Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಕೊರೊನಾ ಲಸಿಕೆ: ಕೆಲವರಿಗೆ ಅಡ್ಡಪರಿಣಾಮವಾಗಿದೆ ಎಂದು ಮೊದಲ ಬಾರಿಗೆ ಒಪ್ಪಿಕೊಂಡ ಕೋವಿಶೀಲ್ಡ್ ತಯಾರಿಸಿದ ಕಂಪನಿ
ಕೊರೊನಾ ಅಟ್ಟಹಾಸ ಹಾಕುತ್ತಿದ್ದಾಗ ಅದನ್ನು ನಿಯಂತ್ರಿಸಲು ಬಂದಿದ್ದೇ ಕೊರೊನಾ ಲಸಿಕೆ, ಕೊರೊನಾ ಲಸಿಕೆ ಪಡೆದ ಮೇಲೆ ಕೊರೊನಾವನ್ನು ನಿಯಂತ್ರಿಸಲು ಸಾಧ್ಯವಾಯ್ತು, ಆದರೆ ಕೊರೊನಾ ಲಸಿಕೆಯಿಂದ ಏನಾದರೂ ಅಡ್ಡಪರಿಣಾಮವಿದೆಯೇ ಎಂಬ ಸಂಶಯ ಜನಸಾಮಾನ್ಯರಲ್ಲಿ ಇತ್ತು.

ಆದರೆ ಅದನ್ನು ತಯಾರಿಸಿದ ಔಷಧ ಕಂಪನಿಗಳು ದೊಡ್ಡ ಅಡ್ಡ ಸಮಸ್ಯೆಯಿಲ್ಲ ಇಲ್ಲ ಎಂದೇ ವಾದಿಸಿತು, ಆದರೆ ಇದೆ ಮೊದಲ ಬಾರಿಗೆ ಆಸ್ಟ್ರಾಜೆನಿಕಾ (AstraZeneca) ಕೊರೊನಾದಿಂದ ಅಡ್ಡಪರಿಣಾಮವಿದೆ ಎಂಬುವುದನ್ನು ಒಪ್ಪಿಕೊಂಡಿದೆ.
ದಿ ಆಕ್ಸ್‌ಫರ್ಡ್ ಆಸ್ಟ್ರಾಜೆನೆಕಾ ಕೋವಿಡ್ ಲಸಿಕೆ ಕೋವಿಶೀಲ್ಡ್, ವ್ಯಾಕ್ಸ್‌ಜೆವೆರಿಯಾ ಮುಂತಾದ ಬ್ರ್ಯಾಂಡ್‌ನ ಅಡಿಯಲ್ಲಿ ಲಸಿಕೆಯನ್ನು ನೀಡಿದೆ. ಈ ಕಂಪನಿ ವಿರುದ್ಧ ಕೋರ್ಟ್‌ನಲ್ಲಿ ಕೇಸ್ ಹಾಕಲಾಗಿತ್ತು. ಲಸಿಕೆ ಪಡೆದ ಬಳಿಕ ಗಂಭೀರ ಅಡ್ಡಪರಿಣಾಮ ಹಾಗೂ ಸಾವು ಸಂಭವಿಸಿರುವುದರಿಂದ ಕಂಪನಿ ವಿರುದ್ಧ ಕೋರ್ಟ್‌ನಲ್ಲಿ ಕೇಸ್ ಹಾಕಲಾಗಿತ್ತು.ಹಲವಾರು ಜನರು ಈ ಲಸಿಕೆ ವಿರುದ್ಧ ಕೇಸ್ ಹಾಕಿದ್ದರು.
ಮೊದಲಿಗೆ ಜಮೈ ಸ್ಕಾಟ್ ಎಂಬವವರು ಕೇಸ್ ಹಾಕಿದ್ದರು. 2021ರಲ್ಲಿ ಲಸಿಕೆ ಪಡೆದ ಬಳಿಕ ಅವರ ಮೆದುಳಿಗೆ ಹಾನಿಯಾಗಿತ್ತು, ಇನ್ನು ಅನೇಕರು ತಮಗಾದ ಸಮಸ್ಯೆ ಬಗ್ಗೆ ಹೇಳಿ ಕೇಸ್ ದಾಖಲಿಸಿದ್ದರು. ಇದರ ಬಗ್ಗೆ ದಾಖಲೆ ಸಂಗ್ರಹಿಸಿ ಯುಕೆ ಕೋರ್ಟ್‌ಗೆ ನೀಡಲಾಯ್ತು.
ಈ ಕೇಸ್‌ನ ವಿಚಾರಣೆಯಲ್ಲಿ ಕಂಪನಿಯು ಕೊರೊನಾ ಲಸಿಕೆ ಅಡ್ಡಪರಿಣಾಮ ಬೀರುವುದು ಎಂಬುವುದಾಗಿ ಒಪ್ಪಿಕೊಂಡಿದೆ.
ಕೊರೊನಾ ಲಸಿಕೆಯಿಂದ TTS ಉಂಟಾಗುತ್ತಿದೆ
TTS (TTS - Thrombosis with Thrombocytopenia Syndrome) ಎಂದರೆ ಕೊರೊನಾ ಲಸಿಕೆ ಪಡೆದಾಗ ಬರುವ ಅಪರೂಪದ ಸಮಸ್ಯೆಯಾಗಿದೆ. ಇದೊಂದು ಗಂಭೀರ ಸಮಸ್ಯೆಯಾಗಿದೆ. ಇದರಿಂದ ರಕ್ತಹೆಪ್ಪುಗಟ್ಟುವುದು, ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾಗುವುದು.
ರಕ್ತ ಹೆಪ್ಪುಗಟ್ಟಿದಾಗ ರಕ್ತನಾಳಗಳಲ್ಲಿ ರಕ್ತ ಸಂಚಾರಕ್ಕೆ ತೊಂದರೆಯಾಗುವುದು, ಇನ್ನು ಪ್ಲೇಟ್‌ಲೆಟ್ ಕಡಿಮೆಯಾದರೆ ಅತ್ಯಧಿಕ ರಕ್ತಸ್ರಾವ ಉಂಟಾಗುವುದು, ಇದೆರಡೂ ತುಂಬಾನೇ ಅಪಾಯಕಾರಿಯಾಗಿದೆ.
ಸಾಮಾನ್ಯವಾಗಿ ಈ ರೀತಿ ಮೆದುಳಿನಲ್ಲಿ ಉಂಟಾಗುವುದು ಅಥವಾ ಕಿಬ್ಬೊಟ್ಟೆಯಲ್ಲಿ ಸಂಭವಿಸುವುದು.
ಬಲು ಅಪರೂಪದ ಕಾಯಿಲೆ
ಲಸಿಕೆ ಪಡೆದ ಎಲ್ಲರಿಗೂ ಈ ರೀತಿ ಸಂಭವಿಸುವುದಿಲ್ಲ, ಕೋಟಿಯಲ್ಲಿ ಒಬ್ಬರಿಗೆ ಈ ರೀತಿಯಾಗಬಹುದು, ಆದರೆ ಇದು ತುಂಬಾನೇ ಅಪಾಯಕಾರಿಯಾದ ಸಮಸ್ಯೆಯಾಗಿದೆ.
ಇದರ ಲಕ್ಷಣಗಳನ್ನು ಗುರುತಿಸಬಹುದೇ?
ಟಿಟಿಎಸ್ ಆದಾಗ ಇದರ ಲಕ್ಷಣಗಳನ್ನು ಕೂಡಲೇ ಕಂಡು ಹಿಡಿಯಬಹುದು, ಇಂಜೆಕ್ಷನ್ ಪಡೆದ ಜಾಗದಲ್ಲಿ ರಕ್ತ ಹೆಪ್ಪುಗಟ್ಟಿದಂತಾಗುವುದು.
TTS ಆದಾಗ ಆ ವ್ಯಕ್ತಿಯ ಮೇಲೆ ತುಂಬಾನೇ ಪರಿಣಾಮ ಬೀರುವುದು, ಆದ್ದರಿಂದ ಆರ್ಥಿಕವಾಗಿ ಮನೆಯವರಿಗೂ ತೊದರೆಯಾಗುವುದು, ವ್ಯಕ್ತಿಗೆ ಕೆಲಸ ಮಾಡಲು ಕಷ್ಟವಾಗುವುದು, ಇದೀಗಾ ಆಸ್ಟ್ರಾ ಜೆನಿಕಾ ಈ ರೀತಿಯೂ ಆಗಬಹುದು ಎಂಬುವುದನ್ನು ಯುಕೆ ಕೋರ್ಟ್‌ನಲ್ಲಿ ಒಪ್ಪಿಕೊಂಡಿದೆ.
ಆರ್‌ಟಿಐಗೆ ಉತ್ತರ ಇದರ ಸಿಕ್ಕಿತ್ತು
ಭಾರತದಲ್ಲಿ ಕೋಟ್ಯಾಂತ ಜನ ಕೊರೊನಾ ಲಸಿಕೆ ಪಡೆದಿದ್ದಾರೆ, ಈ ಕೊರನಾ ಲಸಿಕೆಯಿಂದ ಅಡ್ಡ ಪರಿಣಾಮವಿದೆಯೇ ಎಂದು ಆರ್ ಟಿಐ ಅರ್ಜಿ ಹಾಕಲಾಯ್ತು, ಅದಕ್ಕೆ ಉತ್ತರಿಸಿದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಸಂಸ್ಥೆ ಕೂಡ ಕೊರೊನಾ ಲಸಿಕೆಯಿಂದ ಕೆಲವರಿಗೆ ಅಡ್ಡಪರಿಣಾಮವಾಗಬಹುದು ಎಂದು ಹೇಳಿದೆ.
ಕೊರೊನಾ ಲಸಿಕೆಯಿಂದ ಉಂಟಾಗುವ ಅಡ್ಡಪರಿಣಾಮಗಳು
ಇದು ಎಲ್ಲಿರಿಗೂ ಸಂಭವಿಸಲ್ಲ, ಬಲು ಅಪರೂಪಕ್ಕೆ ವಿಪರೀತ ವಾಂತಿ, ತಲೆನೋವು, ಉಸಿರಾಟದ ತೊಂದರೆ, ನರಗಳಲ್ಲಿ ಊತ, ಕಣ್ಣುಗಳಲ್ಲಿ ನೋವು, ದೃಷ್ಟಿ ಮಂದಾಗುವುದು, ನಿಶ್ಯಕ್ತಿ, ಪಾರ್ಶ್ವವಾಯು ಈ ಬಗೆಯ ಸಮಸ್ಯೆ ಕಂಡು ಬರಬಹುದು.
ಕೆಲವರಿಗೆ ನಿಶ್ಯಕ್ತಿ, ನಿರಂತರ ತುರಿಕೆ,ಜ್ವರ, ಕಣ್ಣುಗಳು ಮಂಜಾಗುವುದು ಈ ಬಗೆಯ ಸಮಸ್ಯೆ ಕಂಡು ಬರುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
