಸಲು ಅಥವಾ ಕೆಲವು ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ನಡಿಗೆಯಂತಹ ಚಟುವಟಿಕೆಯಲ್ಲಿ ತೊಡಗಿಕೊಂಡರೆ ನಿಮ್ಮ ಸಮಸ್ಯೆಗಳನ್ನು ಕ್ಷಣಿಕವಾಗಿ ಮರೆತು ಬಿಡುತ್ತೀರಿ.

ಯೋಗ ಅಥವಾ ತೈ ಚಿ ಅಭ್ಯಾಸ ಮಾಡಿ
ನೀವು ದೀರ್ಘಾವಧಿಯ ಒತ್ತಡವನ್ನು ಅನುಭವಿಸುತ್ತಿದ್ದರೆ ಯೋಗ ಅಥವಾ ತೈ ಚಿಯಂತಹ ವಿಶ್ರಾಂತಿ ವ್ಯಾಯಾಮಗಳನ್ನು ನಿಯಮಿತವಾಗಿ ಅಭ್ಯಾಸ ಮಾಡಿ. ಯೋಗವು ನಿಮ್ಮ ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡುತ್ತದೆ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ತೈ ಚಿ ನಿಮ್ಮ ದೇಹದಲ್ಲಿ ಸಮತೋಲನವನ್ನು ಸಾಧಿಸಲು ಸಹಾಯ ಮಾಡುತ್ತದೆ.

ನಂಬಿಕೆ ಅರ್ಹರಾದ ವ್ಯಕ್ತಿಯ ಜತೆಗೆ ಮಾನಸ್ಸು ಬಿಚ್ಚಿ ಮಾತನಾಡಿ
ನಿಮ್ಮ ಆಪ್ತರು, ಸ್ನೇಹಿತರು ಅಥವಾ ನಂಬಿಕೆ ಅರ್ಹರಾದ ಒಬ್ಬ ವ್ಯಕ್ತಿಯಲ್ಲಿ ನಿಮ್ಮ ಎಲ್ಲಾ ನೋವು, ಸಮಸ್ಯೆಗಳನ್ನು ಹೇಳಿಕೊಳ್ಳಿ. ಯಾವ ರೀತಿ ಸಮಸ್ಯೆಯನ್ನು ನೀವು ಎದುರಿಸುತ್ತಿದ್ದೀರಿ? ಸಿಗರೇಟ್ ಸೇವನೆಯಿಂದ ಹೊರ ಬರಲು ಸಾಧ್ಯವೇ ಆಗುತ್ತಿಲ್ಲ ಅನ್ನುವ ಸಂದರ್ಭದಲ್ಲಿ ಅವರೊಂದು ಕೂತು ಮಾತನಾಡಿ ಸಲಹೆ ಪಡೆದುಕೊಂಡರೆ ಉತ್ತಮ.

ಕಣ್ಣು ಮುಚ್ಚಿ ದೃಶ್ಯ ಅನುಭವ ಪಡೆಯಿರಿ
ಹೆಚ್ಚು ಒತ್ತಡ ಅನ್ನಿಸಿದಾಗ ಸಿಗರೇಟ್ ಪ್ಯಾಕೇಟ್ ಮುಟ್ಟುವುದನ್ನು ಬಿಟ್ಟು ನಿಮ್ಮ ಕೋಣೆಯಲ್ಲಿ ಪ್ರಶಾಂತವಾಗಿ ಕುಳಿತುಕೊಳ್ಳಿ. ಕಣ್ಣುಮುಚ್ಚಿ ಆಹ್ಲಾದಕರ, ಶಾಂತ ಪರಿಸರದಲ್ಲಿ ನಿಮ್ಮನ್ನು ನೀವು ಕಲ್ಪಿಸಿಕೊಳ್ಳಿ. ನೀರಿನ ಶಬ್ದ, ಸೂರ್ಯನ ಉಷ್ಣತೆ ಮತ್ತು ಮರಳು, ಹುಲ್ಲು ಅಥವಾ ತಾಜಾ ಗಾಳಿಯ ವಾಸನೆ ನಿಮ್ಮ ಒತ್ತಡವನ್ನು ನಿಧಾನವಾಗಿ ಕಡಿಮೆ ಮಾಡುತ್ತದೆ.
ಸಿಗರೇಟ್ ಸೇವನೆಯಿಂದ ಕ್ಯಾನ್ಸರ್‌ನಂತಹ ಭಯಾನಕ ಕಾಯಿಲೆಗಳು ವಕ್ಕರಿಸುತ್ತದೆ. ಕ್ಷಣಿಕ ಸುಖಕ್ಕೆ ಬಿದ್ದು ಸಿಗರೇಟ್ ಸೇವನೆಯನ್ನು ಮೈಗೂಡಿಸಿಕೊಂಡರೆ ಒಂದಲ್ಲ ಒಂದು ದಿನ ನಮ್ಮ ಜೀವಕ್ಕೆ ಕುತ್ತು ಉಂಟಾಗೋದ್ರಲ್ಲಿ ಎರಡು ಮಾತಿಲ್ಲ.



Click it and Unblock the Notifications


