Latest Updates
-
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!
Deepika Kakar: ನಟಿ ದೀಪಿಕಾಗೆ ಲಿವರ್ ಕ್ಯಾನ್ಸರ್! ಹೃದಯಸ್ಪರ್ಶಿ ಪೋಸ್ಟ್.. ಇವು 5 ನಿರ್ಣಾಯಕ ಲಕ್ಷಣಗಳು
ಖ್ಯಾತ ಕಿರುತೆರೆ ನಟಿ ದೀಪಿಕಾಗೆ ಕ್ಯಾನ್ಸರ್! ಟೆನ್ನಿಸ್ ಬಾಲ್ ಗಾತ್ರದ ಗಡ್ಡೆ ಪತ್ತೆ.. ಇದನ್ನು ಎದುರಿಸಲು ನಾನು ಸಿದ್ಧ ಎಂದ ದೀಪಿಕಾ. ಹೌದು, ಕಿರುತರೆ ನಟಿ ದೀಪಿಕಾ ಕಕ್ಕರ್ (Deepika Kakar) ತಮ್ಮ ಅಭಿಮಾನಿಗಳೊಂದಿಗೆ ಆಘಾತಕಾರಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಈ ಸುದ್ದಿಯನ್ನು ನಟಿ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ. ತನಗೆ ಎರಡನೇ ಹಂತದ ಯಕೃತ್ ಕ್ಯಾನ್ಸರ್ (Liver Cancer) ಇರುವುದು ದೃಢವಾಗಿದೆ. ನನ್ನ ಯಕೃತ್ತಿನಲ್ಲಿ ಟೆನಿಸ್ ಬಾಲ್ ಗಾತ್ರದ ದೊಡ್ಡ ಗೆಡ್ಡೆ ಇರುವುದು ಪತ್ತೆಯಾಗಿದೆ. ಈಗ ಪರೀಕ್ಷೆಯ ನಂತರ ಈ ಗೆಡ್ಡೆ ಮಾರಕ ಕ್ಯಾನ್ಸರ್‌ನ 2ನೇ ಹಂತಕ್ಕೆ ತಲುಪಿದೆ ಎಂದು ಹೇಳಿದ್ದಾರೆ.
ನಾನು ಇನ್ನೂ ಸಕಾರಾತ್ಮಕವಾಗಿದ್ದೇನೆ. ಮತ್ತು ಇದನ್ನು ಪೂರ್ಣ ಧೈರ್ಯದಿಂದ ಎದುರಿಸಲು ನಾನು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ. ಕಳೆದ ಕೆಲ ವಾರಗಳು ತುಂಬಾನೇ ಕಷ್ಟಕರವಾಗಿದ್ದವು ಎಂದು ದೀಪಿಕಾ ಹೇಳಿಕೊಂಡಿದ್ದಾರೆ. ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಬಳಿಕ, ಅವರ ಯಕೃತ್ತಿನಲ್ಲಿ ಸರಿಸುಮಾರು ಟೆನ್ನಿಸ್ ಬಾಲ್ ಗಾತ್ರದ ಗಡ್ಡೆ ಇರುವುದು ಪತ್ತೆಯಾಯಿತು. ವೈದ್ಯಕೀಯ ಪರೀಕ್ಷೆಗಳು ಈ ಗಡ್ಡೆ ಮಾರಕ ಕ್ಯಾನ್ಸರ್ (Cancer) ಎಂದು ದೃಢಪಡಿಸಿದವು ಎಂದು ತಿಳಿಸಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ಹೃದಯಸ್ಪರ್ಶಿ ಪೋಸ್ಟ್
ನಿಮಗೆಲ್ಲರಿಗೂ ತಿಳಿದಿರುವಂತೆ, ಕಳೆದ ಕೆಲ ವಾರಗಳು ನನಗೆ ತುಂಬಾ ಕಷ್ಟಕರವಾಗಿತ್ತು. ನನ್ನ ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಂಡು, ಆಸ್ಪತ್ರೆಗೆ ದಾಖಲಾಗುವಂತಾಯಿತು. ಬಳಿಕ, ಯಕೃತ್ತಿನಲ್ಲಿ ಟೆನ್ನಿಸ್ ಬಾಲ್ ಗಾತ್ರದ ಗಡ್ಡೆ ಪತ್ತೆಯಾಯಿತು. ನಂತರ, ಎರಡನೇ ಹಂತದ ಕ್ಯಾನ್ಸರ್ ಎಂಬುದನ್ನು ವೈದ್ಯರು ದೃಢಪಡಿಸಿದರು ಎಂದು ನಟಿ ದೀಪಿಕಾ ಕಕ್ಕರ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇನ್ಶಾ ಅಲ್ಲಾಹ್.. ನಿಮ್ಮ ಪ್ರಾರ್ಥನೆ ಇರಲಿ!
ಮುಂದುವರಿದು ಈ ಪೋಸ್ಟ್ನಲ್ಲಿ, 'ನಾನು ಪಾಸಿಟಿವ್ ಆಗಿದ್ದೇನೆ. ಇದನ್ನು ಎದುರಿಸಲು ಮತ್ತು ಬಲಶಾಲಿಯಾಗಿ ಹೊರಬರಲು ದೃಢ ನಿರ್ಧಾರ ಮಾಡಿದ್ದೇನೆ' ಎಂದು ಬರೆದುಕೊಂಡಿದ್ದಾರೆ. 'ಇನ್ಶಾ ಅಲ್ಲಾಹ್. ನನ್ನ ಇಡೀ ಕುಟುಂಬ ನನ್ನ ಜೊತೆಗಿದ್ದಾರೆ. ನಿಮ್ಮೆಲ್ಲರ ಪ್ರೀತಿ ಮತ್ತು ಪ್ರಾರ್ಥನೆಗಳೊಂದಿಗೆ ನಾನು ಈ ಹೋರಾಟದಲ್ಲಿ ಜಯಿಸುತ್ತೇನೆ. ಇನ್ಶಾ ಅಲ್ಲಾಹ್.. ನಿಮ್ಮ ಪ್ರಾರ್ಥನೆ ಇರಲಿ. ಬಹಳಷ್ಟು ಪ್ರೀತಿ, ದೀಪಿಕಾ' ಎಂದು ಹೃದಯಸ್ಪರ್ಶಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇನ್ನು ನಟ ಶೋಯೆಬ್ ಇಬ್ರಾಹಿಂ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ಅಪ್ಡೇಟ್ಸ್ ನೀಡುತ್ತಿದ್ದಾರೆ.
ಯಕೃತ್ತಿನ ಎಡಬದಿ ಗಡ್ಡೆ ಇರುವುದು ಪತ್ತೆಯಾಯ್ತು
ನಟ ಶೋಯೆಬ್ ಇಬ್ರಾಹಿಂ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮೊದಲಿಗೆ ದೀಪಿಕಾಳ ನೋವು ಆ್ಯಸಿಡಿಟಿಯಂತೆ ಕಂಡಿತು. ಆದರೆ, ನಂತರದ ದಿನಗಳಲ್ಲಿ ನೋವು ಗಂಭೀರವಾಯಿತು. ವೈದ್ಯರು ಸಿ.ಟಿ. ಸ್ಕ್ಯಾನ್ ಮಾಡಿಸುವಂತೆ ಸೂಚಿಸಿದರು. ಆಗ ಯಕೃತ್ತಿನ ಎಡಬದಿ ಗಡ್ಡೆ ಇರುವುದು ಪತ್ತೆಯಾಯಿತು. ಇದೀಗ ವೈದ್ಯರು ಕ್ಯಾನ್ಸರ್ ಎಂದು ಮಾಹಿತಿ ನೀಡಿದ್ದಾರೆ. ದೀಪಿಕಾ ಸರ್ಜರಿಗೆ ಸಜ್ಜಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಇತ್ತ ಈ ದುಃಖದ ಸುದ್ದಿ ತಿಳಿದ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅವರ ಚೇತರಿಕೆಗಾಗಿ ಪ್ರಾರ್ಥಿಸಿದ್ದಾರೆ.
ನಟ ಶೋಯೆಬ್ ಇಬ್ರಾಹಿಂ ಅವರು ಕೆಲವು ದಿನಗಳ ಹಿಂದೆ ತಮ್ಮ ವ್ಲಾಗ್‌ನಲ್ಲಿ ದೀಪಿಕಾ ಕಕ್ಕರ್ ಅವರ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದೆ ಎಂದು ಹೇಳಿದ್ದರು. ಬಳಿಕ ಪರೀಕ್ಷೆಯಲ್ಲಿ ಅವರ ಯಕೃತ್ತಿನಲ್ಲಿ ಗೆಡ್ಡೆ ಇರುವುದು ಪತ್ತೆಯಾಗಿದೆ. ದೀಪಿಕಾಗೆ ಈ ಹಿಂದೆ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಜ್ವರ ಇದ್ದ ಕಾರಣ ಅದನ್ನು ಮುಂದೂಡಲಾಯಿತು. ಇದೀಗ ಆ ಗೆಡ್ಡೆ ಕ್ಯಾನ್ಸರ್ ಎಂಬ ಸುದ್ದಿ ಹೊರಬಿದ್ದಿದೆ. ಇದರಿಂದ ದೀಪಿಕಾ ಅವರ ಕುಟುಂಬ ಆಘಾತಕ್ಕೀಡಾಗಿದೆ.
ಯಕೃತ್ತಿನ ಕ್ಯಾನ್ಸರ್‌ನ ಐದು ನಿರ್ಣಾಯಕ ಲಕ್ಷಣಗಳು
1. ಹಠಾತ್ ತೂಕ ನಷ್ಟವು ಯಕೃತ್ತಿನ ಕ್ಯಾನ್ಸರ್‌ನ ಸಾಮಾನ್ಯ ಲಕ್ಷಣವಾಗಿದೆ. ಆದರೆ, ಇದನ್ನು ಹೆಚ್ಚಾಗಿ ಕಡೆಗಣಿಸಲಾಗುತ್ತದೆ. ಯಕೃತ್ತಿನ ಕ್ಯಾನ್ಸರ್ ಇರುವ ರೋಗಿಗಳು ತಮ್ಮ ಹಸಿವನ್ನು ಕಳೆದುಕೊಳ್ಳುತ್ತಾರೆ.
2. ಹೊಟ್ಟೆ ನೋವು ಅಥವಾ ಅಸ್ವಸ್ಥತೆ ಯಕೃತ್ತಿನ ಕ್ಯಾನ್ಸರ್ ಇರುವ ಜನರಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.
3. ಯಕೃತ್ತಿನ ಕ್ಯಾನ್ಸರ್‌ನ ಮತ್ತೊಂದು ನಿರ್ಣಾಯಕ ಲಕ್ಷಣವೆಂದರೆ, ಇದನ್ನು ಹೆಚ್ಚಾಗಿ ಪತ್ತೆಹಚ್ಚಲಾಗುವುದಿಲ್ಲ. ಇದುವೇ ಹಸಿವಿನಲ್ಲಿ ಬದಲಾವಣೆಗಳು. ವಿಶೇಷವಾಗಿ ಹೊಟ್ಟೆ ಉಬ್ಬರದೊಂದಿಗೆ ಇದ್ದರೆ, ಇದು ಯಕೃತ್ತಿನ ಕ್ಯಾನ್ಸರ್ ಆಗಿರುತ್ತದೆ.
4. ಚರ್ಮ ಅಥವಾ ಕಣ್ಣುಗಳ ಹಳದಿ ಬಣ್ಣವನ್ನು ಕಾಮಾಲೆ ಎಂದು ಕರೆಯಲಾಗುತ್ತದೆ. ಇದು ಯಕೃತ್ತಿನ ಕ್ಯಾನ್ಸರ್‌ನ ಲಕ್ಷಣವಾಗಿದೆ. ಹೊಟ್ಟೆಯಲ್ಲಿ ಊತ ಅಥವಾ ದ್ರವದ ಶೇಖರಣೆ.
5. ಯಕೃತ್ತಿನ ಕಾರ್ಯವು ದುರ್ಬಲಗೊಂಡಾಗ ಹೊಟ್ಟೆಯ ಊತ (ಅಸ್ಸೈಟ್ಸ್) ಸಂಭವಿಸಬಹುದು. ಇದು ಹೊಟ್ಟೆಯಲ್ಲಿ ದ್ರವ ಸಂಗ್ರಹವಾಗಲು ಕಾರಣವಾಗುತ್ತದೆ.



Click it and Unblock the Notifications
