Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗೋಬಿ ಪ್ರಿಯರೇ, ಗೋಬಿ ಮಂಚೂರಿಯನ್ ಬ್ಯಾನ್ ಆಗಿಲ್ಲ, ಬ್ಯಾನ್ ಆಗಿರುವುದೇನು?
ಕರ್ನಾಟಕದಲ್ಲಿ ಗೋಬಿ ಬ್ಯಾನ್ ಆಗಿಲ್ಲ, ಆದರೆ ಹೆಚ್ಚಿನವರು ಗೋಬಿ ಮಂಚೂರಿಯನ್ ಬ್ಯಾನ್ ಆಗಿದೆ ಅಂದುಕೊಂಡಿದ್ದಾರೆ. ಇನ್ನು ಬೀದಿ ಬದಿಯ ವ್ಯಾಪಾರಿಗಳೂ ಗಾಬರಿಯಾಗಿದ್ದಾರೆ. ಅಯ್ಯೋ ನಮ್ಮ ಹೊಟ್ಟೆ ಪಾಡಿನ ಗತಿಯೇನು ಅಂದುಕೊಂಡಿದ್ದಾರೆ, ಆದರೆ ಆತಂಕ ಪಡಬೇಕಾಗಿಲ್ಲ ಗೋಬಿ ಮಂಚೂರಿಯನ್ ಮಾಡಬಹುದು, ಆದರೆ ಅದರಲ್ಲಿ ಕ್ಯಾನ್ಸರ್ ತರುವ ರಾಸಾಯನಿಕವಿರಬಾರದು ಅಷ್ಟೇ...

ಹೌದು ಗೋಬಿ ಮಂಚೂರಿಯನ್‌ನಲ್ಲಿತ್ತು ಅಪಾಯಕಾರಿ ರಾಸಾಯನಿಕ
ಗೋಬಿ ಬಣ್ಣ ನೋಡುವಾಗ ಬಾಯಲ್ಲಿ ನೀರೂರುತ್ತೆ, ಗೋಬಿ ರುಚಿಗಿಂತ ಮೊದಲು ಆ ಬಣ್ಣ ಗ್ರಾಹಕರನ್ನು ಸೆಳೆಯುತ್ತೆ, ಆದರೆ ಆ ಬಣ್ಣ ಆ ರೀತಿ ಆಕರ್ಷಕವಾಗಿ ಕಾಣಲು ಕಾರಣ ಅದರಲ್ಲಿರುವ ರಾಸಾಯನಿಕ ಬಣ್ಣ. ಇನ್ಮುಂದೆ ಆಹಾರ ಸುರಕ್ಷಿತೆ ಮತ್ತು ಗುಣಮಟ್ಟ ಕಾಯ್ದೆ 2006 ನಿಯಮ 59ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಸರ್ಕಾರ ಹೇಳಿದೆ. ಗೋವಾದಲ್ಲಿಯೂ ಈಗಾಗಲೇ ಗೋಬಿ ಮಂಚೂರಿಯನ್ ಬ್ಯಾನ್ ಆಗಿದೆ, ಅದು ಗರಿಗರಿಯಾಗಿ ಬರಲು ಸೋಪಿನ ಪುಡಿ ಕೂಡ ಬಳಸಲಾಗುತ್ತಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಗೋಬಿಯಲ್ಲಿರುವ ರಾಸಾಯನಿಕದಿಂದ ಕ್ಯಾನ್ಸರ್ ಬರುವುದು
ಗೋಬಿಯಲ್ಲಿ ಬರುವ ಆಕರ್ಷಕ ಬಣ್ಣ ಬರಲು ಬಳಸುವ ಕಲರ್ ಪುಡಿಯಿಂದ ಕ್ಯಾನ್ಸರ್ ಬರುವುದು, ಕಾಟನ್ ಕ್ಯಾಂಡಿಯನ್ನೂ ಇದೇ ಕಾರಣಕ್ಕೆ ಬ್ಯಾನ್ ಮಾಡಲಾಗುವುದು. ಹೀಗಾಗಿ ಜನರ ಆರೋಗ್ಯದ ದೃಷ್ಟಿಯಿಂದ ಈ ಗೋಬಿ ಮಂಚೂರಿಯನ್‌ಗೆ ಬಣ್ಣ ಬಳಸುವಂತಿಲ್ಲ, ಒಂದು ವೇಳೆ ಬಳಸಿದರೆ 7-10 ವರ್ಷ ಜೈಲು ಶಿಕ್ಷೆಯಾಗಲಿದೆ.
ರೋಡಮೈನ್ ಬಿ ಎಂಬ ರಾಸಾಯನಿಕ
ರೋಡಮೈನ್ ಬಿ (RhB) ಒಂದು ರಾಸಾಯನಿಕವಾಗಿದ್ದು ಇದನ್ನು ರೇಷ್ಮೆ, ಸೆಣಬು, ಚರ್ಮ, ಹತ್ತಿ ಮತ್ತು ಉಣ್ಣೆಯನ್ನು ಬಣ್ಣ ಮಾಡಲು ಸಿಂಥೆಟಿಕ್ ಬಣ್ಣಗಳಲ್ಲಿ ಸಾಮಾನ್ಯವಾಗಿ ಬಳಸಲಾಗುವುದು. ಇನ್ನು ಸೌಂದರ್ಯವರ್ಧಕಗಳು ಮತ್ತು ಪ್ಲಾಸ್ಟಿಕ್ ಉದ್ಯಮಗಳಲ್ಲಿ ಕೂಡ ಇದನ್ನು ಬಳಸಲಾಗುವುದು. ಇದು ಅತ್ಯಂತ ಕಡಿಮೆ ದರದಲ್ಲಿ ಸಿಗುವ ರಾಸಾಯನಿಕವಾಗಿರುವುದರಿಂದ ಬಹುಪಾಲು ಮಂದಿ ಇದರ ಬಳಕೆ ಮಾಡುತ್ತಾರೆ. ಆಹಾರಗಳು ಹೆಚ್ಚು ಬಣ್ಣಯುಕ್ತವಾಗಿ ಕಾಣುವ ಸಲುವಾಗಿ ಈ ರಾಸಾಯನಿಕವನ್ನು ಬಳಸಲಾಗುಗುವುದು, ಇನ್ನೂ ಆಘಾತಕಾರಿ ಸಂಗತಿಯೆಂದರೆ ಮೆಣಸಿನ ಪುಡಿಯಲ್ಲಿ ಇದನ್ನು ಕಲಬೆರಿಕೆ ಮಾಡಲಾಗುವುದು.
ರೋಡಮೈನ್ ಬಿ ಅನ್ನು ಏಕೆ ನಿಷೇಧಿಸಲಾಗುವುದು?
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಪ್ರಕಾರ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಆಹಾರ ಉತ್ಪನ್ನಗಳ ಗುಣಮಟ್ಟ ಮತ್ತು ಆಹಾರ ಸೇರ್ಪಡೆಗಳು) ನಿಯಂತ್ರಣ, 2011 ರಲ್ಲಿ ಅನುಮತಿಸದ ಹೊರತು ಆಹಾರಕ್ಕೆ ಯಾವುದೇ ಬಣ್ಣ ಸೇರಿಸಬಾರದು ಎಂಬ ನಿಯಮವಿದೆ. ಈ ನಿಯಮದಡಿ ರೋಡಮೈನ್ ಬಿಯನ್ನು ಹೊರಗಿಡಲಾಗಿದೆ. ಇದರ ರಾಸಾಯನಿಕವು ಕ್ಯಾನ್ಸರ್ ಕಾರಕ ಎಂದು ವರದಿಯಾಗಿರುವುದರಿಂದ ಇದರ ಬಳಕೆ ನಿಷೇಧಿಸಲಾಗುವುದು. ಆದರೆ ಆಹಾರಗಳಲ್ಲಿ ಬಣ್ಣಗಳ ಬಳಸದೆ ಇರಲು ಸಾಧ್ಯವೇ ಇಲ್ಲ. ಹೀಗಾಗಿ ಈ ಸಂಸ್ಥೆ ಕೆಲವು ಅಧಿಕೃತ ಬಣ್ಣಗಳನ್ನು ಬಳಸಲು ಅನುಮತಿ ನೀಡಲಾಗಿದೆ. ಕೆಂಪು - ಪೊನ್ಸೆಯು 4R, ಕಾರ್ಮೋಸಿನ್, ಎರಿಥ್ರೋಸಿನ್ ಹಳದಿ - ಟಾರ್ಟ್ರಾಜೈನ್, ಸನ್‌ಸೆಟ್ ಹಳದಿ FCF ನೀಲಿ - ಇಂಡಿಗೊ ಕಾರ್ಮೈನ್, ಬ್ರಿಲಿಯಂಟ್ ಬ್ಲೂ FCF ಹಸಿರು - ಫಾಸ್ಟ್ ಗ್ರೀನ್ FCF ಈ ಬಣ್ಣಗಳನ್ನು ಆಹಾರ ತಯಾರಿಕೆಯಲ್ಲಿ ಬಳಸಲು FSSAI ಅನುಮತಿ ನೀಡಿದೆ.
ಮಕ್ಕಳಿಗೆ ಬಣ್ಣದ ಚಾಕೋಲೆಟ್ ಕೊಡಿಸುವಾಗ ಜಾಗ್ರತೆ
ಕೃತಕ ಬಣ್ಣವನ್ನು ಈ ಚಾಕೋಲೆಟ್‌ಗಳಲ್ಲಿಯೂ ಕೆಲವರು ಸೇರಿಸುತ್ತಾರೆ, ಆದ್ದರಿಂದ ಮಕ್ಕಳಿಗೆ ಇದನ್ನು ಕೊಡಿಸುವಾಗ ಜಾಗ್ರತೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications