Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕರ್ಬೂಜ ಬೀಜ ಬಿಸಾಡಬೇಡಿ, ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜಗಳಿವೆ, ಸಸ್ಯಾಹಾರಿಗಳಿಗಂತೂ ಸೂಪರ್ ಫುಡ್!
ಇದೀಗ ಕರ್ಬೂಜ ಸೀಸನ್, ಈ ಹಣ್ಣನ್ನು ಹಾಗೇ ತಿನ್ನಲು ನಿಮಗೆ ಅಷ್ಟೊಂದು ಟೇಸ್ಟ್ ಅನಿಸದಿದ್ದರೂ ಇದರ ಮಿಲ್ಕ್‌ಶೇಕ್, ಜ್ಯೂಸ್ ತುಂಬಾನೇ ಟೇಸ್ಟ್ ಇರುವುದರಿಂದ ಎಲ್ಲರೂ ಇಷ್ಟಪಡುತ್ತಾರೆ. ಇನ್ನು ಸಲಾಡ್ ಜೊತೆ ತಿನ್ನಲು ಕರ್ಬೂಜ ತುಂಬಾನೇ ರುಚಿಯಾಗಿರುತ್ತದೆ. ಇದು ಸೀಸನಲ್ ಫುಡ್ ಆಗಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಕರ್ಬೂಜ ಬೇಸಿಗೆಗೆ ಅತ್ಯುತ್ತಮವಾದ ಹಣ್ಣಾಗಿದೆ. ಕರ್ಬೂಜ ಹಣ್ಣನ್ನು ತಿನ್ನುವುದರಿಂದ ದೇಹದಲ್ಲಿ ನೀರಿನಂಶ ಕಾಪಾಡಲು ತುಂಬಾನೇ ಸಹಕಾರಿಯಾಗಿದೆ. ಅಲ್ಲದೆ ಕರ್ಬೂಜ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು, ಕಣ್ಣಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಹೃದಯದ ಆರೋಗ್ಯಕ್ಕೆ , ಹೊಟ್ಟೆಯ ಆರೋಗ್ಯಕ್ಕೆ, ಮಾನಸಿಕ ಒತ್ತಡ ಕಡಿಮೆ ಮಾಡಲು ಈ ಹಣ್ಣು ತುಂಬಾನೇ ಸಹಕಾರಿಯಾಗಿದೆ.

ಹಣ್ಣನ್ನು ಕತ್ತರಿಸುವಾಗ ಯಾವುದೇ ಚಿಂತೆಯಿಲ್ಲದೆ ಬೀಜಗಳನ್ನು ಬಿಸಾಡುತ್ತೇವೆ, ಇನ್ಮುಂದೆ ಬೀಜಗಳನ್ನು ಎಸೆಯಲೇಬೇಡಿ, ನೀವು ಈ ಬೀಜವನ್ನು ಒಣಗಿಸಿ ತಿನ್ನುವುದರಿಂದ ದೇಹಕ್ಕೆ ಈ ಎಲ್ಲಾ ಪ್ರಯೋಜನಗಳಿವೆ ಗೊತ್ತಾ?
ವಿಟಮಿನ್ ಸಿ ಅಧಿಕವಿದೆ
ಕರ್ಬೂಜ ಬೀಜದಲ್ಲಿ ವಿಟಮಿನ್ ಸಿ ಅಧಿಕವಿದೆ. ಆದ್ದರಿಂದ ಇದನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುವುದು. ದಿನಾ ಸ್ವಲ್ಪ ಬೀಜ ಬಾಯಿಗೆ ಹಾಕಿ ತಿನ್ನಿ, ಇದರಿಂದ ಕಾಯಿಲೆ ಬೀಳುವುದು ತಡೆಗಟ್ಟಲು ಸಹಕಾರಿಯಾಗುವುದು.
ಅಜೀರ್ಣ ಸಮಸ್ಯೆ ತಡೆಗಟ್ಟುವುದು
ಅಜೀರ್ಣ ಅಥವಾ ಆ್ಯಸಿಡ್ ರಿಫ್ಲೆಕ್ಸ್ ಸಮಸ್ಯೆ ಇರುವವರು ದಿನಾ ಕರ್ಬೂಜ ಬೀಜವನ್ನು ತಿನ್ನುವುದರಿಂದ ಅಜೀರ್ಣಗೆ ಸಂಬಂಧಿಸಿದ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ. ಮಲಬದ್ಧತೆ ಸಮಸ್ಯೆ ಇರುವವರು ಕರ್ಬೂಜ ಬೀಜ ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ.
ಅತ್ಯಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಇದನ್ನು ತಿನ್ನುವುದು ಒಳ್ಳೆಯದು
ಅತ್ಯಧಿಕ ರಕ್ತದೊತ್ತಡ ಸಮಸ್ಯೆ ಹೊಂದಿರುವವರು ದಿನಾ ಸ್ವಲ್ಪ ಕರ್ಬೂಜ ಬೀಜ ತಿನ್ನುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.
ಕ್ಯಾಲ್ಸಿಯಂ ಅಂಶವಿದೆ
ಇದರಲ್ಲಿ ಕ್ಯಾಲ್ಸಿಯಂ ಅಂಶ ಅಧಿಕವಿರುವುದರಿಂದ ಮೂಳೆ ಹಾಗೂ ಹಲ್ಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಬೇಸಿಗೆಯಲ್ಲಿ ಕಾಡುವ ಶೀತ, ಕೆಮ್ಮು ತಡೆಗಟ್ಟಲು ಸಹಕಾರಿ
ಶೀತ-ಕೆಮ್ಮಿನ ಸಮಸ್ಯೆ ಮಳೆಗಾಲದಲ್ಲಿ ಮಾತ್ರವಲ್ಲ ಬೇಸಿಗೆಯಲ್ಲಿ ಉಷ್ಣಾಂಶ ಅಧಿಕವಾದಾಗ ಕೂಡ ಉಂಟಾಗುವುದು. ಕರ್ಬೂಜ ಬೀಜ ತಿನ್ನುವುದರಿಂದ ಈ ಬಗೆಯ ಸಮಸ್ಯೆ ತಡೆಗಟ್ಟಬಹುದು. ಮೂಗು ಕಟ್ಟುವ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ.
ಒಮೆಗಾ 3 ಕೊಬ್ಬಿನಂಶವಿದೆ
ಒಮೆಗಾ ಕೊಬ್ಬಿನಂಶ ಅತ್ಯಂತ ಆರೋಗ್ಯಕರವಾದ ಕೊಬ್ಬಿನಂಶವಾಗಿದೆ. ಇದನ್ನು ತಿನ್ನುವುದರಿಂದ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಗರ್ಭಿಣಿಯರಿಗೆ ತುಂಬಾ ಒಳ್ಳೆಯದು
ಕರ್ಬೂಜ ಬೀಜ ತಿನ್ನುವುದರಿಂದ ಗರ್ಭಿಣಿಯರಿಗೆ ತುಂಬಾನೇ ಪ್ರಯೋಜನಕಾರಿಯಾಗಿದೆ. ಇದು ಗರ್ಭಚೀಲದಲ್ಲಿ ನೀರಿನಂಶ ಕಡಿಮೆಯಾಗದಂತೆ ಕಾಪಾಡುತ್ತದೆ. ಅಲ್ಲದೆ ತಾಯಿಯ ಆರೋಗ್ಯಕ್ಕೆ, ಮಗುವಿನ ಬೆಳವಣಿಗೆಗೆ ತುಂಬಾನೇ ಸಹಕಾರಿ.
ಸಸ್ಯಾಹಾರಿಗಳಾದರೆ ಕರ್ಬೂಜ ಬೀಜದಿಂದ ತುಂಬಾ ಪ್ರಯೋಜನ ಪಡೆಯಬಹುದು
ಇದರಲ್ಲಿ ಒಮೆಗಾ 3 ಕೊಬ್ಬಿನಂಶ, ಫೋಲೆಟ್ ಇದೆ. ಒಮೆಗಾ 3 ಕೊಬ್ಬಿನಂಶ ಮೀನಿನಲ್ಲಿರುತ್ತದೆ, ಸಸ್ಯಾಹಾರದಲ್ಲಿ ಅಲ್ಪ ಪ್ರಮಾಣದಲ್ಲಿರುತ್ತದೆ. ಸಿಹಿ ಕುಂಬಳಕಾಯಿ ಬೀಜ, ಕರ್ಬೂಜ ಬೀಜದಲ್ಲಿ ಒಮೆಗಾ 3 ಕೊಬ್ಬಿನಂಶವಿದೆ. ಇದರಲ್ಲಿ ಫೋಲೆಟ್ ಅಂಶವಿದೆ.
ಪ್ರೊಟೀನ್ ಅಂಶವಿದೆ: ಮಾಂಸಾಹಾರಿಗಳಾದರೆ ಪ್ರೊಟೀನ್ ಅಂಶ ಮಾಂಸಾಹಾರದಲ್ಲಿ ಸಿಗುತ್ತದೆ. ಸಸ್ಯಾಹಾರಿಗಳು ಸಸ್ಯಾಧಾರಿತ ಪ್ರೊಟೀನ್ ಅಂಶಗಳ ಕಡೆಗೆ ಹೆಚ್ಚಿನ ಗಮನಹರಿಸಬೇಕಾಗುವುದು. ಕರ್ಬೂಜ ಬೀಜದಲ್ಲಿ ಪ್ರೊಟೀನ್ ಅಧಿಕವಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
