Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಚಿಕ್ಕಮಕ್ಕಳು ಬಹುಬೇಗ ಕಾಯಿಲೆಗೆ ಒಳಗಾಗುವುದೇಕೆ? ವೈದ್ಯರು ಹೇಳುವುದೇನು ನೋಡಿ..!
ಮಕ್ಕಳು ಈಗ ಬಹುಬೇಗ ಕಾಯಿಲೆಗೆ ಬೀಳುತ್ತಾರೆ ಎಂಬುದು ಪೋಷಕರ ದೂರಾಗಿರುತ್ತೆ. ಮಕ್ಕಳ ಮೇಲೆ ಎಷ್ಟೇ ಗಮನವಿಟ್ಟರೂ ಕೂಡ ಅವರ ಕಾಯಿಲೆಗೆ ಬೀಳುತ್ತಲೇ ಇರುತ್ತಾರೆ. ಅದರಲ್ಲೂ ಕಾಲೋಚಿತ ಅನಾರೋಗ್ಯಕ್ಕೆ ಅವರು ಬಹುಬೇಗ ತುತ್ತಾಗುತ್ತಾರೆ. ಹವಾಮಾನ ಬದಲಾದಂತೆ ಅವರಲ್ಲಿ ಅನಾರೋಗ್ಯ ಕಾಣಿಸಿಕೊಳ್ಳುತ್ತದೆ.
ಆದರೆ ಮಕ್ಕಳು ಈ ರೀತಿ ಕಾಯಿಲೆ ಬೀಳುವುದನ್ನು ತಪ್ಪಿಸುವುದು ಹೇಗೆ ಎಂಬುದೇ ದೊಡ್ಡ ಪ್ರಶ್ನೆಯಾಗಿರುತ್ತೆ. ಏಕೆಂದರೆ ಮಕ್ಕಳು ಮನೆಗಿಂತಲೂ ಹೆಚ್ಚು ಸಮಯ ಶಾಲೆಯಲ್ಲಿ ಕಳೆಯುವುದರಿಂದ ಪೋಷಕರ ಅವರ ಮೇಲೆ ಕಣ್ಣಿಡಲು ಆಗುವುದಿಲ್ಲ. ಮನೆಯಲ್ಲಿದ್ದಾಗ ಅವರ ಆರೋಗಕ್ಕೆ ಹಾನಿ ಮಾಡುವ ವಿಚಾರಗಳಿಂದ ದೂರ ಇಡುವತ್ತ ಗಮನ ಇಡಬಹುದು. ಆದ್ರೆ ಶಾಲೆಯಲ್ಲಿ ಹೀಗೆ ಮಾಡಲು ಸಾಧ್ಯವಾಗುವುದಿಲ್ಲ.

ಹಾಗಾದ್ರೆ ಮಕ್ಕಳು ಕಾಯಿಲೆ ಬೀಳುವುದನ್ನು ತಡೆಯುವುದು ಹೇಗೆ? ಅವರು ಶಾಲೆಯಲ್ಲಿ ಅನೈರ್ಮಲ್ಯಕ್ಕೆ ತುತ್ತಾಗುವುದನ್ನು ತಡೆಯುವುದಾದರು ಹೇಗೆ ಎಂಬುದನ್ನು ವೈದ್ಯರಾದ ವಿನಯ್ ಹೊಸದುರ್ಗ ಅವರು ವಿವರಿಸುತ್ತಾರೆ.
ಮಕ್ಕಳಿಗೆ ಕಾಯಿಲೆಗಳು ಹೆಚ್ಚಾಗಿ ಮನೆಯ ವಾತಾವರಣದಲ್ಲಿ ಹರಡುವುದಿಲ್ಲ ಅದು ಶಾಲೆಯಿಂದ ಹರಡುವ ಪ್ರಮಾಣವೇ ಹೆಚ್ಚು. ಶಾಲೆಗಳಲ್ಲಿ ಮಕ್ಕಳು ಯಾವುದೇ ರೀತಿಯ ತಾರತಮ್ಯದ ಕಲ್ಪನೆಗಳಿಲ್ಲದೆ ಇತರ ಮಕ್ಕಳೊಳಗೂಡಿ ಸ್ವಚ್ಛ ಮನಸ್ಸಿನಿಂದ ಬೆರೆಯುತ್ತಾರೆ ಮತ್ತು ಆಟ, ಪಾಠಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ ಈ ವೇಳೆ ಯಾವುದೋ ಒಂದು ಮಗು ಸೀನಿದರೆ ಅಥವಾ ಕೆಮ್ಮಿದರೆ ಅದರಿಂದ ಇನ್ನೊಂದು ಮಗುವಿಗೆ ವೈರಾಣುಗಳು ಹರಡುವ ಸಾಧ್ಯತೆ ಇರುತ್ತದೆ ಎಂದು ಅವರು ವಿವರಿಸುತ್ತಾರೆ.
ಕೆಲವೊಂದು ಕಾಯಿಲೆಗಳು ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಹರಡುತ್ತದೆ. ಏಕೆಂದರೆ ಶಾಲೆಯಲ್ಲಿ ಮಕ್ಕಳ ಮೇಲೆ ನಿಗಾ ಇಡುವುದು ಬಹಳ ಕಷ್ಟವಾಗಿರುತ್ತದೆ. ಅವರ ಆರೋಗ್ಯ ಕುರಿತಂತೆ ಕೂಡ ಯಾರು ಕೂಡ ನಿಗಾ ಇಡಲು ಆಗುವುದಿಲ್ಲ. ಹೀಗಾಗಿ ಶಾಲೆಯಲ್ಲಿ ಕಾಯಿಲೆಗಳು ಹೆಚ್ಚು ಹರಡುತ್ತದೆ.
ಕೈಗಳ ನೈರ್ಮಲ್ಯ ಎಷ್ಟು ಮುಖ್ಯ?
ಮಕ್ಕಳ ದೇಹವು ತುಂಬಾನೆ ಸೂಕ್ಷ್ಮವಾಗಿರುತ್ತದೆ. ಸಣ್ಣ ಪುಟ್ಟ ಕಾಯಿಲೆಗಳು ಕೂಡ ಅವರಲ್ಲಿ ದೊಡ್ಡದಾಗುವ ಸಾಧ್ಯತೆ ಇರುತ್ತದೆ. ಇದಕ್ಕೆಲ್ಲ ಮುಖ್ಯ ಕಾರಣ ಅಗುವುದು ಕೈಗಳ ನೈರ್ಮಲ್ಯ ಇಲ್ಲದಿರುವಿಕೆಯಿಂದ. ಶಾಲೆಯಲ್ಲಿ ಮಕ್ಕಳು ಹಲವು ವಸ್ತುಗಳ ಮುಟ್ಟುತ್ತಾರೆ. ಒಬ್ಬರನೊಬ್ಬರು ಮುಟ್ಟುತ್ತಾರೆ. ಆದ್ರೆ ಅವರು ಎಂದಿಗೂ ಕೈ ತೊಳೆಯುವುದಿಲ್ಲ, ತೊಳೆದರು ನೀಟಾಗಿ ಮನೆಯಲ್ಲಿ ಪೋಷಕರು ತೊಳೆಸಿದಂತೆ ಆಗುವುದಿಲ್ಲ. ಅವರು ಊಟ ಮಾಡುವಾಗ, ಏನನ್ನಾದರು ತಿನ್ನುವಾಗ ಕೈ ತೊಳೆಯದೇ ತಿನ್ನುವ ಸಾಧ್ಯತೆ ಇರುತ್ತದೆ, ಹೀಗಾಗಿ ಅವರಲ್ಲಿ ಕಾಯಿಲೆಗಳು ಹೆಚ್ಚಾಗಿ ಹರಡುತ್ತದೆ ಎಂದು ಡಾ. ವಿನಯ್ ಹೇಳುತ್ತಾರೆ.
ಮಕ್ಕಳು ಅನಾರೋಗ್ಯವಾಗಿದ್ದಾಗ ಶಾಲೆಗೆ ಕಳುಹಿಸಬೇಡಿ
ಮಕ್ಕಳಲ್ಲಿ ಸಣ್ಣ ಪುಟ್ಟ ಅನಾರೋಗ್ಯ ಇದ್ದರೂ ಕುಡ ಅವರನ್ನು ಶಾಲೆಗೆ ಕಳುಹಿಸಬೇಡಿ, ಇದರಿಂದ ಬೇರೆ ವಿದ್ಯಾರ್ಥಿಗಳು ಮಕ್ಕಳಿಗೂ ಕಾಯಿಲೆ ಹರಡುತ್ತದೆ. ಒಂದು ವೇಳೆ ಕಳುಹಿಸುವುದೇ ಆದರೆ ಮಾಸ್ಕ್ ಹಾಕಿ ಕಳುಹಿಸುವುದು ಉತ್ತಮ.
ಮಕ್ಕಳಿಗೆ ಸ್ವಚ್ಛತೆ ಬಗ್ಗೆ ತಿಳಿ ಹೇಳುವುದು
ಮಕ್ಕಳಿಗೆ ಸ್ವಚ್ಛತೆ ಕುರಿತು ತಿಳಿಸಿ ಹೇಳಬೇಕು. ಶಾಲೆಯಲ್ಲಿ ಯಾವ ರೀತಿಯ ಎಚ್ಚರಿಕೆ ವಹಿಸಬೇಕು ಎಂಬುದನ್ನು ಮನೆಯಲ್ಲೇ ವಿವರಿಸಬೇಲಿ. ಸೀನುವಾಗ, ಕೆಮ್ಮುವಾಗ ಕೈ ಅಡ್ಡಹಿಡಿಯುವುದು, ಕೈ ತೊಳೆಯದೆ ಏನನ್ನು ತಿನ್ನದಂತೆ ಹೇಳುವುದು, ಸೋಪು, ಸ್ಯಾನಿಟೈಸರ್ ಬಳಸುವಂತೆ ಹೇಳುವುದು. ತಮ್ಮ ಸಹಪಾಠಿಗಳಲ್ಲಿ ಯಾರಾದರು ಅನಾರೋಗ್ಯದಿಂದ ಇದ್ದರೆ ಅವರಿಂದ ದೂರ ಇರುವಂತೆ ತಿಳಿ ಹೇಳಬೇಕು.
ಮನೆಯಲ್ಲೂ ಬೇಕು ನಿಗಾ
ಮಕ್ಕಳಿಗೆ ಶಾಲೆಯಲ್ಲಿ ಮಾತ್ರವಲ್ಲ ಮನೆಯಲ್ಲೂ ಕಾಯಿಲೆಗಳು ಹರಡುತ್ತವೆ. ಮನೆಯಲ್ಲಿ ಆವರು ಸಿಕ್ಕ ಸಿಕ್ಕ ವಸ್ತುಗಳ ಮುಟ್ಟಿರುತ್ತಾರೆ, ಹಾಗೆ ಕೆಲವು ವಸ್ತುಗಳು, ಆಟಿಕೆಗಳನ್ನು ಕೂಡ ಬಾಯಲ್ಲಿ ಹಾಕಿಕೊಳ್ಳುತ್ತಾರೆ. ಊಟ, ತಿಂಡಿ ವಿಚಾರದಲ್ಲಿ ಅವರು ನೈರ್ಮಲ್ಯದಿಂದ ಇರುವಂತೆ ನಿಗಾ ಇಡುವುದು ಪೋಷಕರ ಕೆಲವವಾಗಿರುತ್ತೆ ಎಂದು ಡಾ. ವಿನಯ್ ಹೇಳುತ್ತಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
