Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳಲ್ಲಿ ಹೆಚ್ಚುತ್ತಿದೆ ವಿಶ್ಯೂಯಲ್ ಆಟಿಸಂ: ಇದಕ್ಕೆ ಪೋಷಕರೇ ಕಾರಣವಾಗುತ್ತಿರುವುದೇ ದುರಂತ!
ಪೋಷಕರೇ ನೀವು ನಿಮ್ಮ ಮಕ್ಕಳಲ್ಲಿ ವಿಶ್ಯೂಯಲ್ ಆಟಿಸಂ ಕಾರಣವಾಗುತ್ತಿದ್ದೀರಾ ಎಂಬುವುದು ಗೊತ್ತಿದೆಯೇ? ಹೌದು ಬಹುತೇಕ ಪೋಷಕರು ಇಂದು ಇಂಥದ್ದೊಂದು ದೊಡ್ಡ ತಪ್ಪು ಮಾಡುತ್ತಿದ್ದಾರೆ. ಆಟಿಸಂ ಬಗ್ಗೆ ನೀವು ಕೇಳುರುತ್ತೀರಿ, ಆಟಿಸಂ ಇರುವ ಮಕ್ಕಳು ಹೇಗಿರುತ್ತಾರೆ ಎಂಬುವುದು ಗೊತ್ತಿರುತ್ತದೆ, ಆದರೆ ವಿಶ್ಯೂಯಲ್ ಆಟಿಸಂ ಬಗ್ಗೆ ಕೇಳಿದ್ದೀರಾ? ಪ್ರತಿಯೊಬ್ಬ ಪೋಷಕರು ಈ ಬಗ್ಗೆ ತಿಳಿದಿರಬೇಕು, ಆವಾಗ ಮಾತ್ರ ನಮ್ಮ ಮಕ್ಕಳನ್ನು ವಿಶ್ಯೂಯಲ್ ಆಟಿಸಂನಿಂದ ರಕ್ಷಣೆ ಮಾಡಲು ಸಾಧ್ಯ. ಈ ವಿಶ್ಯೂಯಲ್ ಆಟಿಸಂ ಎಂದರೇನು? ಈ ಸಮಸ್ಯೆಗೆ ಪೋಷಕರು ಹೇಗೆ ಕಾರಣವಾಗುತ್ತಿದ್ದಾರೆ ಎಂದು ನೋಡೋಣ ಬನ್ನಿ....

ಮಕ್ಕಳ ಕಂಟ್ರೋಲ್ ಮಾಡಲು ಮೊಬೈಲ್ ಅಸ್ತ್ರ
ಈಗೀನ ಬಹುತೇಕ ಪೋಷಕರು ಮಕ್ಕಳ ಗಲಾಟೆ ತಡೆಗಟ್ಟ, ಅವರು ಆಹಾರ ಸೇವಿಸಲು ಮೊಬೈಲ್ ಕೊಡುವ ಅಭ್ಯಾಸ ಮಾಡುತ್ತಿದ್ದಾರೆ. ಮೊಬೈಲ್ ಕೈಗೆ ಕೊಟ್ಟರೆ ಮಕ್ಕಳು ಸುಮ್ಮನೆ ಒಂದು ಕಡೆ ಕೂತಿರುತ್ತಾರೆ ಪೋಷಕರು ಆರಾಮವಾಗಿ ತಮ್ಮ ಕೆಲಸ-ಕಾರ್ಯಗಳನ್ನು ಮುಗಿಸಬಹುದು, ಇಲ್ಲದಿದ್ದರೆ ಅವರು ಗಲಾಟೆ ಮಾಡುವುದರಿಂದ ಮ್ಯಾನೇಜ್ ಮಾಡುವುದು ಕಷ್ಟ. ಇನ್ನು ಮಕ್ಕಳಿಗೆ ತಿನ್ನಿಸುವುದಂತೂ ತುಂಬಾನೇ ಕಷ್ಟ, ಅವರು ತಿನ್ನಬೇಕೆಂದರೆ ಮೊಬೈಲ್ ಕೈಗೆ ಕೊಟ್ಟರೆ ಆಯ್ತು, ಅವರಿಗೆ ತಾವು ಏನು ತಿನ್ನುತ್ತಿದ್ದೇವೆ ಎಂಬುವುದು ಕೂಡ ಗೊತ್ತಿರುವುದಿಲ್ಲ ತಮ್ಮ ಪಾಡಿಗೆ ತಾವು ಆಹಾರ ತಿನ್ನುತ್ತವೆ. ಒಟ್ಟಿನಲ್ಲಿ ಮಕ್ಕಳ ಗಲಾಟೆ ತಡೆಯಲು ಪೋಷಕರು ಕಂಡುಕೊಂಡಿರುವ ಮಾರ್ಗ ಮಕ್ಕಳಿಗೆ ಮೊಬೈಲ್ ಕೊಡುವುದು.
ಶಾಪಿಂಗ್ ಹೋಗಲಿ, ಹೋಟೆಲ್‌ಗೆ ಹೋಗಲಿ, ಮನೆಯಲ್ಲಿರಲಿ ಈಗೀನ ಬಹುತೇಕ ಮಕ್ಕಳು ಮೊಬೈಲ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ಗಂಟೆಗಟ್ಟಲೆ ಸಮಯವನ್ನು ಮೊಬೈಲ್‌ನಲ್ಲಿ ಕಳೆಯುತ್ತಿದ್ದಾರೆ. ಇದರಿಂದ ನಿಮ್ಮ ಮಕ್ಕಳನ್ನು ಎಂಥ ಭಯಾನಕ ಅಪಾಯಕ್ಕೆ ದೂಡುತ್ತಿದ್ದೀರಿ ಎಂಬ ಯೋಜನೆಯೂ ಪೋಷಕರಿಗೆ ಇಲ್ಲ. ನಿಮ್ಮ ಮಕ್ಕಳಿಗಾಗಿ ನೀವು ಕಷ್ಟಪಟ್ಟು ದುಡಿಯುತ್ತಿರಬಹುದು, ಅವರಿಗಾಗಿಯೇ ನೀವು ಜೀವಿಸುತ್ತಿರಬಹುದು, ಆದರೆ ಅವರ ಕೈಯಲ್ಲಿ ಮೊಬೈಲ್ ಕೊಟ್ಟರೆ ಅವರ ಭವಿಷ್ಯಕ್ಕೆ ನೀವೇ ಕೊಳ್ಳಿ ಇಟ್ಟಂತೆ ಪೋಷಕರೇ... ಹೌದು ಕೇಳಲು ಕಠೋರ ಅನಿಸಿದರೂ ಇದು ವಾಸ್ತವ ಸತ್ಯ.
ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ಹೆಚ್ಚಾಗುತ್ತಿದೆ ವಿಶ್ಯೂಯಲ್ ಆಟಿಸಂ
ಇತ್ತೀಚೆಗೆ ಮಕ್ಕಳಲ್ಲಿ ವಿಶ್ಯೂಯಲ್ ಆಟಿಸಂ ಎಂಬ ಸಮಸ್ಯೆ ಹೆಚ್ಚಾಗುತ್ತಿದೆ ಅಂದರೆ ಮಕ್ಕಳಲ್ಲಿ ನೆನಪಿನ ಶಕ್ತಿ, ಆಲೋಚನಾ ಶಕ್ತಿ ಕಡಿಮೆಯಾಗುವುದು. ನರ್ಸರಿ, ಜೂನಿಯರ್, ಸೀನಿಯರ್ ಕೆಜಿ ಟೀಚರ್ಸ್ ಬಳಿ ಕೇಳಿ ನೋಡಿ, ಮಕ್ಕಳಲ್ಲಿ ಕಂಡು ಬರುತ್ತಿರುವ ಬದಲಾವಣೆ ಅವರ ಅರಿವಿಗೆ ಬಂದಿರುತ್ತದೆ. 10 ವರ್ಷದ ಹಿಂದೆ ಕಾಣದಿರುವ ಸಮಸ್ಯೆ ಈಗ ಕಂಡು ಬರುತ್ತಿದೆ. ಮಕ್ಕಳಲ್ಲಿ ನೆನಪಿನ ಶಕ್ತಿ ಕುಗ್ಗುತ್ತಿದೆ. ಅಲ್ಲದೆ ಏನಾದರೂ ಕಲಿಸಬೇಕೆಂದರೆ ಸ್ಕ್ರೀನ್ ತೋರಿಸಿ ಕಲಿಸಬೇಕು, ಹಾಗೇ ಹೇಳಿಕೊಟ್ಟರೆ ಕಲಿಯುತ್ತಿಲ್ಲ. ಅಲ್ಲದೆ ಮಕ್ಕಳಿಗೆ ಒಂದು ವಿಷಯದತ್ತ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಇವೆಲ್ಲಾ ಸಮಸ್ಯೆ ಮೊಬೈಲ್ ಹೆಚ್ಚಾಗಿ ನೀಡುವುದರಿಂದ ಉಂಟಾಗುತ್ತಿದೆ.
ಪೋಷಕರೇ ಮಕ್ಕಳ ಕೈಗೆ ಮೊಬೈಲ್ ಕೊಡುವಾಗ ಅವರ ಭವಿಷ್ಯದ ಬಗ್ಗೆ ಯೋಚಿಸಿ....
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
