Latest Updates
-
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು!
ಎಲ್ಲಾ ಹಣ್ಣುಗಳನ್ನು ಒಟ್ಟಾಗಿ ಸೇವಿಸಬಾರದು ! ಯಾಕೆ ಗೊತ್ತಾ?
ಹಣ್ಣುಗಳನ್ನು ಸೇವಿಸೋದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಆದರೆ ಅನೇಕ ಜನರಿಗೆ ಹಣ್ಣಗಳನ್ನು ಸೇವಿಸುವ ವಿಧಾನ ಗೊತ್ತಿರೋದಿಲ್ಲ. ಯಾವ ಸಮಯದಲ್ಲಿ ಸೇವಿಸಬೇಕು? ಎಷ್ಟು ಪ್ರಾಮಾಣದಲ್ಲಿ ಸೇವಿಸಬೇಕು ಅನ್ನೋದ್ರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳದೇ ಹಣ್ಣುಗಳನ್ನು ಸೇವಿಸುತ್ತಾರೆ.
ಆದರೆ ನಾವು ಹಣ್ಣುಗಳಿಂದ ಆರೋಗ್ಯಕಾರಿ ಪ್ರಯೋಜನಗಳನ್ನು ಪಡೆದುಕೊಳ್ಳಬೇಕಾದರೆ ಹಣ್ಣುಗಳನ್ನು ಸೇವಿಸುವಾಗ ಕೆಲವೊಂದು ನಿಯಮಗಳನ್ನು ಪಾಲಿಸಲೇಬೇಕು. ಹಾಗಾದ್ರೆ ಹಣ್ಣುಗಳನ್ನು ಸೇವಿಸೋವಾಗ ಗಮನದಲ್ಲಿಡಬೇಕಾದ ಅಂಶಗಳೇನು ಅನ್ನೋದನ್ನು ತಿಳಿಯೋಣ.

1. ಒಂದು ಬಾರಿಗೆ ಒಂದು ಹಣ್ಣನ್ನು ಮಾತ್ರ ಸೇವಿಸಿ
ಫ್ರೂಟ್ ಸಲಾಡ್ ಹೆಸರು ಕೇಳಿದ್ರೆ ಸಾಕು ನಮ್ಮ ಬಾಯಲ್ಲಿ ನೀರೂರುತ್ತೆ. ಅದ್ರಲ್ಲಿ ಎಲ್ಲಾ ಹಣ್ಣುಗಳ ಮಿಶ್ರಣವಿದ್ದು ಸೇವಿಸೋದಕ್ಕೂ ನಮಗೆ ರುಚಿ ಎಂದೆನಿಸುತ್ತದೆ. ಆದರೆ ನಾವು ಒಂದು ಬಾರಿಗೆ ಒಂದು ಹಣ್ಣನ್ನು ಸೇವಿಸಿದರೆ ಮಾತ್ರ ಅದರಿಂದ ಹೆಚ್ಚಿನ ಲಾಭ ಪಡೆಯಬಹುದು ಎಂದು ಆಯುರ್ವೇದ ಹೇಳುತ್ತದೆ.
ಇನ್ನೂ ಆಯುರ್ವೇದದ ಪ್ರಕಾರ ಯಾವುದೇ ಆಹಾರವನ್ನು ಸೇವಿಸಿದ ತಕ್ಷಣ ಹಣ್ಣನ್ನು ಸೇವಿಸಬಾರದು. ಯಾಕಂದ್ರೆ ಅದು ಹುದುಗುವಿಕೆಗೆ ಕಾರಣವಾಗುತ್ತದೆ. ಇದರಿಂದ ಆಮ್ಲ ತ್ಯಾಜ್ಯದ ರಚನೆಗೆ ಕಾರಣವಾಗುತ್ತದೆ. ಈ ಆಮ್ಲ ತ್ಯಾಜ್ಯವು ಉಬ್ಬುವುದು, ವಾಯು, ಅತಿಸಾರ, ಅಥವಾ ಎದೆಯುರಿ ಕಾರಣವಾಗಬಹುದು. ಆದರಿಂದ ಒಂದು ಬಾರಿಗೆ ಒಂದು ಹಣ್ಣು ಸೇವಿಸಬೇಕು. ಜೊತೆಗೆ ಹಣ್ಣು ಸೇವಿಸುವ ಮೊದಲು ಹಾಗೂ ನಂತರ ಯಾವುದೇ ಆಹಾರವನ್ನು ಸೇವಿಸಬಾರದು.
