ಬೇಸಿಗೆಯಲ್ಲಿ ದೇಹ ತಂಪಾಗಿಸಲು ಈ 9 ಸ್ಪೈಸಸ್‌ ಪರಿಣಾಮಕಾರಿ

ಬೇಸಿಗೆಯಲ್ಲಿ ಆಹಾರಕ್ರಮದ ತುಂಬಾನೇ ಗಮನಹರಿಸಬೇಕು. ಆದಷ್ಟೂ ದೇಹವನ್ನು ತಂಪಾಗಿಸುವ ಆಹಾರವನ್ನು ಸೇವಿಸಬೇಕು. ಕೆಲವೊಂದು ಸ್ಪೈಸಸ್ ಅಂದರೆ ಮಸಾಲೆ ಪದಾರ್ಥಗಳನ್ನು ಅವಶ್ಯಕವಾಗಿ ನಿಮ್ಮ ಆಹಾರಕ್ರಮದಲ್ಲಿ ಸೇರಿಸಬೇಕು.

Spices for summer

ಈ ಮಸಾಲೆ ಪದಾರ್ಥಗಳು ದೇಹದಲ್ಲಿ ಉಷ್ಣಾಂಶ ನಿಯಂತ್ರಣದಲ್ಲಿಡಲು ತುಂಬಾನೇ ಸಹಾಯ ಮಾಡುತ್ತದೆ. ನಿಮ್ಮ ಅಡುಗೆಯಲ್ಲಿ ಈ ಮಸಾಲೆ ಪದಾರ್ಥಗಳನ್ನು ಬಳಸುವುದರಿಂದ ಈ ಬೇಸಿಗೆಯಲ್ಲಿ ದೇಹದ ಉಷ್ಣಾಂಶ ಕಾಪಾಡಬಹುದು ನೋಡಿ:

1. ಸೋಂಪು: ಸೋಂಪು ದೇಹದಲ್ಲಿ ಉರಿಯೂತ ಕಡಿಮೆ ಮಾಡಲು ತುಂಬಾನೇ ಸಹಕಾರಿ. ಇದರಲ್ಲಿ ವಿಟಮಿನ್ ಸಿ ಇದ್ದು ದೇಹದಲ್ಲಿ ಜೀರ್ಣಕ್ರಿಯೆಗೆ ಸಹಾಯ ಮಾಡುವುದರಿಂದ ಅಸಿಡಿಟಿ ಸಮಸ್ಯೆ ತಡೆಗಟ್ಟಲು ತುಂಬಾನೇ ಸಹಕಾರಿಯಾಗಿದೆ. ಊಟವಾದ ಬಳಿಕ ಇದನ್ನು ಸ್ವಲ್ಪ ತಿನ್ನುವುದು ತುಂಬಾನೇ ಒಳ್ಳೆಯದು. ತುಂಬಾ ಉಷ್ಣ ದೇಹದವರು ರಾತ್ರಿ ಒಂದು ಲೋಟ ನೀರಿನಲ್ಲಿ ನೆನೆಹಾಕಿ, ಬೆಳಗ್ಗೆ ಆ ನೀರಿ ಒಂದು ಹರಳು ಬ್ಲ್ಯಾಕ್ ಸಾಲ್ಟ್ ಸೇರಿಸಿ ಕುಡಿದರೆ ತುಂಬಾನೇ ಒಳ್ಳೆಯದು.

2. ಮೆಂತೆ
ಉಷ್ಣಾಂಶ ಹೆಚ್ಚಾದಾಗ ಮೈ ಮೇಲೆ ಬೊಬ್ಬೆಗಳು ಏಳುವುದು, ಮೈಯಲ್ಲಿ ತುರಿಕೆ ಕಂಡು ಬರುವುದು, ತುಂಬಾನೇ ಕಿರಿಕಿರಿ ಅನಿಸುವುದು ಈ ಬಗೆಯ ಸಮಸ್ಯೆ ತಡೆಗಟ್ಟಲು ಮೆಂತೆ ತುಂಬಾನೇ ಪರಿಣಾಮಕಾರಿ. ಇದನ್ನು ಆಹಾರದಲ್ಲಿ ಸೇರಿಸಬಹುದು, ರಾತ್ರಿ ನೆನೆಹಾಕ ಬೆಳಗ್ಗೆ ಆ ನೀರನ್ನು ಕುಡಿಯಬಹುದು. ಮೆಂತೆ ನೆನೆ ಹಾಕಿ ಬೆಳಗ್ಗೆ ತಿನ್ನುವುದರಿಂದ ಮಧುಮೇಹಿಗಳು ಸಕ್ಕರೆಯಂಶ ನಿಯಂತ್ರಣದಲ್ಲಿಡಬಹುದು. ನೀವು ನೀರು ಕಾಯಿಸುವಾಗ ಸ್ವಲ್ಪ ಮೆಂತೆ ಹಾಕಿ ಕುದಿಸಿ ಕುಡಿದರೆ ದೇಹ ತಂಪಾಗಿರುತ್ತದೆ. ಇದರಿಂದ ಹೊಟ್ಟೆ ಉಬ್ಬುವುದು, ಬೇಧಿ ಈ ಬಗೆಯ ಸಮಸ್ಯೆ ತಡೆಗಟ್ಟಬಹುದು.

3. ಆಮ್‌ ಚೂರ್ ( ಒಣಗಿಸಿದ ಮಾವಿನ ಕಾಯಿ)
ಹುಳಿ, ಉಪ್ಪು ಮಿಶ್ರಿತ ಒಣಗಿಸಿದ ಮಾವಿನಕಾಯಿ ದೇಹವನ್ನು ತಂಪಾಗಿಡುವಲ್ಲಿ ತುಂಬಾನೇ ಪರಿಣಾಮಕಾರಿ. ಕೆಲವರಿಗೆ ಸೆಕೆ ಹೆಚ್ಚಾದಾಗ ಮೊಡವೆ ಸಮಸ್ಯೆ ಉಂಟಾಗುವುದು. ಇದನ್ನು ತಡೆಗಟ್ಟಲು ಕೂಡ ಸಹಕಾರಿ. ಇದನ್ನು ಚಟ್ನಿ, ಸಲಾಡ್, ಉಪ್ಪಿನಕಾಯಿ, ಶರಬತ್ತು ಮುಂತಾದ ತಾಜಾ ಜ್ಯೂಸ್‌ಗೆ ಹಾಕಿ ಕೂಡ ಸೇವಿಸಬಹುದು.

4. ಜೀರಿಗೆ
ಜೀರಿಗೆ ಎಲ್ಲರ ಅಡುಗೆ ಮನೆಯಲ್ಲಿ ಇದ್ದೇ ಇರುತ್ತದೆ. ಇದು ದೇಹದವನ್ನು ಡಿಟಾಕ್ಸ್ ಮಾಡುವುದರಿಂದ ಅಸಿಡಿಟಿ, ಗ್ಯಾಸ್‌ ಸಮಸ್ಯೆ ತಡೆಗಟ್ಟಲು ಸಹಕಾರಿ. ಅಲ್ಲದೆ ನೀವು ಲೆಮನ್ ಜ್ಯೂಸ್ (ನಿಂಬು ಪಾನೀಯ) ಎಲ್ಲಾ ಮಾಡುವಾಗ ಸ್ವಲ್ಪ ಜೀರಿಗೆ ಪುಡಿ ಸೇರಿಸಿದಾಗ ಆರೋಗ್ಯಕ್ಕೆ ಇನ್ನೂ ಒಳ್ಳೆಯದು.

5. ಏಲಕ್ಕಿ
ಏಲಕ್ಕಿ ಉಷ್ಣ ಅಂತ ಹೇಳುತ್ತಾರೆ, ಬೇಸಿಗೆಯಲ್ಲಿ ಏಲಕ್ಕಿ ನಿಮ್ಮ ದೇಹದಲ್ಲಿ ಉಷ್ಣಾಂಶ ಕಾಪಾಡಲು ಸಹಾಯ ಮಾಡುತ್ತದೆ. ಏಲಕ್ಕಿ ಬಳಸುವುದರಿಂದ ಹೊಟ್ಟೆ ಸಂಬಂಧಿತ ಸಮಸ್ಯೆ ತಡೆಗಟ್ಟಬಹುದು. ಇದು ಹೊಟ್ಟೆಯಲ್ಲಿ ಗ್ಯಾಸ್ ತುಂಬುವುದನ್ನು ತಡೆಗಟ್ಟಲು ಸಹಕಾರಿ.
ಇದನ್ನು ಅಡುಗೆಯಲ್ಲಿ ಬಳಸಿ.

6. ಕೊತ್ತಂಬರಿ ಬೀಜ
ಕೊತ್ತಂಬರಿ ಬೀಜ ಆರೋಗ್ಯಕ್ಕೆ ತುಂಬಾನೇ ತಂಪು. ನೀವು ಕೊತ್ತಂಬರಿ ಬೀಜದ ನೀರು ಅಥವಾ ಕಾಫಿ ಮಾಡಿ ಕುಡಿಯಬಹುದು. ಅಡುಗೆಯಲ್ಲೂ ಇದನ್ನು ಬಳಸಿ. ಲಿವರ್‌ನ ಕಾರ್ಯಕ್ಕೆ ಇದು ತುಂಬಾನೇ ಸಹಕಾರಿ, ಜೀರ್ಣಕ್ರಿಯೆ ಹಾರ್ಮೋನ್‌ ಉತ್ಪತ್ತಿ ಮಾಡುವ ಮೂಲಕ ಆರೋಗ್ಯ ಕಾಪಾಡುತ್ತದೆ.

7. ಅರಿಶಿಣ
ಅರಿಶಿಣ ಎಲ್ಲಾ ಕಾಲದಲ್ಲೂ ತುಂಬಾನೇ ಪ್ರಯೋಜನಕಾರಿ, ಇದು ಕೂಡ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುತ್ತದೆ. ದೇಹದಲ್ಲಿ ಉರಿಯೂತ, ಊತ ಈ ಬಗೆಯ ಸಮಸ್ಯೆ ತಡೆಗಟ್ಟುತ್ತದೆ. ಸೋಂಕು ತಡೆಗಟ್ಟುತ್ತದೆ, ರಕ್ತವನ್ನು ಶುದ್ಧೀಕರಿಸುವುದು, ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅರಿಶಿಣವನ್ನು ಅಡುಗೆಯಲ್ಲಿ ಬಳಸಿ. ಹಾಲಿನಲ್ಲಿ ಹಾಕಿ ಕುಡಿದರೆ ಶ್ವಾಸಕೋಶದ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.

8. ಪುದೀನಾ
ಪುದೀನಾ ದೇಹವನ್ನು ತಂಪಾಗಿಡುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಪುದೀನಾ ಟೀ ಮಾಡಿ ಕುಡಿಯಿರಿ. ಅಲ್ಲದೆ ಪುದೀನಾ ಪಿತ್ತರಸ ಅಧಿಕ ಉತ್ಪತ್ತಿಯಾಗುವುದನ್ನು ತಡೆಗಟ್ಟುತ್ತದೆ. ಪುದೀನಾವನ್ನು ಅಡುಗೆಯಲ್ಲೂ ಬಳಸುವುದರಿಂದ ಒಳ್ಳೆಯ ಪ್ರಯೋಜನ ಸಿಗುವುದು. ಪುದೀನಾ ದಿನದಲ್ಲಿ 1-2 ಎಲೆ ಬಳಸಿದರೆ ಸಾಕು.

9. ಶುಂಠಿ
ಶುಂಠಿ ದೇಹದ ಉಷ್ಣಾಂಶ ಹೆಚ್ಚು ಮಾಡುತ್ತದೆ ಎಂದು ಕೆಲವರು ಬೇಸಿಗೆಯಲ್ಲಿ ಶುಂಠಿಯನ್ನು ಬಳಸುವುದೇ ಇಲ್ಲ. ಆದರೆ ಬೇಸಿಗೆಯಲ್ಲಿ ಶುಂಠಿ ತುಂಬಾನೇ ಒಳ್ಳೆಯದು. ದೇಹದಲ್ಲಿ ಉಷ್ಣಾಂಶ ಹೆಚ್ಚಾದಾಗ ಆಕ್ಸಿಡೇಟಿವ್ ಸ್ಟ್ರೆಸ್‌ ಉಂಟಾಗುತ್ತದೆ. ಆದರೆ ಶುಂಠಿ ಬೇಸಿಗೆಯಲ್ಲಿ ದೇಹದ ಉಷ್ಣಾಂಶ ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ. ಆದ್ದರಿಂದ ಬೇಸಿಗೆಯಲ್ಲೂ ಶುಂಠಿ ಬಳಸಿ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

These Spices Give Cooling Affects to Body

These are spices good for body during summer to reduce body heat read on...
X
Desktop Bottom Promotion