Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ತಕ್ಷಣ ತೂಕ ಇಳಿಸುತ್ತೆ ಈ ಟ್ಯಾಡ್ ಪೋಲ್ ವಾಟರ್..! ಏನಿದು ಕಪ್ಪೆ ಮರಿಗಳ ಗುಂಪಿನ ವಿಧಾನ..!?
ತೂಕ ಹೆಚ್ಚಳವಾಗಿರೋದ್ರ ಸಮಸ್ಯೆ ಏನು ಎಂಬುದನ್ನು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲೂ ನಾವು ಅನುಭವಿಸಿದೆವು. ಕೇವಲ 100 ಗ್ರಾಮ್ ತೂಕ ಹೆಚ್ಚಳದಿಂದ ಚಿನ್ನದ ಪದಕವೇ ಕೈತಪ್ಪಿದ್ದು ಅಲ್ಲದೆ ಕುಸ್ತಿ ಪಟು ವಿನೇಶ್ ಫೋಗಟ್ ಕುಸ್ತಿಗೆ ಗುಡ್ ಬೈ ಹೇಳಿದ್ದಾರೆ. ನಿವೃತ್ತಿ ಘೋಷಣೆಗೂ ಪರೋಕ್ಷವಾಗಿ ಈ ತೂಕ ಹೆಚ್ಚಳ ಕಾರಣವಾಗಿದೆ. ಆಕೆ ನಿಗದಿತ ತೂಕ ಹೊಂದಿದ್ದರೆ ಪದಕವೊಂದು ಆಕೆಯ ಕೊರಳಿಗೆ ಬೀಳುವುದು ಖಚಿತವಾಗಿತ್ತು. ಆದ್ರೆ ಈಗ ಆಕೆ ಒಲಿಂಪಿಕ್‌ನಲ್ಲಿ ಆಡಿರುವ ಎಲ್ಲಾ ಪಂದ್ಯಗಳಿಂದ ಆಕೆಯ ಅಂಕವೂ ಮರೆಯಲಾಗಲಿದೆ.
ಆದರೆ ತೂಕ ಇಳಿಸುವುದಕ್ಕೆ ಹಲವು ಮಾರ್ಗಗಳಿವೆ, ಡಯೆಟಿಂಗ್, ವ್ಯಾಯಾಮ, ಆಹಾರ ಕ್ರಮದಲ್ಲಿ ಬದಲಾವಣೆ, ಜಿಮ್, ಔಷಧಿಗಳು ಹೀಗೆ ಹತ್ತಾರು ಮಾರ್ಗದಿಂದ ತೂಕ ಇಳಿಸಿಕೊಳ್ಳಬಹುದು. ಇತ್ತೀಚನ ದಿನಗಳಲ್ಲಿ ತೂಕ ಇಳಿಸೋದು ದೊಡ್ಡ ಸಾಹಸದ ಕಾರ್ಯವಾಗಿದೆ. ಪ್ರತಿಯೊಬ್ಬರು ತೂಕ ಹೆಚ್ಚಳದ ಭೀತಿಯಲ್ಲಿಯೇ ದಿನ ದೂಡುತ್ತಿದ್ದಾರೆ.

ಆದ್ರೆ ತೂಕ ಇಳಿಸೋಕೆ ವಿಚಿತ್ರ ದಾರಿಗಳನ್ನು ಸಹ ಕೆಲವರು ಹಿಡಿಯುತ್ತಾರೆ. ಅದರಲ್ಲಿ ಇಲ್ಲೊಂದು ವಿಧಾನ ಸಿಕ್ಕಾಪಟ್ಟೆ ವೈರಲ್ ಆಗಿರುವ ಜೊತೆಗೆ ಇದೆಂತಹ ವಿಧಾನವೆಂದು ಅಚ್ಚರಿಗೆ ಒಳಗಾಗಿದ್ದಾರೆ. ಟ್ಯಾಡ್ ಪೋಲ್ ವಾಟರ್ ಎಂದ ಹೊಸ ವಿಧಾನವೊಂದು ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಜೊತೆಗೆ ಯುವ ಸಮುದಾಯ ಈ ವಿಧಾನಕ್ಕೆ ಮೊರೆ ಹೋಗಿದ್ದಾರೆ.
ಹೌದು ಒಂದು ಲೋಟ ಬಿಸಿ ನೀರು, ಒಂದು ಸ್ಪೂನ್ ಚೀಯಾ ಬೀಜ, ಹಾಗೂ ಒಂದು ನಿಂಬೆ ಹಣ್ಣಿನ ರಸ ಇದ್ದರೆ ಈ ಟ್ಯಾಡ್ ಪೋಲ್ ವಾಟರ್ ರೆಡಿಯಾಗುತ್ತದೆ. ಮೂರು ದಿನದಲ್ಲಿ ಒಬ್ಬಾಕೆ 3 ಪೌಂಡ್‌ನಷ್ಟು ತೂಕ ಇಳಿಸಿಕೊಂಡಿರುವುದಾಗಿ ಆಕೆ ಹೇಳಿಕೊಂಡಿದ್ದಾರೆ. ನಿತ್ಯ ಈ ನೀರು ಕುಡಿಯುವುದರಿಂದ ದೇಹದಲ್ಲಿರುವ ಹೆಚ್ಚುವರಿ ಕೊಬ್ಬು ಕರಗಲು ಆರಂಭವಾಗುತ್ತದೆ. ಈ ನೀರು ಕುಡಿದರೆ ವ್ಯಾಯಾಮ, ಜಿಮ್ ಯಾವುದರ ಅಗತ್ಯವೂ ಇಲ್ಲವಂತೆ.
ಈ ವಿಭಿನ್ನವಾದ ವಿಧಾನ ಅಮೆರಿಕ ಸೇರಿ ಹಲವು ಕಡೆ ಫೇಮಸ್ ಆಗಿದೆ. ಟಿಕ್‌ಟಾಕ್, ರೀಲ್ಸ್‌ಗಳಲ್ಲಿ ಈ ಟ್ಯಾಡ್ ಪೋಲ್ ಚಾಲೆಂಜ್ ಸ್ವೀಕರಿಸುವವರ ವಿಡಿಯೋಗಳ ಹಂಚಿಕೊಳ್ಳುತ್ತಿರುವುದು ನಾವು ನೋಡಬಹುದು. ಇದನ್ನು ಸುಲಭವಾಗಿ ಮಾಡಬಹುದಾಗಿರುವುದರಿಂದ ಈ ವಿಧಾನ ಬಳಸಲು ಎಲ್ಲರು ಮುಂದಾಗಿದ್ದಾರೆ.
ಟ್ಯಾಡ್ ಪೋಲ್ ವಾಟರ್ ಎಂದರೇನು?
ಈ ಪಾನೀಯಾಗೆ ಟ್ಯಾಡ್‌ಪೋಲ್ ಎಂದು ಹೆಸರಿಡಲಾಗಿದೆ. ಸಣ್ಣ ಕೊಳ್ಳದಲ್ಲಿ ಈಜುತ್ತಿರುವ ಕಪ್ಪೆ ಮರಿಗಳ ಗುಂಪು ಎಂದು ಅರ್ಥೈಸಲಾಗಿದೆ. ಆದರೆ ಈ ನೀರಿಗೆ ಈ ಯಾವ ಅಂಶವು ಬೆರೆತಿರುವುದಿಲ್ಲ. ಈ ಮಿಶ್ರಣದಲ್ಲಿ ಚಿಯಾ ಬೀಜಗಳು ನೀರಿನಲ್ಲಿ ತೇಲುವುದನ್ನು ಕಪ್ಪೆ ಮರಿಗಳ ಗುಂಪಿಗೆ ಹೋಲಿಸಲಾಗಿದೆ. ಹೀಗಾಗಿ ಈ ಆರೋಗ್ಯಕರ ಪಾನೀಯಾಗೆ ಟ್ಯಾಡ್ ಪೋಲ್ ವಾಟರ್ ಎಂದು ಕರೆಯಲಾಗಿದೆ.
ಆದರೆ ಹಲವರು ಇದನ್ನು ಕಪ್ಪೆಗಳ ಗುಂಪುಗಳಿದ್ದ ಹೊಂಡದಿಂದ ತೆಗೆಯಲಾಗಿರುವ ನೀರು ಎಂದು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಮತ್ತೆ ಕೆಲವರು ಇದರಲ್ಲಿ ಕಪ್ಪೆ ಮರಿಗಳ ಹಾಕಿ ಅದರ ನೀರು ಕುಡಿಯಲಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ ಈ ವಿಧಾನದಲ್ಲಿ ಹೆಸರು ಮಾತ್ರವೇ ಹೀಗಿದ್ದು ಇದು ಸಂಪೂರ್ಣ ಸಸ್ಯಹಾರಿ ಹಾಗೂ ಆರೋಗ್ಯಕರ ಪಾನೀಯವಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
