Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಅತಿಯಾಗಿ ಡಯಟ್ ಮಾಡುವವರನ್ನು ಮದುವೆಯಾಗಬಾರದು ಎಂದು ನ್ಯೂಟ್ರಿಷಿಯನಿಸ್ಟ್ ಹೇಳಿದ್ದೇಕೆ?
ಆಕರ್ಷಕ ಮೈಕಟ್ಟು ಪ್ರತಿಯೊಬ್ಬರು ಬಯಸುತ್ತಾರೆ, ಆದರೆ ಕೆಲವರು ಕಟ್ಟುನಿಟ್ಟಿನ ಪ್ರಯತ್ನ ಪಡುತ್ತಾರೆ. ನ್ಯೂಟ್ರಿಷಿಯನಿಸ್ಟ್ , ಆರೋಗ್ಯ ತಜ್ಞರು ಆಹಾರಕ್ರಮದ ಕಡೆಗೆ ಗಮನಹರಿಸಬೇಕು, ವ್ಯಾಯಾಮದ ಕಡೆಗೆ ಗಮನಹರಿಸಬೇಕು.
ಭಾರತದ ಪ್ರಸಿದ್ಧ ನ್ಯೂಟ್ರಿಷಿಯನಿಸ್ಟ್‌ಗಳಲ್ಲಿ ಒಬ್ಬರಾದ ರುಜುತಾ ದ್ವಿವೇಕರ್ ಇತ್ತೀಚೆಗೆ ಒಂದು ವೀಡಿಯೋ ಶೇರ್ ಮಾಡಿದ್ದರು. ಅದರಲ್ಲಿ ಅವರು ಕೆಲ ಇಂಟೆರೆಸ್ಟಿಂಗ್ ವಿಷಯಗಳ ಬಗ್ಗೆ ಹೇಳಿದ್ದಾರೆ.

ಸಕ್ಕರೆ ಸಂಪೂರ್ಣ ಬಿಡುವುದು, ಕ್ಯಾಲೋರಿ ಕೌಂಟ್ ಮಾಡುವುದು ಆರೋಗ್ಯಕರ ಮನಸ್ಥಿತಿಯಲ್ಲ
ಕೆಲವರು ಡಯಟ್ ಅಂತ ಸಂಪೂರ್ಣ ಸಕ್ಕರೆ ಬಿಡುತ್ತಾರೆ, ತಮ್ಮ ತಟ್ಟೆಯಲ್ಲಿರುವ ಆಹಾರದಲ್ಲಿ ಎಷ್ಟು ಕ್ಯಾಲೋರಿ ಇದೆ ಎಂದು ಕೌಂಟ್ ಮಾಡಿ ತಿನ್ನುತ್ತಾರೆ, ತಮಗೆ ಇಷ್ಟವಿರುವ ಆಹಾರವನ್ನು ತುಂಬಾನೇ ಕಷ್ಟಪಟ್ಟು ತಿನ್ನದೇ ಇರುತ್ತಾರೆ, ಈ ರೀತಿ ಮಾಡುವುದರಿಂದ ಮನಸ್ಸಿಗೆ ನೋವಾಗುವುದು, ಈ ಬಗೆಯ ಮನಸ್ಥಿತಿ ಆರೋಗ್ಯಕರವಲ್ಲ ಎಂದು ನ್ಯೂಟ್ರಿಷಿಯನಸ್ಟ್ ರುಜುತಾ ದ್ವಿವೇಕರ್ ಹೇಳಿದ್ದಾರೆ.
ಡಯಟ್ ಅಂದರೆ ನಮಗೆ ಇಷ್ಟವಾಗಿರುವ ಆಹಾರವನ್ನು ಸಂಪೂರ್ಣ ತ್ಯಾಗ ಮಾಡುವುದಲ್ಲ
ಈ ರೀತಿಯ ಯೋಚನೆಯೇ ತಪ್ಪು, ಡಯಟ್ ಅಂದರೆ ತ್ಯಾಗ, ಕಷ್ಟಪಡುವುದು ಎಂಬಂತಾಗಿದೆ, ಆದರೆ ಅದು ಸತ್ಯವಿಲ್ಲ, ಡಯಟ್ ಮಾಡುವುದು ತ್ಯಾಗವಲ್ಲ ಎಂಬುವುದಾಗಿ ರುಜುತಾ ಹೇಳುತ್ತಾರೆ.
ಡಯಟಿಂಗ್‌ನಲ್ಲಿರುವ ವ್ಯಕ್ತಿಯನ್ನು ಮದುವೆಯಾಗಬೇಡಿ ಎಂದು ಹೇಳಿದ್ದೇಕೆ?
ಅವರು ಡಯಟ್ ಮತ್ತು ಡೇಟಿಂಗ್ ಅನ್ನು ಕನೆಕ್ಟ್ ಮಾಡಿ ಮಾತನಾಡಿದ್ದಾರೆ. ಯಾವುದೇ ಹುಡುಗ ಅಥವಾ ಹುಡುಗಿ ಡಯಟ್ ಹೆಸರಿನಲ್ಲಿ ಯಾರು ಸಕ್ಕರೆ ಸೇವಿಸಲ್ಲ, ಸಿಹಿ ತಿಂಡಿ ಸೇವಿಸಲ್ಲ ಎಂದಾದರೆ ಅವರನ್ನು ಮದುವೆಯಾಗಲೇಬೇಡಿ, ಏಕೆಂದರೆ ಅವರನ್ನು ಮದುವೆಯಾದರೆ ಒಂದು ರೀತಿಯ ನೆಗೆಟಿವಿಟಿ ಇರಲಿದೆ. ಯಾರು ಕ್ಯಾಲೋರಿ, ಪ್ರೊಟೀನ್ ಬಗ್ಗೆ ಯೋಚಿಸದೆ ಚೆನ್ನಾಗಿ ತಿನ್ನುತ್ತಾರೋ , ಅವರ ಸಂಗಾತಿಗೆ ತಿನ್ನಿಸುತ್ತಾರೋ ಅಂಥವರ ಜೊತೆ ಬದುಕು ಚೆನ್ನಾಗಿರುತ್ತದೆ.
ಅವರು ಹೇಳಿದ್ದು ನಿಜ ಅಲ್ವಾ?
ಒಂದು ಹೋಟೆಲ್‌ಗೆ ಹೋಗುತ್ತೇವೆ ಅಲ್ಲಿ ನಮಗಿಷ್ಟವಾದ ತಿಂಡಿ ತಿನ್ನೋಣ ಎಂದಾಗ ನಮ್ಮ ಪಾರ್ಟನರ್ ಬೇಡ ಅದರಲ್ಲಿ ಕ್ಯಾಲೋರಿ ಹೆಚ್ಚಿದೆ, ಸಕ್ಕರೆಯಂಶ ಇದೆ ಎಂದಾಗ ನಾವು ಅವರಿಗಾಗಿ ತ್ಯಾಗ ಮಾಡಬೇಕು, ಅವರು ತಿನ್ನಿದಿದ್ದರೆ ನಾವು ಒಬ್ಬರೇ ಆ ತಿನಿಸು ಖುಷಿಯಾಗಿ ಸವಿಯಲು ಸಾಧ್ಯವಿಲ್ಲ, ಆದ್ದರಿಂದ ಡಯಟ್ ಎಂದರೆ ಎಲ್ಲವನ್ನು ತ್ಯಾಗ ಮಾಡುವುದಲ್ಲ, ಬದಲಿಗೆ ನಮಗಿಷ್ಟವಾದದ್ದನ್ನು ತಿಂದು ಖುಷಿಯಾಗಿ ಆರೋಗ್ಯವಾಗಿರುವುದು.
ಮಿತ ಆಹಾರದಿಂದ ಏನೂ ಸಮಸ್ಯೆವಿಲ್ಲ
ನಾವು ನಮಗಿಷ್ಟವಾದ ಆಹಾರವನ್ನು ಮಿತಿಯಲ್ಲಿ ತಿಂದರೆ ಯಾವುದೇ ಸಮಸ್ಯೆಯಿಲ್ಲ ಜೊತೆಗೆ ಸ್ವಲ್ಪ ವ್ಯಾಯಾಮವಿದ್ದರೆ ನಾವು ಆರೋಗ್ಯಕರವಾಗಿ ಖುಷಿಯಿಂದ ಬದುಕಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications