Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕಲ್ಲಂಗಡಿ ಹಣ್ಣು ತಿಂದ ಮೇಲೆ ಈ ಆಹಾರಗಳನ್ನು ಸೇವಿಸುವ ಅಭ್ಯಾಸ ನಿಮಗಿದ್ಯಾ? ಹಾಗಾದ್ರೆ ಇಂದೇ ಬಿಟ್ಟು ಬಿಡಿ !
ಕಲ್ಲಂಗಡಿ ಹಣ್ಣು ಅಂದ್ರೆ ಪ್ರತಿಯೊಬ್ಬರಿಗೂ ತುಂಬಾನೇ ಇಷ್ಟ. ಅದ್ರಲ್ಲೂ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿನ್ನೋ ಮಜಾನೇ ಬೇರೆ. ಬೇಸಿಗೆಯಲ್ಲಿ ನಮ್ಮ ದೇಹವನ್ನು ಡಿಹೈಡ್ರೇಟ್ ಮಾಡೋದಕ್ಕೆ ಕಲ್ಲಂಗಡಿ ಹಣ್ಣು ಅಗತ್ಯವಾಗಿ ಬೇಕಾಗಿದೆ. ಅದ್ರ ಜೊತೆಗೆ ಕಲ್ಲಂಗಡಿ ಹಣ್ಣು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ನಮ್ಮ ಆರೋಗ್ಯದ ದೃಷ್ಟಿಯಿಂದಲೂ ಉತ್ತಮ ಅಂತಾನೇ ಹೇಳಬಹುದು.
ಪ್ರತಿಯೊಬ್ಬರು ಬಾಯಿ ಚಪ್ಪರಿಸಿ ತಿನ್ನೋ ಕಲ್ಲಂಗಡಿ ಹಣ್ಣಿನಲ್ಲಿ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲೇ ಇದೆ. ಇನ್ನೂ ಇದನ್ನು ತಿನ್ನೋದ್ರಿಂದ ನಮ್ಮ ದೇಹಕ್ಕೆ ಸಾಕಷ್ಟ ಪ್ರಮಾಣದಲ್ಲಿ ವಿಟಮಿನ್ ಕೂಡ ದೊರೆಯುತ್ತದೆ. ಇನ್ನೂ ಕಲ್ಲಂಗಡಿ ಹಣ್ಣು ತಿನ್ನೋದ್ರಿಂದ ದೇಹ ಡಿಹೈಡ್ರೇಟ್ ಆಗುವುದರ ಜೊತೆಗೆ ಜೀರ್ಣಕ್ರಿಯೆಗೂ ಉತ್ತಮವಾಗಿದೆ. ಆದ್ರೆ ನಿಮಗೊತ್ತಾ ಕೆಲವೊಂದು ವಸ್ತುಗಳನ್ನು ನಾವು ಕಲ್ಲಂಗಡಿ ಹಣ್ಣಿನ ಜೊತೆಗೆ ಅಥವಾ ಕಲ್ಲಂಗಡಿ ಹಣ್ಣು ತಿಂದ ತಕ್ಷಣ ಸೇವಿಸಬಾರದು. ಹಾಗಾದ್ರೆ ಆ ವಸ್ತುಗಳು ಯಾವುದು ಅನ್ನೋದನ್ನು ತಿಳಿಯೋಣ.

1. ಹಾಲು
ಒಂದು ವಿಚಾರವನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಯಾವುದೇ ಕಾರಣಕ್ಕೂ ಕಲ್ಲಂಗಡಿ ತಿಂದ ನಂತರ ಹಾಲು ಸೇವಿಸಬಾರದು. ಇದು ನಿಮ್ಮಲ್ಲಿ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಏಕೆಂದರೆ ಕಲ್ಲಂಗಡಿಯಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮಿನ್ ಸಿ ಅಂಶವಿದೆ. ಕಲ್ಲಂಗಡಿ ಹಣ್ಣು ತಿಂದ ತಕ್ಷಣ ನೀವು ಹಾಲು ಸೇವಿಸಿದ್ರೆ, ಇದು ನಿಮ್ಮ ದೇಹದಲ್ಲಿ ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ಪರಿಸ್ಥಿತಿಯಲ್ಲಿ ನಾವು ಬಹಳ ಜಾಗರೂಕರಾಗಿರಬೇಕು. ಯಾವುದೇ ಕಾರಣಕ್ಕೂ ಹಾಲು ಹಾಗೂ ಕಲ್ಲಂಗಡಿಯನ್ನು ಒಟ್ಟಿಗೆ ಸೇವಿಸದಂತೆ ಎಚ್ಚರಿಸಿಕೆ ವಹಿಸಿ.
2. ಪ್ರೋಟೀನ್ ಆಹಾರಗಳು
ಪ್ರೋಟೀನ್‌ಯುಕ್ತ ಆಹಾರಗಳು ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದರೆ ಕಲ್ಲಂಗಡಿ ತಿಂದ ನಂತರ ಯಾವತ್ತೂ ಪ್ರೊಟೀನ್‌ಯುಕ್ತ ಆಹಾರವನ್ನು ಸೇವಿಸಬಾರದು. ಏಕೆಂದರೆ ಕಲ್ಲಂಗಡಿಯಲ್ಲಿ ವಿಟಮಿನ್ ಮತ್ತು ಮಿನರಲ್ಸ್ ಹೇರಳವಾಗಿದೆ. ಇದು ನಿಮ್ಮ ಆರೋಗ್ಯಕ್ಕೆ ಹಲವು ಸವಾಲುಗಳನ್ನು ಒಡ್ಡುತ್ತದೆ. ವಿಶೇಷವಾಗಿ ಪ್ರೋಟೀನ್ ಭರಿತ ಆಹಾರವಾದ ಬೀನ್ಸ್ ಅನ್ನು ಕಲ್ಲಂಗಡಿ ತಿಂದ ನಂತರ ತಿನ್ನಬಾರದು. ಏಕೆಂದರೆ ಇದು ಜೀರ್ಣಕಾರಿ ರಸವನ್ನು ಕೆರಳುವಂತೆ ಮಾಡಿ. ನಿಮ್ಮ ಹೊಟ್ಟೆಯನ್ನು ಕೆರಳಿಸುತ್ತದೆ. ಹಾಗಾಗಿ ಹುಷಾರಾಗಿದ್ದರೆ ಒಳ್ಳೆಯದು.
3. ಮೊಟ್ಟೆಗಳು
ಕಲ್ಲಂಗಡಿ ಹಣ್ಣಿನ ನಂತರ ಮೊಟ್ಟೆಗಳನ್ನು ತಿನ್ನುವುದರ ಬಗ್ಗೆಯೂ ನೀವು ಸ್ವಲ್ಪ ಜಾಗರೂಕರಾಗಿರಬೇಕು. ಇದು ನಿಮ್ಮ ಜೀರ್ಣಕ್ರಿಯೆಗೆ ಅಡ್ಡಿಯಾಗುತ್ತದೆ. ಮೊಟ್ಟೆಯಲ್ಲಿ ಪ್ರೋಟೀನ್ ಮಾತ್ರವಲ್ಲದೆ ಒಮೆಗಾ 3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಇದರೊಂದಿಗೆ ಕಲ್ಲಂಗಡಿ ತಿನ್ನುವುದು ನಿಮಗೆ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು. ಇದು ಸಾಮಾನ್ಯವಾಗಿ ಮಲಬದ್ಧತೆಯಂತಹ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ಕಲ್ಲಂಗಡಿ ತಿಂದ 30 ನಿಮಿಷಗಳ ಕಾಲ ಬೇರೆ ಯಾವುದೇ ಆಹಾರವನ್ನು ಸೇವಿಸಬೇಡಿ.
ಆರೋಗ್ಯವೇ ಭಾಗ್ಯ. ಹೀಗಾಗಿ ಆರೋಗ್ಯದ ಬಗ್ಗೆ ಕಾಳಜಿ ಮಾಡುವುದು ತುಂಬಾನೇ ಮುಖ್ಯವಾಗುತ್ತದೆ. ನೀವು ಕಲ್ಲಂಗಡಿ ಹಣ್ಣನ್ನು ಸೇವಿಸಿದ ನಂತರ ಸುಮಾರು ಮೂವತ್ತು ನಿಮಿಷಗಳ ಕಾಲ ಯಾವುದೇ ಆಹಾರವನ್ನು ಸೇವಿಸೋದಕ್ಕೆ ಹೋಗಬೇಡಿ. ಇದರಿಂದ ನಿಮಗೆ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

