Latest Updates
-
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ!
ನೆಲ್ಲಿಕಾಯಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಈ 6 ಅದ್ಭುತ ಪ್ರಯೋಜನಗಳಿವೆ
ನೆಲ್ಲಿಕಾಯಿ ದಿನಾ ತಿಂದರೆ ಒಳ್ಳೆಯದು ಎಂದು ಹೇಳುವುದನ್ನು ಕೇಳಿರಬಹುದು. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದೆ.ಕೂದಲು, ತ್ವಚೆ, ಹೊಟ್ಟೆಯ ಆರೋಗ್ಯ, ತೂಕ ನಿಯಂತ್ರಣ, ಮಧುಮೇಹ ನಿಯಂತ್ರಣ ಹೀಗೆ ಒಟ್ಟು ಮೊತ್ತ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಹಾಗಾಗಿ ಇದೊಂದು ಸೂಪರ್ ಫುಡ್ ಎಂದು ಹೆಲ್ತ್ ಲೈನ್ ಕೂಡ ಹೇಳಿದೆ.
ನೆಲ್ಲಿಕಾಯಿ ಜ್ಯೂಸ್ ಅನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ತುಂಬಾ ಒಳ್ಳೆಯದು, ಹೇಗೆ? ಇದರಿಂದ ನಮ್ಮ ಶರೀರಕ್ಕೆ ದೊರೆಯುವ ಪ್ರಯೋಜನಗಳೇನು ಎಂದು ನೋಡೋಣ ಬನ್ನಿ:

150 ಗ್ರಾಂ ನೆಲ್ಲಿಕಾಯಿಯಲ್ಲಿ
66 ಕ್ಯಾಲೋರಿ
1 ಗ್ರಾಂ ಪ್ರೊಟೀನ್
ಶೇ.1ಕ್ಕಿಂತ ಕಡಿಮೆ ಕೊಬ್ಬಿನಂಶ
15 ಗ್ರಾಂ ಕಾರ್ಬ್ಸ್
7 ಗ್ರಾಂ ನಾರಿನಂಶ
ಅವಶ್ಯಕವಿರುವ ವಿಟಮಿನ್ 5, ವಿಟಮಿನ್ ಬಿ6
ಶೇ. 12 ರಷ್ಟು ಸತು
ಶೇ. 9 ಮ್ಯಾಂಗನೀಸ್
ಶೇ. 6ರಷ್ಟು ಪೊಟಾಷ್ಯಿಯಂ ದೊರೆಯಲಿದೆ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ದೊರೆಯುವ ಪ್ರಯೋಜನಗಳೆಂದರೆ
ಸಕ್ಕರೆಯಂಶ ನಿಯಂತ್ರಣದಲ್ಲಿಡಬಹುದು
ಸಾಕಷ್ಟು ಅಧ್ಯಯನಗಳು ಇದನ್ನು ಸಾಬೀತು ಪಡಿಸಿದೆ. ಟೆಸ್ಟ್ ಟ್ಯೂಬ್ ಅಧ್ಯಯನದಲ್ಲಿ ರಕ್ತನಾಳಗಳು ಸಕ್ಕರೆಯಂಶ ಹೀರಿಕೋಳ್ಳುವುದನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ರಕ್ತದಲ್ಲಿ ಸಕ್ಕೆಯಂಶ ಹೆಚ್ಚಾಗುವುದನ್ನು ತಡೆಗಟ್ಟುತ್ತದೆ ಎಂದು ಹೇಳಲಾಗುವುದು. ಅಲ್ಲದೆ ಇದರಲ್ಲಿ ನಾರಿನಂಶ ಕೂಡ ಇರುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಹೊಟ್ಟೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
ಯಾರಿಗೆ ಅಜೀರ್ಣ ಸಮಸ್ಯೆವಿದೆಯೋ ಅವರು ನೆಲ್ಲಿಕಾಯಿ ಜ್ಯೂಸ್ ಕುಡಿದರೆ ಒಳ್ಳೆಯ ರಿಸಲ್ಟ್ ಪಡೆಯಬಹುದು, ಜೀರ್ಣಕ್ರಿಯೆ ಉತ್ತಮವಾಗಿ ನಡೆಯುತ್ತದೆ, ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆ ತಡೆಗಟ್ಟುತ್ತದೆ.
ಅಲ್ಲದೆ ನೆಲ್ಲಿಕಾಯಿ ಜ್ಯೂಸ್ ದೇಹವನ್ನು ಡಿಟಾಕ್ಸ್ ಮಾಡುತ್ತದೆ, ಇದು ದೇಹದಲ್ಲಿರುವ ಬೇಡದ ಕಶ್ಮಲವನ್ನು ಹೊರ ಹಾಕುತ್ತದೆ, ಇದರಿಂದ ಲಿವರ್‌ನ ಆರೋಗ್ಯ ವೃದ್ಧಿಸಲು ಸಹಕಾರಿಯಾಗಿದೆ.
ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಬೆರ್ರಿಯನ್ನು ನಮ್ಮ ಆಹಾರಕ್ರಮದಲ್ಲಿ ಸೇರಿಸುವುದರಿಂದ ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ನೆಲ್ಲಿಕಾಯಿಯಲ್ಲಿ ಆಂಟಿಆಕ್ಸಿಡೆಂಟ್ ಹೆಚ್ಚಿದೆ, ಪೊಟಾಷ್ಯಿಯಂ ಇದೆ ಇವೆಲ್ಲಾ ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ತೂಕ ನಿಯಂತ್ರಣಕ್ಕೆ ಸಹಕಾರಿ
ನೆಲ್ಲಿಕಾಯಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ತೂಕ ಇಳಿಕೆಗೆ ತುಂಬಾನೇ ಒಳ್ಳೆಯದು. ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಜ್ಯೂಸ್ ಕುಡಿದರೆ ಚಯಪಚಯ ಕ್ರಿಯೆ ಉತ್ತಮವಾಗಿ, ನಡೆಯಲಿದೆ, ಇದು ತೂಕ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ.
ಕೂದಲಿನ ಆರೋಗ್ಯಕ್ಕೆ ಒಳ್ಳೆಯದು
ನೆಲ್ಲಿಕಾಯಿಯನ್ನು ಕೂದಲಿನ ಆರೋಗ್ಯಕ್ಕೆ ಆಹಾರಕ್ರಮದಲ್ಲಿ ಸೇರಿಸುವುದು ಹಾಗೂ ಕೂದಲಿನ ಬಾಹ್ಯ ಆರೋಗ್ಯಕ್ಕೆ ಬಳಸುವುದು ಒಳ್ಳೆಯದು. ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಇದರಲ್ಲಿರುವ ಪೋಷಕಾಂಶ ನೆಲ್ಲಿಕಾಯಿಯನ್ನು ಆಂತರಿಕವಾಗಿ ಪೋಷಣೆ ಮಾಡುತ್ತದೆ, ಇದನ್ನು ಎಣ್ಣೆಯಲ್ಲಿ ಕಾಯಿಸಿ ಬಳಸುವುದರಿಂದ ಬಾಹ್ಯವಾಗಿ ಕೂಡ ಕೂದಲಿನ ಆರೈಕೆ ಮಾಡಬಹುದು.
ತ್ವಚೆ ಕಾಂತಿಯನ್ನು ವೃದ್ಧಿಸುತ್ತದೆ
ನೆಲ್ಲಿಕಾಯಿ ಜ್ಯೂಸ್ ದೇಹವನ್ನು ಡಿಟಾಕ್ಸ್ ಮಾಡುತ್ತದೆ, ಅಲ್ಲದೆ ತ್ವಚೆಯ ಆರೋಗ್ಯ ವೃದ್ದಿಸಲು ಸಹಕಾರಿಯಾಗಿದೆ. ಹಾಗಾಗಿ ಈ ಜ್ಯೂಸ್ ಅನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದರಿಂದ ಇದು ಶರೀರವನ್ನು ಆಂತರಿಕವಾಗಿ ಪೋಷಣೆ ಮಾಡುತ್ತದೆ, ತ್ವಚೆಯ ಕಾಂತಿ ಹೆಚ್ಚಾಗಲಿದೆ.
ಕ್ಯಾನ್ಸರ್ ಕಣಗಳ ವಿರುದ್ಧ ಕೂಡ ಹೋರಾಡುತ್ತದೆ
ನೆಲ್ಲಿಕಾಯಿಯಲ್ಲಿ ಫೋಲಟ್, ಫೀನೋಲಿಕ್ ಅಂಶಗಳಿದ್ದು ಇದು ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ, ಈ ಅಂಶಗಳು ಜೀವ ಕಣಗಳನ್ನು ರಿಪೇರಿ ಮಾಡುತ್ತದೆ, ಆಕ್ಸಿಡೇಟಿವ್ ಸ್ಟ್ರೆಸ್ ಕಡಿಮೆ ಮಾಡುತ್ತದೆ, ಟೆಸ್ಟ್ ಟ್ಯೂಬ್ ಹಾಗೂ ಪ್ರಾಣಿಗಳ ಮೇಲೆ ನಡೆಸಿದ ಅಧ್ಯಯನದಿಂದ ಈ ಅಂಶಗಳು ಸಾಬೀತಾಗಿದೆ ಎಂದು ಹೆಲ್ತ್‌ಲೈನ್‌ನಲ್ಲಿ ಉಲ್ಲೇಖ ಮಾಡಲಾಗಿದೆ.
ನೆಲ್ಲಿಕಾಯಿಯನ್ನು ಜ್ಯೂಸ್ ಮಾಡಿಯೇ ಕುಡಿಯಬೇಕೆಂದಿಲ್ಲ, ಹಾಗೆಯೂ ನೆಲ್ಲಿಕಾಯಿ ತಿನ್ನಬಹುದು, ನೆಲ್ಲಿಕಾಯಿ ಒಣಗಿಸಿಟ್ಟು ಕೂಡ ಬಳಸಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications