Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮ್ಮ ಕಣ್ಣಿನಲ್ಲಿ ಈ ಲಕ್ಷಣವಿದ್ದರೆ ರೆಟಿನಾ ಸಮಸ್ಯೆ ಇರಬಹುದು..! ತಜ್ಞರು ಹೇಳೋದು ಹೀಗೆ
ರೆಟಿನಾ ನಮ್ಮ ಕಣ್ಣಿನ ಅತ್ಯಂತ ಪ್ರಮುಖ ಅಂಗ. ಕಣ್ಣಿನ ಹಿಂಭಾಗದಲ್ಲಿರುವ ಬೆಳಕು-ಸೂಕ್ಷ್ಮ ಪದರವು ರೆಟಿನಾ ಆಗಿದ್ದು, ಇದು ಬೆಳಕನ್ನು ವಿದ್ಯುತ್ ಸಂಕೇತಗಳಾಗಿ ಪರಿವರ್ತಿಸುತ್ತದೆ, ನಂತರ ಈ ಸಂದೇಶವು ಮೆದುಳಿಗೆ ತಲುಪುತ್ತದೆ. ಇದರಿಂದಾಗಿ ನಿಮಗೆ ಮುಂದಿನ ಚಿತ್ರಣ ಬಹಳ ಸ್ಪಷ್ಟವಾಗಿ ಕಾಣಿಸುತ್ತದೆ. ಆದರೆ ರೆಟಿನಾಗೆ ಹಾನಿಯಾದರೆ ಇಲ್ಲವೆ ರೆಟಿನಾ ಸಮಸ್ಯೆ ಕಾಣಿಸಿಕೊಂಡರೆ ದೃಷ್ಟಿದೋಷ ಉಂಟಾಗುವುದು ನೋಡಬಹುದು. ಸಾಮಾನ್ಯ ದೃಷ್ಟಿ ದೋಷ ಪ್ರಕರಣಗಳಲ್ಲಿ ಇದನ್ನು ನೋಡಬಹುದು.
ವಿಶ್ವದಾದ್ಯಂತ ಒಂದು ಅಂದಾಜಿನ ಪ್ರಕಾರ, ಜಾಗತಿಕವಾಗಿ ಅಂದಾಜು 43 ಮಿಲಿಯನ್ ಜನರು ಕುರುಡರಾಗಿದ್ದಾರೆ, ಇನ್ನೂ 295 ಮಿಲಿಯನ್ ಜನರು ಮಧ್ಯಮ
ದೃಷ್ಟಿಹೀನತೆಯನ್ನು ಅನುಭವಿಸುತ್ತಿದ್ದಾರೆ. ಈ ಸಂಖ್ಯೆ ಎಲ್ಲಾ ದೇಶಗಳಲ್ಲೂ ನೋಡಬಹುದು ಹಾಗೆ ಇದಕ್ಕೆ ಹಲವಾರು ಕಾರಣಗಳು ಸಹ ಪಟ್ಟಿ ಮಾಡಬಹುದು.

ಹಾಗೆ ಕಣ್ಣಿನ ಸಮಸ್ಯೆಗಳ ಕುರಿತಾದ ಜಾಗೃತಿ ಇಲ್ಲದಿರುವುದು ಹಾಗೆ ಅದರಿಂದಾಗುವ ಅನಾಹುತಗಳ ಕುರಿತಾದ ಮಾಹಿತಿಯ ಕೊರತೆಯು ಹಲವರಲ್ಲಿ ಅಪಾಯ ಹೆಚ್ಚಾಗಲು ಕಾರಣವಾಗುತ್ತಿದೆ. ಹೀಗಾಗಿ ನಾವಿಂದು ಬೆಂಗಳೂರಿನ ನೇತ್ರಾ ಕಣ್ಣಿನ ಆಸ್ಪತ್ರೆ ನಿರ್ದೇಶಕರು ಹಾಗೂ ವಿಟ್ರಿಯೊ ರೆಟಿನಾ ಸಲಹೆಗಾರರಾದ ಡಾ. ಶ್ರೀಭಾರ್ಗವ ನಟೇಶ್ ಅವರ ಬಳಿ ಈ ರೆಟಿನಾ ಸಮಸ್ಯೆ ಹಾಗೂ ಕುರುಡುತನ ಸಂಬಂಧ ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ.
ದೃಷ್ಟಿ ನಷ್ಟದಿಂದಾಗಿ ನಿರಂತರವಾಗಿ ಹೆಚ್ಚುತ್ತಿರುವ ಸಾಮಾಜಿಕ-ಆರ್ಥಿಕ ಹೊರೆಯು ಜಾಗತಿಕವಾಗಿ ಹಾಗೂ ಭಾರತದಲ್ಲಿ ಬೆಳೆಯುತ್ತಿರುವ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ. ಜಾಗತಿಕವಾಗಿ ರಕ್ತಹೀನತೆ ಮತ್ತು ಶ್ರವಣ ದೋಷದ ಬಳಿಕ ಅತ್ಯಧಿಕವಾಗಿ ಕಾಡುವ ಒಂದು ಸಮಸ್ಯೆ ಇದಾಗಿದೆ. ಕಣ್ಣಿನ ಪೊರೆ, ಗ್ಲುಕೋಮಾದಂತಹ ಸಮಸ್ಯೆಗಳು ನಿರಂತರವಾಗಿ ಅಧಿಕಾವಾಗುತ್ತಿದೆ.
ಜಾಗತಿಕವಾಗಿ ರೆಟಿನಾದ ಕಾಯಿಲೆಗಳು ಸುಮಾರು ಶೇ.6ರಷ್ಟು ಕುರುಡುತನಕ್ಕೆ ಕಾರಣವಾಗಿವೆ. ರಕ್ತದಲ್ಲಿರುವ ಅನಿಯಂತ್ರಿತ ಸಕ್ಕರೆ ಮಟ್ಟಗಳು ಹಾಗೂ ವಯಸ್ಸಿನ ಪರಿಣಾಮವಾಗಿ ಉಂಟಾಗಬಹುದಾದ ಕೆಲವು ರೆಟಿನಾದ ಸಮಸ್ಯೆಗಳು ಇತ್ತೀಚಿಗೆ ಕುರುಡುತನಕ್ಕೆ ಕಾರಣವಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.
ರೆಟಿನಾದ ನರ ಕೋಶಗಳಿಗೆ ಉಂಟಾಗುವ ಹಾನಿಯನ್ನು ಸರಿ ಮಾಡಲು ಬರುವುದಿಲ್ಲ ಇದು ದೃಷ್ಟಿಯನ್ನು ಹೆಚ್ಚು ದುರ್ಬಲಗೊಳಿಸುವ, ಗಾಯದ ಅಪಾಯ ಮತ್ತು ಶಾಶ್ವತವಾದ ಕುರುಡುತನಕ್ಕೂ ಕಾರಣವಾಗಬಹುದು. ಇನ್ನು ಭಾರತದಲ್ಲಿ ನೇತ್ರ ತಜ್ಞರ ಸಂಖ್ಯೆ ಕೂಡ ಬಹಳ ಕಡಿಮೆ ಇದೆ. ಅದರಲ್ಲೂ ರೆಟಿನಾ ಸಂಬಂಧಿ ಸಮಸ್ಯೆಗಳ ಬಗೆಹರಿಸಲು ತಜ್ಞರ ಅಗತ್ಯ ಬಹಳಷ್ಟಿದೆ. ಆದರೆ ಭಾರತದಲ್ಲಿ ಕೇವಲ 5% ರಿಂದ 8% ರಷ್ಟು ಮಾತ್ರವೇ ರೆಟಿನಾದಲ್ಲಿ ಪರಿಣತಿಯನ್ನು ಹೊಂದಿರುವವರಿದ್ದಾರೆ. ಅವರೆಲ್ಲ ದೊಡ್ಡ ನಗರದಲ್ಲಿ ದೊಡ್ಡ ಆಸ್ಪತ್ರೆಯ ವೈದ್ಯರಾಗಿರುತ್ತಾರೆ ಎಂದು ಡಾ. ಶ್ರೀಭಾರ್ಗವ ನಟೇಶ್ ಮಾಹಿತಿ ಹಂಚಿಕೊಂಡಿದ್ದಾರೆ.
ರೆಟಿನಾ ಸಮಸ್ಯೆಯ ಪ್ರಮುಖ ಲಕ್ಷಣಗಳೇನು?
- ಏಕಾಏಕಿ ದೃಷ್ಟಿ ಮಂದವಾಗುವುದು
- ನೇರವಾದ ಗೆರೆ ವಕ್ರವಕ್ರವಾಗಿ ಕಾಣಿಸುವುದು
- ಕಣ್ಣ ಮುಂದಿನ ಒಂದು ಭಾಗ ಕಾಣಿಸದೆ ಇರುವುದು
- ಮಂಜು ಮುಸುಕಿದಂತೆ ಆಗುವುದು
- ಕಣ್ಣಿನಲ್ಲಿ ಪರದೆ ಹಾಕಿದಂತಹ ಭಾವನೆ
ರೆಟಿನಾ ದೃಷ್ಟಿ ಸಮಸ್ಯೆಗೆ ಪರಿಹಾರವೇನು?
ರೆಟಿನಾ ಸಮಸ್ಯೆಗೆ ಸಾಂಪ್ರದಾಯಿಕ ಚಿಕಿತ್ಸಾ ಮಾದರಿಗಳು ಈಗ ನಡೆಯುತ್ತಿಲ್ಲ. ಅತ್ಯಾಧುನಿಕ ತಂತ್ರಜ್ಞಾನಗಳ ಬಳಸಿ ಚಿಕಿತ್ಸೆ ನೀಡಲಾಗುತ್ತದೆ. ರೆಟಿನಾ ಸಮಸ್ಯೆ ಇರುವವರಲ್ಲಿ ಪ್ರಮುಖವಾಗಿ ಕಣ್ಣಿಗೆ ಸಂಬಂಧಿಸಿದ ರಕ್ತನಾಳಗಳು ಊದಿಕೊಳ್ಳುವುದು ನೋಡಬಹುದು. ಹೀಗಾಗಿ ಮೊದಲು ಈ ರಕ್ತನಾಳಗಳ ಚಿಕಿತ್ಸೆ ಮಾಡಬೇಕಾಗುತ್ತದೆ. ಉರಿಯೂತ ಸಮಸ್ಯೆಗಳ ನಿವಾರಣೆಗಾಗಿ ವಿಇಜಿಎಫ್ VEGF (Anti-Vascular Endothelial Growth Factor) ಎಂಬ ಚಿಕಿತ್ಸಾ ಮಾರ್ಗ ಅನುಸರಿಸಲಾಗುತ್ತದೆ. ಹಾಗೆಸ IVT (ಇಂಟ್ರಾವಿಟ್ರೀಯಲ್ ಇಂಜೆಕ್ಷನ್) ಎಂಬ ಚಿಕಿತ್ಸಾ ವಿಧಾನ ಕೂಡ ಇದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications









