Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ಮಾವಿನ ಹಣ್ಣು ತುಂಬಾ ತಿಂದ್ರೆ ಈ ಆರೋಗ್ಯ ಸಮಸ್ಯೆ ಉಂಟಾಗುತ್ತೆ ಹುಷಾರ್!
ಮಾವಿನಹಣ್ಣು ನಂಗೆ ಇಷ್ಟವಿಲ್ಲ ಅಂತ ಹೇಳುವವರನ್ನು ನಾನಂತೂ ಕಂಡಿಲ್ಲ... ಹಾಗೇ ಹೇಳುವರು ತುಂಬಾನೇ ವಿರಳ ಎನ್ನಬಹುದು. ಒಂದು ಮಾವಿನ ಹಣ್ಣನ್ನು ತಿಂದಾಗ ತೃಪ್ತಿಯಾಗಲ್ಲ, ಹೊಟ್ಟೆ ತುಂಬಾ ತಿಂದರೂ ಇನ್ನೂ ಬೇಕೆನಿಸುವುದು, ಅದುವೇ ಮಾವಿನ ಹಣ್ಣಿನ ರುಚಿಯ ವಿಶೇಷತೆ.
ಆದರೆ ತುಂಬಾ ಇಷ್ಟ ಅಂತ ಹೊಟ್ಟೆ ತುಂಬಾ ತಿನ್ನುವ ತಪ್ಪನ್ನು ಮಾಡಬೇಡಿ, ಏಕೆಂದರೆ ಮಾವಿನ ಹಣ್ಣನ್ನು ಅತಿಯಾಗಿ ತಿಂದರೆ ಕೆಲವೊಂದು ಆರೋಗ್ಯ ಸಮಸ್ಯೆ ಉಂಟಾಗುವುದು, ಅತಿಯಾಗಿ ಮಾವಿನಹಣ್ಣನ್ನು ತಿನ್ನುವುದರಿಂದ ಏನೆಲ್ಲಾ ಸಮಸ್ಯೆಗಳಿವೆ ಎಂದು ನೋಡೋಣ ಬನ್ನಿ:

ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗಬಹುದು: ಮಧುಮೇಹ ಸಮಸ್ಯೆ ಇಲ್ಲದಿದ್ದರೂ ತುಂಬಾ ಮಾವಿನಹಣ್ಣು ತಿಂದರೆ ಸಕ್ಕರೆಯಂಶ ಹೆಚ್ಚಾಗಿ ಸುಸ್ತು ಉಂಟಾಗುವುದು, ಆದ್ದರಿಂದ ಮಾವಿನ ಹಣ್ಣು ತುಂಬಾ ತಿನ್ನಬಾರದು, ಅದರಲ್ಲೂ ಮಧುಮೇಹ ಸಮಸ್ಯೆಯಿದ್ದರೆ ಮಾವಿನಹಣ್ಣನ್ನು ಎಷ್ಟು ಮಿತಿಯಲ್ಲಿ ತಿನ್ನುತ್ತೀರೋ ಅಷ್ಟೇ ಒಳ್ಳೆಯದು.
ಲ್ಯಾಟೆಕ್ಸ್ ಅಲರ್ಜಿಯಿದ್ದರೆ ಜಾಗ್ರತೆ: ಕೆಲವರಿಗೆ ಲ್ಯಾಟೆಕ್ಸ್ ಅಲರ್ಜಿ ಸಮಸ್ಯೆ ಇರುತ್ತದೆ. ಅಂಥವರು ಮಾವಿನ ಹಣ್ಣನ್ನು ಅತಿಯಾಗಿ ತಿಂದರೆ ಈ ಸಮಸ್ಯೆ ಹೆಚ್ಚುವುದು. ಇದರಿಂದ ತ್ವಚೆಯಲ್ಲಿ ತುರಿಕೆ, ಗಂಟಲು ಊದುವುದು, ಉಸಿರಾಟದಲ್ಲಿ ತೊಂದರೆ ಉಂಟಾಗುವುದು.
ಬೇಧಿ ಉಂಟಾಗುವುದು
ಮಾವಿನ ಹಣ್ಣು ತುಂಬಾ ತಿನ್ನುವುದರಿಂದ ಬೇಧಿ ಸಮಸ್ಯೆ ಉಂಟಾಗುವುದು. ಏಕೆಂದರೆ ಇದರಲ್ಲಿ ನಾರಿನಂಶ ಅಧಿಕವಿರುತ್ತದೆ, ಹೆಚ್ಚಾಗಿ ತಿಂದಾಗ ತುಂಬಾ ಬೇಧಿ ಉಂಟಾಗುವುದು, ಆದ್ದರಿಂದ ಇಷ್ಟ ಅಂತ ತುಂಬಾ ತಿನ್ನಬೇಡಿ.
ಮೈ ತೂಕ ಹೆಚ್ಚಾಗುವುದು
ತುಂಬಾ ಮಾವಿನಹಣ್ಣು ತಿನ್ನುವುದರಿಂದ ಮೈ ತೂಕ ಹೆಚ್ಚಾಗುವುದು. ನೀವು ಫಿಟ್ನೆಸ್ ಕಾಯ್ದುಕೊಳ್ಳಬೇಕು ಎಂದರೆ ದಿನದಲ್ಲಿ 330 ಗ್ರಾಂಕ್ಕಿಂತ ಅಧಿಕ ಸೇವಿಸಬೇಡಿ, ಅಂದರೆ ಒಂದು ಮಾವಿನ ಹಣ್ಣು ತಿಂದರೆ ಸಾಕು.
ಕೃತಕವಾಗಿ ಹಣ್ಣಾಗಿಸಿದ ಮಾವಿನಹಣ್ಣು ಬಳಸಬೇಡಿ
ಮಾರುಕಟ್ಟೆಯಲ್ಲಿ ಮಾವಿನಹಣ್ಣಿನದ್ದೇ ದರ್ಬಾರು, ಅದರಲ್ಲಿ ಯಾವುದು ಕೃತಕವಾಗಿ ಹಣ್ಣಾಗಿಸಿದ್ದು, ಯಾವುದು ನೈಸರ್ಗಿಕವಾಗಿ ಹಣ್ಣಾಗಿದ್ದು ಎಂದು ನಿಮಗೆ ಗೊಂದಲ ಉಂಟಾದರೆ ಅದರ ತೊಟ್ಟು ನೋಡಿ. ಕೃತಕ ಪೌಡರ್ ಬಳಸಿ ಹಣ್ಣಾಗಿಸಿದರೆ ಅದರ ತೊಟ್ಟು ಹಣ್ಣಾಗಿರುವುದಿಲ್ಲ. ಅಲ್ಲದೆ ನೈಸರ್ಗಿಕವಾಗಿ ಹಣ್ಣಾದ ಮಾವಿನಹಣ್ಣು ತಿನ್ನುವಾಗ ಸಿಹಿಯಾಗಿರುತ್ತದೆ, ಆದರೆ ಮಾವಿನಕಾಯಿಗೆ ಪೌಡರ್ ಹಾಕಿ ಹಣ್ಣಾಗಿಸಿದ್ದರೆ ಹಣ್ಣು ತಿನ್ನುವಾಗಲೇ ಗೊತ್ತಾಗುವುದು, ಅಂಥ ಹಣ್ಣನ್ನು ನೀಡಬೇಡಿ. ಅಲ್ಲದೆ ಮಕ್ಕಳಿಗೆ ನೀಡುವಾಗ ಪೌಡರ್ ಹಾಕಿದ ಮಾವಿನಹಣ್ಣು ನೀಡಲೇಬೇಡಿ, ಇದರಿಂದ ಅವರಿಗೆ ಆರೋಗ್ಯ ಸಮಸ್ಯೆ ಉಂಟಾಗುವುದು.
ಮಾವಿನ ಹಣ್ಣನ್ನು ಯಾವಾಗ ತಿಂದರೆ ಒಳ್ಳೆಯದು?
ನೀವು ಮಾವಿನಹಣ್ಣನ್ನು ಯಾವಾಗ ಬೇಕಾದರೂ ತಿನ್ನಬಹುದು, ಆದರೆ ಮಾವಿನ ಹಣ್ಣನ್ನು ಆಹಾರಕ್ಕಿಂತ ಅರ್ಧ ಗಂಟೆ ಮುಂಚೆ ಅಥವಾ ಊಟವಾಗಿ ಅರ್ಧ ಅಥವಾನೊಂದು ಗಂಟೆ ಕಳೆದ ಮೇಲೆ ತಿಂದರೆ ಒಳ್ಳೆಯದು. ಹೀಗೆ ತಿನ್ನುವುದರಿಂದ ಅದರಲ್ಲಿರುವ ಪೋಷಕಾಂಶಗಳನ್ನು ನಮ್ಮ ಶರೀರ ಹೀರಿಕೊಳ್ಳಲು ಸಹಾಯವಾಗುತ್ತದೆ. ಇನ್ನು ಇದರಿಂದ ಮಿಲ್ಕ್ ಶೇಕ್, ಜ್ಯೂಸ್ ಎಲ್ಲಾ ಮಾಡಿ ಕುಡಿಯಬಹುದು ಆದರೆ ಮಾವಿನಹಣ್ಣನ್ನು ಹಾಗೇ ಸೇವಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications