Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಋತುಸ್ರಾವದ ಸಮಯದಲ್ಲಿ ಮಹಿಳೆಯರಲ್ಲಿ ಕಾಡುವ ಸಮಸ್ಯೆ ಏನು? ಅಸುರಕ್ಷಿತ ವಿಧಾನ ಎಷ್ಟು ಅಪಾಯಕಾರಿ
ಮಹಿಳೆಯರ ಆರೋಗ್ಯ ಸಂಬಂಧಿಸಿದಂತೆ ಋತುಸ್ರಾವ ಕುರಿತಾದ ಜಾಗೃತಿಗೆ ಹಲವು ಸಂಘ ಸಂಸ್ಥೆಗಳು ಸರ್ಕಾರಗಳು ಕೂಡ ಶ್ರಮಿಸುತ್ತಿವೆ. ಹಾಗೆ ನಾಳೆ ಮುಟ್ಟಿನ ನೈರ್ಮಲ್ಯ ದಿನವನ್ನಾಗಿಯೂ ಆಚರಿಸಲಾಗುತ್ತಿದೆ. ಈ ಸಮಯದಲ್ಲಿ ನಾವು ಋತುಸ್ರಾವ ಕುರಿತಾದ ಹಲವು ವಿಚಾರಗಳ ಮುರಿತು ಮುಕ್ತ ಚರ್ಚೆಗೆ ಮುಂದಾಗಬೇಕಿದೆ.
ಭಾರತದಲ್ಲಿ ಋತುಸ್ರಾವ ಎಂಬುದನ್ನು ನೈರ್ಮಲ್ಯದ ದೃಷ್ಟಿಯಿಂದ ಅಥವಾ ನೈಸರ್ಗಿಕ ಕ್ರಿಯೆ ಎಂಬುದಾಗಿ ಪರಿಗಣಿಸಿರುವುದಕ್ಕಿಂತ ಅದೊಂದು ಶಾಪದಂತೆಯೇ ನೋಡಲಾಗುತ್ತಿದೆ. ಅದರಲ್ಲೂ ಹಲವು ಸಮುದಾಯಗಳು ಇಂದಿಗೂ ಋತುಸ್ರಾವ ಅಸಹಜ ಪ್ರಕ್ರಿಯೆಯಾಗಿಯೇ ನೋಡಲಾಗುತ್ತಿದೆ.

ಇನ್ನು ಭಾರತದಲ್ಲಿ ಋತುಸ್ರಾವ ಸಂಬಂಧಿ ಅನಾರೋಗ್ಯಕ್ಕೆ ತುತ್ತಾಗುವವರ ಸಂಖ್ಯೆ ಕೂಡ ಲಕ್ಷದಷ್ಟಿದೆ. ನೈಮರ್ಲ್ಯದಲ್ಲಿನ ಕೊರತೆಯೂ ಈ ಸಮಯದಲ್ಲಿ ಅನಾರೋಗ್ಯಕ್ಕೆ ತುತ್ತಾಗುವಂತೆ ಮಾಡುತ್ತಿದೆ. ಭಾರತದಲ್ಲಿ ಸುಮಾರು ಅರ್ಧದಷ್ಟು ಮಹಿಳೆಯರು ಇಂದಿಗೂ ಕೂಡ ನೈರ್ಮಲ್ಯವಲ್ಲ ರಕ್ಷಣಾ ವಿಧಾನಗನ್ನು ಬಳಸುತ್ತಾರೆ. ಇದರಿಂದ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ಸಮೀಕ್ಷೆಯೊಂದು ವರದಿ ಮಾಡಿದೆ.
ಸ್ಥಳೀಯವಾಗಿ ತಯಾರಿಸಿದ ನ್ಯಾಪಕಿನ್‌ಗಳು, ಟ್ಯಾಂಪೂನ್‌ಗಳು, ಮುಟ್ಟಿನ ಕಪ್‌ಗಳ ಬಳಕೆಗೆ ಆಸಕ್ತಿ ತೋರಿದರು ಕೂಡ ಸರಿಯಾದ ಬಳಕೆ ಇಲ್ಲದೆ ಸಾಂಪ್ರಾಯಿಕ ರೀತಿಯ ಸುರಕ್ಷಾ ವಿಧಾನಗಳಿಗೆ ಅವರು ಮೊರೆ ಹೋಗಿದ್ದಾರೆ. ಅಂದರೆ ಕೊಳೆ ಬಟ್ಟೆಗಳಿಂದು ಹಿಡಿದು ಕಳಪೆ ನ್ಯಾಪ್‌ಕಿನ್‌ಗಳ ಬಳಕೆ ಕೂಡ ನಾವು ನೋಡಬಹುದು.
ಭಾರತದಲ್ಲಿ ಸರಿಸುಮಾರು 35.5 ಕೋಟಿ ಮಹಿಳೆಯರು ಋತುಸ್ರಾವಕ್ಕೆ ಒಳಗಾಗುತ್ತಿದ್ದಾರೆ ಅದರಲ್ಲಿ ಗ್ರಾಮೀಣ ಭಾಗದ ಕೇವಲ 72ರಷ್ಟು ಮಹಿಳೆಯರು ಮಾತ್ರವೇ ಋತುಸ್ರಾವ ಸಂಬಂಧ ಉತ್ಪನ್ನಗಳ ಖರೀದಿಸುತ್ತಿದ್ದಾರೆ. ಆದರೆ ಉಳಿದವರು ಅನೈರ್ಮಲ್ಯಕರ ಸುರಕ್ಷಾ ವಿಧಾನ ಅನುಸರಿಸುತ್ತಾರೆ ಎಂದು ಸರ್ಕಾರದ ವರದಿಗಳೇ ಹೇಳಿವೆ. ಇನ್ನು ನಗರವಾಸಿಗಳಿಗೆ ಹೋಲಿಸಿದರೆ ಅವರಲ್ಲಿ ಶೇ. 89ರಷ್ಟು ಮಹಿಳೆಯರು ಸುರಕ್ಷಾತ ಉತ್ಪನ್ನಗಳ ಖರೀದಿಸುತ್ತಾರೆ ಎಂದು ತಿಳಿದುಬಂದಿದೆ.
ಭಾರತದಲ್ಲಿ ಹುಡುಗಿಯರು ಗುಣಮಟ್ಟದ ನೈರ್ಮಲ್ಯ ಸೌಲಭ್ಯಗಳ ಕೊರತೆಯಿಂದಾಗಿ ತಿಂಗಳಿಗೆ ಸರಾಸರಿ 6 ದಿನಗಳು ಶಾಲೆಯನ್ನು ತಪ್ಪಿಸಿಕೊಳ್ಳುತ್ತಾರೆ ಎಂದು ದಾಸ್ರಾ ಫೌಂಡೇಶನ್‌ನ 2019 ರ ವರದಿ ಡಿಗ್ನಿಟಿ ಫಾರ್ ಹರ್ ತಿಳಿಸಿದೆ. ಹಾಗೆ ಇದು ಹಲವು ಅಂಕಿ ಅಂಶಗಳನ್ನು ಕೂಡ ವಿವರಿಸಿದೆ. ಈ ಋತುಸ್ರಾವದ ಅನಾರೋಗ್ಯಗಳಲ್ಲಿ ಅವರ ಮಾನಸಿಕ ಸ್ಥಿತಿಯ ಮೇಲೆಯೂ ಉಂಟಾಗುವ ವ್ಯತಿರಿಕ್ತ ಪರಿಣಾಮವನ್ನು ನಾವು ಗಮನಿಸಬಹುದು. ಅವರ ಮಾನಸಿಕ ಸ್ಥಿತಿಯಲ್ಲಿಯೂ ಬದಲಾವಣೆ ಆಗುವುದು ಕೂಡ ಒಂದು ಸಮಸ್ಯೆಯಾಗಿ ನೋಡಬಹುದು.
ಋತುಸ್ರಾವ ಸಂದರ್ಭದಲ್ಲಿ ಮಹಿಳೆಯರ ಮಾನಸಿಕತೆಯಲ್ಲಿ ಬದಲಾವಣೆ ಆಗೋದೇಕೆ?
ಇನ್ನು ಮಹಿಳೆಯರ ಋತುಸ್ರಾವದ ಸಮಯದಲ್ಲಿ ಹೆಚ್ಚಿನ ಒತ್ತಡ, ಅವರ ಭಾವನೆಗಳಲ್ಲಿ ಬದಾವಣೆಗೆ ಕಾರಣವಾಗುವುದು ನೋಡಬಹುದು. ಈ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಹಲವು ಹಾರ್ಮೋನ್‌ಗಳ ಬದಲಾವಣೆಯು ಅವರಲ್ಲಿ ಮಾನಸಿಕ ಬದಲಾವಣಗೆ ತರಲು ಕಾರಣವಾಗುತ್ತದೆ. ಅದರಲ್ಲೂ ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟರಾನ್ ಮಟ್ಟಗಳು ಏರಿಳಿತವಾಗುವುದು ಅವರ ಭಾವನೆಗಳಲ್ಲಿ ತಕ್ಷಣದ ಬದಲಾವಣೆಗಳಿಗೆ ಕಾರಣವಾಗುತ್ತಿದೆ. ಹಾಗೆ ನರಗಳಿಗೆ ಸಂಬಂಧಿಸಿದಂತೆ ಸಿರೊಟೋನಿನ್ ಎಂಬ ಹಾರ್ಮೋನ್ ಬಿಡುಗಡೆ ಕೂಡ ಮಾನಸಿನ ಸ್ಥಿತಿಗತಿಗಳ ಬದಲಾವಣೆಗೆ ಕಾರಣವಾಗಲಿದೆ ಎಂದು ಇಂಡಿಪೆಂಡೆಂಟ್ ಕ್ಲಿನಿಕಲ್ ಸೈಕಾಲಜಿಸ್ಟ್ ಆಗಿರುವ ಅರುಣ್ ಕುಮಾರ್ ಮಾಹಿತಿ ನೀಡುತ್ತಾರೆ.
ಇನ್ನು ಯಾವ ಮಹಿಳೆ ಅಧಿಕ ಒತ್ತಡ ಅಥವಾ ಮಾನಸಿಕ ಸ್ಥಿತಿಯಲ್ಲಿ ಅಸ್ವಸ್ಥತೆ ಹೊಂದಿದ್ದರೆ ಅಂತವರಲ್ಲಿ ಈ ಋತುಸ್ರಾವ ಆರಂಭಕ್ಕೂ ಮೊದಲೇ ಸಮಸ್ಯೆಗಳು ಎದುರಾಗುವುದು ನೋಡಬಹುದು ಇದನ್ನು ಪ್ರೀ ಮೆನ್ಸ್ಟ್ರುವಲ್ ಎಕ್ಸಬಲೇಷನ್ ಎಂದು ಕೂಡ ಕರೆಯಲಾಗುತ್ತದೆ. ಸದ್ಯ ಅವರಲ್ಲಿನ ಮಾನಸಿಕ ಸ್ಥಿತಿಗೆ ಸುತ್ತಮುತ್ತಲಿನ ಪರಿಸರವೂ ಕೂಡ ಕಾರಣ ಎನ್ನಬಹುದು. ಅಲ್ಲಿ ಋತುಸ್ರಾವನ್ನು ಯಾವ ರೀತಿ ಒಪ್ಪಿಕೊಳ್ಳಲಾಗಿದೆ ಎಂಬುದು ಅವರ ಮಾನಸಿಕ ಸ್ಥಿತಿಯನ್ನು ನಿರ್ಧರಿಸುವ ಅಂಶವಾಗಲಿದೆ.



Click it and Unblock the Notifications
