Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಕಣ್ಣು ಉಜ್ಜುವ ಅಭ್ಯಾಸ ಇದ್ದರೆ ಬಿಟ್ಟು ಬಿಡಿ..! ಈ ಯುವಕನ ಕಾರ್ನಿಯಾಗೆ ಹಾನಿ..!
ನಾವು ನಿತ್ಯ ಎಷ್ಟು ಸಮಯ ಕಣ್ಣು ಮಿಟುಕಿಸುತ್ತೇವೆ. ಎಷ್ಟು ಸಮಯ ಕಣ್ಣನ್ನು ಉಜ್ಜಿಕೊಳ್ಳುತ್ತೇವೆ ಎಂದು ಕೇಳಿದರೆ ನಮಗೆ ಉತ್ತರ ಸಿಗಲ್ಲ. ಯಾಕಂದ್ರೆ ಇದೆರಡು ಬಹುಪಾಲು ನಮ್ಮ ಅರಿವಿಗೆ ಬಾರದೆ ನಡೆದು ಹೋಗುತ್ತದೆ. ನಾವು ದಿನದಲ್ಲಿ ಒಂದು ಬಾರಿಯಾದರು ಕಣ್ಣನ್ನು ಉಜ್ಜಿಕೊಳ್ಳುತ್ತೇವೆ.
ಕಣ್ಣಿಗೆ ಆಯಾಸವಾದಗ, ತುರಿಕೆಯಾದಾಗ ನಾವು ಕಣ್ಣು ಉಜ್ಜಿಕೊಳ್ಳುತ್ತೇವೆ. ಮಕ್ಕಳು ಅಳುವಾಗ ಕಣ್ಣು ಉಜ್ಜಿಕೊಳ್ಳುತ್ತಾರೆ. ಆದ್ರೆ ಕಣ್ಣನ್ನು ಈ ರೀತಿ ಉಜ್ಜಿಕೊಳ್ಳುವುದು ಉತ್ತಮವಲ್ಲ ಎಂದು ಹಿರಿಯರು ಆಗಾಗ ಹೇಳುತ್ತಿರುತ್ತಾರೆ. ಕಣ್ಣು ಉಜ್ಜಿಕೊಂಡಾ ಕಣ್ಣು ಸ್ವಲ್ಪ ಮಟ್ಟಿಗೆ ಕೆಂಪಗಾಗುವುದನ್ನು ನಾವು ನೋಡಬಹುದು.

ಆದ್ರೆ ಇಲ್ಲೊಬ್ಬ ಕಣ್ಣು ಉಜ್ಜಿಕೊಂಡ ಪರಿಣಾಮ ಆತನಿಗೆ ಕಣ್ಣು ದೃಷ್ಟಿಯೇ ಹೋಗುವ ಅಪಾಯಕ್ಕೆ ಸಿಲುಕಿದ್ದ. ಹೌದು ಮಲೇಷ್ಯಾದ ಯುವಕನೊಬ್ಬ ಕಣ್ಣು ಉಜ್ಜಿಕೊಂಡಿದ್ದರಿಂದ ಆತ ಕಣ್ಣಿನ ಕಾರ್ನಿಯಾಗೆ ಪೆಟ್ಟಾಗಿದೆ. ಈಗ ಕಾರ್ನಿಯಾ ಕಸಿಗೆ ಆತ ಒಳಗಾಗಬೇಕಾದ ಅನಿವಾರ್ಯತೆ ಎದುರಾದ ಘಟನೆ ನಡೆದಿದೆ.
ಮುಹಮ್ಮದ್ ಝಬೀದಿ ಎಂಬ ಯುವಕ ಈ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾನೆ. ಕೇವಲ ತುರಿಕೆ ಕಂಡುಬಂದಾಗ ಕಣ್ಣು ಉಜ್ಜಿ ಕೊಂಡಿದ್ದೇ ಇದಕ್ಕೆ ಕಾರಣವಾಗಿತ್ತು. ಆದರೆ ಒಂದು ಬಾರಿ ಕಣ್ಣು ಉಜ್ಜಿದ್ದರಿಂದ ಈ ರೀತಿ ಸಮಸ್ಯೆಗೆ ಒಳಗಾಗಿಲ್ಲ ಬದಲಾಗಿ ಚಿಕ್ಕವನಾಗಿನಿಂದಲೂ ಆತ ಹೆಚ್ಚಾಗಿ ಕಣ್ಣು ಉಜ್ಜಿಕೊಳ್ಳುವ ಅಭ್ಯಾಸ ಬೆಳೆಸಿಕೊಂಡಿದ್ದನಂತೆ.
ಮುಹಮ್ಮದ್ ಝಬೀದಿ ಬಹಳ ಕಾಲದಿಂದ ಕಣ್ಣಿನ ಅಲರ್ಜಿಗೆ ಒಳಗಾಗಿದ್ದಾರೆ. ಆಗಾಗ ಕಣ್ಣಿನ ಕಿರಿಕಿರಿ, ತುರಿಕೆ, ಕೆಂಪಾಗುವುದು ಕಾಡುತ್ತಿತ್ತು. ಹೀಗಾದಗೆಲ್ಲ ಆತ ಕಣ್ಣು ಉಜ್ಜಿಕೊಳ್ಳುತ್ತಿದ್ದ. ಆದರೆ ತಮ್ಮ 15ನೇ ವಯಸ್ಸಿನಲ್ಲಿ ಬಲಗಣ್ಣಿನ ದೃಷ್ಟಿ ಮಂದವಾಗಲು ಆರಂಭಿಸಿತ್ತಂತೆ. ಆದರೆ ಅವರು ಈ ಬಗ್ಗೆ ಗಮನ ಹರಿಸಲಿಲ್ಲ. ಅದರೆ 21 ವರ್ಷ ತಲುಪಿದಾಗ ಇದೊಂದು ಗಂಭೀರ ಸಮಸ್ಯೆಯಾಗಿ ಕಂಡುಬಂದಿತು.
ಬರುಬರುತ್ತ ದೃಷ್ಟಿ ಕಾಣಿಸದಿರಲು ಆರಂಭವಾಗಿತ್ತು. ಅಂತಿಮವಾಗಿ, ಅವರು ವೈದ್ಯರನ್ನು ಸಂಪರ್ಕಿಸಿದರು ಮತ್ತು ಅವರ ನಿರಂತರ ಕಣ್ಣು ಉಜ್ಜುವಿಕೆಯು ಅವರ ಕಾರ್ನಿಯಾವನ್ನು ತೀವ್ರವಾಗಿ ಹಾನಿಗೊಳಿಸಿದೆ ಎಂದು ತಿಳಿಯಿತು. ಅತನ ದೃಷ್ಟಿ ಮರುಕಳಿಸುವಂತೆ ಮಾಡಲು ಕಾರ್ನಿಯಲ್ ಕಸಿ ಅಗತ್ಯವಾಗಿ ಮಾಡಬೇಕಿತ್ತು.
ಝಬಿದಿ ಅವರು ತಮ್ಮ ಟಿಕ್‌ಟಾಕ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಈ ಎಲ್ಲವನ್ನು ಬಹಿರಂಗಪಡಿಸಿದ್ದಾರೆ ಮತ್ತು ಅವರ ಹದಿಹರೆಯದ ವರ್ಷದಿಂದ, ಅವರು 21 ನೇ ವಯಸ್ಸನ್ನು ತಲುಪುವ ಹೊತ್ತಿಗೆ ಅವರ ಕಾರ್ನಿಯಾದ ಮೇಲೆ ದೊಡ್ಡ ಗಾಯದ ಗುರುತು ಕಾಣಿಸಿಕೊಳ್ಳುವವರೆಗೆ ಅವರ ದೃಷ್ಟಿ ಸಮಯದೊಂದಿಗೆ ಹೆಚ್ಚು ಮಸುಕಾಗಿತ್ತು.
ಝಬೀದಿ ಈಗ ಯಶಸ್ವಿ ಕಾರ್ನಿಯಾ ಕಸಿ ಮಾಡಿಸಿಕೊಂಡಿದ್ದಾರೆ, ಅಲ್ಲಿ ಅವರ ಹಾನಿಗೊಳಗಾದ ಕಾರ್ನಿಯಾವನ್ನು ಹೊಸದರಿಂದ ಬದಲಾಯಿಸಲಾಯಿತು. ಈ ಚಿಕಿತ್ಸೆಯ ಬಳಿಕ ಅವರು ಎಂದಿನಂತೆ ಆಗಿತ್ತಿದ್ದಾರೆ. ಜೊತೆಗೆ ಕಣ್ಣಿನ ಕುರಿತ ನಿರ್ಲಕ್ಯ ಒಳಿತಲ್ಲ ಎಂದಿದ್ದಾರೆ.
ಇದಲ್ಲದೆ ಕಣ್ಣು ಉಜ್ಜಿಕೊಳ್ಳುವುದು ಕಣ್ಣಿನ ದೃಷ್ಟಿ ಸೇರಿದಂತೆ ಕಣ್ಣು ಉರಿ, ಅವಧಿ ಮುನ್ನ ದೃಷ್ಟಿ ಮಂದವಾಗುವುದು, ಕಾರ್ನಿಯಾ ಹಾನಿಗೆ ಕಾರಣವಾಗುತ್ತದೆ. ಆದರೆ ಈ ಕಣ್ಣನ್ನು ಉಜ್ಜಿಕೊಳ್ಳುವ ಪ್ರಕ್ರಿಯೆ ಪದೇ ಪದೇ ಮಾಡುತ್ತಿದ್ದರೆ ಅದರಿಂದ ಕಣ್ಣಿನ ಆರೋಗ್ಯಕ್ಕೆ ಹಾನಿಯಾಗುವುದು ಖಚಿತವಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications