Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಈ ಡಿಟಾಕ್ಸ್ ನೀರು ಕುಡಿದರೆ ಮೈ ತೂಕ ಕಡಿಮೆಯಾಗುತ್ತೆ, ಬೊಜ್ಜು ಹೊಟ್ಟೆ ಕರಗಿಸಲು ಪರಿಣಾಮಕಾರಿ
ಮೈ ಫಿಟ್ ಆಗಿಡುವುದು ಬರಿ ಅಂದದ ದೃಷ್ಟಿಯಿಂದ ಮಾತ್ರವಲ್ಲ ಆರೋಗ್ಯದ ದೃಷ್ಟಿಯಿಂದಲೂ ಅವಶ್ಯಕ. ಮೈ ತೂಕ ಹೆಚ್ಚಾದರೆ ಅನೇಕ ಸಮಸ್ಯೆಗಳು ಉಂಟಾಗುವುದು. ವ್ಯಾಯಾಯ, ಅರೋಗ್ಯಕರ ಆಹಾರಕ್ರಮ ಮೈ ತೂಕ ಕಡಿಮೆ ಮಾಡುತ್ತದೆ, ಜೊತೆಗೆ ಡಿಟಾಕ್ಸ್ ನೀರು ದೇಹವನ್ನು ಶುದ್ಧೀಕರಿಸಲು ಹಾಗೂ ಮೈ ತೂಕ ಕಡಿಮೆ ಮಾಡಲು ಸಹಕಾರಿಯಾಗಿದೆ.

ನೀವು ಮೈ ತೂಕ ಕಡಿಮೆ ಮಾಡಲು ಪ್ರಯತ್ನ ಮಾಡುತ್ತಿದ್ದರೆ ಈ ಡಿಟಾಕ್ಸ್ ನೀಡು ಟ್ರೈ ಮಾಡಿ, ಮೈ ತೂಕ ತುಂಬಾನೇ ಕಡಿಮೆಯಾಗುವುದು ಅಲ್ಲದೆ ಆರೋಗ್ಯಕ್ಕೂ ಈ ಗುಣಗಳಿವೆ
ಪುದೀನಾ,ನಿಂಬೆರಸ, ಸೌತೆಕಾಯಿಯ ಡಿಟಾಕ್ಸ್ ನೀರು
ನೀವು ಎರಡು ಲೀಟರ್ ನೀರಿಗೆ ಸೌತೆಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ
ಒಂದು ಹಿಡಿ ಪುದೀನಾ ಹಾಕಿ
ನಿಂಬೆಹಣ್ಣನ್ನು ಕತ್ತರಿಸಿ ಅದರಲ್ಲಿ ಹಾಕಿ ನಂತರ ಆ ನೀರನ್ನು ದಿನವಿಡೀ ಸ್ವಲ್ಪ-ಸ್ವಲ್ಪ ಎಂಬಂತೆ ಕುಡಿಯಿರಿ.
ಈ ಡಿಟಾಕ್ಸ್ ನೀರು ಕುಡಿಯುವುದರಿಂದ ತೂಕ ಇಳಿಕೆಯ ಜೊತೆಗೆ ಈ ಪ್ರಯೋಜನಗಳಿವೆ:
ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ
ಈ ನೀರನ್ನು ನೀವು ಕುಡಿಯುವುದರಿಂದ ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳಲು ಸಹಕಾರಿ. ಸೌತೆಯಲ್ಲಿ ಕೂಡ ನೀರಿನಂಶವಿದೆ, ಹೀಗಾಗಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ
ಈ ನೀರನ್ನು ಕುಡಿಯುತಿದ್ದರೆ ಜರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು. ಜೀರ್ಣಕ್ರಿಯೆ ಉತ್ತಮವಾಗಿ ನಡೆಯುವುದರಿಂದ ಮಲಬದ್ಧತೆ, ಹೊಟ್ಡೆ ಉಬ್ಬುವಿಕೆ ಈ ಬಗೆಯ ಸಮಸ್ಯೆ ತಡೆಗಟ್ಟುತ್ತದೆ. ಅಲ್ಲದೆ ಜೀರ್ಣಕ್ರಿಯೆ ಚೆನ್ನಾಗಿ ನಡೆದರೆ ಮೈ ತೂಕ ಸರಿಯಾಗಿರಲು ಸಹಾಯ ಮಾಡುತ್ತದೆ.
ರಾತ್ರಿ ನಿದ್ದೆ ಚೆನ್ನಾಗಿ ಮಾಡುತ್ತದೆ
ಈ ಡಿಟಾಕ್ಸ್ ನೀರು ಕುಡಿಯುವುದರಿಂದ ರಾತ್ರಿ ನಿದ್ದೆ ಕೂಡ ಚೆನ್ನಾಗಿ ಬರುತ್ತದೆ, ಹಾಗಾಗಿ ನಿದ್ದೆ ಬಾರದೆ ಒದ್ದಾಡುವ ಪರಿಸ್ಥಿತಿ ಇರಲ್ಲ. ಚೆನ್ನಾಗಿ ನಿದ್ದೆ ಬರುತ್ತದೆ, ಚೆನ್ನಾಗಿ ನಿದ್ದೆ ಮಾಡುವುದು ಕೂಡ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಮುಖ್ಯವಾಗುತ್ತದೆ.
ದಿನವಿಡೀ ಚೈತನ್ಯದಿಂದ ಇರುತ್ತೀರಿ
ನೀವು ಈ ಡಿಟಾಕ್ಸ್ ನೀರು ಕುಡಿಯಲಾರಂಭಿಸಿದರೆ ದೇಹದಲ್ಲಿನ ಬದಲಾವಣೆ ನಿಮ್ಮ ಗಮನ ಸೆಳೆಯುತ್ತದೆ. ನಿಮಗೆ ಆಯಾಸ ಉಂಟಾಗುವುದಿಲ್ಲ, ನಿಮ್ಮ ಕೆಲಸ-ಕಾರ್ಯವನ್ನು ತುಂಬಾನೇ ಲವಲವಿಕೆಯಿಂದ ಮಾಡುತ್ತೀರಿ. ಆಯಾಸ, ಮೈಕೈ ನೋವು, ಬೆನ್ನು ನೋವು ಈ ಬಗೆಯ ಸಮಸ್ಯೆ ಇರಲ್ಲ.
ಈ ಡಿಟಾಕ್ಸ್ ನೀರಿನಿಂದ ಏನಾದರೂ ಅಡ್ಡಪರಿಣಾಮವಿದೆಯೇ?
ಕೆಲವರಿಗೆ ಸೌತೆ ಹೆಚ್ಚಾಗಿ ಹಾಕಿದಾಗ ಬೇಧಿ ಉಂಟಾಗಬಹುದು
ಇನ್ನು ಸೌತೆ ಅಥವಾ ಪುದೀನಾ ಅಲರ್ಜಿ ಸಮಸ್ಯೆ ಇದ್ದರೆ ಇದನ್ನು ಬಳಸಬೇಡಿ.
ನೀರನ್ನು ಪ್ರತಿದಿನ ಕುಡಿಯಬಹುದಾ?
ನೀವು ಬೇಕಾದರೆ ಈ ಡಿಟಾಕ್ಸ್ ನೀರನ್ನು ಪ್ರತಿದಿನ ಕುಡಿಯಬಹುದು ಅಥವಾ ದಿನ ಬಿಟ್ಟು ದಿನ ಎಂಬಂತೆಯೂ ಕುಡಿಯಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
