Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಈಜಾಡಿದ್ರೆ ಸಾಕು ಯಾವುದೇ ವರ್ಕ್‌ಔಟ್ ಇಲ್ದೇ ಸುಲಭವಾಗಿ ಕ್ಯಾಲೊರಿ ಕರಗಿಸ್ಬಹುದು !
ನಾವು ಆರೋಗ್ಯವಾಗಿರಬೇಕಂದ್ರೆ ವಾರಕ್ಕೆ 75 ನಿಮಿಷಗಳ ಕಾಲ ವ್ಯಾಯಾಮ ಮಾಡಲೇಬೇಕು. ನೀವು ನಿತ್ಯ ಈಜಾಡಿದರೆ ನಿತ್ಯ ರನ್ನಿಂಗ್ ಮಾಡೋದಕ್ಕಿಂತಲೂ ಹೆಚ್ಚಿನ ಪ್ರಮಾಣದ ಕ್ಯಾಲೋರಿಯನ್ನು ಕರಗಿಸಬಹುದಂತೆ. ಮತ್ತೊಂದು ಮುಖ್ಯವಾದ ವಿಚಾರ ಅಂದ್ರೆ ಈಜಾಡಿದರೆ ಮೂಳೆ ಹಾಗೂ ಗಂಟುಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗೋದಿಲ್ಲ. ಆದ್ರೆ ನಿಮ್ಮ ಮನಸ್ಸಿಗೆ ಬಂದ ಹಾಗೇ ಈಜಾಡೋದಕ್ಕೆ ಹೋಗಬೇಡಿ. ಆರೋಗ್ಯಕ್ಕೆ ತೊಂದರೆಯುಂಟಾಗಬಹುದು.
ಆರಂಭದಲ್ಲಿ ಈಜು ಕಲಿಯುವವರು ತರಬೇತುದಾರರ ಸಹಾಯದ ಮೂಲಕವೇ ಕಲಿತರೆ ಒಳ್ಳೆಯದು. ಇನ್ನೂ ಈಜಾಡೋದಕ್ಕೆ ಇಂತಹದ್ದೇ ವಯಸ್ಸು ಆಗಬೇಕಂತೇನಿಲ್ಲ. ಚಿಕ್ಕ ಮಕ್ಕಳಿನಿಂದ ಹಿಡಿದು ಹಣ್ಣು ಹಣ್ಣು ಮುದುಕರು ಕೂಡ ಈಜಾಡಬಹುದು. ಪುಟ್ಟ ಮಕ್ಕಳಿರಬೇಕಾದರೆನೇ ಈಜು ಕಲಿಸಿದರೆ ತುಂಬಾನೇ ಒಳ್ಳೆಯದು. ಅಷ್ಟಕ್ಕು ಈಜಾಡೋದ್ರಿಂದ ಆರೋಗ್ಯದ ದೃಷ್ಟಿಯಿಂದ ಏಷ್ಟೆಲ್ಲಾ ಲಾಭಗಳಿದೆ ಅನ್ನೋದನ್ನು ತಿಳಿಯೋಣ.

1. ಶಕ್ತಿ ಹೆಚ್ಚಿಸುತ್ತದೆ
ವಾರಕ್ಕೆ 2-3 ಬಾರಿ 30 ನಿಮಿಷ ಕಾಲ ಈಜಾಡಿದರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ನಿಮ್ಮೊಳಗಿನ ಎನರ್ಜಿ ಹೆಚ್ಚಾಗುತ್ತದೆ. ಜೊತೆಗೆ ಚಯಾಪಚಯ ಕ್ರಿಯೆಯನ್ನು ಹೆಚ್ಚು ಮಾಡುತ್ತದೆ. ನೀವು ಈಗತಾನೇ ಈಜು ಕಲಿಯೋದಕ್ಕೆ ಆರಂಭಿಸಿದ್ದಾದರೆ ಬೇರೆ ಬೇರೆ ವಿಧಾನದಲ್ಲಿ ಈಜಾಡೋದಕ್ಕೆ ಹೋಗಬೇಡಿ. ಇನ್ನೂ ನೀವು ಈಜಿನಲ್ಲಿ ಪಳಗಿರೋರು ಆಗಿದ್ದರೆ ಬ್ರೆಸ್ಟ್‌ಸ್ಟ್ರೋಕ್, ಸೈಡ್‌ಸ್ಟ್ರೋಕ್, ಬಟರ್‌ಫ್ಲೈ, ಫ್ರೀಸ್ಟೈಲ್ ಮತ್ತು ಬ್ಯಾಕ್‌ಸ್ಟ್ರೋಕ್ ಮಾಡಲು ಪ್ರಯತ್ನಿಸಬಹುದು.
2. ಕ್ಯಾಲೊರಿಯನ್ನು ಕಡಿಮೆಗೊಳಿಸುತ್ತದೆ
ಕ್ಯಾಲೋರಿಯನ್ನು ಕಡಿಮೆಗೊಳಿಸೋದಕ್ಕೆ ಈಜು ತುಂಬಾನೇ ಪರಿಣಾಮಕಾರಿಯಾಗಿದೆ. ವಾಕಿಂಗ್‌ಗೆ ಹೋಲಿಸಿದರೆ ನಿಯಮಿತ ವೇಗದಲ್ಲಿ ಈಜುವುದರಿಂದ ಹೆಚ್ಚು ಕ್ಯಾಲೊರಿಗಳನ್ನು ಕರಗಿಸಬಹುದು ಎಂದು ಅಧ್ಯಯನಗಳಿಂದ ಸಾಭೀತಾಗಿದೆ. ನೀವು ಒಂದು ಗಂಟೆ ಓಡುವುದಕ್ಕಿಂತ ಈಜುಕೊಳದ ಸುತ್ತ ಒಂದು ಗಂಟೆ ಈಜುವುದರಿಂದ ಹೆಚ್ಚಿನ ಕ್ಯಾಲೋರಿ ಕರಗಿಸಬಹುದಂತೆ. ಹೀಗಾಗಿ ಕ್ಯಾಲೋರಿ ಕರಗಿಸಲು ಈಜುವುದು ಬೆಸ್ಟ್ ಅಂತ ಹೇಳಲಾಗುತ್ತದೆ.
3. ಶಿಸ್ತು ಹೆಚ್ಚಾಗುತ್ತದೆ
ಪ್ರತಿನಿತ್ಯ ಈಜೋದ್ರಿಂದ ನಮ್ಮಲ್ಲಿ ಶಿಸ್ತು ಹೆಚ್ಚಾಗುತ್ತದೆ. ನೀವು ದಿನ ನಿತ್ಯ ಈಜಾಡುತ್ತಿದ್ದರೆ ನಿಮ್ಮ ಏಕಾಗ್ರತೆ ಹೆಚ್ಚಾಗುತ್ತದೆ. ಏಕಾಗ್ರತೆ ಶಕ್ತಿ ಅನ್ನೋದು ನಿಮ್ಮಲ್ಲಿ ಅಭಿವೃದ್ಧಿಯಾಗುತ್ತಾ ಹೋಗುತ್ತದೆ. ಇದರಿಂದ ನೀವು ನಿಮ್ಮ ಗುರಿಯನ್ನು ಸುಲಭವಾಗಿ ಮುಟ್ಟಬಹುದು. ಆದ್ದರಿಂದ ಏಕಾಗ್ರತೆ ಕಡಿಮೆ ಇದೆ ಅನ್ನುವವರು ದಿನನಿತ್ಯ ಈಜಾಡೋದನ್ನು ರೂಢಿ ಮಾಡಿಕೊಳ್ಳಿ.
4. ದೇಹಕ್ಕೆ ಸಂಪೂರ್ಣ ವ್ಯಾಯಾಮ ಸಿಗುತ್ತದೆ
ಸಾಮಾನ್ಯವಾಗಿ ನಿತ್ಯ ವರ್ಕ್‌ಔಟ್‌ಗೆ ಹೋಗೋದಾದ್ರೆ ದೇಹದ ಪ್ರತಿಯೊಂದು ಜಾಗಕ್ಕೂ ಬೇರೆ ಬೇರೆ ವ್ಯಾಯಾಮಗಳನ್ನು ಮಾಡಬೇಕಾಗುತ್ತದೆ. ಆದರೆ ಈಜಾಡೋದ್ರಿಂದ ದೇಹದ ಪ್ರತಿಯೊಂದು ಭಾಗಕ್ಕೂ ವ್ಯಾಯಾಮ ಮಾಡಿದಂತಾಗುತ್ತದೆ. ವ್ಯಾಯಾಮ ಮಾಡದೇ ಜಡ್ಡು ಕಟ್ಟಿದ್ದ ನಿಮ್ಮ ಇಡೀ ದೇಹದ ಭಾಗಗಳು ಚುರುಕಾಗುತ್ತದೆ.
5. ಸುರಕ್ಷಿತವಾಗಿ ಈಜಾಡಿ
ಸಂಧಿವಾತ, ದೈಹಿಕ ಗಾಯಗಳು ಆಗಿದ್ದವರು ಈಜಾಡುವುದಕ್ಕಿಂತ ಮೊದಲು ತಜ್ಞರನ್ನು ಸಂಪರ್ಕ ಮಾಡೋದು ಒಳ್ಳೆಯದು. ಇಲ್ಲದಿದ್ದರೆ ತರಬೇತುದಾರರ ಸಲಹೆಯನ್ನು ಪಡೆಯಿರಿ. ಈಜಾಡೋದ್ರಿಂದ ಮತ್ತೊಂದು ಉಪಯೋಗವೆಂದರೆ ನಿಮ್ಮ ಬೆನ್ನು ನೋವಿನ ಸಮಸ್ಯೆಯನ್ನು ಇದು ಪರಿಹರಿಸುತ್ತದೆ. ನಿಮ್ಮ ಮೂಳೆಗಳಿಗೆ ಒಂದು ರೀತಿ ವ್ಯಾಯಾಮ ಸಿಕ್ಕಂತಾಗುತ್ತದೆ.
6. ಅಸ್ತಮ ರೋಗಿಗಳಿಗೆ ಒಳ್ಳೆಯದು
ಈಜಾಡುವುದು ಅಸ್ತಮ ರೋಗಿಗಳಿಗೆ ತುಂಬಾನೇ ಒಳ್ಳೆಯದು. ಅಸ್ತಮ ರೋಗಿಗಳು ನೀರಿನಲ್ಲಿ ಮುಳುಗಿ ವಿವಿಧ ಉಸಿರಾಟದ ತಂತ್ರಗಳನ್ನು ಅಭ್ಯಾಸ ಮಾಡೋದ್ರಿಂದ ರೋಗಿಗಳಲ್ಲಿ ಶ್ವಾಸಕೋಶದ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಆದರೆ ತರಬೇತುದಾರರ ನೆರವಿನಲ್ಲೇ ಇದನ್ನು ಮಾಡಬೇಕು. ಆದರೆ ಕೆಲವೊಂದು ಸಲ ಈಜಾಡುವ ಕೊಳದಲ್ಲಿ ಹೆಚ್ಚಿನ ಪ್ರಮಾಣದ ಕೆಮಿಕಲ್ ಬಳಸೋದ್ರಿಂದ ರೋಗಿಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಯಾವುದಕ್ಕೂ ತಜ್ಞರು ಸಂಪರ್ಕಿಸೋದು ಉತ್ತಮ.
7. ಗರ್ಭಿಣಿಯರ ಆರೋಗ್ಯಕ್ಕೆ ಉತ್ತಮ
ಗರ್ಭಿಣಿಯಾಗಿರುವಾಗ ಈಜಾಡೋದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಅಧ್ಯಯನಗಳ ಪ್ರಕಾರ ಗರ್ಭಾವಸ್ಥೆಯ ಆರಂಭಿಕ ಹಂತದಲ್ಲೇ ಈಜಾಡೋದಕ್ಕೆ ಶುರು ಮಾಡಿದರೆ ಜನ್ಮಜಾತ ದೋಷಗಳು ಮತ್ತು ಅವಧಿಪೂರ್ವ ಹೆರಿಗೆಗೆ ಸಂಬಂಧಿಸಿದ ಕಡಿಮೆ ಅಪಾಯಗಳನ್ನು ಕಡಿಮೆಗೊಳಿಸಬಹುದಂತೆ. ಆದರೆ ಗರ್ಭಾವಸ್ಥೆಯಲ್ಲಿರಬೇಕಾದರೆ ಈ ಚಟುವಟಿಕೆಯನ್ನು ಪ್ರಾರಂಭಿಸುವ ಮೊದಲು ಸ್ತ್ರೀರೋಗತಜ್ಞರ ಸಲಹೆಯನ್ನು ಪಡೆಯುವುದು ಉತ್ತಮ.
ದಿನ ನಿತ್ಯ ಈಜಾಡೋದ್ರಿಂದ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಬಹುದು. ಜಿಮ್‌ನಲ್ಲಿ ವರ್ಕ್‌ಔಟ್ ಮಾಡೋದಕ್ಕೆ ನಾವು ತುಂಬಾನೇ ಸಾಮರ್ಥ್ಯ ಹಾಕಬೇಕಾಗುತ್ತದೆ. ಆದರೆ ಈಜಾಡೋದಕ್ಕೆ ಅಷ್ಟೊಂದು ಸಾಮರ್ಥ್ಯ ಹಾಕಬೇಕಾಗಿಲ್ಲ ಹಾಗೂ ಇದನ್ನು ನೀವು ತುಂಬಾನೇ ಎಂಜಾಯ್ ಕೂಡ ಮಾಡ್ತೀರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


