Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ 6 ಕಾರಣಕ್ಕೆ ಹೇಳುವುದು ಮಲಗುವಾಗ ಅಂಡರ್‌ವೇರ್ ತೆಗೆದು ಮಲಗಬೇಕು
ಕೆಲವೊಂದು ವಿಷಯಗಳ ಬಗ್ಗೆ ಮಾತನಾಡಲು ಅದರ ಬಗ್ಗೆ ತಿಳಿಯಲು ಸಂಕೋಚ ಪಡುತ್ತೇವೆ, ಆ ವಿಷಯಗಳ ಬಗ್ಗೆ ಓಪನ್ ಆಗಿ ಚರ್ಚೆ ಮಾಡುವುದೇ ಇಲ್ಲ, ಆದರೆ ಅಂಥ ವಿಷಯಗಳ ಬಗ್ಗೆ ತಿಳಿದುಕೊಂಡರೆ ನಮ್ಮ ಆರೋಗ್ಯವನ್ನು ಮತ್ತಷ್ಟು ಜೋಪಾನ ಮಾಡಬಹುದು, ಉದಾಹರಣೆಗೆ ರಾತ್ರಿಯಲ್ಲಿ ಅಂಡರ್‌ವೇರ್ ಹಾಕಿ ಮಲಗುವುದು.
ರಾತ್ರಿಯಲ್ಲಿ ಯಾರಾದರು ಅಂಡರ್‌ವೇರ್ ತೆಗೆದು ಮಲಗುತ್ತೇನೆ ಎಂದು ಹೇಳಿದರೆ ಮುಸಿ ಮುಸಿ ನಗುವವರಿಗೇನೂ ಕಡಿಮೆಯಿಲ್ಲ, ಆದರೆ ರಾತ್ರಿ ಹೊತ್ತಿನಲ್ಲಿ ಅಂಡರ್‌ವೇರ್ ಧರಿಸಿ ಮಲಗಬಾರದು, ಅಂಡರ್‌ವೇರ್ ತೆಗೆದು ಮಲಗುವುದರಿಂದ ದೊರೆಯುವ ಪ್ರಯೋಜನವೇನು ಎಂದು ನೋಡೋವ:

ಅಂಡರ್‌ವೇರ್ ತೆಗೆದು ಮಲಗುವುದರಿಂದ ಗಾಳಿಯಾಡುತ್ತೆ
ಅಂಡರ್‌ವೇರ್ ತೆಗೆದು ಮಲಗುವುದರಿಂದ ಗಾಳಿಯಾಡುತ್ತೆ, ಇದರಿಂದ ಆ ಭಾಗದಲ್ಲಿ ಹೆಚ್ಚು ತೇವಾಂಶವಾಗುವುದನ್ನು ತಡೆಗಟ್ಟಬಹುದು, ಇದರಿಂದ ಬ್ಯಾಕ್ಟಿರಿಯಾ, ಸೋಂಕು ಹರಡುವುದನ್ನು ತಡೆಗಟ್ಟಬಹುದು. ಆ ಭಾಗದಲ್ಲಿ ಕೆಟ್ಟ ಬ್ಯಾಕ್ಟಿರಿಯಾಗಳ ಉತ್ಪತ್ತಿಯನ್ನು ತಡೆಗಟ್ಟುತ್ತದೆ. ಹಾಗಾಗಿ ರಾತ್ರಿ ಹೊತ್ತಿನಲ್ಲಿ ಅಂಡರ್‌ವೇರ್ ತೆಗೆದು ಮಲಗುವುದು ಒಳ್ಳೆಯದು.
ಸೋಂಕಿನ ಸಮಸ್ಯೆ ತಡೆಗಟ್ಟುತ್ತದೆ
ಆ ಭಾಗದಲ್ಲಿ ಗಾಳಿಯಾಡುತ್ತಿದ್ದರೆ ಸೋಂಕು ಉಂಟಾಗುವುದನ್ನು ತಡೆಗಟ್ಟಬಹುದು. ಈ ಕಾರಣಕ್ಕೆ ರಾತ್ರಿ ಹೊತ್ತಿನಲ್ಲಿ ಮಲಗುವಾಗ ಅಂಡರ್‌ವೇರ್ ತೆಗೆದು ಮಲಗಿ. ಯೀಸ್ಟ್ ಸೋಂಕು, ಬ್ಯಾಕ್ಟಿರಿಯಾ ಸೋಂಕು ಉಂಟಾಗುವುದನ್ನು ತಡೆಗಟ್ಟಬಹುದು. ಖಾಸಗಿ ಭಾಗದಲ್ಲಿ ಗಾಳಿಯಾಡುವಂತಿರಬೇಕು, ಹಾಗಾಗಿ ಸಡಿಲವಾದ ಅಂಡರ್‌ವೇರ್ ಧರಿಸಲು ಸಲಹೆ ನೀಡಲಾಗುವುದು. ಕೆಲವರಿಗೆ ಪದೇ ಪದೇ ಆ ಭಾಗದಲ್ಲಿ ತುರಿಕೆ, ಸೋಂಕು ಉಂಟಾಗುವುದು, ಅಂಥವರು ಅಂಡರ್‌ವೇರ್ ತೆಗೆದು ಮಲಗಿದರೆ ಆ ಭಾಗದಲ್ಲಿ ತೇವಾಂಶ ಇರಲ್ಲ, ತುರಿಕೆ ಈ ಬಗೆಯ ಸಮಸ್ಯೆ ಉಂಟಾಗಲ್ಲ.
ತುಂಬಾನೇ ಕಂಫರ್ಟ್ ಅನಿಸುವುದು
ಅಂಡರ್‌ವೇರ್ ಇಲ್ಲದೆ ಮಲಗುವುದು ಹೇಗೆ ಕಂಫರ್ಟ್ ಎಂದಿಸಬಹುದು, ಆದರೆ ಅಂಡರ್‌ವೇರ್ ತೆಗೆದು ಸಡಿಲವಾದ ಪ್ಯಾಂಟ್ ಧರಿಸಿ ಮಲಗಬಹುದು. ಹುಟ್ಟುಡುಗೆಯಲ್ಲಿಯೂ ಮಲಗಬಹುದು, ಆದರೆ ಯಾರಾದರೂ ನೋಡಿದರೆ ಎಂಬ ಅಂಜಿಕೆಯಿದ್ದರೆ ಅಂಡರ್‌ವೇರ್ ತೆಗೆದು ತುಂಬಾ ಸಡಿಲವಾದ ಉಡುಪು ಧರಿಸಿ ಮಲಗಬಹುದು. ಕಾಟನ್ ಬಟ್ಟೆ ಧರಿಸಿ ಅಲ್ಲದೆ ಎಲಾಸ್ಟಿಕ್ಇರುವ ಬಟ್ಟೆ ಧರಿಸಬೇಡಿ.
ರಕ್ತ ಸಂಚಾರಕ್ಕೆ ಒಳ್ಳೆಯದು
ಆ ಭಾಗದಲ್ಲಿ ಉತ್ತಮ ರಕ್ತಸಂಚಾರವಿರಬೇಕು, ಇಲ್ಲದಿದ್ದರೆ ಅದು ಲೈಂಗಿಕ ಸಾಮರ್ಥ್ಯ, ಸಂತಾನೋತ್ಪತ್ತಿ ಸಾಮಾರ್ಥ್ಯದ ಮೇಲೆ ಪರಿಣಾಮ ಬೀರುವುದು. ಬಿಗಿಯಾದ ಅಂಡರ್‌ವೇರ್ ರಕ್ತ ಸಂಚಾರಕ್ಕೆ ಅಡಚಣೆ ಉಂಟ ಮಾಡಬಹುದು. ಅಂಡರ್‌ವೇರ್ ಇಲ್ಲದೆ ಮಲಗಿದರೆ ಪೆಲ್ವಿಕ್ ಆರೋಗ್ಯಕ್ಕೆ ಒಳ್ಳೆಯದು,
ಆ ಭಾಗದ ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು
ನೀವು ಅಂಡರ್‌ವೇರ್ ತೆಗೆದು ಮಲಗುವುದು ಆ ಭಾಗದ ತ್ವಚೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ತ್ವಚೆಯಲ್ಲಿ ಗುಳ್ಳೆಗಳು ಬರುವುದನ್ನು ತಡೆಗಟ್ಟುತ್ತದೆ, ದುರ್ವಾಸನೆ ಬೀರುವುದು, ತುರಿಕೆ ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ.
ಪುರುಷರಿಗೆ ತುಂಬಾನೇ ಒಳ್ಳೆಯದು
ಅಂಡರ್‌ವೇರ್ ತೆಗೆದು ಮಲಗುವುದು ಪುರುಷರ ವೃಷಭಗಳಿಗೆ ಒಳ್ಳೆಯದು, ಆ ಭಾಗವನ್ನು ತಂಪಾಗಿಡತ್ತದೆ, ಅಲ್ಲದೆ ಸಂತಾನೋತ್ಪತ್ತಿ ಸಾಮರ್ಥ್ಯ ವೃದ್ಧಿಸಲು ಸಹಕಾರಿ. ನಿಮ್ಮಲ್ಲಿ ವೀರ್ಯಾಣುಗಳ ಉತ್ಪತ್ತಿಗೆ ಸಹಕಾರಿ.
ಮಹಿಳೆಯರು ಅಂಡರ್‌ವೇರ್ ಮಾತ್ರವಲ್ಲ ಬ್ರಾ ಕೂಡ ತೆಗೆದು ಮಲಗಬೇಕು,ಇದರಿಂದ ರಕ್ತಸಂಚಾರ ಉತ್ತಮವಾಗಿ ನಡೆಯುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
