Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಭಾರತದ ಎಲ್ಲಾ ಉಪ್ಪು-ಸಕ್ಕರೆ ಬ್ರಾಂಡ್‌ನ ಪ್ಯಾಕ್‌ನಲ್ಲಿ ಪ್ಲಾಸ್ಟಿಕ್ ಪತ್ತೆ..! ಕ್ಯಾನ್ಸರ್‌ಗಿದು ಆಮಂತ್ರಣ!
ನಾವಿಂದು ಸೇವಿಸುತ್ತಿರುವ ಪ್ರತಿಯೊಂದು ವಸ್ತುಗಳು ಸಹ ಕಲಬೆರಕೆಯಿಂದಲೇ ಕೂಡಿರುತ್ತವೆ ಎಂಬ ಭಯದಲ್ಲಿ ನಾವಿದ್ದೇವೆ. ಏಕೆಂದರೆ ನಾವು ಏನನ್ನೇ ಖರೀದಿಸಿದರು ಅದರಲ್ಲಿ ಕಲಬೆರಕೆ ಇರುವುದು ನಮ್ಮ ಗಮನಕ್ಕೂ ಬಂದಿರುತ್ತದೆ. ಅಕ್ಕಿಯಲ್ಲಿ ಕಲ್ಲು, ಮಣ್ಣು, ಪ್ಲಾಸ್ಟಿಕ್ ಅಕ್ಕಿ ಹೀಗೆ ಒಂದಲ್ಲಾ ಒಂದು ಅಂಶ ಬೆರೆತಿರುವುದನ್ನು ನಾವು ನೋಡಬಹುದು. ಇದು ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದು ಸಹ ಅಷ್ಟೇ ನಿಜವಾಗಿದೆ.
ನಾವಿಂದು ಕಾಯಿಲೆ ಬೀಳುತ್ತಿರುವ ಹಿಂದಿನ ಕಾರಣ ಪತ್ತೆಗೆ ಮುಂದಾದರೆ ನಮಗೆ ಕಲಬೆರೆಕೆ ಆಹಾರ ಪ್ರಮುಖ ಅಂಶವಾಗಿ ಕಾಣಬಹುದು. ನಾವು ಸೇವಿಸುವ ಆಹಾರದಿಂದ ಹಿಡಿದು ನೀರಿನವರೆಗೂ ಕಲಬೆರಕೆ ಇದ್ದೇ ಇರುತ್ತೆ. ಆದ್ರೆ ನಿಮಗೆ ಗೊತ್ತಾ ನಾವು ಸೇವಿಸುವ ಅದೆಷ್ಟೋ ಆಹಾರವು ಮೈಕ್ರೋ ಪ್ಲಾಸ್ಟಿಕ್ ಕಣಗಳನ್ನು ತನ್ನಲ್ಲಿಟ್ಟುಕೊಂಡಿರುತ್ತದೆ.

ಹೌದು ಅದ್ರಲ್ಲೂ ಪ್ಲಾಸ್ಟಿಕ್ ಬಾಟಲಗಳಲ್ಲಿ ಸಿಗುವ ನೀರಿನಲ್ಲಿ ಮೈಕ್ರೋ ಪ್ಲಾಸ್ಟಿಕ್ ಕಣ ಇರಲಿದೆ ಇದು ಕ್ಯಾನ್ಸರ್‌ನಂತಹ ಗಂಭೀರ ಸ್ವರೂಪದ ಕಾಯಿಲೆಗೆ ದಾರಿಯಾಗಲಿದೆ ಎಂಬುದನ್ನು ನಾವು ಅರಿತ್ತಿದ್ದೆವು. ಆದ್ರೆ ನಾವಿಂದು ಸೇವಿಸುತ್ತಿರುವ ಉಪ್ಪು ಹಾಗೂ ಸಕ್ಕರೆಯಲ್ಲೂ ಈ ಮೈಕ್ರೋ ಪ್ಲಾಸ್ಟಿಕ್ ಕಣಗಳಿರುವುದು ಪತ್ತೆಯಾಗಿದೆ.
ಆಘಾತಕಾರಿ ಅಧ್ಯಯನ ಒಂದರಲ್ಲಿ ಎಲ್ಲಾ ಭಾರತೀಯ ಉಪ್ಪು ಮತ್ತು ಸಕ್ಕರೆ ಬ್ರಾಂಡ್‌ಗಳಲ್ಲಿ ಮೈಕ್ರೋ ಪ್ಲಾಸ್ಟಿಕ್ ಇರುವುದು ಪತ್ತೆಯಾಗಿದೆ. ಚಿಕ್ಕದು ಅಥವಾ ದೊಡ್ಡ ಪ್ಯಾಕ್ ಗಳಲ್ಲಿ ಈ ರೀತಿಯ ಪ್ಲಾಸ್ಟಿಕ್ ಅಂಶ ಇರುವುದು ಬಹಿರಂಗವಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಏಕೆಂದರೆ ಭಾರತದಲ್ಲಿ ಕೋಟ್ಯಂತರ ಕುಟುಂಬಗಳು ನಿತ್ಯವೂ ಸಕ್ಕರೆ ಹಾಗೂ ಉಪ್ಪನ್ನು ಬಳಸುತ್ತಾರೆ. ಈ ಪ್ಯಾಕೆಟ್‌ಗಳಲ್ಲಿ ಮೈಕ್ರೋ ಪ್ಲಾಸ್ಟಿಕ್ ಪತ್ತೆಯಾಗಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಪರಿಸರ ಸಂಶೋಧನಾ ಸಂಸ್ಥೆ ಟಾಕ್ಸಿಕ್ಸ್ ಲಿಂಕ್ ನಡೆಸಿದ ಮೈಕ್ರೋಪ್ಲಾಸ್ಟಿಕ್ಸ್ ಇನ್ ಸಾಲ್ಟ್ ಅಂಡ್ ಶುಗರ್ ಎಂಬ ಸಂಶೋಧನೆಯು ಸುಮಾರು ಹತ್ತು ವಿಧದ ಉಪ್ಪನ್ನು ಪರೀಕ್ಷಿಸಿದೆ - ಟೇಬಲ್ ಸಾಲ್ಟ್, ಕಲ್ಲು ಉಪ್ಪು, ಸಮುದ್ರ ಉಪ್ಪು ಮತ್ತು ಸ್ಥಳೀಯ ಕಚ್ಚಾ ಉಪ್ಪು, ಜೊತೆಗೆ ಐದು ವಿಧದ ಸಕ್ಕರೆಯನ್ನು ಸಹ ಪರೀಕ್ಷಿಸಿದೆ. ಇವುಗಳನ್ನು ಸ್ಥಳೀಯ ಮಾರುಕಟ್ಟೆಯಿಂದ ಹಿಡಿದು ಆನ್‌ಲೈನ್‌ನಲ್ಲೂ ಖರೀದಿಸಿದೆ ಎಂದು ವಿವರಿಸಲಾಗಿದೆ.
ಮೈಕ್ರೊಪ್ಲಾಸ್ಟಿಕ್‌ಗಳ ಹೊರತಾಗಿ, ಆಹಾರದಲ್ಲಿ ಕಂಡುಬರುವ ಪ್ಲಾಸ್ಟಿಕ್‌ನ ಸಣ್ಣ ತುಣುಕುಗಳು, 1 ಮೈಕ್ರೋಮೀಟರ್‌ನಿಂದ 5 ಮಿಲಿಮೀಟರ್‌ಗಳವರೆಗೆ - ಎಲ್ಲಾ ಉಪ್ಪು ಮತ್ತು ಸಕ್ಕರೆ ಮಾದರಿಗಳಲ್ಲಿ, ಫೈಬರ್, ಗೋಲಿಗಳು, ಫಿಲ್ಮ್‌ಗಳು ಮತ್ತು ತುಣುಕುಗಳನ್ನು ಒಳಗೊಂಡಿರುವ ವಿವಿಧ ರೂಪಗಳಲ್ಲಿ ಕಂಡುಬಂದಿವೆ. ಜೊತೆಗೆ ಅಯೋಡಿನ್ ಯುಕ್ತ ಉಪ್ಪುಗಳಲ್ಲಿ ಅತ್ಯಧಿಕ ಮಟ್ಟದ ಮೈಕ್ರೋ ಪ್ಲಾಸ್ಟಿಕ್ ಕಣಗಳು ಪತ್ತೆಯಾಗಿದೆ ಎಂದು ಅಧ್ಯಯನವು ತಿಳಿಸಿದೆ. ಈಗ ಮಾರುಕಟ್ಟೆಯಲ್ಲಿ ಬಹುತೇಕ ಎಲ್ಲಾ ಉಪ್ಪಿನ ಬ್ರಾಂಡ್‌ಗಳು ಅಯೋಡಿನ್ ಯುಕ್ತ ಉಪ್ಪುಗಳನ್ನೇ ಮಾರಾಟ ಮಾಡುತ್ತಿರುವುದನ್ನು ನಾವಿಲ್ಲಿ ಗಮನಿಸಬಹುದು.
ಈ ಮೈಕ್ರೋ ಪ್ಲಾಸ್ಟಿಕ್ ಅಂಶವು ದೀರ್ಘಕಾಲಿನ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಕ್ಯಾನ್ಸರ್ ಸೇರಿದಂತೆ ಹತ್ತು ಹಲವು ಗಂಭೀರ ಸ್ವರೂಪದ ಅನಾರೊಗ್ಯ ಸಮಸ್ಯೆಗಳಿಗೆ ಇವು ದಾರಿಯಾಗಲಿದೆ. ಈ ಮೊದಲು ಪ್ಲಾಸ್ಟಿಕ್ ಬಾಟಲಿಯಲ್ಲಿ ಬರುವ ನೀರಿನಲ್ಲಿ ಮೈಕ್ರೋ ಪ್ಲಾಸ್ಟಿಕ್ ಅಂಶ ಇರುತ್ತದೆ ಎಂದು ಅಧ್ಯಯನ ತಿಳಿಸಿತ್ತು.
ಈ ಮೈಕ್ರೋ ಪ್ಲಾಸ್ಟಿಕ್‌ಗಳು ಉದ್ಯಮ ಹಂತದಲ್ಲಿ ಅಂದರೆ ಆಹಾರಗಳ ತಯಾರಿಕೆ ಹಾಗೂ ಪ್ಯಾಕೇಜಿಂಗ್ ಹಂತದಲ್ಲಿ ಉತ್ಪನ್ನಗಳ ಒಳಗೆ ಸೇರಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕೆಲವು ಉತ್ಪನ್ನಗಳು ಬಿಸಿಯಾಗಿದ್ದಾಗ ಪ್ಯಾಕಿಂಗ್ ಆಗುವುದು ಮತ್ತೆ ಕೆಲವು ಸಂದರ್ಭದಲ್ಲಿ ಪ್ಲಾಸ್ಟಿಕ್ ತಯಾರಾಗುವಾಗ ಅದರ ಕಣಗಳು ಉಳಿದುಬಿಡುವುದು ಸೇರಿದಂತೆ ಹಲವು ಪ್ರಕಾರವಾಗಿ ಈ ಉತ್ಪನ್ನಗಳಲ್ಲಿ ಪ್ಲಾಸ್ಟಿಕ್ ಸೇರಿಕೊಳ್ಳುತ್ತಿವೆ ಎಂದು ತಿಳಿದುಬಂದಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

