Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ರೀತಿಯ ಹೊಟ್ಟೆನೋವು ನಿರ್ಲಕ್ಷ್ಯ ಮಾಡಲೇಬೇಡಿ, ಕಿಡ್ನಿ ವೈಫಲ್ಯದ ಸೂಚನೆಗಳಿರಬಹುದು
ಹೊಟ್ಟೆನೋವು ಅನೇಕ ಕಾರಣಗಳಿಂದ ಉಂಟಾಗುತ್ತದೆ, ಕೆಲವೊಂದು ಗಂಭೀರದ ಸಮಸ್ಯೆಯ ಸೂಚನೆಯೂ ಆಗಿರಬಹುದು, ಆದರೆ ಅದನ್ನು ಸಾಮಾನ್ಯ ಹೊಟ್ಟೆನೋವು ಎಂದು ನಿರ್ಲಕ್ಷ್ಯ ಮಾಡುತ್ತೇವೆ, ಆದರೆ ಆ ತಪ್ಪು ಮಾಡಬಾರದು.
ಏಕೆಂದರೆ ಕಿಡ್ನಿಗೆ ಹಾನಿಯಾದಾಗ ಈ ರೀತಿಯ ಲಕ್ಷಣಗಳು ಕಂಡು ಬರುತ್ತದೆ, ಆದರೆ ಅದನ್ನು ನಿರ್ಲಕ್ಷ್ಯ ಮಾಡುತ್ತೇವೆ, ಆದರೆ ಈ ಲಕ್ಷಣ ನಿರ್ಲಕ್ಷ್ಯ ಮಾಡದೆ ಬೇಗನೆ ಕಿಡ್ನಿ ಸಮಸ್ಯೆಯನ್ನು ಪತ್ತೆ ಮಾಡಿ ಚಿಕಿತ್ಸೆ ಪಡೆದರೆ ಆರೋಗ್ಯ ಬೇಗನೆ ಸುಧಾರಿಸುವುದು. ಆದ್ದರಿಂದ ಈ ಬಗೆಯ ಲಕ್ಷಣಗಳು ಕಂಡು ಬಂದರೆ ಕಿಡ್ನಿ ಸಮಸ್ಯೆವಿರಬಹುದು:

ಕಿಡ್ನಿ ವೈಫಲ್ಯದ ಆರಂಭದ ಲಕ್ಷಣಗಳು
* ಬೇಧಿ, ಮಲದಲ್ಲಿ ರಕ್ತ ಕಂಡು ಬರುವುದು
* ಹಸಿವು ಇಲ್ಲದಿರುವುದು
* ತುಂಬಾನೇ ವಾಂತಿ
* ಕಿಬ್ಬೊಟ್ಟೆ ನೋವು
* ಸ್ನಾಯು ಸೆಳೆತ
*ಮೂತ್ರ ವಿಸರ್ಜನೆಗೆ ಕಷ್ಟವಾಗುವುದು ಅಥವಾ ಅತ್ಯಧಿಕ ಮೂತ್ರ ವಿಸರ್ಜನೆ
* ಕಿಬ್ಬೊಟ್ಟೆಯಲ್ಲಿ ಊತ
ಅಸಿಡಿಟಿ ಸಮಸ್ಯೆ ಕೂಡ ಹೆಚ್ಚಾಗುವುದು
ಕಿಡ್ನಿ ಸಮಸ್ಯೆಯಿದ್ದರೆ ಅಸಿಡಿಟಿ ರೀತಿಯ ಸಮಸ್ಯೆ ಹೆಚ್ಚಾಗುವುದು, ಅಲ್ಲದೆ ಇವರಲ್ಲಿಯೂ ಅಸಿಡಿಟಿ ಸಮಸ್ಯೆ ಹೆಚ್ಚಾಗುವುದು
* ಒಬೆಸಿಟಿ
* ಮಧುಮೇಹ
ಗ್ಯಾಸ್ಟ್ರಿಕ್ ಸಮಸ್ಯೆ ತಡೆಗಟ್ಟುವುದು ಹೇಗೆ?
ವಿಪರೀತ ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಈ ಟಿಪ್ಸ್ ಪಾಲಿಸಿದರೆ ಗ್ಯಾಸ್ಟ್ರಿಕ್ ಸ್ವಲ್ಪ ಕಡಿಮೆಯಾಗುವುದು
ಸ್ವಲ್ಪ ಸ್ವಲ್ಪ ತಿನ್ನಿ
ನೀವು ಆಹಾರವನ್ನು ಸ್ವಲ್ಪ-ಸ್ವಲ್ಪ ಎಂಬಂತೆ ಭಾವಿಸಿ. ನೀವು ಮೂರು ಹೊತ್ತು ತಿನ್ನುವ ಬದಲಿಗೆ ಆ ಮೂರು ಹೊತ್ತಿನ ಆಹಾರವನ್ನು 5 ಬಾರಿ ತಿನ್ನಿ, ಸ್ವಲ್ಪ-ಸ್ವಲ್ಪ ಆಹಾರ ತಿನ್ನುವುದರಿಂದ ಈ ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆಯಾಗುವುದು.
ಸಾಕಷ್ಟು ನೀರು ಕುಡಿಯಿರಿ
ನೀರು ಚೆನ್ನಾಗಿ ಕುಡಿಯಬೇಕು. 2-3 ಲೀಟರ್ ನೀರು ಕುಡಿಯಬೇಕು. ಇದರಿಂದ ಕಿಡ್ನಿ ಚೆನ್ನಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುವುದು.
ಮಾನಸಿಕ ಒತ್ತಡ ಕಡಿಮೆಮಾಡಿಕೊಳ್ಳಿ
ಅತ್ಯಧಿಕ ಮಾನಸಿಕ ಒತ್ತಡ ಅನೇಕ ಸಮಸ್ಯೆಗಳನ್ನು ಉಂಟು ಮಾಡುತ್ತದೆ, ಆದ್ದರಿಂದ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ. ನೀವು ಯೋಗ, ಧ್ಯಾನ ಮಾಡುವುದು, ವಿಶ್ರಾಂತಿ ತೆಗೆದುಕೊಳ್ಳುವುದು ಇವುಗಳಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು.
ಕಿಡ್ನಿ ಸಮಸ್ಯೆಯ ಇತರ ಲಕ್ಷಣಗಳು
ತುಂಬಾ ಸುಸ್ತು ಅನಿಸುವುದು, ಕೆಲಸದ ಕಡೆಗೆ ಗಮನ ನೀಡಲು ಸಾಧ್ಯವಾಗಲ್ಲ: ಕಿಡ್ನಿ ಸಮಸ್ಯೆ ಹೆಚ್ಚಾಗುತ್ತಿದ್ದಂತೆ ತುಂಬಾನೇ ಸುಸ್ತು ಅನಿಸುವುದು. ಕೆಲಸ ಕಾರ್ಯಗಳಿಗೆ ಗಮನ ನೀಡಲು ಸಾಧ್ಯವಾಗಿಲ್ಲ.
ನಿದ್ರಾಹೀನತೆ: ಕಿಡ್ನಿ ವೈಫಲ್ಯ ಇದ್ದಾಗ ನಿದ್ರಾಹೀನತೆ ಸಮಸ್ಯೆ ಉಂಟಾಗುವುದು.
ತ್ವಚೆಯಲ್ಲಿ ತುರಿಕೆ: ಆರೋಗ್ಯಕರ ಕಿಡ್ನಿ ದೇಹದಲ್ಲಿರುವ ಅಧಿಕ ನೀರಿನಂಶ ಹೊರ ಹಾಕುತ್ತದೆ, ಅಲ್ಲದೆ ದೇಹದಲ್ಲಿರುವ ಕಶ್ಮಲವನ್ನು ಹೊರ ಹಾಕುತ್ತದೆ, ಇದರಿಂದ ತ್ವಚೆಯಲ್ಲಿ ತುರಿಕೆ ಕಂಡು ಬರುವುದು.
ಮೂತ್ರದಲ್ಲಿ ರಕ್ತ ಕಂಡು ಬರುವುದು: ಕಿಡ್ನಿ ಸಮಸ್ಯೆ ಇದ್ದರೆ ಕೆಲವರಿಗೆ ಆಗಾಗ ಮೂತ್ರವಿಸರ್ಜನೆಗೆ ಹೋಗಬೇಕೆನಿಸುವುದು, ಕೆಲವರಿಗೆ ಮೂತ್ರ ವಿಸರ್ಜನೆ ಸರಿಯಾಗಿ ಆಗುವುದಿಲ್ಲ, ಅಲ್ಲದೆ ಮೂತ್ರದಲ್ಲಿ ರಕ್ತದ ಕಲೆಗಳು ಕಂಡು ಬರುವುದು.
ಕಣ್ಣುಗಳಲ್ಲಿ ಊತ
ಕಿಡ್ನಿ ಸಮಸ್ಯೆ ಉಂಟಾದರೆ ಕಣ್ಣುಗಳಲ್ಲಿ ಊತ ಕಂಡು ಬರುವುದು. ಕಿಡ್ನಿ ಸಮಸ್ಯೆಯಿದ್ದರೆ ಮೂತ್ರದಲ್ಲಿಯೇ ತುಂಬಾ ಪ್ರೊಟೀನ್ ಹೊರ ಹೋಗುತ್ತದೆ, ದೇಹದಲ್ಲಿ ಪ್ರೊಟೀನ್ ಕಡಿಮೆಯಾಗಿ ಈ ರೀತಿ ಕಂಡು ಬರುವುದು.
ಕಾಲುಗಳಲ್ಲಿ ಊತ: ಕಿಡ್ನಿ ಸಮಸ್ಯೆ ಉಂಟಾದರೆ ಕಾಲುಗಳಲ್ಲಿ ಊತ ಕಂಡು ಬರುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications