ಹಠಾತ್ ಹೃದಯಾಘಾತಗಳಿಗೆ ಕೋವಿಡ್ ಲಸಿಕೆ ಕಾರಣವಲ್ಲ: ICMR ಅಧ್ಯಯನ ವರದಿ!

ಭಾರತದಲ್ಲಿ ಯುವ ಸಮುದಾಯದವರಲ್ಲಿ ಉಂಟಾಗುತ್ತಿರುವ ಹೃದಯಾಘಾತ ಸೇರಿ ಹಲವು ಸಮಸ್ಯೆಗಳಿಗೆ ಕೋವಿಡ್ ಲಸಿಕೆ ಕಾರಣ ಎಂಬ ಆರೋಪಗಳು ಕೇಳಿಬಂದಿದ್ದವು. ಹಲವು ಕಡೆಗಳಲ್ಲಿ ಆರೋಗ್ಯವಂತ ಮಂದಿ ಹೃದಯಾಘಾತಕ್ಕೆ ಬಲಿಯಾಗುವಂತಹ ಪ್ರಕರಣಗಳು ಹೆಚ್ಚಾದ ಬೆನಲ್ಲೇ ಹಲವರಲ್ಲಿ ಆತಂಕ ಎದುರಾಗಿತ್ತು, ಹೀಗಾಗಿ ಈ ಕುರಿತ ವಿಶ್ಲೇಷಣೆ ಹಾಗೂ ಅಧ್ಯಯನದ ಅಗತ್ಯವಿದೆ ಎಂಬ ಕೂಗು ಕೇಳಿಬಂದಿತ್ತು.

ಭಾರತದಲ್ಲಿ ಹದಿ ಹರೆಯದವರಲ್ಲಿ ಹೃದಯಾಘಾತ ಪ್ರಕರಣ ಹೆಚ್ಚಾದ ಬಳಿಕ ಈ ಅಧ್ಯಯನದ ಅವಶ್ಯಕತೆ ಎದುರಾಗಿತ್ತು, ಹಲವು ಸೆಲೆಬ್ರಿಟಿಗಳು, ಖ್ಯಾತ ನಾಮರು, ಹೃದಯಾಘಾತದಿಂದ ಬಲಿಯಾಗಿದ್ದರು. ಈ ಸಂಬಂಧ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು AIIMS ವರದಿ ಸಲ್ಲಿಸಲು ಮುಂದಾದವು.

COVID-19 Vaccines Not Associated with Increased Heart Attack Risk

ಈ ಹೃದಯಾಘಾತ ಹಾಗೂ ಸಾವುಗಳ ಹಿಂದೆ ಕೋವಿಡ್ ಲಸಿಕೆಯ ಅಡ್ಡ ಪರಿಣಾಮಗಳು ಕಾರಣವಾಗಿದೆಯೇ ಎಂಬುದನ್ನು ಪತ್ತೆ ಮಾಡಲು ಮುಂದಾಗಲಾಗಿತ್ತು. ಹೀಗಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನಡೆದಿದ ಅಧ್ಯಯನದ ವರದಿ ಈಗ ಹೊರಬಿದ್ದಿದೆ. ಈ ಅಧ್ಯಯನದ ಪ್ರಕಾರ, ಕೊರೊನಾ ಲಸಿಕೆಗಳು ಮತ್ತು ಕೋವಿಡ್-19 ನಂತರದ ವಯಸ್ಕರಲ್ಲಿ ಹಠಾತ್ ಅಕಾಲಿಕ ಮರಣಗಳ ನಡುವೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದಿದೆ.

ದೇಶದಲ್ಲಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಯಸ್ಕರಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ಕಳವಳಗಳ ನಡುವೆ ಈ ಸಂಶೋಧನೆ ವರದಿ ಹೊರಬಿದ್ದಿದೆ. ಹಾಗೆ ಈ ಹೃದಯಾಘಾತಗಳಿಗೆ ಜೀವನಶೈಲಿ ಮತ್ತು ಪೂರ್ವ ಅಸ್ತಿತ್ವದಲ್ಲಿರುವ ಪರಿಸ್ಥಿತಿಗಳು ಪ್ರಮುಖ ಅಂಶಗಳಾಗಿವೆ ಎಂದು ಗುರುತಿಸಿದೆ. ICMR ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ಹಠಾತ್ ವಿವರಿಸಲಾಗದ ಸಾವುಗಳ ಹಿಂದಿನ ಕಾರಣಗಳನ್ನು ಅರ್ಥಮಾಡಿಕೊಳ್ಳಲು ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ತಿಳಿಸಿದೆ. ಯುವ ಸಮುದಾಯದಲ್ಲಿ ವರದಿಯಾಗುತ್ತಿರುವ ಹಠಾತ್ ಹೃದಯಾಘಾತಗಳಿಗೂ ಕೋವಿಡ್ ಲಸಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ದೃಢೀಕರಿಸಿದೆ.

ಭಾರತದಲ್ಲಿ COVID-19 ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ದೃಢಪಡಿಸುತ್ತವೆ, ಜೊತೆಗೆ ಗಂಭೀರ ಅಡ್ಡಪರಿಣಾಮಗಳ ಅಪರೂಪದ ಪ್ರಕರಣಗಳಿವೆ ಎಂದು ಕೂಡ ತಿಳಿಸಿದೆ. ಈ ಅಧ್ಯಯನವು 2023ರ ಮೇಯಿಂದ ಆಗಸ್ಟ್ ವರೆಗೆ 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 47 ತೃತೀಯ ಆರೈಕೆ ಆಸ್ಪತ್ರೆ ಕೇಂದ್ರಗಳಲ್ಲಿ ನಡೆಸಲಾಗಿದೆ. ಈ ಅಧ್ಯಯನವು 2021ರ ಅಕ್ಟೋಬರ್ ಮತ್ತು 2023ರ ಮಾರ್ಚ್ ವರೆಗೆ ಹಠಾತ್ ಆಗಿ ಮೃತಪಟ್ಟವರ ಕುರಿತಾಗಿಯೂ ದಾಖಲೆಗಳ ಸಂಗ್ರಹಿಸಿದೆ.

ಈ ಎರಡು ಅಧ್ಯಯನಗಳು ಭಾರತದಲ್ಲಿ ಯುವ ಸಮುದಾಯದಲ್ಲಿ ಹಠಾತ್ ಸಾವುಗಳ ಬಗ್ಗೆ ಹೆಚ್ಚು ಸಮಗ್ರ ತಿಳುವಳಿಕೆಯನ್ನು ನೀಡುತ್ತವೆ. ಕೋವಿಡ್ ಲಸಿಕೆ ಅಪಾಯವನ್ನು ಹೆಚ್ಚಿಸುವಂತೆ ಕಾಣುತ್ತಿಲ್ಲ, ಆದರೆ ಆಧಾರವಾಗಿರುವ ಆರೋಗ್ಯ ಸಮಸ್ಯೆಗಳು, ಆನುವಂಶಿಕ ಪ್ರವೃತ್ತಿ ಮತ್ತು ಅಪಾಯಕಾರಿ ಜೀವನಶೈಲಿಯ ಆಯ್ಕೆಗಳು ಈ ಸಾವಿನ ಹಿಂದೆ ಪಾತ್ರವಹಿಸಿದೆ ಎಂದು ತಿಳಿದುಬಂದಿದೆ.

ಹಾಸನ ಪ್ರಕರಣಗಳಿಗೂ ಇದು ಅನ್ವಯ

ದೇಶದಲ್ಲಿ ಹೃದಯಾಘಾತ ಪ್ರಕರಣಗಳು ಎಲ್ಲರಲ್ಲೂ ಬೆಚ್ಚಿಬೀಳಿಸಿತ್ತು. ಯುವ ನಟ, ನಟಿ, ರಾಜಕಾರಣಿಗಳು, ಖ್ಯಾತ ನಾಮರು ಹೃದಯಾಘಾತಕ್ಕೆ ಬಲಿಯಾಗಿದ್ದ ವರದಿಗಳಾಗಿವೆ. ಹಾಗೆ ಈಗ ರಾಜ್ಯದ ಹಾಸನ ಜಿಲ್ಲೆಯಲ್ಲಿ ಏಕಾಏಕಿ ಈ ಹೃದಯಾಘಾತ ಪ್ರಕರಣಗಳು ಹೆಚ್ಚಳವಾಗಿದೆ. ಕಳೆದ ಒಂದೂವರೆ ತಿಂಗಳಲ್ಲಿ ಒರೋಬ್ಬರಿ 25ಕ್ಕೂ ಹೆಚ್ಚು ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇಲ್ಲಿಯೂ ಕೂಡ ಕೋವಿಡ್ ಲಸಿಕೆಯ ಅಡ್ಡಪರಿಣಾಮದ ಆರೋಪವಿತ್ತು, ಆದ್ರೆ ಐಸಿಎಂಆರ್‌ನ ಈ ವರದಿಯಲ್ಲಿ ಈ ಸಂಭಾವ್ಯತೆ ತಳ್ಳಿಹಾಕಲಾಗಿದೆ.

ಕೋವಿಡ್ ಸಮಯದಲ್ಲಿ ಇಡೀ ದೇಶದಲ್ಲಿ ವಿತರಣೆಯಾಗಿದ್ದ ಲಸಿಕೆಗಳನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯೇ ಪರಿಶೀಲನೆಗೊಳಪಡಿಸಿದೆ. ಅಲ್ಲಿಂದ ದೃಢೀಕರಣಗೊಂಡ ಬಳಿಕವಷ್ಟೇ ಜನತೆಗೆ ನೀಡಲಾಗಿತ್ತು.

English summary

New ICMR Report: COVID-19 Vaccines Not Associated with Increased Heart Attack Risk

A study conducted by the Indian Council of Medical Research has now been released. According to this study, there is no link between corona vaccines and sudden premature death in adults after Covid-19.
Story first published: Wednesday, July 2, 2025, 10:32 [IST]
X
Desktop Bottom Promotion