ನಿಮ್ಮ ಕಿಚನ್ನೇ ನಿಮ್ಮ ಹಾಸ್ಪಿಟಲ್! ಬಾಡಿ ಹೆಲ್ತ್‌ಗೆ ಈ ಜ್ಯೂಸ್ ಸಾಕು.. ಇಲ್ಲಿದೆ ಸೀಕ್ರೆಟ್

ನಿಮ್ಮ ಅಡುಗೆ ಮನೆಯೇ ನಿಮ್ಮ ಆಸ್ಪತ್ರೆ. ಈ ಜ್ಯೂಸ್‌ಗಳೇ ನಿಮ್ಮ ಅಂಗಾಂಗಗಳಿಗೆ ಔಷಧ. ಹೌದು, ಆರೋಗ್ಯದ ಗುಟ್ಟು ನಮ್ಮ ಅಡುಗೆಮನೆಯಲ್ಲೇ (kitchen) ಇದೆ. ಪ್ರಕೃತಿ ನೀಡಿದ ಈ ಸರಳ, ಶುದ್ಧ ಪಾನೀಯಗಳು (Juices for Your Organs) ದೇಹವನ್ನು ಒಳಗಿನಿಂದ ಶುದ್ಧಗೊಳಿಸಿ, ಬಲ ಮತ್ತು ಚೈತನ್ಯ ನೀಡುತ್ತವೆ. ನಿಮ್ಮ ವಾರದ ವೆಲ್‌ನೆಸ್‌ ರೂಟೀನ್‌ನಲ್ಲಿ ಇವುಗಳನ್ನು ಅಳವಡಿಸಿಕೊಳ್ಳಿ. ಯಾವುದೇ ಕೆಮಿಕಲ್‌ಗಳಿಲ್ಲ, ಪಾರ್ಶ್ವ ಪರಿಣಾಮಗಳಿಲ್ಲ. ಕೇವಲ ಜ್ಞಾನ ಮತ್ತು ಚಿಕಿತ್ಸೆಯ ಶಕ್ತಿ ಮಾತ್ರ. ಈ ಜ್ಯೂಸ್‌ಗಳನ್ನು ನಿಯಮಿತವಾಗಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ.

ಅಡುಗೆ ಮನೆ ಎಂದರೆ ಊಟ ತಯಾರಿಸುವ ಸ್ಥಳ ಮಾತ್ರವಲ್ಲ. ನಿಮ್ಮ ಅಡುಗೆ ಮನೆಯೇ ನಿಮ್ಮ ಆರೋಗ್ಯ ಕೇಂದ್ರವಾಗಿದೆ. ಇಲ್ಲಿ ಸಿಗುವ ನೈಸರ್ಗಿಕ ಪದಾರ್ಥಗಳು ನಮ್ಮ ದೇಹದ ಪ್ರಮುಖ ಅಂಗಾಂಗಗಳನ್ನು (Organs) ಆರೋಗ್ಯವಾಗಿರಿಸಲು ಸಹಾಯ ಮಾಡುತ್ತವೆ. ಶತಮಾನಗಳಿಂದಲೂ ಬಳಸುತ್ತಿರುವ ಈ ಜ್ಯೂಸ್‌ಗಳು ಆಯುರ್ವೇದ ಪದ್ಧತಿಯ (Ayurveda Healing) ಭಾಗವಾಗಿದ್ದು, ನಿಮ್ಮ ಪ್ರಮುಖ ಅಂಗಾಂಗಗಳಾದ ಯಕೃತ್ತು, ಹೃದಯ, ಶ್ವಾಸಕೋಶ, ಮೆದುಳು ಮತ್ತು ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸಿ, ಪೋಷಿಸಲು ಸಹಾಯ ಮಾಡುತ್ತವೆ. ಯಾವುದೇ ರಾಸಾಯನಿಕಗಳಿಲ್ಲದೆ, ಇವು ನಿಮ್ಮ ದೇಹಕ್ಕೆ ನೈಸರ್ಗಿಕ ಔಷಧಿಯಾಗಿ ಕೆಲಸ ಮಾಡುತ್ತವೆ. ಈ ಪಾನೀಯಗಳನ್ನು ಸೇವಿಸುವುದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲದೆ ದೇಹದ ಪ್ರಮುಖ ಅಂಗಗಳನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು.

Juices for Organs
Photo Credit: AI

1. ಯಕೃತ್ತಿಗೆ ಅಮೃತ: ಆಮ್ಲಾ + ಅಲೋವೆರಾ + ಅರಿಶಿನ

ಯಕೃತ್ತು (ಲಿವರ್) ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದು. ಇದು ವಿಷಕಾರಿ ಅಂಶಗಳನ್ನು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ. ಯಕೃತ್ತಿನ ಆರೋಗ್ಯಕ್ಕೆ ನೆಲ್ಲಿಕಾಯಿ, ಅಲೋವೆರಾ ಮತ್ತು ಅರಿಶಿನದ ಮಿಶ್ರಣ ಅತ್ಯಂತ ಪರಿಣಾರಕಾರಿ.

ಪದಾರ್ಥಗಳು

• ತಾಜಾ ನೆಲ್ಲಿಕಾಯಿ ರಸ (ಆಮ್ಲಾ) - 30 ಮಿ.ಲೀ
• ಅಲೋವೆರಾ ರಸ - 30 ಮಿ.ಲೀ
• ಅರಿಶಿನ - 1/2 ಚಮಚ
• ಬಿಸಿ ನೀರು - 1/2 ಲೋಟ

ತಯಾರಿಸುವ ವಿಧಾನ: ಒಂದು ಲೋಟ ಬಿಸಿ ನೀರಿನಲ್ಲಿ 30 ಮಿ.ಲೀ ನೆಲ್ಲಿಕಾಯಿ ರಸ, 30 ಮಿ.ಲೀ ಅಲೋವೆರಾ ರಸ ಮತ್ತು ಒಂದು ಚಿಟಿಕೆ ಅರಿಶಿನ ಪುಡಿಯನ್ನು ಬೆರೆಸಿ. ಈ ಜ್ಯೂಸ್‌ ಅನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಯಕೃತ್ತಿನ ಕಾರ್ಯಕ್ಷಮತೆ ಹೆಚ್ಚುತ್ತದೆ. ಇದು ಯಕೃತ್ತಿನ ಶುದ್ಧೀಕರಣಕ್ಕೆ ಸಹಾಯ ಮಾಡುತ್ತದೆ.

ಸೇವಿಸುವ ಸಮಯ: ವಾರಕ್ಕೆ ಮೂರು ಬಾರಿ, ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿ.

2. ಹೃದಯಕ್ಕೆ ಶಕ್ತಿ: ಬೀಟ್ರೂಟ್ + ಅರ್ಜುನ ತೊಗಟೆ

ಆರೋಗ್ಯಕರ ಹೃದಯಕ್ಕಾಗಿ ಬೀಟ್ರೂಟ್ ಮತ್ತು ಅರ್ಜುನ ತೊಗಟೆ ಅತ್ಯುತ್ತಮ ಜ್ಯೂಸ್. ಅರ್ಜುನ ತೊಗಟೆಯು ಹೃದಯದ ಆರೋಗ್ಯಕ್ಕೆ ಬಹಳ ಹಿಂದಿನಿಂದಲೂ ಆಯುರ್ವೇದದಲ್ಲಿ ಬಳಸಲಾಗುತ್ತದೆ. ಇದು ಹೃದಯದ ಸ್ನಾಯುಗಳನ್ನು ಬಲಪಡಿಸಿ, ರಕ್ತ ಪರಿಚಲನೆಯನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ.

ಪದಾರ್ಥಗಳು

• ಬೀಟ್ರೂಟ್ - 1/2 ಅಥವಾ ಒಂದು
• ಅರ್ಜುನ ತೊಗಟೆ ಪುಡಿ (ಅರ್ಜುನ ಬರ್ಕ್ ಪೌಡರ್) - 1 ಚಮಚ
• ನಿಂಬೆ ರಸ - 1 ಚಮಚ
• ನೀರು - ಅಗತ್ಯಕ್ಕೆ ತಕ್ಕಷ್ಟು

ತಯಾರಿಸುವ ವಿಧಾನ: ಒಂದು ಲೋಟ ಬೀಟ್ರೂಟ್ ರಸಕ್ಕೆ 10 ಮಿ.ಲೀ ಅರ್ಜುನ ತೊಗಟೆ ಕಷಾಯ ಅಥವಾ ಅರ್ಜುನ ಪುಡಿ ಬೆರೆಸಿ. ಈ ಜ್ಯೂಸ್ ಸೇವಿಸುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಹೃದಯದ ಸ್ನಾಯುಗಳು ಬಲಗೊಳ್ಳುತ್ತವೆ.

ಸೇವಿಸುವ ಸಮಯ: ಪ್ರತಿದಿನ ಬೆಳಗ್ಗೆ ಉಪಹಾರದ ನಂತರ ಇದನ್ನು ಸೇವಿಸಿ.

3. ಶ್ವಾಸಕೋಶಕ್ಕೆ ಚೈತನ್ಯ: ತುಳಸಿ + ಶುಂಠಿ + ಜೇನು

ಪ್ರಸ್ತುತ ದಿನಗಳಲ್ಲಿ ವಾಯುಮಾಲಿನ್ಯದಿಂದ ನಮ್ಮ ಶ್ವಾಸಕೋಶಗಳು ಹೆಚ್ಚು ಹಾನಿಯಾಗುವುದು ಸಾಮಾನ್ಯ. ಶ್ವಾಸಕೋಶದ ಆರೋಗ್ಯ ಕಾಪಾಡಲು ತುಳಸಿ, ಶುಂಠಿ ಮತ್ತು ಜೇನುತುಪ್ಪದ ಮಿಶ್ರಣವು ಉತ್ತಮ ಪರಿಹಾರ. ಇದು ನಿಮ್ಮ ಶ್ವಾಸಕೋಶಗಳನ್ನು ಸ್ವಚ್ಛಗೊಳಿಸಿ, ಉಸಿರಾಟವನ್ನು ಸುಗಮಗೊಳಿಸುತ್ತದೆ.

ಪದಾರ್ಥಗಳು

• ತುಳಸಿ ಎಲೆಗಳು - 5-6
• ಶುಂಠಿ ರಸ - 1/2 ಚಮಚ
• ಜೇನುತುಪ್ಪ - 1 ಚಮಚ
• ಬಿಸಿ ನೀರು - 1/2 ಲೋಟ

ತಯಾರಿಸುವ ವಿಧಾನ: ಒಂದು ಲೋಟ ಬಿಸಿನೀರಿಗೆ 5-6 ತುಳಸಿ ಎಲೆ, ಒಂದು ಸಣ್ಣ ತುಂಡು ಶುಂಠಿ ಮತ್ತು ಒಂದು ಚಮಚ ಜೇನುತುಪ್ಪ ಬೆರೆಸಿ. ಇದನ್ನು ಚೆನ್ನಾಗಿ ಕುದಿಸಿ ನಂತರ ಸೋಸಿ ಕುಡಿಯಿರಿ. ಈ ಜ್ಯೂಸ್ ಶ್ವಾಸಕೋಶದಲ್ಲಿನ ಕಫವನ್ನು ನಿವಾರಿಸಿ, ಉಸಿರಾಟವನ್ನು ಸುಗಮಗೊಳಿಸುತ್ತದೆ.

ಸೇವಿಸುವ ಸಮಯ: ಊಟದ ನಂತರ ಅಥವಾ ರಾತ್ರಿ ಮಲಗುವ ಮೊದಲು ಸೇವಿಸಿ. ನಿಮಗೆ ಆಸಿಡಿಟಿ ಸಮಸ್ಯೆಗಳಿದ್ದರೆ ಇದನ್ನು ಸೇವಿಸಬೇಡಿ.

Take a Poll

4. ಮೆದುಳಿಗೆ ಪೋಷಣೆ: ದಾಳಿಂಬೆ + ಬ್ರಹ್ಮಿ

ಮೆದುಳಿನ ಆರೋಗ್ಯ, ಜ್ಞಾಪಕಶಕ್ತಿ, ಏಕಾಗ್ರತೆ ಹೆಚ್ಚಿಸಲು ಹಾಗೂ ನರಗಳನ್ನು ಬಲಪಡಿಸಲು ಬ್ರಾಹ್ಮಿ ಮತ್ತು ದಾಳಿಂಬೆ ರಸದ ಮಿಶ್ರಣ ಅದ್ಭುತ. ಬ್ರಾಹ್ಮಿಯು ಜ್ಞಾಪಕಶಕ್ತಿ ವರ್ಧಕವಾಗಿ ಆಯುರ್ವೇದದಲ್ಲಿ ಹೆಸರುವಾಸಿಯಾಗಿದೆ.

ಪದಾರ್ಥಗಳು

• ದಾಳಿಂಬೆ ಕಾಳುಗಳು - 1/2 ಲೋಟ
• ಬ್ರಾಹ್ಮಿ ಪುಡಿ (10 ಬ್ರಾಹ್ಮಿ ಎಲೆಗಳು) - 1 ಚಮಚ
• ತುಪ್ಪ - 1/2 ಚಮಚ
• ನೀರು

ತಯಾರಿಸುವ ವಿಧಾನ: ದಾಳಿಂಬೆ, ಬ್ರಾಹ್ಮಿ ಮತ್ತು ನೀರು ಸೇರಿಸಿ ರುಬ್ಬಿ. ಒಂದು ಲೋಟ ದಾಳಿಂಬೆ ರಸಕ್ಕೆ 10 ಮಿ.ಲೀ ಬ್ರಾಹ್ಮಿ ರಸ ಅಥವಾ ಅರ್ಧ ಚಮಚ ಬ್ರಾಹ್ಮಿ ಪುಡಿ ಬೆರೆಸಿ. ತುಪ್ಪವನ್ನು ಬೇಕಿದ್ದರೆ ಸೇರಿಸಬಹುದು. ಪ್ರತಿದಿನ ಈ ಜ್ಯೂಸ್ ಸೇವಿಸುವುದರಿಂದ ಮೆದುಳಿನ ಕಾರ್ಯಕ್ಷಮತೆ ಸುಧಾರಿಸುತ್ತದೆ ಮತ್ತು ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.

ಸೇವಿಸುವ ಸಮಯ: ಮಧ್ಯಾಹ್ನ ಅಥವಾ ಸಂಜೆಯ ಸಮಯದಲ್ಲಿ, ಊಟದ ನಂತರ ಸೇವಿಸಿ.

5. ಮೂತ್ರಪಿಂಡಕ್ಕೆ ತಂಪು: ಕೊತ್ತಂಬರಿ + ಎಳನೀರು + ಸೋಂಪು

ಮೂತ್ರಪಿಂಡಗಳು ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತವೆ. ಅವುಗಳ ಆರೋಗ್ಯಕ್ಕೆ ಕೊತ್ತಂಬರಿ ಸೊಪ್ಪು ಮತ್ತು ಎಳನೀರಿನ ಮಿಶ್ರಣ ಸಹಾಯಕ. ಇದು ಮೂತ್ರಪಿಂಡದ ಕಲ್ಲುಗಳು ಉಂಟಾಗುವುದನ್ನು ತಡೆಯಲು ಮತ್ತು ಮೂತ್ರಪಿಂಡವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ.

ಪದಾರ್ಥಗಳು

• ಕೊತ್ತಂಬರಿ ಸೊಪ್ಪು - 2 ಚಮಚ
• ಎಳನೀರು - 1 ಲೋಟ
• ಸೀಗೆ ಬೀಜಗಳು - 1/2 ಚಮಚ

ತಯಾರಿಸುವ ವಿಧಾನ: ಕೊತ್ತಂಬರಿ ಸೊಪ್ಪು, ಎಳನೀರು ಮತ್ತು ಸೀಗೆ ಬೀಜಗಳನ್ನು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ, ನಂತರ ಸೋಸಿ. ಒಂದು ಲೋಟ ಎಳನೀರಿಗೆ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಹಾಕಿ ರುಬ್ಬಿ. ಈ ಮಿಶ್ರಣವನ್ನು ಪ್ರತಿದಿನ ಸೇವಿಸುವುದರಿಂದ ಮೂತ್ರಪಿಂಡಗಳು ಸ್ವಚ್ಛಗೊಂಡು ಆರೋಗ್ಯವಾಗಿರುತ್ತವೆ.

ಸೇವಿಸುವ ಸಮಯ: ಮಧ್ಯಾಹ್ನ ಅಥವಾ ಸಂಜೆಯ ಸಮಯದಲ್ಲಿ, ಊಟದ ನಂತರ ಸೇವಿಸಿ.

ಈ ಸರಳ ಮತ್ತು ನೈಸರ್ಗಿಕ ಜ್ಯೂಸ್‌ಗಳನ್ನು ನಿಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಪ್ರಮುಖ ಅಂಗಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಜ್ಯೂಸ್‌ಗಳನ್ನು ತಾಜಾ ತಯಾರಿಸಿ ತಕ್ಷಣ ಕುಡಿಯುವುದು ಉತ್ತಮ. ನಿಯಮಿತ ಸೇವನೆ ಆರೋಗ್ಯದಲ್ಲಿ ನಿಜವಾದ ಬದಲಾವಣೆಯನ್ನು ತರುತ್ತದೆ. ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಆಯುರ್ವೇದ ವೈದ್ಯರ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು. ನೆನಪಿರಲಿ, ನಿಮ್ಮ ಆರೋಗ್ಯದ ಬೀಗ ಮನೆಯಲ್ಲೇ ಇದೆ.. ಅದುವೇ ನಿಮ್ಮ ಅಡುಗೆಮನೆ!

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Juices for Your Organs: natural healing from your kitchen

Juices for Your Organs: natural healing from your kitchen
X
Desktop Bottom Promotion