2. ಖಾಲಿ ಹೊಟ್ಟೆಗೆ ಹಣ್ಣುಗಳನ್ನು ಸೇವಿಸಬಹುದಾ?
ಆಯುರ್ವೇದದ ಪ್ರಕಾರ ಹಣ್ಣುಗಳನ್ನು ಖಾಲಿ ಹೊಟ್ಟೆಗೆ ಸೇವಿಸಿದ್ರೆ ತುಂಬಾನೇ ಒಳ್ಳೆಯದು. ಬೆಳ್ಳ ಬೆಳಗ್ಗೆ ಹಣ್ಣುಗಳನ್ನು ಸೇವಿಸೋದು ಒಳ್ಳೆಯ ಉಪಾಯ. ಆನಂತರ ಸೇವಿಸಿದರೆ ಅದರ ಪ್ರಯೋಜನಗಳು ಕಡಿಮೆಯಾಗುತ್ತಂತೆ. ಡಯೆಟೀಷನ್ ಪ್ರಕಾರ ಹಣ್ಣುಗಳನ್ನು ಬೆಳಗ್ಗೆ ಅಥವಾ ಮಧ್ಯಾಹ್ನ ಅಥವಾ ವರ್ಕ್‌ಔಟ್ ನಂತರ ಸೇವಿಸೋದು ತುಂಬಾನೇ ಆರೋಗ್ಯಕರ.
3. ಹಣ್ಣುಗಳನ್ನು ಜಗಿದು ತಿನ್ನಿ
ಅನೇಕ ಜನರಿಗೆ ಹಣ್ಣುಗಳ ಜ್ಯೂಸ್ ತಯಾರಿಸಿ ಕುಡಿಯುವ ಅಭ್ಯಾಸ ಇದೆ. ಇದಕ್ಕಿಂತ ಹಣ್ಣುಗಳನ್ನು ಜಗಿದು ತಿನ್ನೋದ್ರಿಂದ ಹೆಚ್ಚಿನ ಉಪಯೋಗವನ್ನು ಪಡೆದುಕೊಳ್ಳಬಹುದು. ಹಣ್ಣಿನ ತಿರುಳು ಹಾಗೂ ಅದರ ಸಿಪ್ಪೆ ಫೈಬರ್ ಅಂಶ ಸಮೃದ್ಧವಾಗಿದೆ. ಇದು ನಿಯಮಿತ ಕರುಳಿನ ಚಲನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ನಾವು ಹಣ್ಣನ್ನು ಸೇವಿಸುವಾಗ ನೈಸರ್ಗಿಕ ಸಕ್ಕರೆಯ ರುಚಿಯನ್ನು ಅನುಭವಿಸಬಹುದು. ಹಣ್ಣಿನ ಸಕ್ಕರೆಯು ರಕ್ತದಲ್ಲಿ ನಿಧಾನವಾಗಿ ಸಂಗ್ರಹಗೊಳ್ಳುತ್ತದೆ ಮತ್ತು ನಿಮ್ಮ ದೇಹವು ಸಕ್ಕರೆಯನ್ನು ನೇರ ಶಕ್ತಿಯ ಮೂಲವಾಗಿ ಬಳಸಲು ಅನುಮತಿಸುತ್ತದೆ. ಅಲ್ಲದೆ, ಅದರ ಸಿಪ್ಪೆ ಮತ್ತು ತಿರುಳಿನಲ್ಲಿ ಜೀವಸತ್ವಗಳು ಮತ್ತು ಇತರ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಹೀಗಾಗಿ ಜ್ಯೂಸ್ ಮಾಡಿ ಕುಡಿಯೋದಕ್ಕಿಂತ ಹಾಗೆಯೇ ಕುಡಿದರೆ ಒಳ್ಳೆಯದು.
4. ಹಣ್ಣು ಲಭ್ಯವಿರೋ ಋತುವಿನಲ್ಲೇ ಸೇವಿಸಿ
ಆಯಾ ಹಣ್ಣು ನಮಗೆ ಯಾವ ಋತುವಿನಲ್ಲಿ ಲಭ್ಯವಿರುತ್ತದೆಯೋ ಅದೇ ಋತುವಿನಲ್ಲಿ ಮಾತ್ರ ಸೇವಿಸಬೇಕು. ಆಗ ನಮಗೆ ನೈಸರ್ಗಿಕ ಹಣ್ಣುಗಳು ಲಭ್ಯವಾಗುತ್ತದೆ. ಬೇರೆ ಋತುವಿನಲ್ಲಿ ನಮಗೆ ಇಷ್ಟವಾದ ಹಣ್ಣನ್ನು ಸೇವಿಸಿದರೆ ಆಗ ನಮಗೆ ಉತ್ತಮ ಹಣ್ಣುಗಳು ಲಭ್ಯವಾಗೋದಿಲ್ಲ. ರಾಸಾಯನಿಕಗಳನ್ನು ಸೇರಿಸಿ ಆ ಹಣ್ಣನ್ನು ಬಲವಂತವಾಗಿ ಮಾಗುವಂತೆ ಮಾಡಿರುತ್ತಾರೆ.
ಆಯುರ್ವೇದದ ಪ್ರಕಾರ ನಾವು ನಮ್ಮ ಕೈನಿಂದಲೇ ಹಣ್ಣುಗಳನ್ನು ಸೇವಿಸಿದರೆ ಒಳ್ಳೆಯದು. ಯಾಕಂದರೆ ಬೆರಳ ತುದಿಯ ನರ ತುದಿಗಳು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತವೆ ಎಂದು ಹೇಳಲಾಗುತ್ತದೆ. ಹೀಗಾಗಿ ಕೈಗಳಿಂದ ತಿನ್ನುವುದರಿಂದ ಹೊಟ್ಟೆಯಲ್ಲಿ ಜೀರ್ಣಕಾರಿ ರಸವನ್ನು ತರಲು ಸಹಾಯ ಮಾಡುತ್ತದೆ ಮತ್ತು ಹಣ್ಣಿನ ಗರಿಷ್ಠ ಪ್ರಯೋಜನಗಳನ್ನು ನಿಮಗೆ ನೀಡುತ್ತದೆ.
ಈ ಹಣ್ಣುಗಳನ್ನು ದಿನ ನಿತ್ಯ ಸೇವಿಸಿದರೆ ಉತ್ತಮ :
* ಸೇಬು ಹಣ್ಣು
* ಕೀವಿ ಹಣ್ಣು
* ಸ್ಟ್ರಾಬೆರಿ ಹಣ್ಣು
* ಕಿತ್ತಳೆ ಹಣ್ಣು
* ಕಲ್ಲಂಗಡಿ ಹಣ್ಣು
* ಪಪ್ಪಾಯ ಹಣ್ಣು
* ಬಾಳೆ ಹಣ್ಣು
* ಪೇರಳೆ ಹಣ್ಣು
ಇತ್ತೀಚಿನ ಯುವ ಜನತೆ ಆರೋಗ್ಯವಾದ ಹಣ್ಣುಗಳನ್ನು ತಿನ್ನೋದಕ್ಕಿಂತಲೂ ಯಾವುದು ಹೆಚ್ಚಾಗಿ ಆರೋಗ್ಯಕ್ಕೆ ಮಾರಕವೋ ಅಂತಹ ಆಹಾರಗಳನ್ನು ಹೆಚ್ಚಾಗಿ ಸೇವಿಸ್ತಿದ್ದಾರೆ. ಈ ಚೈನಿಸ್ ಆಹಾರಗಳು, ಫಿಜ್ಜಾ, ಬರ್ಗರ್‌ಗೆ ಸಿಕ್ಕಾ ಪಟ್ಟೆ ಹಣ ಸುರಿಯೋ ಬದಲು ಅದೇ ದುಡ್ಡಿನಲ್ಲಿ ಹಣ್ಣುಗಳನ್ನು ಖರೀದಿಸಿ ನಿತ್ಯವೂ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications












