Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಡ್ರಿಂಕ್ಸ್ ತೆಗೆದುಕೊಳ್ಳುವ ಮುನ್ನ ಈ ಆಹಾರಗಳ ಸೇವನೆ ಒಳ್ಳೆಯದು
ಮದ್ಯಪಾನ ಆರೋಗ್ಯ ಒಳ್ಳೆಯದಲ್ಲ, ನಾವಿಲ್ಲ ಮದ್ಯಪಾನವನ್ನು ಉತ್ತೇಜಿಸುತ್ತಿಲ್ಲ. ಮದ್ಯಪಾನ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಗೊತ್ತಿದ್ದರೂ ಸಾಕಷ್ಟು ಜನ ಮದ್ಯಪಾನ ಮಾಡುತ್ತಾರೆ. ಮದ್ಯ ಮಿತಿಯಲ್ಲಿ ಸೇವಿಸಿದರೆ ಆರೋಗ್ಯಕ್ಕೆ ತೊಂದರೆಯಿಲ್ಲ ಎಂಬುವುದಾಗಿ ಅಧ್ಯಯನ ವರದಿ ಹೇಳುತ್ತದೆ.
ಆದರೆ ಯಾವಾಗ ಅಳತೆ ಮೀರಿ ಕುಡಿಯುತ್ತಾರೋ ಆವಾಗ ದೇಹಕ್ಕೆ ಹಾನಿಯುಂಟಾಗುವುದು. ಮದ್ಯ ಕುಡಿಯುವ ಮುನ್ನ ಕೆಲವೊಂದು ಆಹಾರಗಳನ್ನು ಸೇವಿಸುವುದರಿಂದ ಮದ್ಯ ದೇಹದ ಮೇಲೆ ಅತಿಯಾಗಿ ಪ್ರಭಾವ ಬೀರುವುದನ್ನು ತಡೆಗಟ್ಟಬಹುದು. ಆ ಆಹಾರಗಳಾವುವು ಎಂದು ನೋಡೋಣ:

ಮೊಟ್ಟೆ
ಖಾಲಿ ಹೊಟ್ಟೆಯಲ್ಲಿ ಮದ್ಯ ಕುಡಿಯಲೇಬಾರದು. ಮದ್ಯ ಸೇವಿಸುವ ಮುನ್ನ ಮೊಟ್ಟೆ ಸೇವಿಸುವುದು ಒಳ್ಳೆಯದು. ಹೊಟ್ಟೆ ತುಂಬಿದ್ದರೆ ಮದ್ಯ ತೆಗೆದುಕೊಳ್ಳುವ ಪ್ರಮಾಣ ಕಡಿಮೆಯಾಗುವುದು. ಅಲ್ಲದೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಬೇಗನೆ ಕಿಕ್ಕೇರುವುದು, ದೇಹದ ಬ್ಯಾಲೆನ್ಸ್ ಕಳೆದು ತೂರಾಡುವಂತಾಗುವುದು.
ಓಟ್ಸ್
ಓಟ್ಸ್ ತಿನ್ನುವುದರಿಂದ ಲಿವರ್ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗಿದೆ. ಓಟ್ಸ್ ತಿನ್ನುವುದರಿಂದ ಮದ್ಯ ಲಿವರ್ ಮೇಲೆ ಕೆಟ್ಟ ಪ್ರಬಾವ ಬೀರುವುದನ್ನು ತಡೆಗಟ್ಟಬಹುದು, ಆದರೆ ಮಿತಿಯಲ್ಲಿ ಸೇವಿಸಬೇಕಷ್ಟೇ..
ಬಾಳೆಹಣ್ಣು
ಬಾಳೆಹಣ್ಣಿನಲ್ಲಿ ಎಕ್ಟ್ರೋಲೈಟ್ಸ್ ಅಸಮತೋಲನ ತಡೆಗಟ್ಟಲು ಸಹಕಾರಿಯಾಗಿದೆ. ಮದ್ಯ ಸೇವಿಸಿದರೆ ದೇಹದಲ್ಲಿ ನೀರಿನಂಶ ಕಡಿಮೆಯಾಗ ನಿರ್ಜಲೀಕರಣ ಉಂಟಾಗುವುದು, ಈ ರೀತಿಯಾಗುವುದನ್ನು ತಡೆಗಟ್ಟಲು ಸಹಕಾರಿಯಾಗಿದೆ.
ಸಾಲಮೋನ್
ಸಾಲಮೋನ್ ಮೀನಿನಲ್ಲಿ ಒಮೆಗಾ 3 ಕೊಬ್ಬಿನಂಶವಿದೆ, ಇದು ಮದ್ಯದ ಕೆಟ್ಟ ಪರಿಣಾಮ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ. ಸಾಲಮೋನ್‌ನಲ್ಲಿ ಅತ್ಯಧಿಕ ಪ್ರೊಟೀನ್ ಇದ್ದು, ಮದ್ಯವನ್ನು ದೇಹ ಬೇಗನೆ ಹೀರಿಕೊಳ್ಳುವುದನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.
ಯೋಗರ್ಟ್
ಮದ್ಯ ಕುಡಿಯುವಾಗ ಸಾಮಾನ್ಯವಾಗಿ ಯೋಗರ್ಟ್ ಸೇವಿಸುವುದಿಲ್ಲ, ಆದರೆ ಯೋಗರ್ಟ್ ಸೇವಿಸುವುದರಿಂದ ಮದ್ಯ ದೇಹದ ಮೇಲೆ ಕೆಟ್ಟ ಬೀರುವ ಕೆಟ್ಟ ಪ್ರಭಾವವನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.
ಬೆರ್ರಿ ಹಣ್ಣುಗಳು
ಮದ್ಯ ಸೇವಿಸುವ ಮುನ್ನ ಬೆರ್ರಿ ಹಣ್ಣುಗಳನ್ನು ಸೇವಿಸಬೇಕು. ಇದರಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುವುದನ್ನು ತಡೆಗಟ್ಟಬಹುದು.
ಗ್ರೇಪ್‌ಫ್ರೂಟ್
ಮದ್ಯಪಾನಕ್ಕೆ ಮುನ್ನ ಗ್ರೇಪ್‌ಫ್ರೂಟ್ ತಿನ್ನುವುದು ಒಳ್ಳೆಯದು. ಇದರಿಂದ ಫ್ಯಾಟಿ ಲಿವರ್ ಸಮಸ್ಯೆ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.
ಕಲ್ಲಂಗಡಿ, ಕರ್ಬೂಜ
ನೀವು ಮದ್ಯಪಾನ ಮಾಡುವ ಮುನ್ನ ಕಲ್ಲಂಗಡಿ, ಕರ್ಬೂಜ ಹಣ್ಣುಗಳನ್ನು ಸೇವಿಸಿದರೆ ಒಳ್ಳೆಯದು, ಇದರಿಂದ ದೇಹದಲ್ಲಿ ನೀರಿನಂಶ ಕಾಪಾಡಲು ಸಹಕಾರಿಯಾಗಿದೆ. ಅಲ್ಲದೆ ದೇಹಕ್ಕೆ ಪೋಷಕಾಂಶ ದೊರೆಯಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

