Latest Updates
-
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ
ಡೆಂಜರ್.. ಈ ರೀತಿ ಮಲಗಿದ್ರೆ ಬೆನ್ನು ಮತ್ತು ಕುತ್ತಿಗೆ ನೋವು ಪಕ್ಕಾ! ಸರಿಯಾಗಿ ಮಲಗೋದು ಹೇಗೆ?
ನಿದ್ರೆ ಮಾನವನ ಆರೋಗ್ಯದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ದಿನವಿಡೀ ದುಡಿದ ದೇಹಕ್ಕೆ ಪುನಃ ಶಕ್ತಿ ತುಂಬಲು, ಮೆದುಳಿಗೆ ವಿಶ್ರಾಂತಿ ನೀಡಲು ಮತ್ತು ದೇಹದ ಅಂಗಾಂಗಗಳಿಗೆ ಚೇತರಿಕೆ ನೀಡಲು ಉತ್ತಮ ನಿದ್ರೆ (sleep) ಅತ್ಯಗತ್ಯ. ಆದರೆ, ನಾವು ಎಷ್ಟು ಗಂಟೆ ಮಲಗುತ್ತೇವೆ? ಅನ್ನೋದಕ್ಕಿಂತಲೂ, ನಾವು ಯಾವ ಸ್ಥಿತಿ ಅಥವಾ ಭಂಗಿಯಲ್ಲಿ ಮಲಗುತ್ತೇವೆ? ಅನ್ನೋದು ಆರೋಗ್ಯದ ದೃಷ್ಟಿಯಿಂದ ಹೆಚ್ಚು ಮಹತ್ವ ಪಡೆದಿದೆ. ತಪ್ಪಾದ ಭಂಗಿಯಲ್ಲಿ ಮಲಗುವುದು ದೀರ್ಘಕಾಲದಲ್ಲಿ ಬೆನ್ನು ನೋವು, ಕುತ್ತಿಗೆ ನೋವು, ತಲೆನೋವು, ಮಿಗ್ರೇನ್ ಹಾಗೂ ಆಯಾಸಕ್ಕೆ ಕಾರಣವಾಗುತ್ತೆ.
ಹೌದು, ನಿದ್ರೆ ಎಂದರೆ ಕೇವಲ ವಿಶ್ರಾಂತಿ ಪಡೆಯುವುದಲ್ಲ. ಅದು ನಮ್ಮ ದೇಹವನ್ನು ಮುಂದಿನ ದಿನಕ್ಕೆ ಸಿದ್ಧಪಡಿಸುವುದು. ಹೀಗಾಗಿ, ಸರಿಯಾದ ನಿದ್ರೆಯ ಭಂಗಿಯನ್ನು ಆರಿಸಿಕೊಳ್ಳುವ ಮೂಲಕ ಬೆನ್ನು ಮತ್ತು ಕುತ್ತಿಗೆ ನೋವಿನಿಂದ ಮುಕ್ತವಾಗಿರಿ. ಜೊತೆಗೆ ಪ್ರತಿ ಬೆಳಗ್ಗೆ ಚೈತನ್ಯದಿಂದ ಎದ್ದೇಳಿ. ಹಾಗಿದ್ರೆ, ನಾವು ಹೇಗೆ ಮಲಗಬೇಕು (sleeping direction) ಮತ್ತು ಯಾವ ಭಂಗಿಗಳನ್ನು ತಪ್ಪಿಸಬೇಕು (Sleep posture Tips) ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಉತ್ತಮ ನಿದ್ರೆ ಭಂಗಿಗಳು ಯಾವುವು?
ಮೇಲ್ಮುಖ ನಿದ್ರೆ
ಮೇಲ್ಮುಖ ಮಲಗುವುದು (Back Sleeping) ಉತ್ತಮ ನಿದ್ರೆ ಸ್ಥಿತಿಯಾಗಿದೆ. ತಲೆಯ ಕೆಳಗೆ ಸಣ್ಣ ದಿಂಬನ್ನು ಇಟ್ಟುಕೊಳ್ಳುವುದು. ಮೊಣಕಾಲಿನ ಕೆಳಗೆ ಒಂದು ಕುಶನ್ ಇಡುವುದು ಉತ್ತಮ. ಈ ಸ್ಥಿತಿಯಲ್ಲಿ ದೇಹದ ತೂಕ ಸಮವಾಗಿ ಹಂಚಿಕೊಂಡು, ಮೆದುಳು ಮತ್ತು ಬೆನ್ನೆಲುಬು ನೈಸರ್ಗಿಕ ಆಕಾರದಲ್ಲೇ ಇರುತ್ತವೆ. ಇದು ಕುತ್ತಿಗೆ ಮತ್ತು ಬೆನ್ನಿಗೆ ಒತ್ತಡ ಬರುವುದನ್ನು ತಡೆಯುತ್ತದೆ. ಬೆನ್ನಿನ ಮೇಲೆ ಮಲಗುವುದು (Supine Position) ಬೆನ್ನುಮೂಳೆಯ ಆರೋಗ್ಯಕ್ಕೆ ಅತ್ಯಂತ ಸೂಕ್ತವಾದ ಸ್ಥಾನ ಎಂದು ಪರಿಗಣಿಸಲಾಗಿದೆ. ಈ ಸ್ಥಿತಿಯಲ್ಲಿ, ಬೆನ್ನುಮೂಳೆ, ಕುತ್ತಿಗೆ ಮತ್ತು ತಲೆ ಒಂದೇ ರೇಖೆಯಲ್ಲಿ ಸಮವಾಗಿ ಇರುತ್ತವೆ. ಇದರಿಂದ ಬೆನ್ನಿಗೆ ಯಾವುದೇ ಅನಗತ್ಯ ಒತ್ತಡ ಬೀಳುವುದಿಲ್ಲ.
ಬದಿಯಲ್ಲಿ ಮಲಗುವುದು
ಬದಿಗೆ ಮಲಗುವುದು (Side Sleeping) ಸಹ ಉತ್ತಮ ಆಯ್ಕೆಯಾಗಿದೆ. ಇದು ಬೆನ್ನುಮೂಳೆಯನ್ನು ನೇರವಾಗಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ. ಬದಿಯಲ್ಲಿ ಮಲಗುವಾಗ ಮೊಣಕಾಲುಗಳ ನಡುವೆ ದಿಂಬು ಇಟ್ಟರೆ ಹಿಪ್ ಮತ್ತು ಬೆನ್ನು ಸರಿಯಾದ ರೇಖೆಯಲ್ಲಿ ಇರುತ್ತದೆ. ವಿಶೇಷವಾಗಿ, ಎಡ ಬದಿಯಲ್ಲಿ ಮಲಗುವುದು ಉತ್ತಮ. ಇದು ಜೀರ್ಣಕ್ರಿಯೆಗೆ ಸಹಕಾರಿ, ಹೃದಯಕ್ಕೆ ಒತ್ತಡ ಕಡಿಮೆ ಮಾಡುತ್ತದೆ. ಗರ್ಭಿಣಿಯರಿಗೆ ರಕ್ತಪ್ರಸರಣ ಉತ್ತಮವಾಗುತ್ತದೆ. ಗೊರಕೆ ಹೊಡೆಯುವವರಿಗೆ ಇದು ಹೆಚ್ಚು ಪ್ರಯೋಜನಕಾರಿ.
ತಪ್ಪಾದ ನಿದ್ರೆ ಭಂಗಿ ಯಾವುದು?
ಹೊಟ್ಟೆ ಮೇಲೆ ಮಲಗುವುದು
ಹೊಟ್ಟೆಯ ಮೇಲೆ ಮಲಗುವುದು (Stomach Sleeping) ಏಕೆ ಕೆಟ್ಟದು? ವೈದ್ಯರು ಶಿಫಾರಸು ಮಾಡದ ಸ್ಥಿತಿಯಿದು. ಹೊಟ್ಟೆ ಮೇಲೆ ಮಲಗಿದರೆ, ಕುತ್ತಿಗೆ ತಿರುಗಿ ಹಗ್ಗದಂತೆ ಬಿಗಿಯಾಗುತ್ತದೆ. ಮೆದುಳಿನ ರಕ್ತಪ್ರವಾಹ ಅಸ್ತವ್ಯಸ್ತವಾಗುತ್ತದೆ. ಈ ಸ್ಥಿತಿಯಲ್ಲಿ ಬೆನ್ನುನೋವು, ಕುತ್ತಿಗೆಯ ನೋವು, ತಲೆನೋವು ಸಾಮಾನ್ಯ. ದೀರ್ಘಕಾಲ ಇದನ್ನು ಮುಂದುವರಿಸಿದರೆ ಸ್ಪೈನ್ ಅಸಮತೋಲನ, ಸ್ನಾಯು ಗಟ್ಟಿತನ ಉಂಟಾಗಬಹುದು. ಬೆಳಗ್ಗೆ ಎದ್ದ ಕೂಡಲೇ ಆಯಾಸ ಮತ್ತು ದಣಿವು ಅನುಭವಿಸುವುದು ಇದೇ ಕಾರಣ. ಹೊಟ್ಟೆಯ ಮೇಲೆ ಮಲಗುವ ಅಭ್ಯಾಸ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಭಂಗಿಯು ಬೆನ್ನುಮೂಳೆಯ ನೈಸರ್ಗಿಕ ಆಕಾರವನ್ನು ಹಾಳುಮಾಡುತ್ತದೆ. ಹೀಗಾಗಿ, ಈ ಭಂಗಿಯನ್ನು ಸಾಧ್ಯವಾದಷ್ಟು ತಪ್ಪಿಸುವುದು ಉತ್ತಮ.
ಸರಿಯಾದ ನಿದ್ರೆ ಭಂಗಿಯ ಪ್ರಯೋಜನಗಳು
• ದೇಹದಲ್ಲಿ ರಕ್ತಪ್ರವಾಹ ಸುಗಮವಾಗುತ್ತದೆ
• ಉಸಿರಾಟ ನಿಯಮಿತವಾಗುತ್ತದೆ
• ಸ್ನಾಯುಗಳು ಮತ್ತು ಜೋಡಣೆಗಳು ಚೇತರಿಕೆಗೆ ಅನುಕೂಲವಾಗುತ್ತವೆ
• ಬೆಳಗ್ಗೆ ಎದ್ದಾಗ ತಾಜಾ ಮತ್ತು ಚುರುಕುತನ ಇರುತ್ತದೆ
ತಪ್ಪಾದ ನಿದ್ರೆ ಭಂಗಿಯ ದುಷ್ಪರಿಣಾಮಗಳು
• ಕುತ್ತಿಗೆ ಮತ್ತು ಬೆನ್ನು ಗಟ್ಟಿತನ, ನೋವು
• ಮಿಗ್ರೇನ್, ತಲೆನೋವು, ಕಣ್ಣುಗಳಿಗೆ ಒತ್ತಡ
• ಬೆಳಗ್ಗೆ ಎದ್ದಾಗ ಆಯಾಸ ಮತ್ತು ನಿದ್ರಾವಸ್ಥೆ
• ದೀರ್ಘಕಾಲದಲ್ಲಿ ಹೃದಯ, ಉಸಿರಾಟ ಹಾಗೂ ಮೆದುಳಿಗೆ ಒತ್ತಡ
ಸರಿಯಾದ ಹಾಸಿಗೆ ಮತ್ತು ದಿಂಬುಗಳ ಆಯ್ಕೆ
ನಿದ್ರಿಸುವ ಭಂಗಿಯ ಜೊತೆಗೆ, ಹಾಸಿಗೆ ಮತ್ತು ದಿಂಬುಗಳ ಆಯ್ಕೆ ಮತ್ತು ಗುಣಮಟ್ಟವೂ ಮುಖ್ಯ. ತುಂಬಾ ಮೃದುವಾದ ಅಥವಾ ತುಂಬಾ ಗಟ್ಟಿಯಾದ ಹಾಸಿಗೆಯ ಬದಲಿಗೆ, ಮಧ್ಯಮ ಗಟ್ಟಿತನದ ಹಾಸಿಗೆಯನ್ನು ಬಳಸುವುದು ಸೂಕ್ತ. ಇದು ದೇಹಕ್ಕೆ ಸರಿಯಾದ ಆಧಾರ ನೀಡುತ್ತದೆ. ಬೆನ್ನುಮೂಳೆಯನ್ನು ಸರಿಯಾದ ಸ್ಥಾನದಲ್ಲಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ. ತಲೆ ಮತ್ತು ಕುತ್ತಿಗೆಗೆ ಸರಿಯಾದ ಆಧಾರ ನೀಡುವ ದಿಂಬನ್ನು ಆಯ್ಕೆ ಮಾಡುವುದರಿಂದ ಕುತ್ತಿಗೆಗೆ ನೋವನ್ನು ತಡೆಯುತ್ತದೆ.
ಒಟ್ಟಾರೆಯಾಗಿ, ನಿದ್ರೆ ಅಂದರೆ ಕೇವಲ ಗಂಟೆಗಳಷ್ಟು ಮಲಗುವುದು ಅಲ್ಲ. ಮಲಗುವ ಸ್ಥಿತಿ, ಹಾಸಿಗೆಯ ಗುಣಮಟ್ಟ ಮತ್ತು ದಿಂಬಿನ ಆಯ್ಕೆ - ಇವುಗಳೆಲ್ಲ ಸೇರಿ ಒಟ್ಟಾರೆ ನಿದ್ರೆಯ ಗುಣಮಟ್ಟವನ್ನು ನಿರ್ಧರಿಸುತ್ತವೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











