Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಾರಕ್ಕೆ 70 ಗಂಟೆಯ ಕೆಲಸ ಆರೋಗ್ಯಕರ ಸಲಹೆ ಅಲ್ವೇ ಅಲ್ಲ ಎಂದ ಹೃದ್ರೋಗ ತಜ್ಞ
ಕಳೆದ ಒಂದು ವಾರದಿಂದ ವಾರದಲ್ಲಿ 70 ಗಂಟೆ ಕೆಲಸದ ಬಗ್ಗೆ ತುಂಬಾನೇ ಚರ್ಚೆ ನಡೆಯುತ್ತಿದೆ. ಇನ್ಫೋಸಿಸ್ ಎಂಬ ದೊಡ್ಡ ಸಂಸ್ಥೆ ಕಟ್ಟಿ ಬೆಳೆಸಿದ ನಾರಾಯಣ ಮೂರ್ತಿಯವರು ನೀಡಿದ ಸಲಹೆ ಸಾಮಾಜಿಕ ತಾಣದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿತ್ತು. ಇವರ ಸಲಹೆ ಅರ್ಥವಿಲ್ಲದ್ದು ಎಂಬುವುದಾಗಿ ಹಲವಾರು ಜನರು ವಿಮರ್ಶೆ ಮಾಡಿದ್ದಾರೆ.
ದೇಶದ ಪ್ರಗತಿಗಾಗಿ ನಾರಾಯಣ ಮೂರ್ತಿಯವರು 70 ಗಂಟೆ ಕೆಲಸ ಮಾಡುವಂತೆ ಸಲಹೆ ನೀಡಿದ್ದರು. ಒಂದು ದೇಶದ ಸಂಪತ್ತು ಎಂಬುವುದು ಬರೀ ತಂತ್ರಜ್ಞಾನವಲ್ಲ, ಆ ದೇಶದ ಪ್ರಜೆಗಳು ಕೂಡ. ಮನುಷ್ಯ ಆರೋಗ್ಯವಾಗಿದ್ದರೆ ಅವನು ಹೆಚ್ಚು ದುಡಿಯಲು ಸಾಧ್ಯ, ಅವನಿಗೆ ಆರ್ಥಿಕ ಅಭಿವೃದ್ಧಿ ಸಾಧ್ಯ. 70 ಗಂಟೆ ದುಡಿಯುವುದು ಹೃದಯದ ಆರೋಗ್ಯಕ್ಕೆ ಒಳ್ಳೆಯದೇ ಅಲ್ಲ ಎಂದು ಹೃದ್ರೋಗ ತಜ್ಞ ಎಚ್ಚರಿಸಿದ್ದಾರೆ.

ಹೃದ್ರೋಗ ತಜ್ಞ ಡಾ. ದೀಪಕ್ ಕೃಷ್ಣಮೂರ್ತಿ ತಮ್ಮ ಸಾಮಾಜಿಕ ತಾಣದಲ್ಲಿ ಯುವಕರು 70 ಗಂಟೆ ದುಡಿದರೆ ಹೃದಯಾಘಾತದ ಅಪಾಯ ಹೆಚ್ಚಾಗಲಿದೆ ಎಂದು ಎಚ್ಚರಿಸಿದ್ದಾರೆ. ಅವರು ಅದನ್ನು ತುಂಬಾ ಸರಳವಾಗಿ ಈ ರೀತಿ ವಿವರಿಸಿದ್ದಾರೆ ನೋಡಿ
ದಿನದಲ್ಲಿ 24 ಗಂಟೆ
ವಾರದಲ್ಲಿ 6 ದಿನ 12 ಗಂಟೆ ಕೆಲಸ
ದಿನದಲ್ಲಿ ಉಳಿಯುವುದು 12 ಗಂಟೆ
8 ಗಂಟೆ ನಿದ್ದೆ
ಉಳಿಯುವುದು 4 ಗಂಟೆ
ಬೆಂಗಳೂರು ಸಿಟಿಯಲ್ಲಿ 2 ಗಂಟೆ ಟ್ರಾಫಿಕ್‌ನಲ್ಲಿ ಹೋಗುತ್ತೆ
ಇನ್ನು 2 ಗಂಟೆ ಉಳಯುತ್ತೆ ಅದರಲ್ಲಿ ಹಲ್ಲುಜ್ಜುವುದು, ಬಾತ್‌ರೂಂಗೆ ಹೋಗುವುದು ಇತ್ಯಾದಿ
ಸಾಮಾಜಿಕವಾಗಿ ಬೆರೆಯಲು ಸಮಯ ಸಿಗಲ್ಲ
ಕುಟುಂಬದ ಜೊತೆ ಸಮಯವಿಲ್ಲ
ವ್ಯಾಯಾಮಕ್ಕೆ ಸಮಯವಿರಲ್ಲ
ಮನರಂಜನಗೆ ಸಮಯವಲ್ಲ
ಅಲ್ಲದೆ ಕಂಪನಿ ಕೆಲಸದ ಸಮಯ ಮುಗಿದ ಮೇಲೂ ಇಮೇಲ್, ಕಾಲ್ ನಿರೀಕ್ಷೆ ಮಾಡುತ್ತೆ
ಇಷ್ಟೆಲ್ಲಾ ಆದ ಮೇಲೆ ಹೃದಯಾಘಾತ ಏಕಾಗುತ್ತೆ ಎಂದು ಅಚ್ಚರಿಪಡುತ್ತೇವೆ #Heartattacks?
ಎಂದು ಹೆಚ್ಚು ಸಮಯ ಕೆಲಸ ಮಾಡಿದರೆ ಏನು ಅಪಾಯವಿದೆ ಎಂಬುವುದನ್ನು ಚೆನ್ನಾಗಿ ವಿವರಿಸಿದ್ದಾರೆ.
ವೈದ್ಯರ ಈ ಪೋಸ್ಟ್ ತುಂಬಾ ಜನ ಮೆಚ್ಚುಗೆ ಸೂಚಿಸುತ್ತಿದ್ದಾರೆ. ನಾವೆಲ್ಲಾ ದುಡಿಯುವುದು ನಮ್ಮ ಖುಷಿಗಾಗಿ, ನಮ್ಮ ಬದುಕಿಗಾಗಿ. ಆದರೆ ಹೆಚ್ಚಿನ ಸಮಯ ಕೆಲಸದಲ್ಲಿಯೇ ಕಳೆದರೆ ನಾವು ದುಡಿದು ಏನು ಪ್ರಯೋಜನ, ಈ ಪ್ರಶ್ನೆ ಖಂಡಿತ ಕಾಡುತ್ತಲ್ಲಾ....?
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.
24 hours per day (as far as I know)
— Dr Deepak Krishnamurthy (@DrDeepakKrishn1) October 27, 2023
If you work 6 days a week - 12h per day
Remaining 12h
8 hours sleep
4 hours remain
In a city like Bengaluru
2 hours on road
2 hours remain - Brush, poop, bathe, eat
No time to socialise
No time to talk to family
No time to exercise… https://t.co/dDTKAPfJf8



Click it and Unblock the Notifications