Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ದೀರ್ಘಾಯುಷಿಯಾಗಿರಬೇಕೆಂದರೆ ಎಂತಹ ಆಹಾರವನ್ನು ಸೇವನೆ ಮಾಡ್ಬೇಕು!
ದೀರ್ಘಾಯುಷಿ ಆಗ್ಬೇಕು ಅಂತ ಎಲ್ಲರಿಗೂ ಆಸೆ ಇದ್ದೇ ಇರುತ್ತದೆ. ಆದರೆ ಈಗಿನ ಜೀವನ ಶೈಲಿಯಿಂದಾಗಿ ಜನ ಚಿಕ್ಕವಯಸ್ಸಿಗೆ ಸಾವನ್ನಪ್ಪುತ್ತಿರೋದು ವಿಪರ್ಯಾಸವೇ ಸರಿ. ವ್ಯಾಯಾಮ ಮಾಡದಿರೋದು, ಪೌಷ್ಠಿಕ ಆಹಾರಗಳನ್ನು ಬಿಟ್ಟು ಹೊರಗಿನ ಜಂಕ್ ಆಹಾರಗಳನ್ನು ಸೇವನೆ ಮಾಡೋದು ಕೂಡ ಇದಕ್ಕೆ ಕಾರಣ ಅಂದ್ರೆ ತಪ್ಪಾಗೋದಿಲ್ಲ.

ಕೆಲವೊಂದು ದೇಶಗಳಲ್ಲಿ ಜನ 100 ವರ್ಷಕ್ಕಿಂತಲೂ ಹೆಚ್ಚಿನ ಕಾಲ ಬದುಕುತ್ತಾರೆ. ಆದರೆ ಇತ್ತೀಚಿಗೆ ಭಾರತದಲ್ಲಿ ಯುವಕರು ಕೂಡ 40-50 ವರ್ಷದೊಳಗಾಗಿ ಸಾವನ್ನಪ್ಪುತ್ತಿರೋದು ಅಚ್ಚರಿಗೊಳಗಾಗುವಂತೆ ಮಾಡಿದೆ. ಅಷ್ಟಕ್ಕೂ ಹೆಚ್ಚು ಕಾಲ ಬದುಕಬೇಕೆಂದರೆ ಎಂತಹ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು. ಯಾವ ರೀತಿ ಆಹಾರಗಳನ್ನು ಸೇವನೆ ಮಾಡಬೇಕು ಅನ್ನೋದನ್ನು ಒಂದೊಂದಾಗಿಯೇ ತಿಳಿಯೋಣ.
ಹೆಚ್ಚು ಹಸಿರು ತರಕಾರಿಗಳನ್ನು ಸೇವನೆ ಮಾಡಬೇಕು!
ಹಸಿರು ತರಕಾರಿಗಳು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಕೆಲವು ಅಧ್ಯಯನ ಹಾಗೂ ವರದಿಗಳ ಪ್ರಕಾರ ದೀರ್ಘಾಯುಷಿಯಾಗಿರುವ ಜನ ಹೆಚ್ಚಾಗಿ ಹಸಿರು ತರಕಾರಿ ಹಾಗೂ ಧಾನ್ಯಗಳನ್ನು ಹೆಚ್ಚಾಗಿ ಸೇವನೆ ಮಾಡುತ್ತಾರಂತೆ. ಇದರಿಂದ ಮನುಷ್ಯನ ದೇಹಕ್ಕೆ ಸಾಕಷ್ಟು ಪೌಷ್ಠಿಕಾಂಶಗಳು ದೊರೆಯುತ್ತದೆ.
ಹೆಚ್ಚು ಮಸಾಲೆಗಳನ್ನು ಬಳಸದಿರಿ!
ನಾವು ಪ್ರತಿನಿತ್ಯ ಸೇವಿಸುವ ಆಹಾರದಲ್ಲಿ ಆದಷ್ಟು ಮಸಾಲೆ ಸೇರಿಸೋದನ್ನು ತಪ್ಪಿಸಿದರೆ ಒಳ್ಳೆಯದು. ಹೆಚ್ಚು ಖಾರ, ಸುವಾಸನೆ ಭರಿತ ಪದಾರ್ಥಗಳನ್ನು ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಇದು ದೇಹಕ್ಕೆ ಹಾನಿಯನ್ನುಂಟು ಮಾಡಬಹುದು. ಆದ್ದರಿಂದ ಮನೆಯಲ್ಲೇ ತಯಾರಿಸಿದ ಮಸಾಲೆಗಳನಷ್ಟೇ ಬಳಸಿ. ಅತಿಯಾಗಿ ಖಾರ ತಿನ್ನುವುದು ಕೂಡ ಆರೋಗ್ಯವನ್ನು ಹಾಳು ಮಾಡುತ್ತದೆ.
ಬೆಂಡೆಕಾಯಿಗೆ ಈ 2 ಪದಾರ್ಥಗಳನ್ನು ಸೇರಿಸಿ!
ಹೆಚ್ಚಿನವರಿಗೆ ಬೆಂಡೆಕಾಯಿ ಎಂದರೆ ತುಂಬಾನೇ ಇಷ್ಟ. ಆದರೆ ಇನ್ನೂ ಕೆಲವರಿಗೆ ಬೆಂಡೆಕಾಯಿ ಎಂದರೆ ಆಗೋದಿಲ್ಲ. ಬೆಂಡೆಕಾಯಿಯನ್ನು ಈ ವಿಧಾನದಲ್ಲಿ ತಯಾರಿಸಿ ತಿಂದರೆ ತುಂಬಾನೇ ಒಳ್ಳೆಯದು. ಎಳ್ಳು ಬೀಜಗಳು ಮತ್ತು ಕೆಂಪು ಮೆಣಸಿನಕಾಯಿಗಳನ್ನು ಸೇರಿಸೋದ್ರಿಂದ ಸುವಾಸನೆ ಮತ್ತು ಪೌಷ್ಟಿಕಾಂಶವನ್ನು ಹೆಚ್ಚು ಮಾಡಲು ಸಹಾಯಕಾರಿಯಾಗಿದೆ.
ಇನ್ನೂ ಬೆಂಡೆಕಾಯಿಯನ್ನು ತಯಾರು ಮಾಡುವಾಗ ಶಾಖ ಸರಿಯಾದ ಸಮತೋಲನದಲ್ಲಿ ಇರಬೇಕು. ಇನ್ನೂ ಬೆಂಡೆಕಾಯಿಗೆ ಎಳ್ಳು ಬೀಜಗಳನ್ನು ಯಾವ ಕಾರಣಕ್ಕೆ ಸೇರಿಸಬೇಕು ಅಂದ್ರೆ ಅದ್ರಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್, ಫೈಬರ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಬಿ 6 ನಂತಹ ಎಲ್ಲಾ ಅಗತ್ಯ ಪೋಷಕಾಂಶಗಳು ಕಂಡುಬರುತ್ತವೆ.
ಇದು ಹೃದಯ ಮತ್ತು ಮೂಳೆಗಳನ್ನು ಬಲವಾಗಿ ಮತ್ತು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಮೆಣಸಿನಕಾಯಿಯಲ್ಲಿ ವಿಟಮಿನ್ ಸಿ ಇದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಚರ್ಮವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಮೆಣಸಿನಕಾಯಿ ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ.
ತರಕಾರಿಗಳನ್ನೇ ಹೆಚ್ಚಾಗಿ ಸೇವನೆ ಮಾಡ್ಬೇಕು ಯಾಕೆ?
ತರಕಾರಿಗಳಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್, ಫೈಬರ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಬಿ 6 ನಂತಹ ಎಲ್ಲಾ ಅಗತ್ಯ ಪೋಷಕಾಂಶಗಳು ಇರುತ್ತವೆ. ಇದರ ಬಳಕೆಯು ಹೃದಯ, ಮನಸ್ಸು ಮತ್ತು ಮೂಳೆಗಳನ್ನು ಬಲವಾಗಿ ಮತ್ತು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಸೌತೆಕಾಯಿಯಲ್ಲಿ ವಿಟಮಿನ್ ಸಿ ಇದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಚರ್ಮವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಪುದೀನಾ ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ.
ಮಾಂಸಗಳ ರುಚಿ ಹೆಚ್ಚಿಸಲು ಮಸಾಲೆ ಸೇರಿಸಲಾಗುತ್ತದೆ!
ಜನರಿಗೆ ಮಾಂಸಗಳು ರುಚಿಸುವಷ್ಟು ತರಕಾರಿ ರುಚಿಯಾಗಿರೋದಿಲ್ಲ ಎಂದು ನಂಬುತ್ತಾರೆ. ಮಾಂಸ, ಮೊಟ್ಟೆ, ಮೀನುಗಳನ್ನು ಇಷ್ಟ ಪಡುವಷ್ಟು ತರಕಾರಿಯನ್ನು ಇಷ್ಟ ಪಟ್ಟು ತಿನ್ನೋದಿಲ್ಲ. ಆತಂಕಕಾರಿ ಸಂಗತಿಯೆಂದರೆ ಮಾಂಸಗಳಿಗೆ ರುಚಿಯನ್ನು ನೀಡಲು ಸಾಕಷ್ಟು ದ್ರವ ಮತ್ತು ಮಸಾಲೆಗಳನ್ನು ಬಳಸುತ್ತಿದ್ದಾರೆ. ಇದರಿಂದ ನಮ್ಮ ದೇಹಕ್ಕೆ ಪೌಷ್ಠಿಕಾಂಶಗಳು ಸಿಗೋದಕ್ಕಿಂತ ಹೆಚ್ಚಾಗಿ ಮಸಾಲೆ ಪದಾರ್ಥಗಳೇ ನಮ್ಮ ದೇಹವನ್ನು ಸೇರಿ ಬಿಡುತ್ತದೆ.
ಹೀಗಾಗಿ ಹೆಚ್ಚು ಕಾಲ ದೀರ್ಘಾಯುಷಿಯಾಗಿ ಬದುಕಬೇಕೆಂದರೆ ಆದಷ್ಟು ಹಸಿರು ತರಕಾರಿಗಳನ್ನೇ ಸೇವಿಸೋದನ್ನು ಅಭ್ಯಾಸ ಮಾಡಿಕೊಳ್ಳಿ. ಮಾಂಸಗಳನ್ನು ಸೇವಿಸಿದ್ರೂ ಕೂಡ ಅದ್ರಲ್ಲಿ ಮಸಾಲೆ ಹಾಗೂ ಎಣ್ಣೆಯಲ್ಲಿ ಖರಿದ ಪದಾರ್ಥಗಳನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಿದರೆ ಉತ್ತಮ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











