Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಫಿಶ್ ಆಯಿಲ್ ನುಂಗುತ್ತಿದ್ದೀರಾ? ಹಾಗಾದರೆ ಈ ನ್ಯೂಟ್ರಿಷಿಯನ್ ಹೇಳಿರುವ ಸತ್ಯಾಂಶ ಗಮನಿಸಲೇಬೇಕು
ಒಮೆಗಾ 3 ದೇಹಕ್ಕೆ ಅವಶ್ಯಕವಾದ ಕೊಬ್ಬಿನಂಶವಾಗಿದೆ, ಈ ಒಮೆಗಾ 3 ತರಕಾರಿಗಿಂತ ಮೀನಿನ ಆಹಾರದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ, ಈ ಒಮೆಗಾ 3 ಖಿನ್ನತೆ ದೂರ ಮಾಡುವುದರಿಂದ ಹಿಡಿದು ಕಣ್ಣಿನ ಆರೋಗ್ಯ, ಮೆದುಳಿನ ಆರೋಗ್ಯಕ್ಕೆ, ಗರ್ಭಿಣಿಯರಿಗೆ, ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಕೆಲವರು ಇದನ್ನು ಕ್ಯಾಪ್ಸೂಲ್ ರೂಪದಲ್ಲಿ ತೆಗೆದುಕೊಳ್ಳುತ್ತಾರೆ. ಮಾರುಕಟ್ಟೆಯಲ್ಲಿ ಹಲವು ಬಗೆಯ ಕ್ಯಾಪ್ಸೂಲ್‌ಗಳಿವೆ,, ಆದರೆ ನೀವು ಯಾವುದೇ ಜಾಹೀರಾತು ನೋಡಿ ಒಮೆಗಾ 3 ಕ್ಯಾಪ್ಸೂಲ್ ತೆಗೆದುಕೊಂಡರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುತ್ತೆ, ಹಾಗಾಗಿ ಜೋಪಾನ.
ಕಿರಣ್ ಸಾಗರ್ ಎಂಬ ನ್ಯೂಟ್ರಿಷಿಯನಿಸ್ಟ್ ಒಮೆಗಾ 3 ಮಾತ್ರೆಯ ಬಗ್ಗೆ ತುಂಬಾ ಉಪಯುಕ್ತವಾದ ಮಾಹಿತಿಯನ್ನು ಹಂಚಿಕೊಂಡಿದ್ದು ಅದನ್ನು ಇಲ್ಲಿ ನೀಡಲಾಗಿದೆ ನೋಡಿ:

ಒಮೆಗಾ 3 ಒಳ್ಳೆಯದು, ಆದರೆ ಒಮೆಗಾ 3 ಕೊಬ್ಬಿನಂಶದಲ್ಲಿ ಯಾವ ಕೊಬ್ಬು ಎಷ್ಟಿರುತ್ತದೆ ಎಂಬುವುದು ಮುಖ್ಯವಾಗಿರುತ್ತೆ:
ಒಮೆಗಾ 3 ಮಾತ್ರೆ ತೆಗೆದುಕೊಳ್ಳುವಾಗ EPA ಮತ್ತು DHA ಗಮನಿಸಬೇಕು:
ಆ ಮಾತ್ರೆಯಲ್ಲಿ 300ರಿಂದ 400ರಷ್ಟು ಇರುತ್ತದೆ ಆದರೆ ಮಾತ್ರೆಯ ರೇಟ್ ಅಧಿಕವಿರುತ್ತದೆ, ರೇಟ್ ಅಧಿಕವಿದೆಯಂದು ಮಾತ್ರೆ ತುಂಬಾ ಗುಣಮಟ್ಟದ್ದು ಇದೆ ಎಂದು ಭಾವಿಸುವುದು ತಪ್ಪು.
ಗುಣಮಟ್ಟದ ಒಮೆಗಾ 3 ಹೇಗಿರುತ್ತದೆ?
ನೀವು ಒಮೆಗಾ 3 ಕ್ಯಾಪ್ಸೂಲ್ ರೂಪದಲ್ಲಿ ತೆಗೆದುಕೊಳ್ಳುವಾಗ ಅದರಲ್ಲಿ EPA ಮತ್ತು DHA ಅಧಿಕವಿರಬೇಕು, ಅಲ್ಲದೆ ಅದರಲ್ಲಿರು ಮರ್ಕ್ಯೂರಿ ಶುದ್ಧೀಕರಿಸಬೇಕು ಅಂಥ ಒಮೆಗಾ 3 ಸಪ್ಲಿಮೆಂಟ್ ಮಾತ್ರ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. EPA ಮತ್ತು DHA 500mgಗಿಂತ ಅಧಿಕವಿದ್ದರೆ ತುಂಬಾನೇ ಒಳ್ಳೆಯದು ಎಂದು ಹೇಳಲಾಗುವುದು ಎಂದು ಹೇಳಿದ್ದಾರೆ. ಆದ್ದರಿಂದ ನೀವೇನಾದರು ಫಿಶ್ ಆಯಿಲ್ ಖರೀದಿ ಮಾಡುವುದಾದರೆ ಈ ಬಗ್ಗೆ ಗಮನಹರಿಸಿದರೆ ಒಳ್ಳೆಯದು.
ಗುಣಮಟ್ಟದ ಫಿಶ್ ಆಯಿಲ್ ಸೇವನೆಯಿಂದ ಈ ಪ್ರಯೋಜನಗಳಿವೆ
ಕೊಲೆಸ್ಟ್ರಾಲ್ ಕಡಿಮೆಯಾಗುವುದು
ರಕ್ತದೊತ್ತಡ ಕಡಿಮೆಯಾಗುತ್ತೆ
ಸಂಧಿವಾತ ಇರುವವರೆಗೆ ತುಂಬಾನೇ ಒಳ್ಳೆಯದು
ಉರಿಯೂತದ ಸಮಸ್ಯೆ ಕಡಿಮೆ ಮಾಡುತ್ತದೆ
ಯಾರಿಗೆ ಉರಿಯೂತದ ಸಮಸ್ಯೆ ಇದೆಯೋ ಅವರಿಗೆ ಈ ಫಿಶ್ ಅಯಿಲ್ ತುಂಬಾನೇ ಒಳ್ಳೆಯದು. ಅತಿಯಾದ ಮೈ ತೂಕ, ಅತಿಯಾದ
ಮಾನಸಿಕ ಒತ್ತಡ ಇವುಗಳಿಂದ ಉರಿಯೂತದ ಸಮಸ್ಯೆ ಉಂಟಾಗುವುದು. ಇದನ್ನು ತಡೆಗಟ್ಟಲು ಈ ಫಿಶ್ ಆಯಿಲ್ ಸಹಕಾರಿ.
ತ್ವಚೆ ಆರೋಗ್ಯಕ್ಕೆ ಒಳ್ಳೆಯದು
ಫಿಶ್ಆಯಿಲ್ ತ್ವಚೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಇನ್ನು ಸೋರಿಯಾಸಿಸ್ ಸಮಸ್ಯೆ ಇರುವವರೆಗೂ ಈ ಫಿಶ್ ಆಯಿಲ್ ತುಂಬಾನೇ ಒಳ್ಳೆಯದು.
ಗರ್ಭಿಣಿಯರು ಸೇವಿಸುವುದರಿಂದ ಮಗುವಿನ ಬೆಳವಣಿಗೆಗೆ ಒಳ್ಳೆಯದು, ಮಗುವಿನ ಮೆದುಳಿನ ಬೆವಣಿಗೆಗೆ,ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು ಅಲ್ಲದೆ ಅಲರ್ಜಿಯಂಥ ಸಮಸ್ಯೆ ತಡೆಗಟ್ಟಲು ಕೂಡ ಸಹಕಾರಿ.
ಫ್ಯಾಟಿ ಲಿವರ್ ಸಮಸ್ಯೆ ತಡೆಗಟ್ಟಲು ಒಳ್ಳೆಯದು
ಫ್ಯಾಟಿ ಲಿವರ್ ಸಮಸ್ಯೆ ತಡೆಗಟ್ಟಲು ಈ ಒಮೆಗಾ 3 ಕೊಬ್ಬಿನಂಶ ತುಂಬಾ ಸಹಕಾರಿಯಾಗಿದೆ.
ಅಸ್ತಮಾ, ಅಲರ್ಜಿ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ
ಉಸಿರಾಟದಲ್ಲಿ ತೊಂದರೆ ತಡೆಗಟ್ಟುವಲ್ಲಿ ಈ ಫಿಶ್ ಆಯಿಲ್ ಸಹಕಾರಿಯಾಗಿದೆ, ಆದರೆ ಬರೀ ಇದೇ ತೆಗೆದುಕೊಂಡರೆ ಸಾಕಾಗುವುದಿಲ್ಲ ಇದರ ಜೊತೆಗೆ ವೈದ್ಯರು ಸೂಚಿಸಿದ ಔಷಧಗಳನ್ನೂ ತೆಗೆದುಕೊಳ್ಳಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications