Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವ್ಯಾಯಾಮ ಮಾಡುವಾಗ ಈ ಲಕ್ಷಣಗಳ ಅನುಭವಿಸಿದರೆ ಎಚ್ಚರ..! ಇದು ಹೃದ್ರೋಗದ ಮುನ್ಸೂಚನೆ..!
ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಏರುತ್ತಲೇ ಇದೆ. ಅದ್ರಲ್ಲೂ ಯುವ ಜನತೆಯೂ ಸಹ ಕಾರ್ಡಿಯಕ್ ಅರೆಸ್ಟ್, ಹಾರ್ಟ್ ಅಟ್ಯಾಕ್‌ನಂತಹ ಸಮಸ್ಯೆಯಿಂದ ಬಳಲುವುದು ನಾವು ನೋಡಿರಬಹುದು. ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಂಡವರು ಸಹ ಇಂತಹ ಸಮಸ್ಯೆಯಿಂದ ಬಳಲುತ್ತಿರುವುದು ನಾವು ಗಮನಿಸಿರಬಹುದು.
ಇನ್ನು ಕೆಲವು ಮದುವೆ ಮನೆಯಲ್ಲಿ ಸಂತೋಷದಿಂದ ಡ್ಯಾನ್ಸ್ ಮಾಡುವಾಗ, ಮೈದಾನದಲ್ಲಿ ಆಡುವಾಗ, ಜಿಮ್ ಮಾಡುವಾಗ ಕುಸಿದು ಬಿದ್ದು ಮೃತಪಡುವುದು, ಹೃದಯಾಘಾತವಾಗುವ ಪ್ರಕರಣಗಳು ವರದಿಯಾಗುವುದನ್ನು ನಾವು ನೋಡಿದ್ದೇವೆ. ಇದಕ್ಕೆ ಹತ್ತಾರು ಕಾರಣಗಳನ್ನು ಸಹ ನೀಡಲಾಗುತ್ತದೆ. ಆದ್ರೆ ವ್ಯಾಯಾಮ ಮಾಡುವಾಗ ಈ ಯಾವ ಲಕ್ಷಣಗಳು ಹೃದಯಾಘಾತ ಸಮಸ್ಯೆಗೆ ಕಾರಣವಾಗಲಿದೆ ಎಂಬುದು ನಿಮಗೆ ಗೊತ್ತಾ?

ಹಲವರಿಗೆ ಹೃದಯಾಘಾತದ ಲಕ್ಷಣಗಳೇನು ಎಂಬುದೇ ಗೊತ್ತಿರುವುದಿಲ್ಲ. ಹೀಗಾಗಿ ಅವರಲ್ಲಿ ಹೃದಯಾಘಾತದ ಚಿಹ್ನೆಗಳು ಗೋಚರಿಸಿದರು ಸಹ ಜಾಗೃತೆ ವಹಿಸಿದೆ ಜೀವಕ್ಕೆ ಕುತ್ತು ತಂದುಕೊಳ್ಳುತ್ತಾರೆ. ಹಾಗಾದ್ರೆ ವ್ಯಾಯಾಮ ಮಾಡುವಾಗ, ಜಿಮ್‌ನಲ್ಲಿ ಕಸರತ್ತು ಮಾಡುವಾಗ ಯಾವ ಲಕ್ಷಣವು ಅದು ಹೃದಯಾಘಾತದ ಲಕ್ಷಣವಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಟೈಪ್-2 ಮಧುಮೇಹ, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಬೊಜ್ಜು, ಧೂಮಪಾನ ಮತ್ತು ಕುಟುಂಬದಲ್ಲಿ ಯಾರಿಗಾದರು ಹೃದ್ರೋಗದ ಸಮಸ್ಯೆ ಇದ್ದವರಲ್ಲಿ ಹೃದ್ರೋಗದ ಅಪಾಯ ಹೆಚ್ಚಿಸುತ್ತದೆ. ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ, ಪ್ರತಿಯೊಬ್ಬರೂ ವಾರದಲ್ಲಿ ಮೂರರಿಂದ ಐದು ದಿನಗಳವರೆಗೆ ಕನಿಷ್ಠ 30 ನಿಮಿಷಗಳ ಸರಳ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಬಹಳ ಉತ್ತಮ. ಏಕೆಂದರೆ ವ್ಯಾಯಾಮವು ದೇಹದಿಂದ ಉತ್ತಮ ಹಾರ್ಮೋನುಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.
ಆದರೆ ಯಾವುದೇ ಸಲಹೆಯಿಲ್ಲದೆ ಹೊಸ ಅಥವಾ ಶ್ರಮದಾಯಕ ವ್ಯಾಯಾಮದಲ್ಲಿ ತೊಡಗುವುದು ಗಂಭೀರ ತೊಡಕುಗಳಿಗೆ ಕಾರಣವಾಗಬಹುದು. ವ್ಯಾಯಾಮ ಮಾಡುವಾಗ ಹೃದಯದ ಮೇಲೆ ಒತ್ತಡ ಬೀರುವಂತಹ ವ್ಯಾಯಾಮ ಮಾಡದಿರುವುದು ಉತ್ತಮ. ಆದ್ರೆ ಕೆಲವೊಂದು ಬಾರಿ ಸರಳ ವ್ಯಾಯಾಮ ಮಾಡುವಾಗಲೂ ಹೃದಯಕ್ಕೆ ಒತ್ತಡ ಹೆಚ್ಚಾಗಿ ಹೃದಯಾಘಾತದ ಕೆಲವು ಲಕ್ಷಣಗಳು ಗೋಚರವಾಗುತ್ತದೆ. ಹಾಗಾದ್ರೆ ಆ ಲಕ್ಷಣಗಳು ಯಾವುದು ಎಂಬುದನ್ನು ನಾವಿಂದು ನೋಡೋಣ.
ಎದೆ ನೋವು
ವ್ಯಾಯಾಮದ ಸಮಯದಲ್ಲಿ ನೀವು ಸಣ್ಣ ಪ್ರಮಾಣದಲ್ಲಿ ಎದೆನೋವು ಅನುಭವಿಸಿದರೆ ಅದನ್ನು ಲಘುವಾಗಿ ಪರಿಗಣಿಸಬಾರದಂತೆ. ಅದರಲ್ಲೂ ಎಡಬದಿಯ ಎದೆ ನೋವು ಕಾಣಿಸಿಕೊಂದರೆ, ಹಾಗೆ ವಿಪರೀತವಾಗಿ ಬೆವರುವುದು ಉಂಟಾದರೆ ನಿರ್ಲಕ್ಷಿಸದೆ ತಕ್ಷಣ ವೈದ್ಯರ ಭೇಟಿಯಾಗುವುದು ಉತ್ತಮ. ಇದು ಹೃದಯಾಘಾತದ ಲಕ್ಷಣವಾಗಿರಬಹುದು.
ಉಸಿರಾಟದ ತೊಂದರೆ
ವ್ಯಾಯಾಮದ ಸಮಯದಲ್ಲಿ ನೀವು ಉಸಿರಾಟದ ತೊಂದರೆ ಮತ್ತು ಉಸಿರಾಡಲು ಸಮಸ್ಯೆ ಎದುರಿಸಿದರೆ ಇದು ಹೃದಯಾಘಾತದ ಆರಂಭಿಕ ಲಕ್ಷಣವಾಗಿರಬಹುದು. ಆದರೆ ಎಲ್ಲಾ ಸಮಯದಲ್ಲೂ ಇದು ಹೃದಯಾಘಾತದ ಲಕ್ಷಣ ಎಂದು ಹೇಳಲಾಗದು ಆದರೆ ಈ ರೀತಿಯ ಲಕ್ಷಣವನ್ನು ನೀವು ನಿರ್ಲಕ್ಷಿಸಬಾರದು.
ತಲೆತಿರುಗುವುದು
ವ್ಯಾಯಾಮ ಮಾಡುವಾಗ ತಲೆ ಸುತ್ತು ಬರುವುದು ಹಾಗೂ ಕಣ್ಣು ಮಂಜು ಮಂಜಾದಂತೆ ಅನುಭವವಾದರೆ ವ್ಯಾಯಾಮ ಮಾಡುವುದನ್ನು ನಿಲ್ಲಿಸಿ, ಹಾಗೆ ತಕ್ಷಣ ವೈದ್ಯರ ಸಂಪರ್ಕಿಸುವುದು ಉತ್ತಮ. ಇದು ಮುನ್ನೆಚ್ಚರಿಕಾ ಕ್ರಮ ವಹಿಸುವುದು ಉತ್ತಮ. ಹೃದಯದ ಮೇಲೆ ಒತ್ತಡ ಹೆಚ್ಚಾದಾಗ ಈ ರೀತಿಯ ಅನುಭವವಾಗುತ್ತದೆ.
ಅಸಹಜ ಹೃದಯ ಬಡಿತ
ವ್ಯಾಯಾಮ ಮಾಡುವಾಗ ಹೃದಯ ಬಡಿತದಲ್ಲಿ ಏರುಪೇರು ಉಂಟಾದರೆ ಖಂಡಿತ ಇದೊಂದು ಅಸಹಜ ಪ್ರಕ್ರಿಯೆಯಾಗಿರಲಿದೆ. ತಕ್ಷಣ ವಿಶ್ರಾಂತಿ ಪಡೆಯುವುದು ಅಥವಾ ವೈದ್ಯರ ಸಂಪರ್ಕಿಸುವುದು ಉತ್ತಮ. ಇದು ಸಹ ಹೃದಯಾಘಾತದ ಲಕ್ಷಣವಾಗಿರಬಹುದು.
ದೇಹದ ಇತರ ಭಾಗದಲ್ಲಿ ನ್ಯೂನತೆ
ವ್ಯಾಯಾಮ ಮಾಡುವಾಗ, ತೋಳು, ಕುತ್ತಿಗೆ ಭಾಗ, ಬೆನ್ನು ಹೀಗೆ ದೇಹದ ಕೆಲವು ಭಾಗದಲ್ಲಿ ನೋವು ಕಾಣಿಸಿಕೊಂಡರೆ ವಿಶ್ರಾಂತಿ ಪಡೆಯಿರಿ, ಇದು ಹೃದಯಾಘಾತದ ಆರಂಭಿಕ ಲಕ್ಷಣವೂ ಆಗಿರಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
