Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ಮಂಗನ ಕಾಯಿಲೆಗೆ ಲಸಿಕೆ ಸಿದ್ಧ..! ಕ್ಲಿನಿಕಲ್ ಪ್ರಯೋಗದ ಮೇಲೆ ಎಲ್ಲರ ಕಣ್ಣು.!
ಇತ್ತೀಚಿಗೆ ಕಾಲೋಚಿತ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಡಲು ಆರಂಭಿಸಿವೆ. ಅಂದರೆ ಮಳೆಗಾಲ, ಚಳಿಗಾಲ, ಬೇಸಿಗೆ ಕಾಲದ ಸಮಯದಲ್ಲಿ ಆಯಾ ವಾತಾವರಣಕ್ಕೆ ಸಂಬಂಧಿಸಿದಂತೆ ಈ ಕಾಯಿಲೆಗಳು ಹರಡಲು ಆರಂಭಿಸುತ್ತವೆ. ಮಳೆಗಾಲದಲ್ಲಿ ಶೀತ, ಕೆಮ್ಮು, ಜ್ವರದಂತಹ ಸಮಸ್ಯೆ, ಚಳಿಗಾಲದಲ್ಲಿ ವೈರಸ್ ಸಂಬಂಧಿ ಸಮಸ್ಯೆ ಹೇಗೋ ಹಾಗೆ ಬೇಸಿಗೆಯಲ್ಲೂ ಕೂಡ ಹಲವು ಸಮಸ್ಯೆಗಳ ನೋಡಬಹುದು.
ಅದರಲ್ಲೂ ಹಳ್ಳಿಗಳಲ್ಲಿ ಹೆಚ್ಚಾಗಿ ಬೇಸಿಗೆಯಲ್ಲಿ ಅಪಾಯಕಾರಿಯಾಗಿ ಕಾಡುವುದು ಕೆಎಫ್‌ಡಿ. ಕ್ಯಾಸನೂರ್ ಫಾರೆಸ್ಟ್ ಡಿಸೀಸ್ ಅಥವಾ ಮಂಗನ ಕಾಯಿಲೆ ಎಂದು ಕರೆಯಲ್ಪಡುವ ಈ ಸಮಸ್ಯೆ ಕರ್ನಾಟಕ ಅರಣ್ಯ ಪ್ರದೇಶದಲ್ಲಿ ಆಘಾತ ಹುಟ್ಟಿಸುತ್ತೆ. ಪ್ರತಿ ವರ್ಷ ಬೇಸಿಗೆಯ ಸಂದರ್ಭದಲ್ಲಿ ಈ ಸಮಸ್ಯೆ ಜನರನ್ನು ಕಾಡಲು ಆರಂಭಿಸುತ್ತದೆ.

ಈ ಕಾಯಿಲೆಯ ಅಪಾಯ ಹೆಚ್ಚಾಗಲು ಇದಕ್ಕೆ ಈವರೆಗೂ ಸೂಕ್ತ ಚುಚ್ಚು ಮದ್ದು ಕಂಡು ಹಿಡಿಯದೆ ಇರುವುದು ಪ್ರಮುಖ ಕಾರಣವಾಗಿತ್ತು, ಹಾಗೆ ಈ ವೈರಾಣು ಮಾನವರಿಗೆ ಹರಡದಂತೆ ಜಾಗೃತಿ ಮೂಡಿಸುವ ಕಾರ್ಯ ವರ್ಷಗಳಿಂದಲೂ ನಡೆಯುತ್ತಿದೆ. ಆದರೆ ಜನರು ಇದರ ಅಪಾಯ ಅರಿಯಲು ವಿಫಲವಾಗುತ್ತಿರುವುದು ಸಮಸ್ಯೆ ಹೆಚ್ಚಾಗಲು ಕಾರಣವಾಗುತ್ತಿದೆ.
ಕ್ಯಾಸನೂರ್ ಫಾರೆಸ್ಟ್ ಡಿಸೀಸ್ ದಕ್ಷಿಣ ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಹೆಚ್ಚು ಸಾಂಕ್ರಾಮಿಕ ಕಾಯಿಲೆಯಾಗಿದೆ. 1957ರಲ್ಲಿ ಶಿವಮೊಗ್ಗದಲ್ಲಿ ಮೊದಲ ಬಾರಿಗೆ ಇದನ್ನು ಗುರುಸಿಲಾಗಿತ್ತು. ತದನಂತರ ಈ ಸಮಸ್ಯೆ ಕರಾವಳಿ, ಗೋವಾ, ದಕ್ಷಿಣ ಮಹಾರಾಷ್ಟ್ರಕ್ಕೂ ಹರಡಿತ್ತು. ಮಾನವರ ಅರಣ್ಯ ನಾಶ ಹಾಗೆ ಒತ್ತುವರಿ ಸೇರಿದಂತೆ ಪ್ರಾಣಿಗಳು ನಗರವಾಸಿಗಳಾಗುತ್ತಿರುವುದು ಈ ಸಮಸ್ಯೆ ಹೆಚ್ಚಾಗಲು ಪ್ರಮುಖ ಕಾರಣ ಎನಿಸಿದೆ.
ಸದ್ಯ ಈಗ ಈ ಕೆಎಫ್‌ಡಿ ಸಮಸ್ಯೆಗೆ ಸೂಕ್ತ ಚಿಕಿತ್ಸಾ ವಿಧಾನವೊಂದು ಪರೀಕ್ಷಾ ಹಂತ ತಲುಪಿದೆ. ಮಂಗನ ಕಾಯಿಲೆಗೆ ಸೂಕ್ತ ರೀತಿಯ ಚಿಕಿತ್ಸಾ ವಿಧಾನ ಇದಾಗಿರಲಿದೆ. ಹಲವು ವರ್ಷದ ನಿರಂತರ ಅಧ್ಯಯನದ ಬಳಿಕ ಈಗ ವ್ಯಾಕ್ಸಿನ್ ಕಂಡುಕೊಳ್ಳಲಾಗಿದೆ. ಈ ಹಿಂದೆ ಈ ಮಂಗನ ಕಾಯಿಲೆಗೆ ಲಸಿಕೆ ನೀಡುತ್ತಿದ್ದರೂ ಕೂಡ ಅದು ಅಷ್ಟೊಂದು ಪರಿಣಾಮಕಾರಿಯಾಗಿರಲಿದೆ ಹಾಗೆ ದೀರ್ಘಕಾಲದ ವರೆಗೆ ರೋಗ ನಿರೋಧಕ ಶಕ್ತಿ ಒದಗಿಸದೆ, ಹಾಗೆ ಆಗಾಗ ಬೂಸ್ಟರ್ ಡೋಸ್ ನೀಡಬೇಕಾಗುತ್ತಿತ್ತು.
ಹೀಗೆ ಈಗ ಈ ಎಲ್ಲಾ ಆಂಶಗಳ ಮನಗಂಡು ಹೊಸ ಲಸಿಕೆಯ ಆವಿಷ್ಕಾರವು ಹೊಸ ತಿರುವು ನೀಡುತ್ತಿದೆ. ಹೆಚ್ಚು ಪರಿಣಾಮಕಾರಿಯಾದ ಲಸಿಕೆಯು ಈ ವೈರಾಣು ಪೀಡಿತ ಪ್ರದೇಶಗಳಲ್ಲಿ ರೋಗದ ಹೊರೆಯನ್ನು ಕಡಿಮೆ ಮಾಡಲಿದೆ. ಅರಣ್ಯ ಪ್ರದೇಶದಲ್ಲಿ ವಾಸವಿರುವವರು, ನಿತ್ಯದ ಕೆಲಸಕ್ಕಾಗಿ ಅರಣ್ಯಕ್ಕೆ ತೆರಳಬೇಕಾಗಿರುವವರು, ಜಾನುವಾರು ಸಾಕಾಣಿಕೆದಾರರು, ಬುಡಕಟ್ಟು ಮಂದಿ ಹೀಗೆ ಹಲವರಿಗೆ ಇದು ವರದಾನವಾಗಲಿದೆ. ಸದ್ಯ ಈಗ ಈ ಲಸಿಕೆಯ ಕ್ಲೀನಿಕಲ್ ಪ್ರಯೋಗಗಳು ನಡೆಯುತ್ತಿದೆ. 3 ಹಂತದ ಪರೀಕ್ಷೆಗಳ ವರದಿ ಇನ್ನು ಬರಬೇಕಿದೆ. ಇದು ಎಷ್ಟು ಪರಿಣಾಮಕಾರಿಯಾಗಿ ಈ ಸಮಸ್ಯೆಗೆ ಪರಿಹಾರ ನೀಡಲಿದೆ ಎಂಬುದು ಮುಂದಿನ ದಿನಗಳಲ್ಲಿ ನೋಡಬಹುದು.
ಮಲೇರಿಯಾ ಲಕ್ಷಣವನ್ನೇ ಹೋಲುವ ಈ ವೈರಸ್ ಆಧಾರಿತ ಜ್ವರ Flaviviridae ಎಂಬ ಕುಟುಂಬಕ್ಕೆ ಸೇರಿದ ವೈರಸ್ ನಿಂದ ಎದುರಾಗುತ್ತದೆ. ಇದು ಪ್ರಾಣಿಗಳ ಮೂಲಕ ಹೆಚ್ಚಾಗಿ ಹರಡುತ್ತದೆ, ಕಾಡಿನಲ್ಲಿ ಮಂಗಗಳು ಸಾಯುತ್ತಿದ್ದರೆ ಆಗೆ ಆ ಮಂಗಳ ಮೈಯಲ್ಲಿನ ಉಣ್ಣೆ ಮಾನವರಿಗೆ ಅಥವಾ ಸಾಕು ಪ್ರಾಣಗಳಿಗೆ ಹರಡಿದರೆ ಅಲ್ಲಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಈ ವೈರಸ್ ತಗುಲಿದ ವ್ಯಕ್ತಿಗೆ ಅತೀಯಾದ ಜ್ವರ, ವಿಪರೀತ ತಲೆನೋವು, ಮೂಗಿನಿಂದ ರಕ್ತಬರುವುದು, ಗಂಟಲು ಒಳಗಿನಿಂದ ರಕ್ತ ಸ್ರಾವ, ವಾಂತಿ, ಸ್ನಾಯು ನೋವು, ನಡುಕ ಕಾಣಿಸಿಕೊಳ್ಳುವುದು ಇದರ ಲಕ್ಷಣವಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications