Latest Updates
-
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ!
ಈ ಆಹಾರಗಳು ಪುರುಷರಲ್ಲಿ ಬಂಜೆತನದ ಸಮಸ್ಯೆ ತಡೆಗಟ್ಟಲು ಸಹಕಾರಿ ಎನ್ನುತ್ತಿದ್ದಾರೆ ವಿಜ್ಞಾನಿಗಳು
ಇತ್ತೀಚಿನ ವರ್ಷಗಳಲ್ಲಿ ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಕುಗ್ಗುತ್ತಿದೆ ಎಂದು ಹಲವಾರು ಅಧ್ಯಯನಗಳು ವರದಿ ಮಾಡಿದೆ, ಅದರಂತೆ ಇತ್ತೀಚಿನ ವರ್ಷಗಳಲ್ಲಿ ಪುರುಷರಲ್ಲಿ ಬಂಜೆತನದ ಸಮಸ್ಯೆ ಕೂಡ ಹೆಚ್ಚಾಗುತ್ತಿದೆ. ಆಹಾರಶೈಲಿ, ಜೀವನಶೈಲಿಯಿಂದಾಗಿ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತಿದೆ.
ಆದರೆ ಈಗ ವಿಜ್ಞಾನಿಗಳು ಪುರುಷರು ತಮ್ಮ ಸಂತಾನೋತ್ಪತ್ತಿ ಸಾಮರ್ಥ್ಯ ಕಾಪಾಡಲು ಏನು ಮಾಡಬೇಕು, ಯಾವ ಆಹಾರ ಸೇವಿಸಬೇಕು ಎಂಬುವುದರ ಬಗ್ಗೆ ಮಾಹಿತಿ ನೀಡಿದ್ದಾರೆ ನೋಡಿ:

Advances in Nutrition ಜರ್ನಲ್‌ನಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ, ಅದರಲ್ಲಿ ಯಾವ ಆಹಾರವನ್ನು ಪ್ರತಿದಿನ ಸೇವಿಸುವುದರಿಂದ ಪುರುಷರು ತಮ್ಮ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಬಹುದು ಎಂದು ಹೇಳಲಾಗುವುದು.
ಹಣ್ಣುಗಳು ವೀರ್ಯಾಣುಗಳ ಸಂಖ್ಯೆ ಹೆಚ್ಚಿಸುತ್ತದೆ
ಈ ಹಿಂದೆ ಮಾಡಿದ ಅಧ್ಯಯನದಲ್ಲಿ ತರಕಾರಿ ಹಾಗೂ ಹಣ್ಣುಗಳನ್ನು ಹೆಚ್ಚಾಗಿ ಬಳಸುವುದರಿಂದ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗದಂತೆ ಕಾಪಾಡಬಹುದು. ಅದರಲ್ಲೂ ನಟ್ಸ್ ತುಂಬಾ ಒಳ್ಳೆಯದು.
ಈ ನಟ್ಸ್ ಪ್ರತಿದಿನ ಸೇವಿಸಿದರೆ ಒಳ್ಳೆಯದು
ಪುರುಷರು ತಮ್ಮ ಪುರುಷ ಸಾಮರ್ಥ್ಯಕ್ಕಾಗಿ ವಾಲ್ನಟ್ ಪ್ರತಿದಿನ ಸೇವಿಸುವುದು ಒಳ್ಳೆಯದು. ವಾಲ್ನಟ್‌ನಲ್ಲಿ ಒಮೆಗಾ 3 ಕೊಬಿನಂಶ ಇದೆ, ಇದು ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ತುಂಬಾನೇ ಸಹಕಾರಿಯಾಗಿದೆ ಎಂಬುವುದನ್ನು ವಿಜ್ಞಾನಿಗಳು ಹೇಳಿದ್ದಾರೆ.
ಒಮೆಗಾ 3 ಕೊಬ್ಬಿನಂಶ ಮೀನು, ಅಗಸೆ ಬೀಜ ಈ ಬಗೆಯ ವಸ್ತುಗಳಲ್ಲಿದೆ. ಪುರುಷರು ಎರಡು ಮುಷ್ಠಿ ನಟ್ಸ್ ಪ್ರತಿದಿನ ತಿಂದರೆ ಅವರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಲ್ಲ ಎಂದು ಹೊಸ ಅಧ್ಯಯನಗಳು ದೃಢೀಕರಿಸಿದೆ.
ಪುರುಷರಲ್ಲಿ ವೀರ್ಯಾಣುಗಳು ಹೆಚ್ಚಾಗಲು ಈ ಟಿಪ್ಸ್ ಕೂಡ ಸಹಕಾರಿ
ಪ್ರತಿದಿನ ವ್ಯಾಯಾಮ ಮಾಡಿ
ಪ್ರತಿದಿನ ವ್ಯಾಯಾಮ ಮಾಡುವುದರಿಂದ ದೈಹಿಕ ಆರೋಗ್ಯ ಹೆಚ್ಚಾಗುವುದು ಮಾತ್ರವಲ್ಲ, ವೀರ್ಯಾಣುಗಳ ಸಂಖ್ಯೆ ಕೂಡ ಹೆಚ್ಚಾಗುವುದು. ವ್ಯಾಯಾಮ ಮಾಡುವುದರಿಂದ ಟೆಸ್ಟೋಸ್ಟಿರೋನೆ ಪ್ರಮಾಣ ಹೆಚ್ಚಾಗುವುದು, ವೀರ್ಯಾಣುಗಳ ಸಂಖ್ಯೆ ಹೆಚ್ಚಾಗುವುದು.
ಸಾಕಷ್ಟು ವಿಟಮಿನ್ ಸಿ ಸೇವಿಸಿ
ವಿಟಮಿನ್ ಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಮಾತ್ರವಲ್ಲ ಇದರಿಂದ ವೀರ್ಯಾಣುಗಳು ಸಂಖ್ಯೆ ಹೆಚ್ಚಾಗುವುದು. ವಿಟಮಿನ್ ಸಿ ಇರುವ ಹಣ್ಣುಗಳು, ತರಕಾರಿಗಳನ್ನು ಸೇವಿಸಿ. ದಿನಾ ಬೆಳಗ್ಗೆ ಬಿಸಿ ನೀರಿಗೆ ಅರ್ಧ ನಿಂಬೆಹಣ್ಣಿನ ರಸ ಹಾಕಿ ಕುಡಿಯಿರಿ.
ಮಾನಸಿಕ ಒತ್ತಡ ಕಡಿಮೆ ಮಾಡಿ
ಅತ್ಯಧಿಕ ಮಾನಸಿಕ ಒತ್ತಡ ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ, ಲೈಂಗಿಕ ಆಸಕ್ತಿಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಮಾನಸಿಕ ಒತ್ತಡ ಕಡಿಮೆ ಮಾಡಿ, ಧ್ಯಾನ ಮಾಡಿ. ಯೋಗ, ಧ್ಯಾನ, ಪ್ರಾರ್ಥನೆ ಇವುಗಳಿಂದ ಮಾನಸಿಕ ಒತ್ತಡ ಕಡಿಮೆಮಾಡಿಕೊಳ್ಳಿ.
ವಿಟಮಿನ್ ಡಿ ಅವಶ್ಯಕ
ವಿಟಮಿನ್ ಡಿ ಪುರುಷ ಸಾಮರ್ಥ್ಯ ಹೆಚ್ಚಿಸಲು ಸಹಕಾರಿ. ಇದು ಪುರುಷರಲ್ಲಿ ಟೆಸ್ಟೋಸ್ಟಿರೋನೆ ಪ್ರಮಾಣ ಹೆಚ್ಚಿಸುತ್ತದೆ. ವಿಟಮಿನ್ ಡಿ ಕಡಿಮೆಯಾದರೆ ಟೆಸ್ಟೋಸ್ಟಿರೋನೆ ಪ್ರಮಾಣ ಕಡಿಮೆಯಾಗುವುದು. ಬೆಳಗ್ಗೆ ಬಿಸಿಲಿನಲ್ಲಿ ಸ್ವಲ್ಪ ಹೊತ್ತು ನಿಲ್ಲಿ, ಇದರಿಂದ ದೇಹಕ್ಕೆ ಅವಶ್ಯಕವಾದ ವಿಟಮಿನ್ ಡಿ ಸಿಗುವುದು.
ಮೆಂತೆ ಸಪ್ಲಿಮೆಂಟ್ ತೆಗೆದುಕೊಳ್ಳಿ
ಪ್ರತಿದಿನ 500 mg ಮೆಂತೆ ಸಪ್ಲಿಮೆಂಟ್ ತೆಗೆದುಕೊಳ್ಳುವುದರಿಂದ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು. ದಿನಾ ಸ್ವಲ್ಪ ಮೆಂತೆ ನೀರಿಗೆ ಹಾಕಿ ಅದನ್ನು ತಿಂದರೆ ಒಳ್ಳೆಯದು, ಮಧುಮೇಹದ ಸಮಸ್ಯೆ ತಡೆಗಟ್ಟಲು ಕೂಡ ಇದು ಸಹಕಾರಿ.
ಸತುವಿನಂಶದ ಆಹಾರ ತೆಗೆದುಕೊಳ್ಳಿ
ಮೀನು, ಮೊಟ್ಟೆ, , ಮಾಂಸಾಹಾರ, ಲಿವರ್, ಸಿಹಿಕುಂಬಳಕಾಯಿ ಬೀಜ ಇವುಗಳಲ್ಲಿ ಸತುವಿನಂಶ ಅಧಿಕವಿರುತ್ತದೆ.
ಅಶ್ವಗಂಧ ಸೇವಿಸಿ
675mg ಅಶ್ವಗಂಧದಂತೆ 3 ತಿಂಗಳು ಸೇವಿಸಿದರೆ ವೀರ್ಯಾಣುಗಳ ಸಂಖ್ಯೆ ಹೆಚ್ಚಾಗುವುದು.
ಈಗೀನ ಲೈಫ್‌ಸ್ಟೈಲ್ ಪುರುಷರು ಈ ಕುರಿತು ತುಂಬಾನೇ ಜಾಗ್ರತೆವಹಿಸಬೇಕು.
ಕೊನೆಯದಾಗಿ:
* ಆರೋಗ್ಯಕರ ಜೀವನ ನಡೆಸಿ: ಆಹಾರಕ್ರಮ, ವ್ಯಾಯಾಮ ಇವುಗಳತ್ತ ಹೆಚ್ಚಿನ ಗಮನಹರಿಸಿ.
* ಅತ್ಯಧಿಕ ಮೈ ತೂಕ ಕಡಿಮೆ ಮಾಡಿಕೊಳ್ಳಿ: ವ್ಯಾಯಾಮ ಮಾಡುವ ಮೂಲಕ ಅಧಿಕ ಮೈ ತೂಕ ಕಡಿಮೆ ಮಾಡಿಕೊಳ್ಳಿ
* ಮದ್ಯಪಾನ ಮಿತಿಯಲ್ಲಿ ಮಾಡಿ
* ಸಾಕಷ್ಟು ಪೋಲೆಟ್ ತೆಗೆದುಕೊಳ್ಳಿ. ಸಪ್ಲಿಮೆಂಟ್, ಫೋಲೆಟ್ ಇರುವ ಆಹಾರದ ಕಡೆ ಗಮನಹರಿಸಿ.
* ಸಾಕಷ್ಟು ನಿದ್ದೆ ಮಾಡಿ: ನಿದ್ದೆ ಕಡಿಮೆಯಾದರೂ ಆರೋಗ್ಯದ ಮೇಲೆ ಗಮನಹರಿಸಿ, ವಾಲ್ನಟ್ ಪ್ರತಿದಿನ ಸೇವಿಸಿ
* ಸೋಯಾ ಹೆಚ್ಚು ಬಳಸಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications