Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ಮುರಿದ ಮೂಳೆಯನ್ನೇ ಜೋಡಿಸುತ್ತೆ ಈ ಗಿಡ..! ಇದರ ಉಪಯೋಗಗಳೇನು ಗೊತ್ತಾ?
ಹಿರಿಯರು ಮಾತನಾಡುವಾಗ ಹಿತ್ತಲ ಗಿಡ ಮದ್ದಲ್ಲ ಎಂಬ ಮಾತು ಹೇಳುತ್ತಿರುತ್ತಾರೆ. ಅಂದರೆ ಹಿತ್ತಲಿನಲ್ಲಿ ಇರುವ ಗಿಡ ನಿಮಗೆ ಮದ್ದಾಗದೆ ಇರಬಹುದು ಎಂಬ ಕಲ್ಪನೆ ಅದು. ಆದ್ರೆ ನಮ್ಮ ಹಿತ್ತಲಿನಲ್ಲೇ ಸಿಗುವ ಹಲವು ಸಸಿಗಳು, ಗಿಡಗಳು ನಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳ ತರಲಿವೆ. ಅದ್ರೆ ನಮಗೆ ಆ ಕುರಿತ ಮಾಹಿತಿ ಇಲ್ಲದಿರುವುದು ವಿಪರ್ಯಾಸ.
ಹಾಗೆ ನಮ್ಮ ಆಯುರ್ವೇದದಲ್ಲಿ ಉಲ್ಲೇಖವಾಗಿರುವ ಹಲವು ಚಿಕಿತ್ಸೆಗಳಿಗೆ ನಮ್ಮ ಮನೆ ಬಳಿಯೇ ಇರುವ ಹಲವು ಔಷಧಕಾರಿ ಅಂಶಗಳಿರುವ ಸಸ್ಯಗಳು ಪರಿಹಾರ ನೀಡಲಿದೆ. ಅಂತಹ ಗಿಡಗಳಲ್ಲಿ ಈ ಮಂಗರವಳ್ಳಿ, ಮಂಗರ ಬಳ್ಳಿ ಅಥವಾ ಸಂದು ಬಳ್ಳಿ ಎಂದು ಪರೆಯಲ್ಪಡು ಒಂದು ಗಿಡವೂ ಆಗಿದೆ.

ನೀವು ಸಹ ಈ ಮಂಗರವಳ್ಳಿ ಗಿಡದ ಹೆಸರು ಹಲವು ಕೇಳಿರಬಹುದು. ಅದರಲ್ಲು ಆರ್ಯುವೇದದಲ್ಲಿ ಈ ಗಿಡಕ್ಕೆ ಬಹಳ ದೊಡ್ಡ ಮಹತ್ವವಿದೆ. ಏಕೆಂದರೆ ಈ ಗಿಡದಲ್ಲಿ ಹತ್ತು ಹಲವು ಆರೋಗ್ಯಕರ ಗುಣಗಳಿವೆ. ಹಾಗಾದ್ರೆ ನಾವಿಂದು ಈ ಗಿಡದ ಉಪಯೋಗವೇನು? ಯಾವ ಕಾಯಿಲೆಗೆ ಇದು ಬಳಸಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಈ ಗಿಡದ ಉಪಯೋಗ ತಿಳಿಯುವ ಮೊದಲು ಈ ಗಿಡ ಎಲ್ಲಿ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಈ ಗಿಡ ಗಟ್ಟಿ ಸ್ಥಳಗಳು ಅಂದರೆ ನೀರಿಲ್ಲದೆ ಒಣಗುವ ಕಲ್ಲುಗಳಿಂದ ಕೂಡಿದ ಸ್ಥಳದಲ್ಲಿ ನೋಡಬಹುದು. ಇವು ಬೆಳೆಯಲು ನೀರಿನ ಅವಶ್ಯಕತೆ ಇರುವುದಿಲ್ಲ ಜೊತೆಗೆ ಇವು ಮುಳ್ಳುಗಳನ್ನು ಹೊಂದಿರುತ್ತವೆ. ಇದು ನೋಡಲು ನಮ್ಮ ಬೆನ್ನು ಕೂಲಿನಂತೆ ಆಕಾರ ಹೊಂದಿರುತ್ತದೆ. ಕೋಲು ಕೋಲಿನ ರಚನೆ ಹಾಗೂ ಮಧ್ಯದಲ್ಲಿ ಎಲೆಗಳು ಮತ್ತು ಸಣ್ಣ ಸಣ್ಣ ಕಾಯಿಗಳ ಇದು ಬಿಡುತ್ತದೆ.
ಕೆಲವರು ಈ ಗಿಡವನ್ನು ಅಲಂಕಾರದ ದೃಷ್ಟಿಯಿಂದಲೂ ಬೆಳೆಸುತ್ತಾರೆ, ಮತ್ತೆ ಕೆಲವರಿಗೆ ಇದು ಔಷಧಿ ಗುಣವುಳ್ಳ ಗಿಡ ಎಂಬುದೇ ತಿಳಿದಿರುದಿಲ್ಲ. ಈ ಗಿಡದ ಆರೋಗ್ಯಕರ ಲಾಭ ಇಲ್ಲಿವೆ ನೋಡಿ.
ಮುರಿದ ಮೂಳೆ ಸೇರಿಸುತ್ತೆ ಈ ಗುಣ
ನಿಮಗೆ ಅಚ್ಚರಿಯಾಗಬಹುದು, ನಿಮ್ಮ ದೇಹದ ಯಾವುದೇ ಮೂಳೆಗೆ ಹಾನಿಯಾಗಿದ್ದರೆ ಅಥವಾ ಮುರಿತಕ್ಕೊಳಗಾಗಿದ್ದರೆ ಈ ಗಿಡ ನಿಮ್ಮ ಮೂಳೆ ಮುರಿತವನ್ನು ಸರಿ ಮಾಡುತ್ತೆ. ಹೀಗಾಗಿಯೇ ಇದಕ್ಕೆ ಸಂದು ಬಳ್ಳಿ ಎನ್ನಲಾಗಿದೆ. ಈ ಗಿಡದ ಸೊಪ್ಪನ್ನು ಅರಿದು ಅದನ್ನು ಮುರಿದ ಮೂಳೆಯ ಮೇಲೆ ಇಟ್ಟು ಪಟ್ಟಿ ಕಟ್ಟುತ್ತಾರೆ, ಜೊತೆಗೆ ಈ ಗಿಡ ಸೊಪ್ಪಿನ ಕಷಾಯ ಮಾಡಿಸಿ ಕುಡಿಸುತ್ತಾರೆ, ಹೀಗೆ ಮಾಡೋದ್ರಿಂದ ಕೆಲವೇ ದಿನಗಳಲ್ಲಿ ಮುರಿದ ಮೂಳೆ ಸರಿಯಾಗುತ್ತದೆ. ಈ ರೀತಿ ಇಂದಿಗೂ ನಾಟಿ ವೈದ್ಯರು ಇದೇ ವಿಧಾನ ಅನುಸರಿಸಿಕೊಂಡು ಬಂದಿದ್ದಾರೆ.
ಕೊಲೆಸ್ಟ್ರಾಲ್ ನಿಯಮಿತದಲ್ಲಿಡುವ ಗುಣ
ಈ ಗಿಡದ ಎಲೆಯಿಂದ ತಯಾರಿಸಿದ ಚೂರ್ಣ ಅಥವಾ ಕಷಾಯವನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣದಲ್ಲಿರಲಿದೆ. ಜೊತೆಗೆ ಇದರ ಸೇವನೆಯಿಂದ ಮೂಳೆಗಳು ಬಲವಾಗುತ್ತವೆ. ಜೀರ್ಣಕ್ರಿಯೆಗೂ ಇದು ಉತ್ತಮ. ಇದರಿಂದ ಆಸಿಡಿಟಿ ಕಡಿಮೆ ಮಾಡಲಿದೆ.
ಕೆಮ್ಮು ಮತ್ತು ಕಫ ನಿವಾರಣೆ
ನಿಮಗೆ ಕೆಮ್ಮು ಮತ್ತು ಕಫ ಇದ್ದರೆ ಇದರ ಕಷಾಯ ರಾಮಬಾಣ. ಏಕೆಂದರೆ ಕೆಮ್ಮು ಕಫ ಹಲವು ಕಾರಣಕ್ಕೆ ಉಂಟಾಗಬಹುದು, ಅದರಲ್ಲೂ ಬೇಸಿಗೆಯಲ್ಲಿ ಆಗುವ ಕೆಮ್ಮು ಮತ್ತು ಕಫ ಅಪಾಯಕಾರಿಯಾಗುತ್ತದೆ. ಹೀಗೆ ಇದರ ಕಷಾಯ ಕೆಮ್ಮು ಮತ್ತು ಕಫ ನಿವಾರಣೆ ಮಾಡಲಿದೆ.
ಇದನ್ನು ಮನೆಯಲ್ಲಿ ನೆಡುವುದು ಹೇಗೆ?
ಈ ಗಿಡಗಳು ನಿಮಗೆ ನರ್ಸರಿಯಲ್ಲಿ ಸಿಗುತ್ತವೆ. ಪ್ರತಿಯೊಂದು ಗೇಣುಗಳು ಸಹ ಗಿಡಗಳಾಗಿ ಪರಿವರ್ತನೆಯಾಗುತ್ತವೆ. ಇದನ್ನು ಸಾಮಾನ್ಯ ಪಾಟ್‌ನಲ್ಲಿ ಇಟ್ಟು ಬೆಳೆಸಬಹುದು. ಇದಕ್ಕೆ ನೀರಿನ ಅಗತ್ಯ ಕಡಿಮೆಯಾಗಿದ್ದು, ಬೆಳಕು ಚೆನ್ನಾಗಿ ಬರುವ ಕಡೆ ಬೆಳೆಯುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications












