Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
ಈ ಸರಳ ಯೋಗಾಸನ ಮಾಡಿದ್ರೆ ಸಾಕು ಮರೆವು ಮರೆತೂ ಬರಲ್ಲ
ಆರೋಗ್ಯಕರ ದೇಹ ಮತ್ತು ಮನಸ್ಸು ಯಾರಿಗೆ ಬೇಡ ಹೇಳಿ. ಆದರೆ ಇದಕ್ಕಾಗಿ ನಮ್ಮ ಜೀವನಕ್ರಮವೂ ಆರೋಗ್ಯಕರವಾಗಿರಬೇಕು. ನಾವು ಬೆಳಗ್ಗೆ ಏಳುವ ಸಮಯಿದಿಂದ ಹಿಡಿದು ನಮ್ಮ ಇಡೀ ದಿನದ ದಿನಚರಿ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ನಾವು ಸೇವಿಸುವ ಆಹಾರ ಮತ್ತು ವ್ಯಾಯಾಮ ನಮ್ಮ ದೈಹಿಕ ಆರೋಗ್ಯಕ್ಕೆ ಕಾರಣವಾದರೆ, ಯೋಗ ಮತ್ತು ಧ್ಯಾನ ನಮ್ಮ ಮಾನಸಿಕ ಆರೋಗ್ಯಕ್ಕೆ ಬಹಳ ಸಹಕಾರಿ.

ಯೋಗ, ಪ್ರಾಣಾಯಾಮ ಮತ್ತು ಧ್ಯಾನದ ಉಪಯೋಗಗಳು ಹಲವು. ಇದು ನಮ್ಮನ್ನು ದಿನವಿಡಿ ಚುರುಕಾಗಿಡಲು ನೆರವಾಗುತ್ತದೆ. ಸಣ್ಣ ಪುಟ್ಟ ಅನಾರೋಗ್ಯ ನಮ್ಮನ್ನು ಆಗಾಗ ಕಾಡುತ್ತಿದ್ದರೆ ನಿಯಮಿತವಾದ ಯೋಗ ಮತ್ತ ಪ್ರಾಣಾಯಾಮ ಇಂತಹ ಸಮಸ್ಯೆಯಿಂದ ನಮ್ಮನ್ನು ಕಾಪಾಡಬಹುದು. ನಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸುವುದಕ್ಕೂ ಯೋಗ ಮತ್ತು ಪ್ರಾಣಾಯಾಮ ಸಹಾಯ ಮಾಡುತ್ತದೆ ಎನ್ನುವುದು ನಿಮಗೆ ತಿಳೀದಿತ್ತೇ?
ಇದು ಕೇವಲ ವಾಡಿಕೆಯ ಮಾತಲ್ಲ. ಇದಕ್ಕೆ ವೈಜ್ಝಾನಿಕ ಸಾಕ್ಷಿಯೂ ಇದೆ. ಹಾರ್ವರ್ಡ್ ಹೆಲ್ತ್ ಮಾಡಿದ ಒಂದು ಅಧ್ಯಯನದ ಪ್ರಕಾರ ನಿಯಮಿತವಾಗಿ ಯೋಗ ಮಾಡುವ ಜನರ ಮೆದುಳಿನ ಸೆರೆಬ್ರಲ್ ಕಾರ್ಟೆಕ್ಸ್ ಮತ್ತು ಹಿಪೋಕ್ಯಾಂಪಸ್ ದಪ್ಪವಾಗಿರುತ್ತದೆ. ಸೆರೆಬ್ರಲ್ ಕಾರ್ಟೆಕ್ಸ್ ನಮ್ಮ ಮೆದುಳಿನಲ್ಲಿ ಮಾಹಿತಿ ಸಂಸ್ಕರಣೆ ಮಾಡುವ ಭಾಗವಾಗಿದೆ ಹಾಗೂ ಹಿಪೋಕ್ಯಾಂಪಸ್ ಕಲಿಕೆ ಮತ್ತು ನೆನಪಿನ ಶಕ್ತಿಗೆ ನೆರವಾಗುವ ಭಾಗವಾಗಿದೆ. ನಿಯಮಿತವಾಗಿ ಯೋಗ ಮಾಡುವ ಮತ್ತು ಮಾಡದ ಜನರ ಮೆದುಳನ್ನು ಹೋಲಿಕೆ ಮಾಡಿದಾಗ ಈ ವ್ಯತ್ಯಾಸ ಕಂಡು ಬಂದಿದೆ.
ಕೆಲವು ಸರಳವಾದ ಯೋಗದ ಆಸನಗಳು ಮತ್ತು ಉಸಿರಾಟದ ಅಭ್ಯಾಸಗಳನ್ನು ನಿಯಮಿತವಾಗಿ ಪಾಲಿಸಿದ್ದಲ್ಲಿ ನಮ್ಮ ಆರೋಗ್ಯ ಚೆನ್ನಾಗಿರುವ ಜೊತೆಗೆ ನಮ್ಮಲ್ಲಿ ಮಾಹಿತಿ ಸಂಸ್ಕರಿಸುವ ವೇಗ ಮತ್ತು ನೆನಪಿನ ಶಕ್ತಿಯೂ ವೃದ್ಧಿಸುತ್ತದೆ. ಯಾವೆಲ್ಲಾ ಯೋಗದ ಆಸನಗಳು ನಮ್ಮ ನೆರವಿಗೆ ಬರುತ್ತದೆ ನೋಡೋಣ.
ಉತ್ಥಿಟ ಹಸ್ತ ಪಾದಾಂಗುಷ್ಠಾಸನ:
ಈ ಆಸನವನ್ನು ಕಾಲಬೆರಳುಗಳ ತನಕ ಹರಡಿದ ಕೈಗಳು ಎಂದೂ ಕರೆಯುತ್ತಾರೆ. ಇದು ನಿಂತುಕೊಂಡು ಮಾಡುವ ಆಸನವಾಗಿದ್ದು ಇದರಿಂದ ನಮ್ಮ ದೇಹದ ಸ್ಥಿರತೆಯನ್ನು ಹೆಚ್ಚಿಸುತ್ತದೆ, ಏಕಾಗ್ರತೆಯನ್ನು ಹೆಚ್ಚಿಸುತ್ತದೆ, ಮತ್ತು ದೇಹದ ಸಮತೋಲನವನ್ನು ಹೆಚ್ಚಿಸುತ್ತದೆ.
ಮಾಡುವ ವಿಧಾನ:
• ಪರ್ವತ ಭಂಗಿ ಅಥವಾ ತಡಾಸನದಿಂದ ಆರಂಭಿಸಿ.
• ಕಣ್ಣಿನ ನೇರದಲ್ಲಿರುವ ಯಾವುದಾದರೂ ಒಂದು ಪ್ರದೇಶವನ್ನು ಗಮನಿಸಲು ಆರಂಭಿಸಿ. ಉಸಿರನ್ನು ಒಳಗೆ ತೆಗೆದುಕೊಳ್ಳುವಾಗ ಎಡ ಪಾದದ ಮೇಲೆ ದೇಹದ ಭಾರವಿರಲಿ ಮತ್ತು ನಿಮ್ಮ ಬಲ ಮೊಣಕಾಲನ್ನು ಮೇಲಕ್ಕೆತ್ತಿ ನಿಮ್ಮ ಬಲಗೈಯನ್ನು ಮುಟ್ಟಿ.
• ಎಡ ಸೊಂಟವನ್ನು ಗಟ್ಟಿಮಾಡಿ ಎದೆಯ ಭಾಗವನ್ನು ತೆರೆದಿಟ್ಟು ಬೆನ್ನುಮೂಳೆಯನ್ನು ಆದಷ್ಟು ಉದ್ದಗೊಳಿಸಿ.
• ಉಸಿರನ್ನು ತೆಗೆದುಕೊಳ್ಳುವಾಗ ಬೆನ್ನುಮೂಳೆಯ ಉದ್ದದಲ್ಲಿ ಬದಲಾವಣೆ ಆಗದಂತೆ ಬಲಗಾಲನ್ನು ಮುಂದಕ್ಕೆ ಚಾಚಿ.
• ಐದು ಬಾರಿ ಉಸಿರಾಡುವ ತನಕ ಇದೇ ಭಂಗಿಯಲ್ಲಿರಿ. ಇನ್ನೊಮ್ಮೆ ಉಸಿರನ್ನು ಒಳಗೆ ತೆಗೆದುಕೊಳ್ಳುವಾಗ ಕಾಲನ್ನು ಬಲ ಭಾಗಕ್ಕೆ ಹೊರಗೆ ತನ್ನಿ ಮತ್ತಿ ಮುಂದಿನ ಐದು ಉಸಿರಾಟದ ತನಕ ಹಾಗೆಯೇ ಇರಿ.
• ಉಸಿರಾಟದೊಂದಿಗೆ ಕಾಲನ್ನು ಹೊರಗೆ ತೆಗೆಯಲು ಕಾಲನ್ನು ಮಧ್ಯಭಾಗಕ್ಕೆ ತಂದು ಉಸಿರನ್ನು ಹೊರಗೆ ಬಿಡುವಾಗ ಕಾಲನ್ನು ಮೆಲ್ಲನೆ ನೆಲದ ಮೇಲಿಡಿ.
• ಇನ್ನೊಂದು ಭಾಗಕ್ಕೆ (ಎಡ ಭಾಗಕ್ಕೆ) ಇದೇ ಕ್ರಮವನ್ನು ಅನುಸರಿಸಿ.
ಈ ಆಸನದಿಂದ ಬಹಳ ಪ್ರಯೋಜನಗಳು ಇದ್ದರೂ ರಕ್ತದೊತ್ತಡ ಇರುವ ಜನರು ಇದನ್ನು ಮಾಡುವಾಗ ತಲೆನೋವು ಮತ್ತು ತಲೆ ತಿರುಗುವಿಕೆ ಕಂಡುಬಂದಲ್ಲಿ ಈ ಆಸನವನ್ನು ಮಾಡಬಾರದು. ಅದೇ ರೀತಿ, ಮೊಣಕಾಲು, ಪಾದ, ಸೊಂಟ ಮತ್ತು ಬೆನ್ನಿನ ಮೇಲೆ ಗಾಯವಿರುವ ಜನರು ಕೂಡ ಇದನ್ನು ಮಾಡಬಾರದು.
ಭ್ರಮರಿ ಪ್ರಾಣಾಯಾಮ:
ಹಿಂದಿ ಭಾಷೆಯ ಭ್ರಮರ್ ನಿಂದ ಭ್ರಾಮರಿ ಪದ ಹುಟ್ಟಿಕೊಂಡಿದೆ. ಭ್ರಮರ್ ಎಂದರೆ ಜೇನು ನೊಣ. ಇದು ಉಸಿರಾಟದ ನಿಯಂತ್ರಣ ಮಾಡುವ ಕ್ರಮವಾಗಿದೆ. ಇಲ್ಲಿ ಉಸಿರನ್ನು ಹೊರಗೆ ಬಿಡುವಾಗ ಜೇನು ನೊಣದಂತೆ ಶಬ್ದ ಮಾಡುವುದು ಮುಖ್ಯವಾಗಿದೆ. ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಮನಸ್ಸಿನ ಸುಸ್ತನ್ನು ಹೋಗಲಾಡಿಸಿ, ಮನಸ್ಸನ್ನು ಶಾಂತಗೊಳಿಸುತ್ತದೆ.
ಇದು ಬಹಳ ಸರಳವಾದ ಒಂದು ಪ್ರಾಣಾಯಾಮವಾಗಿದೆ. ನೆಲದ ಮೇಲೆ ಕುಳಿತುಕೊಂಡು ಉಸಿರನ್ನು ಒಳಗೆ ತೆಗೆದುಕೊಂಡು ಒಂದೆರಡು ಸೆಕೆಂಡುಗಳ ಕಾಲ ಹಾಗೆಯೇ ಹಿಡಿದಿಟ್ಟು ನಂತರ ಉಸಿರನ್ನು ಬಿಡುವಾಗ ಜೇನು ನೊಣದಂತೆ ಸದ್ದನ್ನು ಮಾಡಿ ಉಸಿರನ್ನು ಹೊರಬಿಡಬೇಕಾಗುತ್ತದೆ. ಇದನ್ನು ಹತ್ತರಿಂದ ಹದಿನೈದು ನಿಮಷ ಮಾಡಿದ್ದಲ್ಲಿ ಮನಸ್ಸು ಶಾಂತವಾಗಿರುವುದು ಮತ್ತು ಒತ್ತಡ ಕಡಿಮೆ ಆಗಿರುವುದನ್ನು ನಾವು ಆ ಕೂಡಲೇ ಗಮನಿಸಬಹುದು.
ಗರ್ಭಿಣೀ ಸ್ತ್ರೀಯರು, ಮುಟ್ಟಿನ ಅವಧಿಯಲ್ಲಿರುವ ಮಹಿಳೆಯರು, ರಕ್ತದೊತ್ತಡ ಅಪಸ್ಮಾರ ಮತ್ತು ಎದೆನೋವು ಇರುವವರಿಗೆ ಈ ಪ್ರಾಣಾಯಾಮವನ್ನು ಸೂಚಿಸಲಾಗುವುದಿಲ್ಲ.
ವೃಕ್ಷಾಸನ:
ಹೆಸರೇ ಹೇಳುವಂತೆ ಇದು ವೃಕ್ಷದ ರೀತಿಯಲ್ಲಿ ನಿಲ್ಲುವುದು. ಸಂಸ್ಕೃತದಲ್ಲಿ ವೃಕ್ಷ ಎಂದರೆ ಮರ ಮತ್ತು ಆಸನ ಎಂದರೆ ಭಂಗಿ. ಅಂದರೆ ವೃಕ್ಷದ ಹಾಗೆ ನಿಲ್ಲುವ ಭಂಗಿ ಈ ಆಸನವಾಗಿದೆ. ಇದರ ಕೇಂದ್ರೀಕರಿಸುವ ತಂತ್ರ ನಮ್ಮ ಸಮತೋಲನವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಕಾಲಿನ ಸ್ಥಿರತೆಯನ್ನು ಹೆಚ್ಚಿಸಲು ಇದು ನೆರವಾಗುತ್ತದೆ. ಕಾಲು, ಮಂಡಿಯ ಭಾಗದಲ್ಲಿ ಏನಾದರೂ ಏಟಾಗಿದ್ದರೆ ಈ ಆಸನವನ್ನು ಮಾಡದೇ ಇರುವುದು ಒಳಿತು. ಗರ್ಭಿಣಿ ಸ್ತ್ರೀಯರು ಈ ಆಸನವನ್ನು ಮಾಡಬಹುದಾಗಿದೆ.
ಮಾಡುವ ವಿಧಾನ:
• ಪರ್ವತ ಅಥವ ತಡಾಸನದಲ್ಲಿ ನಿಲ್ಲಿ.
• ಬಲಗಾಲನ್ನು ಎತ್ತಿ ಎಡಕಾಲಿನ ಮೇಲೆ ಸಮತೋಲನ ಕಾಯ್ದುಕೊಳ್ಳಿ.
• ಬಲಗಾಲನ್ನು ಮೊಣಕಾಲಿನಿಂದ ಬಗ್ಗಿಸಿ ಮತ್ತು ಎಡಗಾಲಿನ ಮೊಣಕಾಲಿನ ಒಳಭಾಗದಲ್ಲಿ ಇಡಿ.
• ಎದೆಯ ನೇರಕ್ಕೆ ತಲೆಯ ಮೇಲೆ ಎರಡೂ ಕೈಗಳಿಂದ ನಮಸ್ಕಾರ ಅಥವಾ ಕೈಮುಗಿಯುವಂತೆ ಎರಡೂ ಕೈಗಳನ್ನು ಜೋಡಿಸಿ.
• ದೀರ್ಘವಾಗಿ ಉಸಿರಾಡಿ ಮತ್ತು ಇದೇ ಭಂಗಿಯನ್ನು ಕಾಯ್ದುಕೊಳ್ಳಿ.
• ತೋಳುಗಳನ್ನು ಎದೆಯ ಮಟ್ಟದ ತನಕ ಕೆಳಗಿಳಿಸಿದ ನಂತರ ಕೈಗಳನ್ನು ಬೇರ್ಪಡಿಸಿ.
• ಬಲಗಾಲನ್ನು ಕೆಳಗೆ ಇಳಿಸಿ.
• ಇದನ್ನು ಎಡಗಾಲಿಗೂ ಮಾಡಿ.
ಮೈಗ್ರೇನ್, ನಿದ್ರಾಹೀನತೆ, ಅಧಿಕ ಅಥವಾ ಕಡಿಮೆ ರಕ್ತದೊತ್ತಡ ಇರುವವರುಈ ಆಸನವನ್ನು ಮಾಡಬಾರದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











