Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೂರ್ಛೆರೋಗ ಮುಟ್ಟಿನ ಸಮಸ್ಯೆದಲ್ಲಿ ಹೆಚ್ಚಾಗಿ ಬರುವುದೇಕೆ? ಇದರಿಂದ ಬಂಜೆತನ ಕಾಡುವುದೇ?
ಕೆಲವರಿಗೆ ಮೂರ್ಛೆ ರೋಗದ ಸಮಸ್ಯೆ ಕಂಡು ಬರುವುದು, ಅದರಲ್ಲೂ ಮಹಿಳೆಯರಲ್ಲಿ ಮೂರ್ಛೆ ರೋಗ ಹಾಗೂ ಹಾರ್ಮೋನ್‌ಗಳ ವ್ಯತ್ಯಾಸಕ್ಕೆ ಸಂಬಂಧವಿದೆ. ಮೂರ್ಛೆರೋಗ ಹೊಂದಿರುವ ಮಹಿಳೆಯರಲ್ಲಿ, ಸೆಳೆತಗಳು ಹಾರ್ಮೋನುಗಳ ಮೇಲೆ ಪರಿಣಾಮ ಬೀರಬಹುದು, ಇದು ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವುದು.
ಮೂರ್ಛೆ ರೋಗ ಇರುವ ಮಹಿಳೆಯರಲ್ಲಿ ಈ ಬಗೆಯ ಸಮಸ್ಯೆಗಳು ಕಂಡು ಬರುವುದು ಸಾಮಾನ್ಯ
ಮೂರ್ಛೆ ರೋಗ ಇರುವವರೆಗೆ ಸರಿಯಾಗಿ ಮುಟ್ಟು ಆಗದೇ ಇರುವುದು ಅಂದರೆ ಅಕಾಲಿಕ ಋತುಬಂಧ ಮತ್ತು ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್ ಈ ಬಗೆಯ ಸಮಸ್ಯೆಗಳು ಕಂಡು ಬರುವುದು. ಈ ಬಗೆಯ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು.

ಮಹಿಳಾ ಮೂರ್ಛೆರೋಗಿಗಳು ಸಾಮಾನ್ಯವಾಗಿ ತಮ್ಮ ಋತುಚಕ್ರದ ಸಮಯದಲ್ಲಿ ಸೆಳೆತಗಳನ್ನು(ಮೂರ್ಛೆ ಹೋಗುವುದು) ಅ ಕಂಡು ಬರುವುದು, ಈ ಸಮಸ್ಯೆಗೆ ಕ್ಯಾಟಮೆನಿಯಲ್ ಎಪಿಲೆಪ್ಸಿ (CE) ಎಂದು ಕರೆಯಲಾಗುವುದು. ಹರ್ಜಾಗ್ ಪ್ರಕಾರ, ಈ ಸೆಳೆತದ ಮಾದರಿಗಳು ಋತುಚಕ್ರದೊಂದಿಗೆ ಏರಿಳಿತಗೊಳ್ಳುತ್ತವೆ ಮತ್ತು ಚಕ್ರದ ನಿರ್ದಿಷ್ಟ ಹಂತಗಳಲ್ಲಿ, ವಿಶೇಷವಾಗಿ ಮುಟ್ಟಿನ ಸಮಯದಲ್ಲಿ ದೈನಂದಿನ ಸೆಳೆತ(ಮೂರ್ಛೆ ಹೋಗುವುದು) ಎರಡು ಪಟ್ಟು ಹೆಚ್ಚಾಗುತ್ತದೆ.
ಮೂರ್ಛೆರೋಗದಲ್ಲಿ ಹಾರ್ಮೋನ್ ಬದಲಾವಣೆಗಳ ಪಾತ್ರ:
ಮಹಿಳೆಯರ ಸಂತಾನೋತ್ಪತ್ತಿ ಸಾಮರ್ಥ್ಯ ಮೇಲೆ ಎರಡು ಪ್ರಮುಖ ಹಾರ್ಮೋನುಗಳಾದ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಮಹತ್ವದ ಪಾತ್ರವನ್ನು ವಹಿಸುತ್ತವೆ. ಪ್ರಾಣಿ ಮತ್ತು ಮಾನವರ ಮೇಲಿನ ಅಧ್ಯಯನಗಳಲ್ಲಿ, ಸಂಶೋಧನೆಯು ಈಸ್ಟ್ರೊಜೆನ್ ಮೂರ್ಛೆಯನ್ನು ಪ್ರಚೋದಿಸುತ್ತದೆ, ಆ ಮೂಲಕ NMDA ರೆಸೆಪ್ಟರ್ ಗಳು ಮತ್ತು ಗ್ಲುಟಮೇಟ್ ಮಾರ್ಗಗಳ ಮೇಲೆ ಪ್ರಭಾವ ಬೀರುತ್ತವೆ ಎಂದು ತಿಳಿದಿರುತ್ತದೆ. ಆದರೆ ಪ್ರೊಜೆಸ್ಟರಾನ್ GABA ರೆಸೆಪ್ಟರ್ ಗಳ ಮೇಲೆ ಪ್ರಭಾವ ಬೀರುವ ಮೂಲಕ ಆಂಟಿ-ಸೀಝರ್-ತರಹದ ಪರಿಣಾಮ ಉಂಟು ಮಾಡುತ್ತದೆ.
ಮುಟ್ಟಿನ ಸಮಯದಲ್ಲಿ ಹೆಚ್ಚಾಗುವ ಮೂರ್ಛೆ ರೋಗ
ಮಹಿಳೆಯರಲ್ಲಿ, ಕ್ಯಾಟಮೆನಿಯಲ್ ಎಪಿಲೆಪ್ಟಿಕ್ ಸೆಳೆತಗಳು ಮುಖ್ಯವಾಗಿ ಋತುಚಕ್ರದ ಸಮಯದಲ್ಲಿ ಉಂಟಾಗುತ್ತವೆ. ಈ ಸಮಸ್ಯೆ ಬೇರೆ ಸಮಯಗಿಂತ ಋತುಚಕ್ರ ಮತ್ತು ಅಂಡೋತ್ಪತ್ತಿ ಸಮಯದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದ್ದರಿಂದ ಮೂರ್ಛೆ ರೋಗ ಇರುವವರು ಈ ಸಮಯದಲ್ಲಿ ಹೆಚ್ಚಿನ ಜಾಗ್ರತೆವಹಿಸಬೇಕು.
ಚಿಕತ್ಸೆಯೇನು?
ಈ ರೀತಿಯಾದಾಗ ಪ್ರೊಜೆಸ್ಟರಾನ್ ಪೂರಕವನ್ನು ಯೋನಿ ಸಪೊಸಿಟರಿ ಅಥವಾ ಸ್ಟ್ಯಾಂಡರ್ಡ್ ಆಂಟಿ-ಎಪಿಲೆಪ್ಟಿಕ್ ಥೆರಪಿಗೆ ಪೂರಕವಾದ ಔಷಧಿಯಾಗಿದೆ. ಇದರ ಜೊತೆಗೆ, ಕ್ಯಾಟಮೆನಿಯಲ್ ಎಪಿಲೆಪ್ಸಿ ಹೊಂದಿರುವ ರೋಗಿಗಳಿಗೆ ಋತುಚಕ್ರದ ಸಮಯದಲ್ಲಿ ಉಂಟಾಗುವ ಸೆಳೆತಗಳು( ಸೀಝರ್ ) ಉಲ್ಬಣಗೊಳ್ಳುವುದನ್ನು ತಡೆಗಟ್ಟಲು ಕ್ಲೋಬಾಜಮ್, ಆಂಟಿ-ಎಪಿಲೆಪ್ಟಿಕ್ ಔಷಧಿಯನ್ನು ನೀಡಲಾಗುವುದು.
ಮೂರ್ಛೆರೋಗ ಇರುವ ಮಹಿಳೆಯರಲ್ಲಿ ಬಂಜೆತನದ ಸಮಸ್ಯೆ
ಇತರ ಮಹಿಳೆಯರಿಗೆ ಹೋಲಿಸಿದರೆ ಮೂರ್ಛೆರೋಗ ಇರುವ ಮಹಿಳೆಯರಲ್ಲಿ ಬಂಜೆತನದ ಸಮಸ್ಯೆ ಹೆಚ್ಚಾಗಿ ಕಂಡು ಬರುವುದು. ಮಹಿಳೆಯರಲ್ಲಿ ಸೆಳೆತಗಳು ಅಮೆನೋರಿಯಾ, ಅತಿ ಶೀಘ್ರ ಋತುಬಂಧ, ಸಮಯಕ್ಕೆ ಸರಿಯಾಗಿ ಮುಟ್ಟಾಗದಿರುವುದು ಮತ್ತು ಪಾಲಿಸಿಸ್ಟಿಕ್ ಅಂಡಾಶಯದ ಕಾಯಿಲೆಯಂತಹ ಹಾರ್ಮೋನ್ ಸಮಸ್ಯೆಗಳು ಉಂಟಾಗುವುದರಿಂದ ಮೂರ್ಛೆರೋಗ ಇರುವವರಿಗೆ ಮಕ್ಕಳಾಗಲು ಸಮಸ್ಯೆಗಳು ಎದುರಾಗುವುದು. ಈ ರೀತಿ ಹಾರ್ಮೋನ್‌ಗಳ ಬದಲಾವಣೆ ಮೂರ್ಛೆ ರೋಗ ಇರುವ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುವುದು.
ಸೂಕ್ತ ಚಿಕಿತ್ಸೆ ಕೊಡಿಸಿ
ಮೂರ್ಛೆರೋಗದ ಲಕ್ಷಣಗಳು ಕಂಡು ಬಂದರೆ ಚಿಕಿತ್ಸೆ ಕೊಡಿಸಿ, ವೈದ್ಯರ ಸಲಹೆ ಸೂಚನೆಯನ್ನು ಪಾಲಿಸಿ. ಹೀಗೆ ಮಾಡುವುದರಿಂದ ಈ ಕಾಯಿಲೆ ನಿಯಂತ್ರಣದಲ್ಲಿಡಬಹುದು.
ಈ ಲೇಖನವನ್ನು ಡಾ. ಸಂತೋಷ್ ಎನ್ ಎಸ್, ಕನ್ಸಲ್ಟೆಂಟ್ - ನ್ಯೂರಾಲಜಿ, ಮಣಿಪಾಲ್ ಹಾಸ್ಪಿಟಲ್ ವೈಟ್‌ಫೀಲ್ಡ್ ಮತ್ತು ಮಣಿಪಾಲ್ ಕ್ಲಿನಿಕ್ ಬ್ರೂಕ್‌ಫೀಲ್ಡ್ ಇವರು ಬರೆದಿದ್ದಾರೆ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications