Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಮೊಳಕೆ ಕಾಳುಗಳನ್ನು ಹಸಿ ತಿಂದ್ರೆ ಒಳ್ಳೆಯದಾ? ಬೇಯಿಸಿ ತಿಂದ್ರೆ ಒಳ್ಳೆಯದಾ?
ನಾವು ಆರೋಗ್ಯವಾಗಿ ಇರಬೇಕು ಅಂದ್ರೆ ಮೊಟ್ಟಮೊದಲನೆಯದಾಗಿ ಗಮನವಹಿಸಬೇಕಾಗಿರುವ ವಿಷಯವೇ ನಾವು ಸೇವಿಸುವ ಆಹಾರ. ನಮ್ಮ ಆಹಾರ ಎಷ್ಟು ಆರೋಗ್ಯಕರವಾಗಿರುತ್ತದೆಯೋ ನಮ್ಮ ಆರೋಗ್ಯವು ಅಷ್ಟೇ ಉತ್ತಮವಾಗಿರುತ್ತದೆ. ಇತ್ತೀಚಿಗೆ ಆಹಾರದ ಬಗ್ಗೆ ಜನ ಹೆಚ್ಚು ಗಮನವಹಿಸುತ್ತಿದ್ದಾರೆ. ಹಾಗಾಗಿ ಹಸಿ ತರಕಾರಿಗಳು ಮೊಳಕೆ ಕಾಳುಗಳು ಪ್ರೋಟೀನ್ ಇರುವ ಪದಾರ್ಥಗಳನ್ನು ಸೇವಿಸುವುದು ಹೆಚ್ಚಾಗಿದೆ.
ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರು ಅಥವಾ ದೇಹವನ್ನು ಹೆಚ್ಚು ಹೆಲ್ದಿಯಾಗಿ ಇಟ್ಟುಕೊಳ್ಳಲು ಬಯಸುವವರು, ಫಿಟ್ನೆಸ್ ಫ್ರೀಕ್ ಎನಿಸಿಕೊಂಡವರು ಮೊಳಕೆ ಕಾಳುಗಳನ್ನು ಆಹಾರವಾಗಿ ಸೇವಿಸುವುದರ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಹಸಿಯಾದ ತರಕಾರಿ, ಹಣ್ಣುಗಳು, ಮೊಳಕೆಯೊಡೆದ ಕಾಳುಗಳು ಈ ಮೊದಲಾದ ಅತ್ಯುತ್ತಮ ಆಹಾರ ಪದಾರ್ಥಗಳನ್ನು ಸೇವಿಸುವತ್ತ ಜನರು ಹೆಚ್ಚು ಗಮನ ವಹಿಸುತ್ತಿದ್ದಾರೆ.

ಯಾವುದೇ ಕಾಳುಗಳನ್ನು ಮೊಳಕೆ ತರಿಸಿಕೊಂಡು ಹಾಗೆಯೇ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೂ ಹೌದು ಅದರಲ್ಲಿ ಹೆಚ್ಚಿನ ವಿಟಮಿನ್ ಹಾಗೂ ಖನಿಜಾಂಶಗಳು ಇರುತ್ತವೆ. ಕ್ಯಾಲೋರಿಯ ಮಟ್ಟ ಕಡಿಮೆ ಇರುತ್ತದೆ. ವಿಟಮಿನ್ ಸಿ ಮತ್ತು ಕೆ ಪ್ರೊಟೀನ್, ಮೆಗ್ನೀಷಿಯಂ ಮ್ಯಾಂಗನೀಸ್ ಮೊದಲಾದ ಅಂಶಗಳು ಹೇರಳವಾಗಿರುತ್ತದೆ. ಹಾಗಾಗಿ ಲಘು ಆಹಾರ ಸೇವಿಸುವವರು ಕೂಡ ಮೊಳಕೆ ಕಾಳಿನ ಆಹಾರವನ್ನು ಸೇವಿಸುತ್ತಾರೆ.
ಮೊಳಕೆ ಕಾಳುಗಳನ್ನು ಬೇಯಿಸಿ ತಿನ್ನುವುದು ಒಳ್ಳೆಯದಾ ಹಾಗೇ ತಿನ್ನುವುದು ಒಳ್ಳೆಯದಾ ಎಂದು ನೋಡೋಣ ಬನ್ನಿ:
ಬೇಯಿಸದ ಮೊಳಕೆ ಕಾಳುಗಳಿಗೂ ಫುಡ್ ಪಾಯಿಸನ್ ಗೂ ಏನು ಸಂಬಂಧ?
ಮೊಳಕೆ ಕಾಳುಗಳನ್ನು ಉಪಯೋಗಿಸದೆ ಹಾಗೆ ತಿಂದರೆ ಅದರಲ್ಲಿ ಬ್ಯಾಕ್ಟೀರಿಯಾ ಗಳು ಹೆಚ್ಚು ಇರುತ್ತವೆ. ಇಕೊಲಿ ಮತ್ತು ಸಾಲ್ಮೋನೆಲ್ಲ ಎನ್ನುವ ಹಾನಿಕಾರಕ ಬ್ಯಾಕ್ಟೀರಿಯಾ ಗಳು ಕಚ್ಚಾ ಮೊಳಕೆ ಕಾಳುಗಳಲ್ಲಿ ಇರಬಹುದು ಇದರಿಂದ ಆಹಾರದಲ್ಲಿ ವಿಷ ಸೇರಿಕೊಳ್ಳುತ್ತದೆ. ಉದಾಹರಣೆಗೆ ಬೀನ್ಸ್ ಮತ್ತು ಕೆಲವು ಬೀಜಗಳು ಹೆಚ್ಚು ಉಷ್ಣವಾಗಿರುವ ಶುಷ್ಕ ಸ್ಥಿತಿಯಲ್ಲಿ ಮೊಳಕೆ ಒಡೆಯುತ್ತವೆ.
ಇದು ಬ್ಯಾಕ್ಟೀರಿಯಾ ಬೆಳವಣಿಗೆಯು ಕೂಡ ಅತ್ಯುತ್ತಮವಾಗಿರುವಂತಹ ವಾತಾವರಣ. ಇಂಥ ಮೊಳಕೆ ಕಾಳುಗಳನ್ನು ತಿಂದು 12 ರಿಂದ 72 ಗಂಟೆಗಳ ಒಳಗೆ ಅತಿಸಾರ, ಹೊಟ್ಟೆ ಉಬ್ಬರ, ವಾಂತಿ ಮೊದಲಾದ ಫುಡ್ ಪಾಯಿಸನಿಂಗ್ ಸಮಸ್ಯೆಯನ್ನು ಅನುಭವಿಸಿದವರು ಸಾಕಷ್ಟು ಜನ ಇದ್ದಾರೆ. ಇದು ಮಾರಣಾಂತಿಕ ಕಾಯಿಲೆ ಏನು ಅಲ್ಲ ಆದರೆ ಮಕ್ಕಳು, ಗರ್ಭಿಣಿಯರು, ವಯಸ್ಸಾದವರು ಅಥವಾ ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಹೆಚ್ಚು ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ.
ಜೀರ್ಣಕ್ರಿಯೆ ಸಮಸ್ಯೆ
ಹಸಿಯಾಗಿರುವ ಮೊಳಕೆ ಕಾಳುಗಳನ್ನು ತಿಂದರೆ ಅದು ಜೀರ್ಣವಾಗುವುದು ಕಷ್ಟ. ಆದರೆ ಬೇಯಿಸಿದ ಮೊಳಕೆ ಕಾಳುಗಳು ಹೆಚ್ಚು ಬೇಗ ಜೀರ್ಣ ಆಗುತ್ತವೆ. ದೇಹ ಕಚ್ಚಾ ರೂಪದಲ್ಲಿ ಇರುವ ಎಲ್ಲಾ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಿಲ್ಲ ಹಾಗಾಗಿ ಬೇಯಿಸದೆ ಇರುವ ಮೊಳಕೆ ಕಾಳುಗಳು ದೇಹಕ್ಕೆ ಹೆಚ್ಚು ಪ್ರೋಟೀನ್ ಅಥವಾ ಇತರ ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ನೀಡಲು ಸಾಧ್ಯವಿಲ್ಲ.
ಯಾವ ರೀತಿ ತಿಂದರೆ ದೇಹಕ್ಕೆ ಒಳ್ಳೆಯದು?
ಈ ರೀತಿ ಮಾಡಿ:
ಹಸಿಯಾಗಿರುವ ಮೊಳಕೆ ಒಡೆದ ಕಾಳುಗಳನ್ನು ಸೇವಿಸಿದ ಎಲ್ಲರಿಗೂ ಆರೋಗ್ಯದ ಸಮಸ್ಯೆ ಆಗುತ್ತೆ ಎಂದಲ್ಲ, ಯಾಕೆಂದರೆ ಸಾಕಷ್ಟು ಜನ ಈ ಅಭ್ಯಾಸವನ್ನು ಈಗಲೂ ಇಟ್ಟುಕೊಂಡಿದ್ದಾರೆ. ಅದು ಯಾವುದೇ ಸಮಸ್ಯೆ ಆಗದೆ ಇರುವುದಕ್ಕೆ ನೀವು ಮೊಳಕೆ ಒಡೆದ ಕಾಳುಗಳನ್ನು ಒಂದು ಬಾಣಲಿಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಚೆನ್ನಾಗಿ ಹುರಿದು ಸೇವಿಸಿ. ಈ ರೀತಿ ಮಾಡುವುದರಿಂದ ಅದರಲ್ಲಿರುವ ಸಾಯುತ್ತವೆ. ಅಥವಾ ನೀವು ಈ ಮೊಳಕೆ ಕಾಳುಗಳನ್ನು ಉಪ್ಪು ನೀರಿನಲ್ಲಿ ಐದು ನಿಮಿಷ ಕುದಿಸಿ ಕೂಡ ಸೇವನೆ ಮಾಡಬಹುದು. ವಿಷಕಾರಿ ಬ್ಯಾಕ್ಟರಿಯಾಗಳು ಇದ್ದರು ಅವು ಸಾಯುತ್ತವೆ ಜೊತೆಗೆ ನೀವು ಇವುಗಳನ್ನು ಸೇವಿಸಿದರೆ ಸುಲಭವಾಗಿ ಜೀರ್ಣವಾಗುತ್ತದೆ ಜೊತೆಗೆ ನಿಮ್ಮ ದೇಹ ಪೋಷಕಾಂಶಗಳನ್ನು ಹೀರಿಕೊಳ್ಳುವುದಕ್ಕೆ ಸಹಾಯಕವಾಗುತ್ತದೆ.
ಇತರ ಆಹಾರಗಳೊಂದಿಗೆ ಸೇವಿಸಿ:
ನಿಮಗೆ ಯಾವುದೇ ಆರೋಗ್ಯದ ಸಮಸ್ಯೆ ಇಲ್ಲ ಎಂದರೆ, ನೀವು ಹಸಿಯಾಗಿರುವ ಮೊಳಕೆ ಕಾಳುಗಳನ್ನು ಸೇವಿಸಿಯು ಯಾವುದೇ ಸಮಸ್ಯೆ ಅನುಭವಿಸದೆ ಇದ್ದರೆ ಖಂಡಿತವಾಗಿಯೂ ಇದನ್ನು ಮುಂದುವರಿಸಿ. ಒಂದು ವೇಳೆ ನಿಮಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗಿಲ್ಲ ಎಂಬುದು ಅರಿವಾದರೆ ಸೇವಿಸುವ ಆಹಾರದಲ್ಲಿ ಬೆರೆಸಿಕೊಂಡು ತಿನ್ನಬಹುದು ಸಲಾಡ್ ಅಥವಾ ಅನ್ನದೊಂದಿಗೆ ಬೇಯಿಸಿದ ಮೊಳಕೆ ಕಾಳುಗಳನ್ನು ಸೇವಿಸಿದರೆ ಇನ್ನೂ ಆರೋಗ್ಯಕರವಾಗಿರುತ್ತದೆ.
ಹಾಗಾಗಿ ಹಸಿಯಾಗಿರುವ ಮೊಳಕೆ ಕಾಳುಗಳು ಅಥವಾ ಬೇಯಿಸಿದ ಮೊಳಕೆ ಕಾಳುಗಳು ಇವೆರಡರಲ್ಲಿ ಯಾವುದನ್ನು ಬೇಕಾದರೂ ಸೇವಿಸಬಹುದು. ಆದರೆ ನಿಮ್ಮ ಆರೋಗ್ಯದ ದೃಷ್ಟಿಯಿಂದ ಯಾವುದು ಉತ್ತಮ ಎನ್ನುವುದನ್ನು ಮೊದಲು ಖಚಿತಪಡಿಸಿಕೊಳ್ಳಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











