Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ವಾಂತಿ ಬೇಧಿ ಸಮಸ್ಯೆ: ಈ ರೀತಿಯಾದಾಗ ಯಾವ ಆಹಾರ ಸೇವಿಸಬೇಕು?
ಈ ಬೇಸಿಗೆಯಲ್ಲಿ ಐಸ್‌ಕ್ರೀಮ್, ಫಲೋಡಾ, ಜ್ಯೂಸ್ ಇಂಥ ವ್ಯಾಪಾರಿಗಳಿಗೆ ಒಳ್ಳೆಯ ಲಾಭ, ಏಕೆಂದರೆ ಇಂಥ ವಸ್ತುಗಳನ್ನು ಸವಿಯಲು ಜನ ಮುಗಿ ಬೀಳುತ್ತಾರೆ. ಬಿಸಿಲಿನ ಉರಿಯಲ್ಲಿ ಬಾಯಿ ತಣ್ಣನೆಯ ಜ್ಯೂಸ್ ಅಥವಾ ಐಸ್‌ಕ್ರೀಮ್ ತುಂಬಾನೇ ಹಿತ ಅನಿಸುವುದು. ಆದರೆ ಇವುಗಳನ್ನು ಸವಿಯುವ ಮುನ್ನ ಆರೋಗ್ಯ ಗಮನಿಸುವಂತೆ ವೈದ್ಯರು ಎಚ್ಚರಿಸಿದ್ದಾರೆ.
ಬೆಂಗಳೂರಿನಲ್ಲಿ ಈಗಾಗಲೇ ಸ್ಟೊಮಕ್ ಫ್ಲೂ ಅಂದರೆ ಹೊಟ್ಟೆ ಜ್ವರ ಸಮಸ್ಯೆ ಹೆಚ್ಚಾಗುತ್ತಿದೆ. ದಿನದಲ್ಲಿ ಕನಿಷ್ಠ 10 ಜನ ಈ ಕಂಪ್ಲೇಂಟ್ ಆಸ್ಪತ್ರೆಗೆ ಬರುತ್ತಿದ್ದಾರೆ. ಅವರಲ್ಲಿ 2-3 ಜನರಿಗೆ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುವ ಅನಿವಾರ್ಯತೆ ಉಂಟಾಗಿರುತ್ತದೆ.

ಸ್ಟೊಮಕ್ ಪ್ಲೂ ಎಂಬುವುದು ಕಲುಷಿತ ನೀರು ಅಥವಾ ಆಹಾರದಿಂದಾಗಿ ಉಂಟಾಗುವ ಆಹಾರ ಸಮಸ್ಯೆಯಾಗಿದೆ. ಇದರಿಂದ ಬೇಧಿ, ಹೊಟ್ಟೆ ಸೆಲೆತ, ವಾಂತಿ, ಕೆಲವರಲ್ಲಿ ಜ್ವರ ಈ ಬಗೆಯ ಸಮಸ್ಯೆ ಕಂಡು ಬರುವುದು. ರೋಗ ನಿರೋಧಕ ಶಕ್ತಿ ಇರುವವರು ಬೇಗನೆ ಚೇತರಿಸಿಕೊಳ್ಳುತ್ತಾರೆ. ಅದೇ ಮಕ್ಕಳಿಗೆ ಅಥವಾ ವಯಸ್ಸಾದವರಿಗೆ ಈ ಸಮಸ್ಯೆ ಬಂದರೆ ಬೇಗೆ ಸುಸ್ತಾಗಿ ಬಿಡುತ್ತಾರೆ. ಸ್ಟೊಮಕ್ ಫ್ಲೂ ಬಂದಾಗ ಚಿಕಿತ್ಸೆ ಜೊತೆಗೆ ಈ ಬಗೆಯ ಆಹಾರಗಳನ್ನು ಸೇವಿಸುವುದರಿಂದ ಬೇಗನೆ ಚೇತರಿಸಿಕೊಳ್ಳಬಹುದು:
ಈ ಪಾನೀಯ ಕುಡಿಯಿರಿ
* ಶುದ್ಧವಾದ ನೀರು
* ಸೂಪ್
* ಓರಲ್ ಡೀಹೈಡ್ರೇಷನ್ ಸಲ್ಯೂಷನ್
* ಹರ್ಬಲ್ ಟೀ
* ಎಳನೀರು
ಎಲೆಕ್ಟ್ರೋಲೈಟ್ ಪಾನೀಯ
ಎಲೆಕೊಟ್ರೋಲೈಟ್ಸ್ ನಿಶ್ಯಕ್ತಿ ಹೋಗಲಾಡಿಸಲು ಸಹಕಾರಿಯಾಗಿದೆ. ಇದು ದೇಹದಲ್ಲಿ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಹಾಗೂ ಸ್ನಾಯು ಸೆಳೆತ ಕಡಿಮೆಯಾಗಲು ಸಹಕಾರಿಯಾಗಿದೆ. ಇದರಲ್ಲಿ ಸಕ್ಕರೆಯಂಶ ಅಧಿಕವಿರುವುದರಿಂದ ದೇಹದಲ್ಲಿ ನಿಶ್ಯಕ್ತಿ ಹೋಗಲಾಡಿಸಲು ಸಹಕಾರಿಯಾಗಿದೆ. ನೀವು ಸೂಪ್ ಮಾಡಿ ಕುಡಿಯಬಹುದು. ಚಿಕನ್, ಮಟನ್ ಸೂಪ್ ಕೂಡ ಸವಿಯಬಹುದು. ಇದರಿಂದ ದೇಹಕ್ಕೆ ಬೇಗನೆ ಶಕ್ತಿ ದೊರೆಯುವುದು. ತಾಜಾ ಹಣ್ಣಿನ ಜ್ಯೂಸ್ ಕುಡಿಯಬಹುದು. ವಾಂತಿ-ಬೇಧಿಯಾದಾಗ ದೇಹದಲ್ಲಿ ನೀರಿನಂಶ ತುಂಬಾನೇ ಕಡಿಮೆಯಾಗಿರುತ್ತದೆ. ಇವುಗಳು ದೇಹದಲ್ಲಿ ನೀರಿನಂಶ ಕಾಪಾಡಲು ಸಹಕಾರಿ.
ಪುದೀನಾ ಟೀ
ಸ್ಟೊಮಕ್ ಫ್ಲೂ ಲಕ್ಷಣಗಳನ್ನು ಕಡಿಮೆ ಮಾಡಲು ಹರ್ಬಲ್ ಟೀ ಸಹಾಯ ಮಾಡುತ್ತದೆ. ಅಲ್ಲದೆ ಪುದೀನಾ ವಾಸನೆಗೆ ವಾಂತಿ ಬರುವ ಅನುಭವ ಕಡಿಮೆಯಾಗುವುದು. ಹೊಟ್ಟೆ ಸರಿಯಿಲ್ಲದಿದ್ದರೆ ದಿನದಲ್ಲಿ ಎರಡು ಬಾರಿ ಪುದೀನಾ ಟೀ ಕುಡಿಯಿರಿ. ಬೇಧಿ-ವಾಂತಿ ಈ ಬಗೆಯ ಸಮಸ್ಯೆ ತಡೆಗಟ್ಟುತ್ತದೆ. ಬ್ಲ್ಯಾಕ್ ಟೀ ಮಾಡಿ ಅದಕ್ಕೆ ಸ್ವಲ್ಪ ನಿಂಬೆರಸ, ಪುದೀನಾ ಎಲೆ ಹಾಕಿ ಕುಡಿಯಿರಿ, ತುಂಬಾನೇ ರಿಲ್ಯಾಕ್ಸ್ ಅನಿಸುವುದು.
ಬೇಯಿಸಿದ ಆಲೂಗಡ್ಡೆ
ಸ್ಟೊಮಕ್ ಫ್ಲೂ ಉಂಟಾದಾಗ ಬೇಯಿಸಿದ ಆಲೂಗಡ್ಡೆ ತಿನ್ನುವುದು ಒಳ್ಳೆಯದು.. ವಾಂತಿ, ಬೇಧಿಯಾದಾಗ ದೇಹದಲ್ಲಿ ಕಡಿಮೆಯಾದ ಎಲೆಕ್ಟ್ರೊಲೈಟ್ಸ್ ಮರಳಿ ಪಡೆಯಲು ಸಹಾಯ ಮಾಡುತ್ತದೆ. ಆದರೆ ಆಲೂಗಡ್ಡೆಗೆ ಬೆಣ್ಣೆ, ಚೀಸ್, ಸಾಸ್ ಇವುಗಳನ್ನು ಹಾಕಿ ತಿನ್ನಬೇಡಿ. ಎಣ್ಣೆಯಲ್ಲಿ ಕರಿದ ಚಿಪ್ಸ್ ಸವಿಯಬೇಡಿ.
ಮೊಟ್ಟೆ
ಸ್ಟೊಮಕ್ ಫ್ಲೂ ಇರುವಾಗ ಬೇಯಿಸಿದ ಮೊಟ್ಟೆ ತಿನ್ನಬಹುದು. ಇದರಿಂದ ದೇಹಕ್ಕೆ ಸ್ವಲ್ಪ ಪೋಷಕಾಂಶ ದೊರೆಯುವುದು.ಮೊಟ್ಟೆಯಲ್ಲಿ ಪ್ರೊಟೀನ್ ಹಾಗೂ ವಿಟಮಿನ್ ಬಿ ಇರುವುದರಿಂದ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಿಸುತ್ತದೆ. ಆದರೆ ಮೊಟ್ಟೆಯನ್ನು ಆಮ್ಲೆಟ್, ಆಫ್ ಬಾಯ್ಲ್, ಸಾರು, ಬುರ್ಜಿ ಅಂತ ಮಾಡಿ ತಿನ್ನಬೇಡಿ. ಚೆನ್ನಾಗಿ ಬೇಯಿಸಿದ ಮೊಟ್ಟೆಯನ್ನಷ್ಟೇ ತಿನ್ನಿ.
ಹಣ್ಣುಗಳನ್ನು ತಿನ್ನಿ
ಕಲ್ಲಂಗಡಿ ಹಣ್ಣು
ಸ್ಟ್ರಾಬೆರ್ರಿ
ಪೀಚ್
ಈ ಬಗೆಯ ಹಣ್ಣುಗಳನ್ನು ಸೇವಿಸಿ. ನೀರಿನಂಶ ಅಧಿಕವಿರುವ ಹಣ್ಣುಗಳನ್ನು ತಿನ್ನಿ. ನಾರಿನಂಶ ಅಧಿಕವಿರುವ ಹಣ್ಣುಗಳನ್ನು ಸ್ಟೊಮಕ್ ಫ್ಲೂ ಇರುವಾಗ ತಿನ್ನಬೇಡಿ. ಅಂದ್ರೆ ಮಾವಿನಹಣ್ಣು, ಸೇಬು ಇಂಥ ಹಣ್ಣುಗಳನ್ನು ತಿನ್ನಬೇಡಿ.
ಗಂಜಿ , ಮೊಸರನ್ನ ತಿನ್ನಿ
ಹೊಟ್ಟೆ ಹಾಳಾದಾಗ ನೀವು ಸುಲಭವಾಗಿ ಜೀರ್ಣವಾಗುವಂಥ ಆಹಾರ ಸೇವಿಸಿ. ಆದ್ದರಿಂದ ಗಂಜಿ ಅಥವಾ ಮೊಸರನ್ನ ಸೇವಿಸಿ. ಮಸಾಲೆ ಹಾಕಿದ ಪದಾರ್ಥಗಳನ್ನು ಸೇವಿಸಬೇಡಿ. ಕನಿಷ್ಠ ಒಂದು ವಾರ ಮಸಾಲೆ ಹಾಗೂ ಕರಿದ ಪದಾರ್ಥಗಳನ್ನು ದೂರವಿಡಿ. ಮಕ್ಕಳಿಗಾದರೆ 15 ದಿನ ಎಣ್ಣೆಯಲ್ಲಿ ಕರಿದ ಅಥವಾ ಅಧಿಕ ಖಾರದ ಆಹಾರಗಳನ್ನು ನೀಡಲೇಬೇಡಿ. ಹೊಟ್ಟೆಗೆ ತಂಪು ನೀಡುವ ಆಹಾರ ಸೇವಿಸಿ. ದಿನಾ ಎಳನೀರು ಕುಡಿಯಿರಿ. ಗಂಜಿ ನೀರಿಗೆ ಉಪ್ಪು ಹಾಕಿ ಕುಡಿಯಿರಿ. ರೀತಿಯೆಲ್ಲಾ ಮಾಡುವುದರಿಂದ ಬೇಗನೆ ಚೇತರಿಸಿಕೊಳ್ಳಬಹುದು.
ಈ ಬಗೆಯ ಸಮಸ್ಯೆ ತಡೆಗಟ್ಟಲು ಬೀದಿ ಬದಿಯ ಆಹಾರ ಸೇವಿಸಬೇಡಿ, ಕೈಗಳನ್ನು ಆಗಾಗ ತೊಳೆಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

