Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಭಾರತೀಯರಲ್ಲಿ ಹೆಚ್ಚಾಗುತ್ತಿದೆ ವಿಟಮಿನ್ ಡಿ ಕೊರತೆ, ಈ ಜೀವನಶೈಲಿ ಬೇಡ್ವೆ ಬೇಡ
ನಿಮಗೆ ಗೊತ್ತೆ? ಭಾರತದಲ್ಲಿ 490 ಮಿಲಿಯನ್ ಜನರಿಗೆ ವಿಟಮಿನ್ ಡಿ ಕೊರತೆಯಿದೆ. ಅದರಲ್ಲಿ ಶೆ. 31ರಷ್ಟು ಮಕ್ಕಳು ಹಾಗೂ ಹಸಿಹರೆಯದ ಪ್ರಾಯದವರಾಗಿದ್ದಾರೆ, ಇದು ನಿರ್ಲಕ್ಷ್ಯ ಮಾಡುವಂಥ ವಿಷಯ ಅಲ್ವೇ ಅಲ್ಲ.

ಭಾರತದಲ್ಲಿ ವಿಟಮಿನ್ ಡಿ ಕೊರತೆ ಹೆಚ್ಚಾಗುತ್ತಿರಲು ಕಾರಣವೇನು ಎಂದು ನೋಡುವುದಾದರೆ ಬದಲಾದ ನಮ್ಮ ಜೀವನಶೈಲಿ. ಬಹುತೇಕ ಜನರು ಸೂರ್ಯನ ಬೆಳಕಿಗೆ ಒಂದು 10 ನಿಮಿಷ ಕೂಡ ಮೈಯೊಡ್ಡಿ ನಿಲ್ಲುತ್ತಿಲ್ಲ. ಅದರಲ್ಲದೆ ನಾವು ಭಾರತೀಯರು ಸ್ವಲ್ಪ ಗೋಧಿ ಬಣ್ಣದವರು. ನಾವು ದಿನಾ ಬೆಳಗ್ಗೆ 15 ನಿಮಿಷ ಬಿಸಿಲಿನಲ್ಲಿ ನಿಲ್ಲಬೇಕಾಗುತ್ತದೆ. ಆದರೆ ಇದನ್ನು ಎಷ್ಟು ಜನ ಮಾಡುತ್ತಿದ್ದಾರೆ.
ಇನ್ನು ನಗರ ಪ್ರದೇಶಗಳಲ್ಲಿ ಮಕ್ಕಳು ಕೂಡ ಹೊರಗಡೆ ಹೋಗಿ ಆಟ ಆಡುತ್ತಿಲ್ಲ, ಹೀಗಾಗಿ ಮಕ್ಕಳಲ್ಲಿಯೂ ವಿಟಮಿನ್ ಡಿ ಕೊರತೆ ಉಂಟಾಗುತ್ತಿದೆ.
ವಿಟಮಿನ್ ಡಿ ಕೊರತೆ ಉಂಟಾದರೆ ಉಂಟಾಗುವ ತೊಂದರೆಗಳೇನು? ನಮ್ಮ ದೇಹದಲ್ಲಾಗುವ ಲಕ್ಷಣಗಳೇನು, ಸಪ್ಲಿಮೆಂಟ್ ತೆಗೆದುಕೊಂಡರೆ ವಿಟಮಿನ್ ಡಿ ಸಮಸ್ಯೆ ತಡೆಗಟ್ಟಬಹುದೇ? ಈ ಎಲ್ಲಾ ಮಾಹಿತಿ ನೋಡೋಣ:
ವಿಟಮಿನ್ ಡಿ ಕೊರತೆ ಉಂಟಾದಾಗ ದೇಹದಲ್ಲಿ ಈ ಲಕ್ಷಣಗಳು ಕಂಡು ಬರುವುದು
* ಮೂಳೆ ಬಲಹೀನವಾಗುವುದು
* ಸ್ನಾಯುಗಳು ಬಲಹೀನವಾಗುವುದು
* ಮೈ ಕೈ ನೋವು ಕಂಡು ಬರುವುದು'
* ಸಂಧಿವಾತ
ಇವುಗಳ ಜೊತೆಗೆ
* ಸುಸ್ತು, ತಲೆಸುತ್ತು
* ಖಿನ್ನತೆ
ವಿಟಮಿನ್ ಡಿ ಕೊರತೆಯಿಂದ ಉಂಟಾಗುವ ಗಂಭೀರ ಸಮಸ್ಯೆಗಳೇನು?
* ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾಗುವುದು
* ದೇಹದಲ್ಲಿ ರಂಜಕದಂಶ ಕಡಿಮೆಯಾಗುವುದು
* ಮೂಳೆಗಳು ಮೃದುವಾಗಿ ಬಲಹೀನವಾಗುವುದು
ವಿಟಮಿನ್ ಡಿ ಕೊರತೆಗೆ ಕಾರಣವೇನು?
* ಸೂರ್ಯನ ಬೆಳಕು ಮೈ ಮೇಲೆ ಬೀಳದಿರುವುದು
* ನಮ್ಮ ದೇಹ ವಿಟಮಿನ್ ಡಿ ಸರಿಯಾಗಿ ಹೀರಿಕೊಳ್ಳದಿದ್ದರೆ
ಇನ್ನು ಕೆಲವೊಂದು ಆರೋಗ್ಯ ಸಮಸ್ಯೆಗಳಿಂದಲೂ ವಿಟಮಿನ್ ಡಿ ಕೊರತೆ ಉಂಟಾಗುವುದು
* ತೂಕ ಇಳಿಕೆಗೆ ಸರ್ಜರಿ
* ಕಿಡ್ನಿ ಡಯಾಲಿಸಿಸ್
* ಒಬೆಸಿಟಿ
* ಸಿಟ್ಇಕ್ ಫೈಪ್ರೋಸಿಸ್
* ಕೊಲೆಸ್ಟ್ರಾಲ್ ಕಡಿಮೆ ಮಾಡುವ ಔಷಧಗಳು
* ಸ್ಟಿರಾಯ್ಡ್‌ಗಳು
ಯಾರಿಗೆ ವಿಟಮಿನ್ ಡಿ ಹೆಚ್ಚಾಗಿ ಕಂಡು ಬರುವುದು
60 ವರ್ಷ ಮೇಲ್ಪಟ್ಟವರಿಗೆ: ವಯಸ್ಸಾಗುತ್ತಿದ್ದಂತೆ ವಿಟಮಿನ್ ಡಿ ಕೊರತೆ ಕೂಡ ಉಂಟಾಗುವುದು.
ನವಜಾತ ಶಿಶುಗಳಿಗೆ: ನವಜಾತ ಶಿಶುಗಳಿಗೆ ವಿಟಮಿನ್ ಡಿ ಕೊರತೆ ಉಂಟಾಗುವುದು
* ಕಪ್ಪು ತ್ವಚೆ ಬಣ್ಣದವರಿಗೆ: ಬಿಳಿ ಚರ್ಮದವರಿಗಿಂತ ಕಪ್ಪು ತ್ವಚೆ ಚರ್ಮದವರಿಗೆ ವಿಟಮಿನ್ ಡಿ ಕೊರತೆ ಕಂಡು ಬರುವುದು.
* ಮನೆಯೊಳಗಡೆ ಇರುವವರಿಗೆ: ಯಾರು ಅಧಿಕ ಸಮಯ ಮನೆಯ ಒಳಗಡೆಯೇ ಕಳೆಯುತ್ತಾರೋ ಅವರಲ್ಲಿಯೂ ವಿಟಮಿನ್ ಡಿ ಸಮಸ್ಯೆ ಕಂಡು ಬರುವುದು.
ವಿಟಮಿನ್ ಡಿ ಸಮಸ್ಯೆ ತಡೆಗಟ್ಟುವುದು ಹೇಗೆ?
* ನೀವು ಸ್ವಲ್ಪ ಸಮಯ ಬಿಸಿಲಿನಲ್ಲಿ ಕಳೆಯಿರಿ. ಬೆಳಗ್ಗೆ 9 ಗಂಟೆಯ ಒಳಗಡೆ ಸಂಜೆ 4 ಗಂಟೆಯ ಮೇಲೆ ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಕಳೆಯಿರಿ.
ದಿನಾ ಒಂದು 15 ನಿಮಿಷ ಬಿಸಿಲಿನಲ್ಲಿ ನಿಲ್ಲಿ.
ಆಹಾರಗಳಲ್ಲಿ ವಿಟಮಿನ್ ಡಿ ಇರುತ್ತದೆಯೇ?
ಮೀನು
ಮೊಟ್ಟೆ
ಅಣಬೆ
ಮೊಟ್ಟೆಯ ಹಳದಿ
ಕಾಡ್ ಲಿವರ್
ಕಿತ್ತಳೆ ರಸ
ಹಾಲಿನ ಉತ್ಪತ್ತನ್ನಗಳು
ಧಾನ್ಯಗಳು
ಇವುಗಳಲ್ಲಿ ಅಲ್ಪ ಪ್ರಮಾಣದಲ್ಲಿರುತ್ತದೆ.
ವಿಟಮಿನ್ ಡಿ ಸಪ್ಲಿಮೆಂಟ್ಸ್ ತೆಗೆದುಕೊಳ್ಳಬಹುದೇ?
ವೈದ್ಯರ ಸಲಹೆಯಿಲ್ಲದೆ ನೀವು ವಿಟಮಿನ್ ಡಿ ಸಪ್ಲಿಮೆಂಟ್ಸ್ ತೆಗೆದುಕೊಳ್ಳಬಾರದು. ವೈದ್ಯರು ನಿಮ್ಮ ಆರೋಗ್ಯ ಸ್ಥಿತಿ ನೋಡಿ ಅದಕ್ಕೆ ತಕ್ಕ ಡೋಸ್‌ನ ವಿಟಮಿನ್ ಡಿ ತೆಗೆದುಕೊಳ್ಳಲು ಸೂಚಿಸುತ್ತಾರೆ. ಅಷ್ಟು ಮಾತ್ರ ತೆಗೆದುಕೊಳ್ಳಿ.
ವಿಟಮಿನ್ ಡಿ ಸಪ್ಲಿಮೆಂಟ್ಸ್ ಅಧಿಕ ತೆಗೆದುಕೊಂಡರೆ ಈ ಸಮಸ್ಯೆ ಉಂಟಾಗುವುದು?
* ವಾಂತಿ
* ಅತ್ಯಧಿಕ ಬಾಯಾರಿಕೆ
* ಆಗಾಗ ಮೂತ್ರವಿಸರ್ಜನೆಗೆ ಹೋಗುವುದು
* ಮಲಬದ್ಧತೆ
* ಗೊಂದಲ
ಕೊನೆಯದಾಗಿ: ನೀವು ವಿಟಮಿನ್ ಡಿ ಸಪ್ಲಿಮೆಂಟ್ ತೆಗೆದುಕೊಳ್ಳುವ ಬದಲಿಗೆ ಸೂರ್ಯನಿಂದ ಖರ್ಚಿಯಿಲ್ಲದೆ ಪಡೆಯಿರಿ. ಚಿಕ್ಕ ಮಗುವಿದ್ದರೆ ಬೆಳಗ್ಗಿನ ಬಿಸಿಲಿಗೆ ಸ್ವಲ್ಪ ಹೊತ್ತು ಹಿಡಿಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

