Latest Updates
-
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು
ರಾಗಿ vs ಜೋಳದ ರೊಟ್ಟಿ: ತೂಕ ಇಳಿಕೆಗೆ ಯಾವುದು ಬೆಸ್ಟ್? ಡೌಟ್ ಕ್ಲಿಯರ್
ಡಯಟ್ ಡೌಟ್ ಕ್ಲಿಯರ್! ರಾಗಿ ರೊಟ್ಟಿಯೋ ಅಥವಾ ಜೋಳದ ರೊಟ್ಟಿಯೋ? ತೂಕ ಕಡಿಮೆ ಮಾಡಲು ಯಾವ ರೊಟ್ಟಿ ಸೂಕ್ತ? ಹೌದು, ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಳವು ಒಂದು ಸಾಮಾನ್ಯ ಸಮಸ್ಯೆಯಾಗಿದೆ. ತೂಕ ಇಳಿಸಲು ಜನರು ವ್ಯಾಯಾಮದ ಜೊತೆಗೆ ಆರೋಗ್ಯಕರ ಆಹಾರದತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ವಿಶೇಷವಾಗಿ, ಗೋಧಿಯ ರೊಟ್ಟಿಗಿಂತ ರಾಗಿಯ ರೊಟ್ಟಿ (ragi roti) ಮತ್ತು ಜೋಳದ ರೊಟ್ಟಿ (jowar roti) ಹೆಚ್ಚು ಉಪಯುಕ್ತ ಎಂದು ಪರಿಗಣಿಸಲಾಗಿದೆ.
ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಗೋಧಿಯ ರೊಟ್ಟಿಗಳನ್ನು ಸೇವಿಸಲಾಗುತ್ತದೆ. ಆದರೆ, ಆರೋಗ್ಯದ ಬಗ್ಗೆ ಕಾಳಜಿ ಇರುವವರು ಗೋಧಿಯ ರೊಟ್ಟಿಯಿಂದ ದೂರ ಉಳಿಯುತ್ತಾರೆ. ಏಕೆಂದರೆ, ಗೋಧಿಯಲ್ಲಿ ಕ್ಯಾಲೋರಿ ಮತ್ತು ಕಾರ್ಬೋಹೈಡ್ರೇಟ್‌ಗಳು ಹೆಚ್ಚಿರುತ್ತವೆ. ಹಾಗಾಗಿ, ತೂಕ ಇಳಿಕೆಯ ಗುರಿ ಹೊಂದಿರುವವರಿಗೆ ರಾಗಿಯ ರೊಟ್ಟಿ (ragi roti benefits) ಮತ್ತು ಜೋಳದ ರೊಟ್ಟಿ (Jowar roti benefits) ಉತ್ತಮ ಆಯ್ಕೆಗಳಾಗಿವೆ.

ತೂಕ ಇಳಿಸಿಕೊಳ್ಳುವವರಿಗೆ ಜೋಳ ಮತ್ತು ರಾಗಿ ರೊಟ್ಟಿ ಎರಡೂ ಉತ್ತಮ ಆಯ್ಕೆಗಳು. ಆರೋಗ್ಯಕರ ಆಹಾರ ಸೇವಿಸುವವರು ಹೆಚ್ಚಾಗಿ ಈ ಎರಡು ಧಾನ್ಯಗಳಿಗೆ ಪ್ರಾಮುಖ್ಯತೆ ನೀಡುತ್ತಾರೆ. ಇವು ತೂಕ ಇಳಿಕೆಯ ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಕೂಡ ಸಹಾಯ ಮಾಡುತ್ತವೆ. ಇವುಗಳ ಪೌಷ್ಟಿಕಾಂಶದ ಮೌಲ್ಯ ಮತ್ತು ಆರೋಗ್ಯ ಪ್ರಯೋಜನಗಳ ಬಗ್ಗೆ ವ್ಯಾಪಕವಾಗಿ ತಿಳಿದಿದ್ದರೂ, ತೂಕ ನಷ್ಟಕ್ಕೆ (weight loss) ಯಾವುದು ಹೆಚ್ಚು ಪರಿಣಾಮಕಾರಿ ಎಂಬ ಗೊಂದಲ ಬಹುತೇಕರನ್ನು ಕಾಡುತ್ತದೆ. ನಾವು ಈ ಲೇಖನದಲ್ಲಿ ಈ ಎರಡು ರೊಟ್ಟಿಗಳ (Ragi or Jowar Roti) ಬಗ್ಗೆ ವಿವರವಾಗಿ ತಿಳಿಸಿದ್ದೇವೆ.
ರಾಗಿ ರೊಟ್ಟಿಯ ಪೌಷ್ಠಿಕಾಂಶ ಮತ್ತು ಲಾಭಗಳು
• ರಾಗಿಯಲ್ಲಿ ಕ್ಯಾಲ್ಸಿಯಂ ಅತ್ಯಧಿಕ. ಆದ್ದರಿಂದ, ಇದು ಮೂಳೆಗಳು ಅಥವಾ ಎಲುಬುಗಳ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ.
• ರಾಗಿ ರೊಟ್ಟಿಯಲ್ಲಿ ಡೈಟರಿ (ಡಯಟರಿ) ಫೈಬರ್ ಮತ್ತು ಅಮಿನೋ ಆಸಿಡ್ (ಆಮ್ಲ) ಇರುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.
• ರಕ್ತದಲ್ಲಿನ ಬ್ಲಡ್ ಶುಗರ್ ಲೆವೆಲ್ (ಸಕ್ಕರೆ ಮಟ್ಟ) ನಿಯಂತ್ರಿಸಲು ಸಹಕಾರಿ.
• ಪದೇ ಪದೆ ಹಸಿವಾಗುವಿಕೆ ಅಥವಾ ತಿನ್ನುವ ಹಂಬಲವನ್ನು ತಡೆಗಟ್ಟುತ್ತದೆ.
• ಆಯರನ್‌ನ ಉತ್ತಮ ಮೂಲ.
• ದೀರ್ಘಾವಧಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ರಾಗಿ ರೊಟ್ಟಿ ಉತ್ತಮ.
ಜೋಳ ರೊಟ್ಟಿಯ ಪೌಷ್ಠಿಕಾಂಶ ಮತ್ತು ಲಾಭಗಳು
• ಜೋಳದಲ್ಲಿ ಪ್ರೋಟೀನ್, ಆಯರನ್ ಅಥವಾ ಕಬ್ಬಿಣ, ಫೈಬರ್ ಮತ್ತು ಆಂಟಿ-ಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ.
• ಇದರ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ, ಆದ್ದರಿಂದ ಬ್ಲಡ್ ಶುಗರ್ ಲೆವೆಲ್ ನಿಯಂತ್ರಣದಲ್ಲಿ ಇಡುತ್ತದೆ.
• ಹೊಟ್ಟೆ ಹೆಚ್ಚು ಹೊತ್ತು ತುಂಬಿದಂತೆ ಅನುಭವವಾಗುವುದರಿಂದ ಅತಿಯಾಗಿ ತಿನ್ನುವುದನ್ನು ತಡೆಗಟ್ಟುತ್ತದೆ.
• ಪ್ರೋಟೀನ್ ಮಸಲ್‌ಗಳ ಬೆಳವಣಿಗೆಗೆ ಸಹಾಯಕ.
• ಜೀರ್ಣಕ್ರಿಯೆಗೆ ಉತ್ತಮ.
• ತೂಕ ಇಳಿಸಿಕೊಳ್ಳಲು ಹಗುರವಾಗಿರುವುದರಿಂದ ಜೋಳ ರೊಟ್ಟಿ ಹೆಚ್ಚು ಅನುಕೂಲಕರ.
ತೂಕ ಇಳಿಕೆಗೆ ಯಾವುದು ಹೆಚ್ಚು ಪರಿಣಾಮಕಾರಿ?
ತೂಕ ಇಳಿಕೆಗೆ ರಾಗಿ ಮತ್ತು ಜೋಳ ಎರಡೂ ರೊಟ್ಟಿಗಳು ಪ್ರಯೋಜನಕಾರಿ. ಆದರೆ, ಜೋಳದ ರೊಟ್ಟಿಯಲ್ಲಿ ಕ್ಯಾಲೋರಿ ಅಂಶ ಕಡಿಮೆ ಇದ್ದು, ಜೀರ್ಣಿಸಿಕೊಳ್ಳಲು ಸುಲಭವಾಗಿದೆ. ಹಾಗಾಗಿ, ತೂಕ ಇಳಿಕೆಯ ದೃಷ್ಟಿಯಿಂದ ಜೋಳದ ರೊಟ್ಟಿ ಸ್ವಲ್ಪ ಹೆಚ್ಚು ಪ್ರಯೋಜನಕಾರಿ. ಇನ್ನು, ರಾಗಿ ರೊಟ್ಟಿ ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶದ ಉತ್ತಮ ಮೂಲವಾಗಿದ್ದು, ದೀರ್ಘಕಾಲೀನ ಆರೋಗ್ಯಕ್ಕೆ ಹೆಚ್ಚು ಸಹಾಯಕವಾಗಿದೆ.
ಒಟ್ಟಾರೆಯಾಗಿ, ಈ ಎರಡೂ ರೊಟ್ಟಿಗಳು ಅವುಗಳ ಪೋಷಕಾಂಶಗಳು ಮತ್ತು ಅಗಾಧವಾದ ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ನಿಮ್ಮ ಆಹಾರ ಪದ್ಧತಿಯಲ್ಲಿ ಈ ಎರಡನ್ನೂ ಸೇರಿಸಿಕೊಳ್ಳುವುದರಿಂದ ದೇಹಕ್ಕೆ ಸಮತೋಲಿತ ಪೋಷಕಾಂಶಗಳು ದೊರೆಯುತ್ತವೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

