Latest Updates
-
ಜುಲೈ 17: ದಂಪತಿಗಳ ನಡುವಿನ ಮನಸ್ತಾಪ ದೂರವಾಗಿಸಲು ಈ ಸರಳ ಟಿಪ್ಸ್ ಪಾಲಿಸಿ! -
ದೆಹಲಿಯ ಸೆಖೆ ಮತ್ತು ಆರ್ದ್ರತೆ: ಕರೆಂಟ್ ಬಿಲ್ ಉಳಿಸಿ, ಮನೆಯನ್ನು ತಂಪಾಗಿರಿಸುವ ಸ್ಮಾರ್ಟ್ ಟಿಪ್ಸ್! -
ಬೆಲೆ ಏರಿಕೆಯ ಬಿಸಿ: ಟೊಮೆಟೊ, ಈರುಳ್ಳಿ ಇಲ್ಲದೆ ರುಚಿಕರ ಮತ್ತು ಪೌಷ್ಟಿಕ ಅಡುಗೆ ಮಾಡುವುದು ಹೇಗೆ? -
IND vs ENG ODI: ಇಂದಿನ ಹೈ-ವೋಲ್ಟೇಜ್ ಪಂದ್ಯದ ನೇರ ಪ್ರಸಾರ ಮತ್ತು ಕನ್ನಡ ಕಾಮೆಂಟರಿ ಮಿಸ್ ಮಾಡ್ಬೇಡಿ! -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಈ 7 ನಿಮಿಷದ ರೂಟೀನ್ ನಿಮ್ಮನ್ನು ರಕ್ಷಿಸುತ್ತದೆ! -
ಬೆಂಗಳೂರಿನಲ್ಲಿ ಇಂದೇ ವಿದ್ಯುತ್ ಕಡಿತ: ನಿಮ್ಮ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸುರಕ್ಷಿತವಾಗಿಡುವುದು ಹೇಗೆ? -
ಕರ್ಕ ಸಂಕ್ರಾಂತಿ ವಿಶೇಷ: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಜಗನ್ನಾಥ ರಥಯಾತ್ರೆ 2026: ಸಂಚಾರ ಮಾರ್ಗ ಬದಲಾವಣೆ, ಭಕ್ತರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ! -
ನೀಟ್ ಪರೀಕ್ಷೆಯ ಆತಂಕವೇ? ಈ 6 ನಿಮಿಷದ ವ್ಯಾಯಾಮ ನಿಮ್ಮ ಒತ್ತಡವನ್ನು ಮರೆಸುತ್ತದೆ! -
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ!
ಪಿಂಕ್ ಐ(ಕಣ್ಣು ಕೆಂಪಾಗುವುದು) ಸಮಸ್ಯೆಗೆ ಈ ಮನೆಮದ್ದು ಒಳ್ಳೆಯದು
ಪಿಂಕ್ ಅಥವಾ ಮದ್ರಾಸ್ ಐ ಸಮಸ್ಯೆ ಹೆಚ್ಚಾಗುತ್ತಿದೆ, ಈ ಸಮಸ್ಯೆ ಮಕ್ಕಳಿಗಿಂತ ದೊಡ್ಡವರಿಗೆ ಬಂದರೆ ಬೇಗನೆ ಕಡಿಮೆಯಾಗಲ್ಲ ಎಂದು ತಜ್ಷರು ಹೇಳುತ್ತಿದ್ದಾರೆ. ಮದ್ರಾಸ್ ಐ ಎಂಬುವುದು ಕಣ್ಣುಗಳು ಕೆಂಪಗಾಗುವುದು, ಈ ಸಮಸ್ಯೆ ಶಾಲೆಗೆ ಹೋಗುವ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುವುದು. ಮನೆಯಲ್ಲಿ ಮಗುವಿಗೆ ಬಂದ್ರೆ ಮನೆ ಮಂದಿಗೆಲ್ಲಾ ಹರಡುವುದು.

ಮದ್ರಾಸ್ ಐ ಒಬ್ಬರಿಂದ ಮತ್ತೊಬ್ಬರಿಗೆ ಹೇಗೆ ಹರಡುವುದು?
ಮದ್ರಾಸ್ ಐ ಅಥವಾ ಪಿಂಕ್ ಐ ಸಮಸ್ಯೆ ಬಂದರೆ ಕಣ್ಣುಗಳನ್ನು ಮುಟ್ಟಿ ಮೊಬೈಲ್ ಹಿಡಿಯುವುದು, ಯಾವುದಾದರೂ ವಸ್ತುಗಳನ್ನು ಮುಟ್ಟುವುದು ಮಾಡಿದರೆ ಆ ವಸ್ತುಗಳನ್ನು ಬೇರೆಯವರು ಮುಟ್ಟಿದರೆ ಅವರಿಗೆ ಹರಡುವುದು. ಮದ್ರಾಸ್ ಐ ಉಂಟಾದರೆ 2 ವಾರಗಳವರೆಗೆ ರೋಗವನ್ನು ಮತ್ತೊಬ್ಬರಿಗೆ ಹರಡುವ ಸಾಧ್ಯತೆ ಇರುವುದರಿಂದ ಈ ಸಮಸ್ಯೆ ಬಂದರೆ ಸಂಪೂರ್ಣ ಗುಣಮುಖವಾಗುವವರೆಗೆ ಶಾಲೆಗೆ ಕಳುಹಿಸಬೇಡಿ, ಇಲ್ಲದಿದ್ದರೆ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು.
ತಡೆಗಟ್ಟುವುದು ಹೇಗೆ?
ಮದ್ರಾಸ್ ಐ ಮನೆಯಲ್ಲಿ ಒಬ್ಬರಿಗೆ ಬಂದ್ರೆ ಸಾಕು ಉಳಿದವರಿಗೂ ಹರಡುವುದು ಇದನ್ನು ತಡೆಗಟ್ಟಲು ಆಗಾಗ ಕೈ ತೊಳೆಯಬೇಕು, ಅಲ್ಲದೆ ಕಣ್ಣುಗಳನ್ನು ಆಗಾಗ ಮುಟ್ಟಬಾರದು. ಐ ಫ್ಲೂ ಬಂದ್ರೆ ಈ ರೀತಿ ಮಾಡುವುದರಿಂದ ಬೇಗನೆ ಕಡಿಮೆಯಾಗುವುದು.
ಐ ಡ್ರಾಪ್ ಮತ್ತು ಆಯಿಂಟ್ಮೆಂಟ್
ವೈದ್ಯರು ನಿಮಗೆ ಆ್ಯಂಟಿಬಯೋಟಿಕ್ ಅಥವಾ ಆ್ಯಂಟಿವೈರಲ್ ಐ ಡ್ರಾಪ್ ಬಳಸಿ. ವೈದ್ಯರು ಸೂಚಿಸಿದಷ್ಟು ದಿನ ಬಳಸಿ.
ನೋವು ನಿವಾರಕ ಔಷಧಿ ಬಳಸಿ: ತುಂಬಾ ನೋವು ಇದ್ದರೆ ನೋವು ನಿವಾರಕಗಳನ್ನು ಬಳಸಿ, ಆದರೆ ಬಳಸುವ ಮುನ್ನ ವೈದ್ಯರ ಸಲಹೆ ಪಡೆಯಿರಿ.
ತ್ರಿಫಲ ಐ ವಾಶ್ ಬಳಸಿ: ತ್ರಿಫಲ ಎಂಬುವುದು ಆಯುರ್ವೇದದಲ್ಲಿ ಬಳಸುವ ಔಷಧಿಯಾಗಿದ್ದು ನೀರಿಗೆ ತ್ರಿಫಲ ಪುಡಿ ಹಾಕಿ ನಂತರ ಸೋಸಿ ಆ ನೀರಿನಿಂದ ಕಣ್ಣು ತೊಳೆಯಿರಿ.
ರೋಸ್ ವಾಟರ್ ಕಂಪ್ರೆಸ್: ರೋಸ್ ವಾಟರ್ ಉರಿಯೂತ ಕಡಿಮೆ ಮಾಡುವುದರಿಂದ ಸ್ವಲ್ಪ ಕಾಟನ್‌ಗೆ ರೋಸ್ ವಾಟರ್ ಹಾಕಿ ಕಣ್ಣಿನ ಮೇಲೆ ಅದ್ದಿ.
ಶುದ್ಧ ತುಪ್ಪ ಅಥವಾ ತೆಂಗಿನೆಣ್ಣೆಯಿಂದ ಕಣ್ಣಿಗೆ ಮಸಾಜ್ ಮಾಡಿ: ಶುದ್ಧ ತುಪ್ಪ ಅಥವಾ ಶುದ್ಧವಾದ ತೆಂಗಿನೆಣ್ಣೆ ತೆಗೆದು ಅದರಿಂದ ಕಣ್ಣಿನ ಮೇಲೆ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ಸೋಂಕು ಹರಡುವುದನ್ನು ತಡೆಗಟ್ಟಬಹುದು.
ವಾರ್ಮ್ ಕಂಪ್ರೆಸ್: ಕಣ್ಣು ತುಂಬಾ ಕಿರಿಕಿರ ಅನಿಸುತ್ತಿದ್ದರೆ ವಾರ್ಮ್ ಕಂಪ್ರೆಸ್ ನೀಡಿ, ಆದರೆ ಕಣ್ಣಿನ ಮೇಲೆ ಇಡುವುದರಿಂದ ಬಿಸಿ ಹದವಾಗಿರಲಿ.
ಕೋಲ್ಡ್ ಕಂಪ್ರೆಸ್: ಕೋಲ್ಡ್ ಕಂಪ್ರೆಸ್ ಕೂಡ ನೋವು ಕಡಿಮೆ ಮಾಡಲು ಸಹಕಾರಿಯಾಗಿದೆ. ಬಟ್ಟೆಯನ್ನು ತಣ್ಣೀರಿನಲ್ಲಿ ಅದ್ದಿ ಆ ಬಟ್ಟೆಯನ್ನು ಮೆಲ್ಲನೆ ಕಣ್ಣಿನ ಮೇಲೆ ಇಡಿ. ಐಸ್ ಅನ್ನು ಬೇಕಾದರೆ ಕಣ್ಣಿನ ಮೇಲೆ ಇಡಬಹುದು.
ಮೇಕಪ್ ಬಳಸಬೇಡಿ
ಪಿಂಕ್ ಐ ಆದಾಗ ಕಣ್ಣಿಗೆ ಯಾವುದೇ ಮೇಕಪ್ ಹಾಕಬೇಡಿ. ಇದರಿಂದ ಸೋಂಕು ಹೆಚ್ಚಾಗುವುದು.
ಪಿಂಕ್ ಐ ಸಮಸ್ಯೆ ಬಂದ 3-4 ದಿನಗಳಲ್ಲಿ ಕಡಿಮೆಯಾಗುವುದು, ಆದರೆ 10 ದಿನ ಕಳೆದರೂ ಕಡಿಮೆಯಾಗದಿದ್ದರೆ ವೈದ್ಯರಿಗೆ ತೋರಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications