Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಜಾಹ್ನವಿ ಕಪೂರ್ ಪ್ರಕಾರ ತೂಕ ಇಳಿಸಿಕೊಂಡು ಫಿಟ್ ಆಗಿರೋದಕ್ಕೆ ಇಷ್ಟು ಮಾಡಿದ್ರೆ ಸಾಕು!
ಜಾಹ್ನವಿ ಕಪೂರ್ ಬಾಲಿವುಡ್‌ನ ಟ್ಯಾಲೆಂಟೆಡ್ ನಟಿಯರಲ್ಲಿ ಒಬ್ಬರು. ಶ್ರೀದೇವಿ ಹಾಗೂ ಬೋನಿ ಕಪೂರ್ ದಂಪತಿಗಳ ಪುತ್ರಿಯಾದ ಜಾಹ್ಮವಿ ಕಪೂರ್ ಅವರು ಬಾಲಿವುಡ್‌ನ ಟಾಪ್ ನಟಿಯರ ಸಾಲಿನಲ್ಲಿ ಒಬ್ಬರು. 2018 ರಲ್ಲಿ ಮೊದಲ ಬಾರಿಗೆ ಧಡಕ್ ಸಿನಿಮಾದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಜಾಹ್ನವಿ ಕಪೂರ್ ಆ ನಂತರ ತಿರುಗಿ ನೋಡಿದ್ದೇ ಇಲ್ಲ.
ಜಾಹ್ನವಿ ಸಿನಿಮಾಗಳಿಗಾಗಿ ಮಾತ್ರವಲ್ಲದೇ ಅವರ ಫಿಟಿನೆಸ್‌ಗಾಗಿಯೂ ಕೂಡ ಸುದ್ದಿಯಲ್ಲಿರ್ತಾರೆ. ಇನ್ನೂ ಸೋಶಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರೋ ಜಾಹ್ನವಿ ಕಪೂರ್ ಆಗಾಗ್ಗೆ ತಮ್ಮ ಫಿಟ್‌ನೆಸ್ ವಿಡಿಯೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅಷ್ಟಕ್ಕು ಜಾಹ್ನವಿ ಕಪೂರ್ ಫಿಟ್ ಆಗಿ ಇರೋದಕ್ಕೆ ಏನು ಮಾಡ್ತಾರೆ? ಅವರ ಫಿಟ್‌ನೆಸ್ ದಿನಚರಿ ಹೇಗಿರುತ್ತೆ ಅನ್ನೋದನ್ನು ತಿಳಿಯೋಣ.

ಯೋಗ
ನಟಿ ಅಂದ ಮೇಲೆ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ. ಜಾಹ್ನವಿ ಕಪೂರ್ ಅವರು ಸಿನಿಮಾ, ರಾಂಪ್‌ವಾಕ್ ಹಾಗೂ ಜಾಹೀರಾತುಗಳ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿರುತ್ತಾರೆ. ಇದರ ಮಧ್ಯೆ ನಿತ್ಯವು ಅವರು ಜಿಮ್‌ಗೆ ಹೋಗೋದನ್ನು ಮಿಸ್ ಮಾಡೋದೇ ಇಲ್ಲ. ಇದ್ರ ಜೊತೆಗೆ ಯೋಗ ಕೂಡ ಮಾಡ್ತಾರೆ. ಮುಂಬೈನ ಮಲೈಕಾ ಅರೋರ ಸರ್ವಾ ಯೋಗ ಸ್ಟುಡಿಯೋದಲ್ಲಿ ಯೋಗಾಭ್ಯಾಸ ಮಾಡ್ತಾರೆ. ಹೀಗಾಗಿ ಜಾಹ್ನವಿ ಕಪೂರ್ ಅವರು ಫಿಟ್ ಹಾಗೂ ಆರೋಗ್ಯವಾಗಿರುತ್ತಾರೆ.
ರೋಪ್ ಟ್ರೈನಿಂಗ್
ಜಾಹ್ನವಿ ಕಪೂರ್ ನಿತ್ಯವು ರೋಪ್ ಟ್ರೈನಿಂಗ್ ಅಭ್ಯಾಸ ಮಾಡುತ್ತಾರೆ. ಇದರಿಂದ ಇಡೀ ದೇಹಕ್ಕೆ ವರ್ಕ್‌ಔಟ್ ಸಿಕ್ಕಂತಾಗುತ್ತದೆ. ಇದರಿಂದ ಬೆನ್ನಿನ ಸ್ನಾಯುಗಳು, ತೋಳುಗಳು, ಬೆನ್ನು ಸೇರಿದಂತೆ ಇಡೀ ದೇಹಕ್ಕೆ ವ್ಯಾಯಾಮ ಸಿಕ್ಕಂತಾಗುತ್ತದೆ. ಇನ್ನೂ ಜಾಹ್ನವಿ ಕಪೂರ್ ಅವರು ವರ್ಕ್‌ಔಟ್ ಮಾಡುವುದು ಮಾತ್ರವಲ್ಲದೇ ಇದರ ಜೊತೆಗೆ ನೃತ್ಯಕ್ಕೂ ಕೂಡ ಅಷ್ಟೇ ಪ್ರಾಮುಖ್ಯತೆ ನೀಡುತ್ತಾರೆ.
ಬೆಲ್ಲಿ ಡಾನ್ಸ್
ಬೆಲ್ಲಿ ಡಾನ್ಸ್ ಮಾಡೋದ್ರಿಂದ ನಮ್ಮ ಸಾಮರ್ಥ್ಯ ಹೆಚ್ಚಾಗುತ್ತದೆ. ಬೆಲ್ಲಿ ಡಾನ್ಸ್ ಮಾಡೋದ್ರಿಂದ ನಮ್ಮ ದೇಹಕ್ಕೆ ಸ್ಥಿರತೆಯನ್ನು ಒದಗಿಸುತ್ತದೆ. ಬೆಲ್ಲಿ ಡಾನ್ಸ್ ಮಾಡೋದ್ರಿಂದ ಆರೋಗ್ಯಕರ ಪ್ರಯೋಜನವನ್ನು ಕೂಡ ಹೊಂದಿದೆ. ಜೊತಗೆ ನಿಮ್ಮ ಚರ್ಮ ಕಾಂತಿಯುತವನ್ನಾಗಿ ಕಾಣಿಸಿಕೊಳ್ಳಲು ಸಹಾಯ ಮಾಡುತ್ತದೆ.
ವರ್ಕ್‌ಔಟ್ ಮಿಸ್ ಮಾಡೋದಿಲ್ಲ
ಸೆಲೆಬ್ರಿಟಿಗಳು ಪ್ರತಿನಿತ್ಯ ವರ್ಕ್‌ಔಟ್ ಮಾಡೋದನ್ನು ಮಿಸ್ ಮಾಡೋದಿಲ್ಲ. ಆದ್ರೆ ಕೆಲವೊಂದು ಸಾರಿ ಅವರು ಕೂಡ ಬ್ರೇಕ್ ತೆಗೆದುಕೊಳ್ಳುತ್ತಾರೆ. ಆದರೆ ಜಾಹ್ನವಿ ಕಪೂರ್ ಅವರು ರಜಾ ಸಮಯದಲ್ಲೂ ಕೂಡ ವರ್ಕ್‌ಔಟ್‌ನ ಮಿಸ್ ಮಾಡೋದೇ ಇಲ್ವಂತೆ. ಹೀಗಂತ ಅವರ ಟ್ರೈನರ್ ಆದಂತಹ ನಮೃತ ಅವರು ಇಂಟ್ರವ್ಯೂ ಒಂದರಲ್ಲಿ ಹೇಳಿಕೊಂಡಿದ್ದರು.
ಜಾಹ್ನವಿ ಡಯೆಟ್ ಪ್ಲಾನ್ ಹೇಗಿರುತ್ತೆ?
ಜಾಹ್ನವಿ ಕಪೂರ್ ತುಂಬಾನೇ ಫುಡ್ಡಿ. ಅವರಿಗೆ ರುಚಿ ರುಚಿಯಾದ ಆಹಾರಗಳನ್ನು ತಿನ್ನೋದಂದ್ರೆ ತುಂಬಾನೇ ಇಷ್ಟವಂತೆ. ಜಾಹ್ನವಿ ಕಪೂರ್ ಅವರು ಕೆಟೋ ಡಯೇಟ್ ಅನ್ನು ಫಾಲೋ ಮಾಡ್ತಾರಂತೆ. ಕೆಟೊಜೆನಿಕ್ ಡಯೆಟ್‌ನಲ್ಲಿ ಹೈ ಫ್ಯಾಟ್ ಹಾಗೂ ತುಂಬಾನೇ ಕಡಿಮೆ ಕಾರ್ಬೋಹೈಡ್ರೇಟ್ ಸೇರಿರುತ್ತಂತೆ. ಹೀಗಾಗಿ ಇದು ದೇಹದ ತೂಕ ಇಳಿಸೋದಕ್ಕೆ ಸಹಾಯವಾಗುತ್ತಂತೆ.
ಜಾಹ್ನವಿ ಆಹಾರ ಕ್ರಮ ಹೇಗಿರುತ್ತೆ?
ಜಾಹ್ನವಿ ಕಪೂರ್ ಅವರ ಆಹಾರ ಕ್ರಮ ಹೇಗಿರುತ್ತೆ ಅನ್ನೋದನ್ನು ತಿಳಿದುಕೊಳ್ಳುವ ಕುತೂಹಲ ತುಂಬಾ ಜನರಿಗೆ ಇರುತ್ತದೆ. ಬೆಳಗ್ಗಿನ ಉಪಹಾರಕ್ಕೆ ಅವರು ಎರಡು ಮೊಟ್ಟೆ ಮತ್ತು ಬೆಣ್ಣೆ ಹಣ್ಣು ತಿನ್ನುತ್ತಾರಂತೆ. ಇನ್ನೂ ಊಟಕ್ಕೆ ಪಾಲಕ್ ಹಾಗೂ ಗ್ರಿಲ್ಡ್ ಚಿಕನ್ ತಿನ್ನುತ್ತಾರಂತೆ. ರಾತ್ರಿಯ ಊಟದ ಜೊತೆಗೆ ಸೂಪ್ ಕುಡಿಯುತ್ತಾರಂತೆ.
ಬಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರಾದ ಜಾಹ್ನವಿ ಫಿಟ್ ಆಗಿರಬೇಕೆಂದರೆ ಈ ಎಲ್ಲಾ ಕಸರತ್ತುಗಳನ್ನು ಮಾಡ್ತಾರೆ. ವ್ಯಾಯಾಮ, ಯೋಗ, ನೃತ್ಯ ಸೇರಿದಂತೆ ತಿನ್ನುವ ಆಹಾರ ಕ್ರಮವನ್ನು ಸರಿಯಾಗಿ ಪಾಲಿಸೋದ್ರಿಂದ ಫಿಟ್ ಆಗಿರೋದಕ್ಕೆ ಸಾಧ್ಯವಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

