Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಕಲ್ಲುಪ್ಪು vsಸಮುದ್ರ ಉಪ್ಪು: ಯಾವ ಉಪ್ಪು ಹೆಚ್ಚು ಆರೋಗ್ಯಕರ?
ಉಪ್ಪಿಲ್ಲದ ಊಟ ರುಚಿಸುವುದುಂಟೇ? ಅಡುಗೆಯಲ್ಲಿ ಹಿತ ಮಿತ ಉಪ್ಪು ಇದ್ದರೆ ಮಾತ್ರ ಆ ಅಡುಗೆ ರುಚಿ ಹೆಚ್ಚುವುದು. ಉಪ್ಪು ರುಚಿಗಷ್ಟೇ ಅಲ್ಲ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಆರೋಗ್ಯದ ವಿಷಯಕ್ಕೆ ಯಾವ ಬಗೆಯ ಉಪ್ಪು ಶರೀರಕ್ಕೆ ಒಳ್ಳೆಯದು ಎಂಬ ಪ್ರಶ್ನೆ ಹಲವರಲ್ಲಿರುತ್ತದೆ. ಸಮುದ್ರ ಉಪ್ಪು ಹಾಗೂ ಕಲ್ಲುಪ್ಪು ಈ ಎರಡರಲ್ಲಿ ಯಾವುದು ಹೆಚ್ಚು ಆರೋಗ್ಯಕರ ಎಂದು ನೋಡೋಣ:

ಕಲ್ಲಪ್ಪು ಎಂದರೇನು?
ಕಲ್ಲುಪ್ಪು ಎಂಬುವುದು ಸೋಡಿಯಂ ಕ್ಲೋರೈಡ್ ಆಗಿದ್ದು ನೈಸರ್ಗಿಕವಾಗಿ ಉತ್ಪತ್ತಿಯಾದ ಉಪ್ಪಿನ ಕಲ್ಲಿನಿಂದ ಕಲ್ಲುಪ್ಪು ತಯಾರಿಸಲಾಗುವುದು. ಈ ಕಲ್ಲುಪ್ಪು ಸಮುದ್ರದದ ಸಮೀಪ ಇರುತ್ತದೆ. ಕಲ್ಲುಪ್ಪು ಕೂಡ ಸಮುದ್ರದಿಂದ ಸಂಗ್ರಹವಾದ ಉಪ್ಪಿನಂಶವಾಗಿದ್ದು ಘನ ರೂಪದಲ್ಲಿರುತ್ತದೆ. ಕಲ್ಲುಪ್ಪನ್ನು ಐಸ್ ಕ್ರೀಮ್ ತಯಾರಿಯಲ್ಲಿ ಅಥವಾ ನೀರಿಗೆ ಮೃದುತ್ವ ತರಲು ಬಳಸಲಾಗುವುದು.
ಸಮುದ್ರ ಉಪ್ಪು ಎಂದರೇನು?
ಇದನ್ನು ಸಮುದ್ರದ ಉಪ್ಪಿನಂಶದ ನೀರನ್ನು ಸಂಗ್ರಹಿಸಿ ಅದನ್ನು ಆವಿಯಾಗುವಂತೆ ಮಾಡಿ ಉಪ್ಪನ್ನು ಸಂಗ್ರಹಿಸಲಾಗುವುದು.
ಕಲ್ಲುಪ್ಪು vs ಸಮುದ್ರ ಉಪ್ಪು
ಈ ಎರಡು ಉಪ್ಪು ಒಂದೇ ಎಂದು ನೋಡಿದರೆ ಎರಡರಲ್ಲಿರುವ ಪೋಷಕಾಂಶಗಳು ಒಂದೇ ರೀತಿದೆ, ಆದರೆ ಉಪ್ಪು ತಯಾರಾದ ವಿಧಾನ ಮಾತ್ರ ಭಿನ್ನವಾಗಿದೆ. ಕಲ್ಲುಪ್ಪು ನೈಸರ್ಗಿಕವಾಗಿ ಉಂಟಾದರೆ ಸಮುದ್ರ ಉಪ್ಪನ್ನು ಉಪ್ಪು ನೀರು ಆವಿಯಾದಾಗ ಉಂಟಾಗುವುದು. ಈ ಎರಡು ಉಪ್ಪುನ ತರಿತರಿಯಾಗಿರುತ್ತದೆ. ಅಯೋಡಿಯನ್ ಸೇರಿಸಿರುವ ಉಪ್ಪು ಮಾತ್ರ ನುಣ್ಣನೆ ಇರುತ್ತದೆ,
ಈ ಎರಡೂ ಉಪ್ಪಿನಲ್ಲಿ ಸತು, ತಾಮ್ರದಂಶ, ಕಬ್ಬಿಣದಂಶ, ಮ್ಯಾಂಗನೀಸ್, ಪೊಟಾಷ್ಯಿಯಂ, ಕ್ಯಾಲ್ಸಿಯಂ ಅಲ್ಪ ಪ್ರಮಾಣದಲ್ಲಿರುವುದರಿಂದ ಈ ಎರಡೂ ಉಪ್ಪಿನಂಶ ಪೋಷಕಾಂಶದಲ್ಲಿ ದೊಡ್ಡ ವ್ಯತ್ಯಾಸವೇನೂ ಇರುವುದಿಲ್ಲ.
ಅಯೋಡಿಯನ್ ಉಪ್ಪು ಹೇಗೆ ತಯಾರಿಸಲಾಗುವುದು?
ಕಲ್ಲುಪ್ಪು ಅಥವಾ ಸಮುದ್ರ ಉಪ್ಪಿನಿಂದಲೇ ಅಯೋಡಿಯನ್ ಇರುವ ಉಪ್ಪು ತಯಾರಿಸಲಾಗುವುದು. ಇದರಲ್ಲಿ ಖನಿಜಾಣಶಗಳನ್ನು ತೆಗೆಯಲಾಗುವುದು, ಇದರಲ್ಲಿ ಸೋಡಿಯಂ ಕ್ಲೋರೈಡ್ ಮಾತ್ರ ಇರುತ್ತದೆ.
ಮಾರುಕಟ್ಟೆಯಲ್ಲಿ ದೊರೆಯುವ ಉಪ್ಪಿನ ವಿಧಗಳು
ನಿಮಗೆ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಉಪ್ಪು ದೊರೆಯುತ್ತದೆ
* ಕಲ್ಲುಪ್ಪು
* ಸಮುದ್ರ ಉಪ್ಪು
* ಅಯೋಡಿಯನ್ ಇರುವ ಉಪ್ಪು
* ಹಿಮಾಲಯನ್ ಪಿಂಕ್ ಉಪ್ಪು
* ಸೆಲ್ಟಿಕ್ ಉಪ್ಪು
* ಬ್ಲ್ಯಾಕ್ ಸಾಲ್ಟ್
ಹೀಗೆ ನಿಮಗೆ ಹಲವು ವಿಧದ ಉಪ್ಪು ದೊರೆಯುತ್ತದೆ. ಈ ಎಲ್ಲಾ ಉಪ್ಪುಗಳ ಗುಣಗಳು ಒಂದೇ ಆಗಿರುವುದರಿಂದ ಒಂದಕ್ಕಿಂತ ಮತ್ತೊಂದು ಮಿಗಿಲು ಎಂದು ಹೇಳಲಾಗುವುದಿಲ್ಲ. ಎಲ್ಲಾ ಉಪ್ಪಿನಲ್ಲಿ ಸೋಡಿಯಂ ಒಂದೇ ಪ್ರಮಾಣದಲ್ಲಿ ಇರುತ್ತದೆ.
ಆದ್ದರಿಂದ ಅಡುಗೆಗೆ ನಿಮಗೆ ಇಷ್ಟವಾಗುವ ಉಪ್ಪು ಬಳಸಬಹುದು. ಈ ಉಪ್ಪು ತುಂಬಾ ಆರೋಗ್ಯಕರ , ಇದು ಕಡಿಮೆ ಆರೋಗ್ಯಕರ ಎಂದೇನಿಲ್ಲ, ಉಪ್ಪನ್ನು ಮಿತಿಯಲ್ಲಿ ಸೇವಿಸಿ ಅದುವೇ ಆರೋಗ್ಯಕರ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
