Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಹಸುವಿನ ಹಾಲು VS ಎಮ್ಮೆ ಹಾಲು: ಯಾವುದು ಒಳ್ಳೆಯದು?
ಹಾಲು ಪೋಷಕಾಂಶವಿರುವ ಆಹಾರ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರೆಗೆ ದಿನಾ ಒಂದು ಹಾಲು ಕುಡಿಯುವುದು ಒಳ್ಳೆಯದು. ಹಸುವಿನ ಹಾಲು ಹಾಗೂ ಎಮ್ಮೆ ಹಾಲನ್ನು ಹೆಚ್ಚಾಗಿ ಬಳಸಲಾಗುವುದು. ಹಸುವಿನ ಹಾಲು ಎಮ್ಮೆ ಹಾಲಿನಲ್ಲಿ ಪೋಷಕಾಂಶ ಒಂದೇ ರೀತಿ ಇರುತ್ತದೆಯೇ? ಯಾವ ಹಾಲು ಹೆಚ್ಚು ಆರೋಗ್ಯಕರ ಎಂದು ನೋಡೋಣ ಬನ್ನಿ:

ಹಸುವಿನ ಹಾಲು VS ಎಮ್ಮೆ ಹಾಲು: ಯಾವುದು ಹೆಚ್ಚು ಆರೋಗ್ಯಕರ
ಹಸುವಿನ ಹಾಲು ಹಾಗೂ ಎಮ್ಮೆ ಹಾಲಿನಲ್ಲಿ ಉತ್ತಮ ಪೋಷಕಾಂಶಗಳಿವೆ , ಆದ್ದರಿಂದ ಎರಡೂ ಒಳ್ಳೆಯದು, ಆದರೆ ಈ ಕಾರಣಕ್ಕೆ ಹಸುವಿನ ಹಾಲು ಎಮ್ಮೆ ಹಾಲಿಗಿಂತ ಒಳ್ಳೆಯದು. ಎಂದು ಹೇಳಲಾಗುವುದು ನೋಡಿ:
1. ಪೋಷಕಾಂಶಗಳು
ಹಸುವಿನ ಹಾಲಿನಲ್ಲಿ ಎಮ್ಮೆ ಹಾಲಿಗಿಂತ ಪ್ರೊಟೀನ್, ಕೊಬ್ಬು, ಕಾರ್ಬೋಹೈಡ್ರೇಟ್ಸ್ ಎಲ್ಲವೂ ಸಮ ಪ್ರಮಾಣದಲ್ಲಿ ಇರುತ್ತದೆ.
2. ಜೀರ್ಣಕ್ರಿಯೆ
ಎಮ್ಮೆ ಹಾಲು ಹಸುವಿನ ಹಾಲಿಗಿಂತ ಹೆಚ್ಚು ಮಂದವಿರುತ್ತದೆ, ಆದ್ದರಿಂದ ಬೇಗನೆ ಜೀರ್ಣವಾಗುವುದಿಲ್ಲ. ಅದರಲ್ಲೂ ಕೆಲವರಿಗೆ ಎಮ್ಮೆ ಹಾಲು ಕುಡಿದರೆ ಅಜೀರ್ಣ ಸಮಸ್ಯೆ ಉಂಟಾಗುವುದು. ಹಸುವಿನ ಹಾಲು ಬೇಗನೆ ಜೀರ್ಣವಾಗುವುದು.
ಹಸಿ ಮೆಣಸಿನ ಕಾಯಿ ತುಂಬಾ ತಿಂದರೆ ಎಷ್ಟು ಡೇಂಜರ್ ಗೊತ್ತಾ?
3. ವಿಟಮಿನ್ಸ್ ಅಧಿಕವಿದೆ
ಎಮ್ಮೆ ಹಾಲಿಗಿಂತ ಹಸುವಿನ ಹಾಲಿನಲ್ಲಿ ವಿಟಮಿನ್ ಎ ಅಧಿಕವಿದೆ, ವಿಟಮಿನ್ ಎ ಕಣ್ಣುಗಳ ಆರೋಗ್ಯಕ್ಕೆ, ಮೂಳೆಗಳ ಬೆಳವಣಿಗೆಗೆ, ರೋಗ ನಿರೋಧಕ ಶಕ್ತಿ ಹೆಚ್ಚಲು ತುಂಬಾನೇ ಅವಶ್ಯಕ. ಆದ್ದರಿಂದ ಮಕ್ಕಳಿಗಾದರೆ ಹಸುವಿನ ಹಾಲು ತುಂಬಾನೇ ಒಳ್ಳೆಯದು.
4. ಕೊಲೆಸ್ಟ್ರಾಲ್ ಕಡಿಮೆ ಇರುತ್ತದೆ
ಹಸುವಿನ ಹಾಲಿನಲ್ಲಿ ಎಮ್ಮೆ ಹಾಲಿಗಿಂತ ಕೊಲೆಸ್ಟ್ರಾಲ್ ತುಂಬಾ ಕಡಿಮೆ. ಕೊಲೆಸ್ಟ್ರಾಲ್ ಹೆಚ್ಚಾದರೆ ಕೊಬ್ಬಿನಂಶ ಹೆಚ್ಚಾಗುವುದು. ಇದರಿಂದ ಹೃದಯಾಘಾತದ ಅಪಾಯ ಹೆಚ್ಚು. ಹೃದಯ ಸಮಸ್ಯೆ ಇರುವವರು ಎಮ್ಮೆ ಹಾಲಿಗಿಂತ ಹಸುವಿನ ಹಾಲು ಕುಡಿಯುವುದು ಒಳ್ಳೆಯದು.
5. ಹಸುವಿನ ಹಾಲಿನಲ್ಲಿ ಕ್ಯಾಲೋರಿ ಕಡಿಮೆ ಇದೆ'
ಹಸುವಿನ ಹಾಲಿನಲ್ಲಿ ಕ್ಯಾಲೋರಿ ತುಂಬಾನೇ ಕಡಿಮೆ ಇದೆ. ಆದ್ದರಿಂದ ತೂಕ ಇಳಿಕೆಯ ಡಯಟ್ ಮಾಡುವವರೆಗೆ ಹಸುವಿನ ಹಾಲು ಒಳ್ಳೆಯದು.
6. ಅಲರ್ಜಿ ಕಡಿಮೆ
ಕೆಲವರಿಗ ಲ್ಯಾಕ್ಟೋಸ್ ಅಲರ್ಜಿ ಸಮಸ್ಯೆ ಇರುತ್ತದೆ, ಅಂಥವರಿಗೆ ಹಾಲು ಕುಡಿದರೆ ಆಗುವುದಿಲ್ಲ. ಅದರಲ್ಲೂ ಎಮ್ಮೆ ಹಾಲು ಕುಡಿದರೆ ತುಂಬಾನೇ ಅಲರ್ಜಿ ಉಂಟಾಗುವುದು.
7. ಎಮ್ಮೆ ಹಾಲಿನಲ್ಲಿ ಈ ಪ್ರಯೋಜನಗಳು ಅಧಿಕವಿದೆ
ಎಮ್ಮೆ ಹಾಲು ಹಸುವಿನ ಹಾಲಿಗಿಂತ ಹೆಚ್ಚು ಸಮಯ ಇಡಬಹುದು. ಎಮ್ಮೆ ಹಾಲು ಬೇಗನೆ ಹಾಳಾಗುವುದಿಲ್ಲ, ಆದರೆ ಹಸುವಿನ ಹಾಲನ್ನು 1-2 ದಿನದೊಳಗೆ ಬಳಸಬೇಕು, ಇಲ್ಲದಿದ್ದರೆ ಹಾಲು ಒಡೆದು ಹೋಗುತ್ತದೆ.
8. ನಿದ್ದೆಗೆ ತುಂಬಾ ಒಳ್ಳೆಯದು
ಎಮ್ಮೆ ಹಾಲು ಕುಡಿದರೆ ತುಂಬಾ ಚೆನ್ನಾಗಿ ನಿದ್ದೆ ಬರುತ್ತದೆ, ನಿದ್ರಾ ಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಹಸುವಿನ ಹಾಲಿಗಿಂತ ಎಮ್ಮೆ ಹಾಲು ಕುಡಿದರೆ ಕಣ್ಣಿಗೆ ಚೆನ್ನಾಗಿ ನಿದ್ದೆ ಹತ್ತುವುದು.
* ಎಮ್ಮೆ ಹಾಲಿನಲ್ಲಿ ಕೋವಾ, ಮೊಸರು, ಪನ್ನೀರ್, ಮಲೈ ಇವುಗಳನ್ನು ಮಾಡಲು ಒಳ್ಳೆಯದು.
ಪ್ರತಿದಿನ ಹಾಲನ್ನು ಕುಡಿಯುವುದರಿಂದ ಈ ಪ್ರಯೋಜನಗಳನ್ನು ಪಡೆಯಬಹುದು:
* ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು
ಹಾಲಿನಲ್ಲಿ ಪೋಷಕಾಂಶಗಳು ಅಧಿಕವಿರುವುದರಿಂದ ಇದನ್ನು ಪ್ರತಿದಿನ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು.
ಹಲ್ಲು, ಮೂಳೆಯ ಆರೋಗ್ಯಕ್ಕೆ ಒಳ್ಳೆಯದು
ಹಾಲಿನಲ್ಲಿ ಕ್ಯಾಲ್ಸಿಯಂಶ ಅಧಿಕವಿದೆ, ಆದ್ದರಿಂದ ಹಲ್ಲು ಹಾಗೂ ಮೂಳೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ವಿಟಮಿನ್ ಡಿ ಇದೆ
ಹಾಲಿನಲ್ಲಿ ವಿಟಮಿನ್ ಡಿ ಇದೆ, ಕ್ಯಾಲ್ಸಿಯಂ ಹೀರಿಕೊಳ್ಳಲು ವಿಟಮಿನ್ ಡಿ ಅವಶ್ಯಕ. ಇದರಲ್ಲಿರುವ ವಿಟಮಿನ್ ಬಿ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಸಹಕಾರಿ.
ಮಾನಸಿಕ ಆರೋಗ್ಯಕ್ಕೆ ತುಂಬಾ ಒಳ್ಳೆಯದು
ಇದರಲ್ಲಿರುವ ಪೋಷಕಾಂಶಗಳು ಜೀರ್ಣಕ್ರಿಯೆಗೆ ಒಳ್ಳೆಯದು, ಇದರಿಂದ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಇದು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು.
ಮಕ್ಕಳ ಬೆಳವಣಿಗೆಗೆ ಒಳ್ಳೆಯದು
ಹಾಲನ್ನು ಮಕ್ಕಳಿಗೆ ನೀಡುವುದರಿಂದ ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು.
ಗರ್ಭಿಣಿಯರಿಗೆ ಒಳ್ಳೆಯದು
ಗರ್ಭಣಿಯರು ಹಾಲನ್ನುಕುಡಿಯುವುದರಿಂದ ಅವರ ಶರೀರದ ಆರೋಗ್ಯಕ್ಕೆ ಒಳ್ಳೆಯದು, ಭ್ರೂಣದ ಬೆಳವಣಿಗೆಗೂ ಒಳ್ಳೆಯದು.
ಹಸಿವು ನಿಯಂತ್ರಿಸುತ್ತದೆ
ಒಂದು ಲೋಟ ಹಾಲು ಕುಡಿಯುವುದರಿಂದ ಹಸಿವು ಕಡಿಮೆಯಾಗುವುದು, ದೇಹಕ್ಕೆ ಶಕ್ತಿ ದೊರೆಯುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
