Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಈ ಹುರಿಗಡಲೆ ಸವಿಯೋದು ಇಂದೇ ನಿಲ್ಲಿಸಿಬಿಡಿ; ಇದರಲ್ಲಿದೆ ಕ್ಯಾನ್ಸರ್ ಕಾರಕ ಔರಾಮೈನ್!!
ನಾವು ನಿತ್ಯ ಸವಿಯುವಂತಹ ರುಚಿ ರುಚಿಯ ತಿಂಡಿ ತನಿಸುಗಳು ಈಗ ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ನೋಡಬಹುದು. ಇತ್ತೀಚಿಗೆ ಪ್ರತಿಯೊಂದು ಖಾದ್ಯಗಳನ್ನು ಸಹ ಪರಿಶೀಲನೆಗೆ ಒಳಪಡಿಸಿ ಸವಿಯಬೇಕಾದ ಅನಿವಾರ್ಯ ಪರಿಸ್ಥಿತಿಗೆ ಬಂದಿದ್ದೇವೆ. ಮಕ್ಕಳ ತಿಂಡಿಯಿಂದ ಹಿಡಿದು ಸಿಹಿ ತಿಂಡಿಗಳು ಸಹ ಆರೋಗ್ಯಯುತ ವಸ್ತುಗಳಾಗಿ ಉಳಿದಿಲ್ಲ.
ಸದ್ಯ ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿರುವ ವಿಚಾರ ಅಂದರೆ ಅದು ಹುರಿದ ಕಡಲೆಯಲ್ಲಿನ ಅಂಶವು ನಮ್ಮಲ್ಲಿ ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಯನ್ನು ಉಂಟು ಮಾಡಲು ಕಾರಣವಾಗುತ್ತಿದೆ ಎಂದು ಹೇಳಲಾಗಿದೆ. ಈ ಕುರಿತಾಗಿ ರಾಜ್ಯಸಭೆಯಲ್ಲಿ ಸಂಸದೆ ಪ್ರಿಯಾಂಕಾ ಚತುರ್ವೇದಿ ಧ್ವನಿ ಎತ್ತಿದ್ದಾರೆ.

ಅಂಗಡಿ, ಬೇಕರಿಗಳಲ್ಲಿ ಸಿಗುವಂತಹ ರೋಸ್ಟೆಟ್ ಕಡಲೆಗಳು ಆರೋಗ್ಯದ ಮೇಲೆ ಪರಿಣಾಮಕಾರಿಯಾಗಿ ಹಾನಿ ಮಾಡುತ್ತಿದೆ ಎಂದು ಅವರು ವಿವರಿಸಿದ್ದಾರೆ. ಹುರಿದ ಕಡಲಗಳು, ಹಾಗೆ ಇತರೆ ಆಹಾರ ಉತ್ಪನ್ನಗಳು ಕೆಡದಂತೆ ಹಾಗೆ ಅವುಗಳ ಬಣ್ಣವು ಹೆಚ್ಚಾಗುವಂತೆ ಮಾಡಲು ಕೈಗಾರಿಕಾ ಬಣ್ಣ ಎಂದು ಪರಿಗಣಿಸಲಾದ ಔರಾಮೈನ್ ಬಳಸಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ಔರಾಮೈನ್ ಕ್ಯಾನ್ಸರ್‌ಗೆ ಕಾರಣವಾಗುವ ಪ್ರಮುಖ ಅಂಶವಾಗಿದೆ. ಈ ಸಂಬಂಧ ಸಂಸದೆ ಎಕ್ಸ್ ಖಾತೆಯಲ್ಲಿ ಈ ಕುರಿತ ಮಾಹಿತಿ ಹಂಚಿಕೊಂಡಿದ್ದು, ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದಾರೆ. ಆಹಾರ ಪದಾರ್ಥಗಳ ಬಣ್ಣವನ್ನು ಹೆಚ್ಚಿಸಲು ಔರಾಮೈನ್ ಅನ್ನು ಸೇರಿಸಲಾಗುತ್ತಿದೆ ಎಂದು ಅವರು ಗಮನಸೆಳೆದರು, ಇದು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ 2006 ರ ಸ್ಪಷ್ಟ ಉಲ್ಲಂಘನೆಯಾಗಿದೆ.
ಇದು ಲಕ್ಷಾಂತರ ಭಾರತೀಯ ನಾಗರಿಕರ ಆರೋಗ್ಯ, ಸುರಕ್ಷತೆ ಮತ್ತು ನಂಬಿಕೆಗೆ ಬೆದರಿಕೆಯಾಗಿದೆ ಮತ್ತು FSSAI ಯ ನಿಯಂತ್ರಕ ಮೇಲ್ವಿಚಾರಣೆಯ ವೈಫಲ್ಯವಾಗಿದೆ ಎಂದು ಸಂಸದೆ ಹೇಳಿದ್ದಾರೆ. ಅದ್ರಲ್ಲೂ ಈ ಬಣ್ಣವು ಕೈಗಾರಿಕಾ ಬಳಕೆಯಲ್ಲಿ ಹೆಚ್ಚಾಗಿದೆ. ಆದ್ರೆ ಇದನ್ನೇ ಆಹಾರ ಖಾದ್ಯಗಳ ಬಣ್ಣ ಹೆಚ್ಚಿಸಲು ಬಳಸುವುದು ಕಂಡುಬಂದಿದೆ. ಇದು ಕ್ಯಾನ್ಸರ್ ತರುವ ಅಪಾಯವನ್ನು ಹೆಚ್ಚಿಸುತ್ತದೆ.
ತನ್ನ ಪತ್ರದಲ್ಲಿ ಚತುರ್ವೇದಿ ಔರಾಮೈನ್‌ನ ಅಪಾಯಗಳನ್ನು ವಿವರಿಸಿದ್ದಾರೆ. ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ 2006 ರ ಅಡಿಯಲ್ಲಿ ಔರಾಮೈನ್ ಅನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇದನ್ನು ಕ್ಯಾನ್ಸರ್ ಸಂಶೋಧನೆಗಾಗಿ ಅಂತರರಾಷ್ಟ್ರೀಯ ಆರೋಗ್ಯ ಸಂಸ್ಥೆ (WHO) ಸಂಭಾವ್ಯ ಕ್ಯಾನ್ಸರ್ ಕಾರಕವೆಂದು ಗುರುತಿಸಿದೆ, ಇದು ಯಕೃತ್ತು, ಮೂತ್ರಪಿಂಡ ಮತ್ತು ಮೂತ್ರಕೋಶದ ಕ್ಯಾನ್ಸರ್‌ಗಳಿಗೆ ಮತ್ತು ನರವೈಜ್ಞಾನಿಕ ಹಾನಿಗೆ ಸಂಬಂಧಿಸಿದೆ ಎಂದು ವರ್ಗೀಕರಿಸಲಾಗಿದೆ.
ನೀವು ಈ ಹುರಿದ ಕಡಲೆಗಳು, ಹಸಿರು ಕಡಲೆಗಳು, ಹಳದಿ ಬಣ್ಣದಿಂದ ಕೂಡಿದ ಕಡಲೆಗಳು, ಹಾಗೆ ಹಲವು ಕರಿದ ತಿಂಡಿಗಳ ಸವಿಯಲು ಮುಂದಾಗುವ ಮಂದಿಯಾಗಿದ್ದರೆ ಈ ಅಂಶಗಳು ನಿಮಗೆ ಹಾನಿ ಮಾಡುವುದು ಖಚಿತ. ಅದ್ರಲ್ಲೂ ಔರಮೈನ್ ಅಂಶದಿಂದ ಕ್ಯಾನ್ಸರ್ ಉಂಟು ಮಾಡುವ ಕೋಶಗಳ ವೃದ್ಧಿಗೆ ಕಾರಣವಾಗಲಿದೆ.
ಹುರಿದ ಕಡಲೆ ಮತ್ತು ಸಂಬಂಧಿತ ಆಹಾರಗಳ ವ್ಯಾಪಕ ಪರೀಕ್ಷೆಯನ್ನು ನಡೆಸಲು ಮತ್ತು ತಪಾಸಣೆ, ಪ್ರಯೋಗಾಲಯ ಪರೀಕ್ಷೆಗಳು, ದಂಡಗಳು, ಪರವಾನಗಿ ರದ್ದತಿ ಮತ್ತು ಜೈಲು ಶಿಕ್ಷೆ ಸೇರಿದಂತೆ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಂಸದೆ ತಮ್ಮ ಪತ್ರದಲ್ಲಿ ಶಿಫಾರಸು ಮಾಡಿದ್ದಾರೆ.
ಹಲವು ಆಹಾರ ಉತ್ಪಾದನಾ ಕಂಪನಿಗಳಿಂದ ಹಿಡಿದು ಸಣ್ಣ ಪುಟ್ಟ ವರ್ತಕರು ಕೂಡ ಈ ನಿಯಮಗಳನೆಲ್ಲಾ ಗಾಳಿಗೆ ತೂರಿ ತಮಗಿಷ್ಟ ಬಂದಂತೆ ಹಾಗೆ ನಿಷೇಧಿತ ರಾಸಾಯನಿಕಗಳನ್ನು ಕೂಡ ತಮ್ಮ ಆಹಾರ ಪದಾರ್ಥಗಳಲ್ಲಿ ಬಳಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈಗ ಈ ವಿಚಾರವು ದೇಶವ್ಯಾಪಿ ಚರ್ಚೆಗೆ ಕಾರಣವಾಗಿದೆ.



Click it and Unblock the Notifications
