Latest Updates
-
ಎವೆಲಿನ್ ಶರ್ಮಾ ವಿಚ್ಛೇದನ: ಮಕ್ಕಳ ಭವಿಷ್ಯಕ್ಕಾಗಿ ಈ ಜೋಡಿ ಆರಿಸಿದ ಹೊಸ ದಾರಿ ಯಾವುದು? -
ಬಿಸಿಲ ಧಗೆಗೆ ತಂಪಾದ ಗುಡ್ ನ್ಯೂಸ್: ಮೇ 8 ರಿಂದ ಶುರುವಾಗಲಿದೆ ಗ್ರೇಟ್ ಸಮ್ಮರ್ ಸೇಲ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಪದ್ಧತಿಯಿಂದ ಇಡೀ ದಿನ ಇರಿ ಫ್ರೆಶ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಕೂಲ್ ಆಗಿರಿ! -
ಬಿಸಿಗಾಳಿಯ ಅಬ್ಬರ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ! -
ಹೊಸ ಜೀವನ ಆರಂಭಿಸುವ ಮುನ್ನ ಎಚ್ಚರ: ವಿಚ್ಛೇದನ ಮತ್ತು ಕಾನೂನು ಹಕ್ಕುಗಳ ಬಗ್ಗೆ ಹೈಕೋರ್ಟ್ ಹೇಳಿದ್ದೇನು? -
ಬಿರುಗಾಳಿ ಮತ್ತು ಬಿಸಿಲ ಬೇಗೆ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ನಿಮ್ಮ ಜೀವ ಉಳಿಸುವ ಸರಳ ಮನೆಮದ್ದುಗಳಿವು! -
ಬಿಸಿಲಿನ ಬೇಗೆಗೆ ತತ್ತರಿಸಿದ್ದೀರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಕೂಲಿಂಗ್ ಹ್ಯಾಕ್ಸ್ ಮಿಸ್ ಮಾಡ್ಬೇಡಿ! -
ಬದಲಾಗುತ್ತಿರುವ ಹವಾಮಾನ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಕಾದಿದೆ ಅಪಾಯ!
ಓಟ್ಸ್‌ನ ವಿಧಗಳೇನು: ಇವುಗಳಲ್ಲಿ ಯಾವ ಓಟ್ಸ್ ತುಂಬಾ ಒಳ್ಳೆಯದು?
ಓಟ್ಸ್ ತುಂಬಾ ಆರೋಗ್ಯಕರವಾದ ಆಹಾರ ಎಂಬುವುದು ಎಲ್ಲರಿಗೂ ಗೊತ್ತು. ಈ ಓಟ್ಸ್‌ನಲ್ಲಿ ಹಲವು ಬಗೆಯಿದೆ. ಈ ಓಟ್ಸ್‌ಗಳಲ್ಲಿ ಎಲ್ಲಾ ಒಂದೇ ರೀತಿಯ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆಯೇ? ಅಥವಾ ಒಂದೊಂದು ಬಗೆಯ ಓಟ್ಸ್ ಬೇರೆಯದೇ ಪ್ರಯೋಜನ ಹೊಂದಿದೆಯೇ? ಎಂಬೆಲ್ಲಾ ಮಾಹಿತಿ ನೋಡೋಣ:
ಸ್ಟೀಲ್ ಕಟ್, ಕ್ವಿಕ್ ಅಂಡ್ ರೋಲ್ಡ್ ಓಟ್ಸ್ ಇವುಗಳ ನಡುವಿನ ವ್ಯತ್ಯಾಸವೇನು?
ಸ್ಟೀಲ್ ಕಟ್, ಕ್ವಿಕ್ ಅಂಡ್ ರೋಲ್ಡ್ ಓಟ್ಸ್ ಇವುಗಳ ನಡುವಿನ ವ್ಯತ್ಯಾಸವೇನು?

ಓಟ್ ಗ್ರೋಟ್ಸ್
ಈ ಓಟ್ಸ್‌ನ ವಿಶೇಷತೆ
* ಬೇಯಲು ಹೆಚ್ಚು ಸಮಯ ಬೇಕು
* ಚೆನ್ನಾಗಿ ಅಗೆದು ತಿನ್ನಬೇಕು
* ಇದರಲ್ಲಿ ಓಟ್ಸ್‌ನಲ್ಲಿರುವ ನೈಸರ್ಗಿಕವಾದ ಎಲ್ಲಾ ಪೋಷಕಾಂಶಗಳಿರುತ್ತದೆ. ಇದರಲ್ಲಿರುವ ಬೀಟಾ ಗ್ಲುಕೇನ್ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಿಸುತ್ತದೆ, ಇದರಿಂದಾಗಿ ಮಧಮೇಹದ ಅಪಾಯ ಕಡಿಮೆ ಮಾಡುತ್ತದೆ. ಅಲ್ಲದೆ ಇದನ್ನು ತಿಂದಾಗ ತುಂಬಾ ಹೊತ್ತಿನವರೆಗೆ ಹಸಿವು ಉಂಟಾಗುವುದಿಲ್ಲ.
ಸ್ಟೀಲ್ ಕಟ್ ಓಟ್ಸ್: ಸ್ಟೀಲ್ ಕಟ್ ಸಂಸ್ಕರಿಸಿದ ಓಟ್ಸ್ ಆಗಿದ್ದು ಇದು ಇತರ ಓಟ್ಸ್‌ಗಿಂತ ತುಂಬಾ ರುಚಿಕರವಾಗಿದೆ, ಈ ಓಟ್ಸ್ ಎಲ್ಲಾ ಓಟ್ಸ್‌ಗಿಂತ ಪೋಷಕಾಂಶವಿರುವ ಆಹಾರವಾಗಿದೆ. ಇದನ್ನು ನೀವು ಪಟ್ ಅಂತ ತಯಾರಿಸಲು ಸಾಧ್ಯವಿಲ್ಲ. ಇದನ್ನು ತಯಾರಿಸಲು ನಿಮಗೆ 15-30 ನಿಮಿಷ ಬೇಕು.
ಈ ಓಟ್ಸ್‌ನ ವಿಶೇಷತೆ
* ಅಡುಗೆ ಮಾಡಲು ತುಂಬಾ ಸಮಯ ಬೇಕು
* ಅಗೆದು ತಿನ್ನಬೇಕು
* ಬೇಯಿಸಿದಾಗ ದಪ್ಪವಾಗಿ ಕ್ರೀಮ್-ಕ್ರೀಮ್ ರೀತಿಯಲ್ಲಿ ಇರುತ್ತದೆ.
ಇದನ್ನು ತಿಂದಾಗ ಬೇಗನೆ ಜೀರ್ಣವಾಗುವುದಿಲ್ಲ, ನಿಧಾನಕ್ಕೆ ಜೀರ್ಣವಾಗುತ್ತದೆ, ಇದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ರಕ್ತದಲ್ಲಿ ಸಕ್ಕರೆಯಂಶ ಬೇಗನೆ ಹೆಚ್ಚಾಗುವುದಿಲ್ಲ.
ರೋಲ್ಡ್ ಓಟ್ಸ್
ರೋಲ್ಡ್ ಓಟ್ಸ್ ಅನ್ನು ಸ್ಟೀಮ್ ಮಾಡಿ ತಯಾರಿಸುವ ಓಟ್ಸ್ ಆಗಿದೆ. ಇದು ಸ್ಟೀಲ್ ಕಟ್ ಓಟ್ಸ್‌ಗಿಂತ ಕಡಿಮೆ ಸಮಯದಲ್ಲಿ ಬೇಯಿಸಿ ತಿನ್ನಬಹುದು. ಇವುಗಳನ್ನು ಸ್ವಲ್ಪ ಬೇಯಿಸಿದರೆ ಸಾಕು.
ಈ ಓಟ್ಸ್‌ನ ವಿಶೇಷತೆ
* ಈ ಓಟ್ಸ್ ತುಂಬಾನೇ ನೀರಿಕೊಳ್ಳುತ್ತದೆ
* ಇದನ್ನು ಬೇಯಿಸಲು ಹೆಚ್ಚು ಸಮಯ ಬೇಕಾಗಿಲ್ಲ
* ಇದರ ಟೇಸ್ಟ್ ಕೂಡ ಮೈಲ್ಡ್ ಆಗಿರುತ್ತದೆ.
* ತುಂಬಾ ಹೊತ್ತಿನವರೆಗೆ ಫ್ರೆಷ್ ಆಗಿರುತ್ತದೆ.
* ಓಟ್ಸ್‌ನಲ್ಲಿ ನಾರಿನಂಶ ಇರುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಲು ಸಹಕಾರಿ, ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಇದರಲ್ಲಿ ಪ್ರೊಟೀನ್, ಕಬ್ಬಿಣದಂಶ, ಸತು, ಮೆಗ್ನಿಷ್ಯಿಯಂ ಅಧಿಕವಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು.
ಕ್ವಿಕ್ ಓಟ್ಸ್
ಕ್ವಿಕ್ ಓಟ್ಸ್ ಬೇಯಿಸಲು ಹೆಚ್ಚು ಸಮಯ ಬೇಕಾಗಿಲ್ಲ. ಇವುಗಳನ್ನು ನೀವು ಬೇಗನೆ ತಯಾರಿಸಬಹುದು.
ಇದರ ವಿಶೇಷತೆ
* ತುಂಬಾ ಬೇಗನೆ ಬೇಯಿಸಬಹುದು
* ತುಂಬಾ ಮೃದುವಾಗಿರುತ್ತದೆ
* ನೀರನ್ನು ಬೇಗನೆ ಹೀರಿಕೊಳ್ಳುತ್ತದೆ
* ಮೈಲ್ಡ್ ಫ್ಲೇವರ್ ಇರುತ್ತದೆ.
ಓಟ್ಸ್ ಪ್ರಯೋಜನಗಳು
ಓಟ್ಸ್‌ನಲ್ಲಿ ನಾರಿನಂಶ, ಪ್ರೊಟೀನ್, ವಿಟಮಿನ್‌ಗಳು, ಖನಿಜಾಂಶಗಳು, ಆಂಟಿಆಕ್ಸಿಡೆಂಟ್ ಹೆಚ್ಚಾಗಿರುತ್ತದೆ. ಓಟ್ಸ್ ಗ್ಲುಟೇನ್ ಫ್ರೀ ಇರುವುದರಿಮದ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಕ್ಯಾಲೋರಿ: 152
ಪ್ರೊಟೀನ್:5 ಗ್ರಾಂ
ಕೊಬ್ಬಿನಂಶ: 3 ಗ್ರಾಂ
ಕಾರ್ಬ್ಸ್:27ಗ್ರಾಂ
ನಾರಿನಂಶ: 4 ಗ್ರಾಂ
ಥೈಯಾಮಿನ್: ಶೇ. 15ರಷ್ಟು ಇರಲಿದೆ
ಕಬ್ಬಿಣದಂಶ: ಶೇ. 9ರಷ್ಟಿದೆ
ಮೆಗ್ನಿಷ್ಯಿಯಂ: ಶೇ. 13ರಷ್ಟಿದೆ
ರಂಜಕ: ಶೇ. 13ರಷ್ಟಿದೆ
ಸತು: ಶೇ. 14ರಷ್ಟಿದೆ
ತಾಮ್ರ: ಶೇ. 18ರಷ್ಟಿದೆ
ಸೆಲೆನಿಯಮ್: ಶೇ. 22ರಷ್ಟಿದೆ
ಇನ್‌ಸ್ಟಾಂಟ್ ಓಟ್ಸ್ ಹಾಗೆಯೇ ತಿನ್ನಬಹುದೇ?
ಇದನ್ನು ಹಾಗೆಯೂ ತಿನ್ನಬಹುದು, ಇಲ್ಲದಿದ್ದರೆ ಇದನ್ನು ಸ್ವಲ್ಪ ಬೇಯಿಸಿ ತಿನ್ನಬಹುದು
ಓಟ್ಸ್ ಎಷ್ಟು ತಿನ್ನಬಹುದು?
ಹೊಟ್ಟೆ ಸಮಸ್ಯೆ, ಅಜೀರ್ಣ ಸಮಸ್ಯೆ ಇರುವವರಿಗೆ ಓಟ್ ಬ್ರಾನ್ ತುಂಬಾ ಒಳ್ಳೆಯದು. ದಿನದಲ್ಲಿ 60 ಗ್ರಾಂ ಓಟ್ಸ್ ಬ್ರಾನ್ ತಿನ್ನಬಹುದು.
ಓಟ್ಸ್ ಅನ್ನು ಸೆರಲ್ ರೀತಿ ಸೇವಿಸಬಹುದೇ?
ನೀವು ಓಟ್ಸ್ ಅನ್ನು ನೀರು ಅಥವಾ ಹಾಲಿನಲ್ಲಿ ನೆನೆಹಾಕಿ ನಂತರ ಸೇವಿಸಬಹುದು.
' ಸ್ಟೀಲ್ ಕಟ್ ಓಟ್ಸ್ ಅನ್ನು ರಾತ್ರಿ ನೆನೆಹಾಕಿ ಬೇಯಿಸಬೇಕೆ?
ಸ್ಟೀಲ್ ಕಟ್ ಅನ್ನು ರಾತ್ರಿಯಲ್ಲಿ ನೆನೆಹಾಕಿದರೆ ಬೇಯಲು ಹೆಚ್ಚು ಸಮಯ ಬೇಕಾಗಿಲ್ಲ.
ಓಟ್ಸ್ ತಿನ್ನುವುದರಿಂದ ಮೈ ತೂಕ ಹೆಚ್ಚಾಗುವುದನ್ನು ತಡೆಗಟ್ಟಬಹುದು ಅಲ್ಲದೆ ಮಧುಮೇಹ, ಕೊಲೆಸ್ಟ್ರಾಲ್ ಇರುವವರಿಗೆ ಅತ್ಯುತ್ತಮವಾದ ಆಹಾರ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications