Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಕಾಲು ಹಾಗೂ ಪಾದಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ದೇಹಾದಲ್ಲಿ ಹೆಚ್ಚಾಗಿದದೆ ಕೆಟ್ಟ ಕೊಲೆಸ್ಟ್ರಾಲ್
ಕೊಲೆಸ್ಟ್ರಾಲ್ ಸಮಸ್ಯೆ ಹೆಚ್ಚಿನವರಲ್ಲಿ ಕಂಡು ಬರುತ್ತಿದೆ, ಅದರಲ್ಲಿಯೂ 40 ವರ್ಷ ಮೇಲ್ಪಟ್ಟವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಅನಾರೋಗ್ಯಕರವಾದ ಜೀವನಶೈಲಿ, ಆಹಾರಶೈಲಿಯಿಂದಾಗಿ ಈ ಬಗೆಯ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ.
ಇನ್ನು ಈ ಕೊಲೆಸ್ಟ್ರಾಲ್ ಅನ್ನು ಪ್ರಾರಂಭದಲ್ಲಿ ಗಮನಿಸುವುದೇ ಇಲ್ಲ, ಕಾಲು ನೋವು ಎಂದು ಸುಮ್ಮನೆಯಾಗುತ್ತೇವೆ, ಆದರೆ ಕಾಲುಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ಅದು ಕೊಲೆಸ್ಟ್ರಾಲ್ ಲಕ್ಷನಗಳಿರಬಹುದು, ಅದ್ದರಿಂದ ಜಾಗ್ರತೆವಹಿಸಿ:

ಕಾಲುಗಳು ಹಾಗೂ ಪಾದಗಳಲ್ಲಿ ಊತ: ಕಾಲುಗಲ್ಲಿ ಊತ ಹಾಗೂ ತುರಿಕೆ ಇದ್ದರೆ ಅದು ಕೊಲೆಸ್ಟ್ರಾಲ್‌ನ ಸಾಮಾನ್ಯ ಲಕ್ಷಣವಾಗಿದೆ, ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದರೆ ಕಾಲು ಹಾಗೂ ಪಾದಗಳಲ್ಲಿ ಊತ ಕಂಡು ಬರುವುದು, , ಕೊಲೆಸ್ಟ್ರಾಲ್ ಹೆಚ್ಚಾದಾಗ ರಕ್ತಸಂಚಾರ ಸರಿಯಾಗಿ ಆಗದೆ ಕಾಲುಗಳಲ್ಲಿ ಊತ, ತುರಿಕೆ ಕಂಡು ಬರುವುದು.
ನೋವು, ಹಿಂಸೆ
ಕೊಲೆಸ್ಟ್ರಾಲ್ ಹೆಚ್ಚಾದಾಗ ಕಾಲುಗಳಲ್ಲಿ ಸೆಳೆತ ಉಂಟಾಗುವುದು, ಅಲ್ಲದೆ ನೋವು, ಒಂದು ರೀತಿ ಕಿರಿಕಿರಿ ಅನಿಸುವುದು. ರಕ್ತನಾಳಗಳಲ್ಲಿ ಅತ್ಯಧಿಕ ಕೊಲೆಸ್ಟ್ರಾಲ್ ಸೇರಿಕೊಂಡಾಗ ಇದರಿಂದ ರಕ್ತಸಂಚಾರಕ್ಕೆ ಅಡಚಣೆ ಉಂಟಾಗಿ ಕಾಲುಗಳಲ್ಲಿ ನೋವು ಕಂಡು ಬರುವುದು.
ರೆಸ್ಟ್‌ಲೆಸ್ ಲೆಗ್ ಸಿಂಡ್ರೋಮ್: ಕೊಲೆಸ್ಟ್ರಾಲ್ ಹೆಚ್ಚಾದಾಗ ರಾತ್ರಿ ಮಲಗಿದಾಗ ಕಾಲುಗಳಲ್ಲಿ ಒಂದು ರೀತಿಯ ಅಸ್ವಸ್ಥತೆ ಉಂಟಾಗುವುದು, ಕಾಲುಗಳಲ್ಲಿ ಜುಮ್ ಜುಮ್ ಅನಿಸುವುದು ಅಥವಾ ಕಾಲುಗಳನ್ನು ಆಡಿಸುವಾಗ ನೋವು ಈ ಬಗೆಯ ಸಮಸ್ಯೆ ಕಂಡು ಬರುವುದು. ರಾತ್ರಿ ನಿದ್ದೆಗೆ ಭಂಗ ಉಂಟಾಗುವುದು.
ಕಾಲುಗಳು-ಪಾದಗಳು ತಣ್ಣಗಾಗುವುದು
ಕೊಲೆಸ್ಟ್ರಾಲ್ ಹೆಚ್ಚಾದಾಗ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗಿ ರಕ್ತ ಸಂಚಾರಕ್ಕೆ ಅಡಚಣೆ ಉಂಟಾಗುವುದು, ಕಾಲುಗಳು ತುಂಬಾ ತಣ್ಣಗಾಗುವುದು.
ಕಾಲುಗಳ ಬಣ್ಣ ಬದಲಾಗುವುದು
ಕಾಲಿನ ತ್ವಚೆಯ ಬಣ್ಣ ಬದಲಾಗುವುದು, ಇದು ಕೂಡ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ಕಂಡು ಬರುವುದು. ಕಾಲುಗಳ ತ್ವಚೆ ಕೆಂಪಾಗುವುದು, ಗುಳ್ಳೆಗಳು ಏಳುವುದು ಈ ಬಗೆಯ ಲಕ್ಷಣಗಳು ಕೂಡ ಬಂದಿರುವುದು.
ಕಾಲುಗಳಲ್ಲಿ ಊತ
ಕೊಲೆಸ್ಟ್ರಾಲ್ ಜೊತೆ ಮಧುಮೇಹ ಕೂಡ ಇದ್ದರೆ ಕಾಲುಗಳಲ್ಲಿ ಗುಳ್ಳೆಗಳು ಉಂಟಾದರೆ ಅದು ಹುಣ್ಣಾಗಿ ಆ ಹುಣ್ಣು ಹೆಚ್ಚಾಗುತ್ತಾ ಹೋಗುವುದು, ಆದ್ದರಿಂದ ಮಧುಮೇಹಿಗಳು ಕೊಲೆಸ್ಟ್ರಾಲ್ ನಿಯಂತ್ರಣದ ಕಡೆಗೆ ತುಂಬಾನೇ ಗಮನಹರಿಸಬೇಕು.
ಯಾರಲ್ಲಿ ಕೊಲೆಸ್ಟ್ರಾಲ್ ಸಮಸ್ಯೆ ಹೆಚ್ಚಾಗಿ ಕಂಡು ಬರುವುದು?
- ಧೂಮಪಾನಿಗಳಲ್ಲಿ: ಧೂಮಪಾನ ಮಾಡುವುದರಿಂದ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಕಡಿಮೆಯಾಗಿ ದೊಡ್ಡ ಕೊಲೆಸ್ಟ್ರಾಲ್ ಹೆಚ್ಚಾಗುವುದು.
- ಅತ್ಯಧಿಕ ಒತ್ತಡದಲ್ಲಿರುವುದು: ಅತ್ಯಧಿಕ ಮಾನಸಿಕ ಒತ್ತಡ ದೇಹದ ಹಾರ್ಮೋನ್‌ಗಳ ಮೇಲೆ ಪರಿಣಾಮ ಬೀರುತ್ತದೆ. ಅತ್ಯಧಿಕ ಮಾನಸಿಕ ಒತ್ತಡ ಅನೇಕ ಸಮಸ್ಯೆಗಳನ್ನು ತರುತ್ತದೆ.
- ಮಧ್ಯಪಾನಿಗಳಲ್ಲಿ: ಮಧ್ಯಪಾನಿಗಳಲ್ಲಿ ಕೊಲೆಸ್ಟ್ರಾಲ್ ಸಮಸ್ಯೆ ಹೆಚ್ಚಾಗಿ ಕಾಣುವುದು
- ದೈಹಿಕ ವ್ಯಾಯಾಮ ಇಲ್ಲದಿದ್ದರೆ: ಕೂತಲ್ಲಿಯೇ ತುಂಬಾ ಹೊತ್ತು ಕೂರುವುದು, ದೈಹಿಕ ವ್ಯಾಯಾಮ ಇಲ್ಲದಿರುವುದು ಆರೋಗ್ಯ ಸಮಸ್ಯೆಯನ್ನು ಉಂಟು ಮಾಡುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications