Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಯುವ ಪೀಳಿಗೆಯನ್ನು ಹೆಚ್ಚಾಗಿ ಕಾಡುತ್ತಿದೆ ಆತ್ಮಹತ್ಯೆ ಕಾಯಿಲೆ, ಇದರಿಂದ ಹೊರಬರಬಹುದೇ?
ಚಿಕ್ಕ ಪುಟ್ಟ ವಿಷಯಕ್ಕೆ ಈ ಜೀವನವೇ ಸಾಕು ಎಂಬ ಆತ್ಮಹತ್ಯೆಯ ಆಲೋಚನೆಗಳು ಯುವ ಪೀಳಿಗೆಯಲ್ಲಿ ಹೆಚ್ಚಾಗುತ್ತಿದೆ. ಮೊಬೈಲ್ ಕೊಡಿಸಿಲ್ಲ, ಫ್ರೆಂಡ್ಸ್ ಜಿತೆ ಟ್ರಿಪ್ ಬಿಟ್ಟಿಲ್ಲ ಹೀಗೆ ಚಿಕ್ಕ ವಿಷಯಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವವರಿಗೇನೂ ಕಡಿಮೆಯಿಲ್ಲ.ವೈದ್ಯರು ಇದನ್ನು ಆತ್ಮಹತ್ಯೆ ಕಾಯಿಲೆ ಎಂದು ಕರೆಯುತ್ತಾರೆ. ಹಾಗಾದ್ರೆ ಏನಿದು ಆತ್ಮಹತ್ಯೆ ಕಾಯಿಲೆ? ಇದಕ್ಕಿರುವ ಚಿಕಿತ್ಸೆಗಳೇನು ಎಂಬ ಮಾಹಿತಿಯನ್ನು ವೈದ್ಯರಿಂದ ತಿಳಿಯೋಣ.

ಆತ್ಮಹತ್ಯೆ ಕಾಯಿಲೆ ಎಂದರೇನು?
ಆತ್ಮಹತ್ಯೆ ಕಾಯಿಲೆಯನ್ನು ವೈದ್ಯಕೀಯವಾಗಿ ಟ್ರೈಜಿಮಿನಲ್ ನ್ಯೂರಾಲ್ಜಿಯಾ (TN) ಎಂದು ಕರೆಯಲಾಗುತ್ತದೆ. ಟ್ರೈಜಿಮಿನಲ್ ನರದ ಮೇಲೆ ಒತ್ತಡ ಉಂಟಾದಾಗ ಈ ಕಾಯಿಲೆಯು ಸೃಷ್ಟಿಯಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಅತೀ ಕಡಿಮೆ ವಯಸ್ಸಿನ ಹಾಗೂ ಕನಿಷ್ಟ 6 ವರ್ಷದ ಮಗುವಿಗೂ ಕೂಡ ಈ ಸಮಸ್ಯೆ ತಪ್ಪಿದ್ದಲ್ಲ. ಈ ಕಾಯಿಲೆಯು ಎಷ್ಟು ಭಯಾನಕ ಎಂದರೆ ಕೈ ಕಾಲು ಕತ್ತರಿಸುವ ವೇಳೆ ಅಥವಾ ಹೆರಿಗೆ ವೇಳೆ ಎದುರಾಗುವ ನೋವಿಗೆ ಸಮನಾದದ್ದು ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ಹಿರಿಯ ಸಲಹೆಗಾರ ಹಾಗೂ ನ್ಯೂರೋಸರ್ಜನ್ ಡಾ. ಪ್ರಥಮ್ ಬೈಸಾನಿ ಹೇಳುತ್ತಾರೆ.
ನರಗಳ ಮೇಲೆ ಪ್ರಭಾವ ಬೀರಿ ಆತ್ಮಹತ್ಯೆ ಬಗ್ಗೆ ಯೋಚಿಸುವಂತೆ ಮಾಡುವ ಭಯಾನಕ ಕಾಯಿಲೆ
ಆತ್ಮಹತ್ಯೆ ಕಾಯಿಲೆ ಎಂಬುದು ಮಾನಸಿಕವಾಗಿ ವಿಪರೀತ ನೋವನ್ನು ಹೊಂದಿರುವ ವ್ಯಕ್ತಿಯ ನರಗಳ ಮೇಲೆ ಪ್ರಭಾವ ಬೀರುತ್ತದೆ. ನರಗಳಲ್ಲಿ ಆ ನೋವಿನ ಒತ್ತಡದಿಂದಾಗಿ ಆತ್ಮಹತ್ಯೆಯ ಆಲೋಚನೆಗಳು ಬರುತ್ತವೆ. ಈ ರೀತಿಯ ಸಮಸ್ಯೆಗೆ ಒಳಗಾದವರು ಆಗಾಗ್ಗೆ ಮುಖ ಹಾಗೂ ಕತ್ತಿನ ಕೆಳಗೆ ಹೆಚ್ಚು ನೋವಿನಿಂದ ಬಳಲುತ್ತಿರುತ್ತಾರೆ. ಕೆಲವೊಮ್ಮೆ ಮೈಗ್ರೇನ್ ಅಥವಾ ಮುಖಕ್ಕೆ ಸಂಬಂಧಿಸಿದ ನೋವುಗಳು ಕಂಡುಬರುತ್ತವೆ. ಇದನ್ನು ಆರೋಗ್ಯ ಸಮಸ್ಯೆಯೆಂದು ನಿರ್ಲಕ್ಷ್ಯ ಮಾಡಬಾರದು ಅಂತಾರೆ ವೈದ್ಯರು.
ಏನಿದು ಟ್ರೈಜಿಮಿನಲ್ ನ್ಯೂರಾಲ್ಜಿಯಾ?
ಟ್ರೈಜಿಮಿನಲ್ ನ್ಯೂರಾಲ್ಜಿಯಾ ಎನ್ನುವುದು ಟ್ರೈಜಿಮಿನಲ್ ನರದ ಮೇಲೆ ಬೀಳುವ ಒತ್ತಡದ ಸಮಸ್ಯೆಯಾಗಿದೆ. ಈ ರೋಗದಿಂದಾಗಿ ಕಿವಿ, ಮುಖ, ಗಲ್ಲ, ದವಡೆ, ತುಟಿ ಮತ್ತು ಮೂಗಿನ ಸುತ್ತ ಈ ನರವು ಹಬ್ಬಿರುತ್ತದೆ. ವ್ಯಕ್ತಿಯು ಸಂಕಟಕ್ಕೆ ಒಳಗಾದಾಗ ಟ್ರೈಜಿಮಿನಲ್ ನರದ ಮೇಲೆ ಪ್ರಭಾವ ಬೀರುತ್ತದೆ. ಆಗ ವ್ಯಕ್ತಿಯ ಮುಖದ ಕೆಳಗೆ, ಮೇಲೆ ಅಥವಾ ಮುಂಭಾಗ ನೋವು ಕಾಣಿಸಿಕೊಳ್ಳಬಹುದು ಅಥವಾ ಮುಖದ ಎರಡೂ ಬದಿಯಲ್ಲೂ ನೋವು ಉಂಟಾಗಬಹುದು. ಈ ರೀತಿಯ ನೋವು ಸಾಮಾನ್ಯವಾಗಿ ೫೦ ವರ್ಷ ಮೇಲ್ಪಟ್ಟವರಲ್ಲಿ ಕಾಣಿಸಿಕೊಳ್ಳುತ್ತದೆ. ಅಮೇರಿಕನ್ ಅಸೋಸಿಯೇಷನ್ ಆಫ್ ನ್ಯೂರೋಲಾಜಿಕಲ್ ಸರ್ಜನ್ಸ್ ಹೇಳುವ ಪ್ರಕಾರ ಯುಎಸ್ ನಲ್ಲಿ ವಾರ್ಷಿಕವಾಗಿ ಸುಮಾರು 1,50,000 ಮಂದಿ ಈ ಸಮಸ್ಯೆಗೆ ತುತ್ತಾಗುತ್ತಿದ್ದಾರೆ ಎಂದು ವರದಿ ಹೇಳಿದೆ.
ಆತ್ಮಹತ್ಯೆ ಕಾಯಿಲೆ ಇರುವ ವ್ಯಕ್ತಿಯಲ್ಲಿ ಈ ಬದಲಾವಣೆಗಳು ಕಂಡು ಬರುವುದು
ಇದರಿಂದ ಆತ ಸಾಮಾಜಿಕವಾಗಿ ಬೆರೆಯುವುದು ಮತ್ತು ಇತರರೊಂದಿಗೆ ಊಟ ಮಾಡುವುದು ಅಥವಾ ಮಾತನಾಡುವುದಕ್ಕೆ ಹಿಂದೇಟು ಹಾಕುತ್ತಾ ಹೋಗುತ್ತಾನೆ.
ಕೆಲಸದ ಕಡೆಗೆ ಗಮನಹರಿಸಲು ಸಾಧ್ಯವಾಗದೆ ಉದ್ಯೋಗವನ್ನು ಕಳೆದುಕೊಂಡಿದ್ದಾರೆ.
ಕುಟುಂಬದಲ್ಲಿ ಸಮಸ್ಯೆಗಳು ಎದುರಾದಾಗ ಈ ಆಲೋಚನೆ ಹೆಚ್ಚಾಗುವುದು.
ಇದರಿಂದ ಗುಣಮುಖರಾಗಲು ಸಾಧ್ಯವೇ?
ಇದಕ್ಕೆ ಸೂಕ್ತ ಚಿಕಿತ್ಸೆ ಪಡೆದರೆ ಆ ಆಲೋಚನೆಯಿಂದ ಹೊರಬರಬಹುದು. ಕೇವಲ ಒಂದು ಪರೀಕ್ಷೆಯ ಮೂಲಕ ಟ್ರೈಜಿಮಿನಲ್ ನ್ಯೂರಾಲ್ಜಿಯಾ ಸಮಸ್ಯೆಯನ್ನು ಪತ್ತೆಹಚ್ಚಲು ಸಾಧ್ಯವಿಲ್ಲ. ದೈಹಿಕ ಮತ್ತು ನರವೈಜ್ಞಾನಿಕ ಪರೀಕ್ಷೆಗಳ ಜೊತೆಗೆ ಎಂಆರ್‌ಐ ಸ್ಕ್ಯಾನಿಂಗ್ ಮೂಲಕ ಟ್ರೈಜಿಮಿನಲ್ ನರಗಳ ಮೇಲೆ ಒತ್ತಡ ಬೀರುವ ಟ್ಯೂಮರ್‌ಗಳನ್ನು ಪತ್ತೆಹಚ್ಚಲಾಗುತ್ತದೆ. ಟ್ರೈಸೈಕ್ಲಿಕ್ ಖಿನ್ನತೆ ಶಮನಕಾರಿ ಚಿಕಿತ್ಸೆ ನೀಡುವ ಮೂಲಕ ಆತ್ಮಹತ್ಯೆ ತಡೆಗಟ್ಟಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


