Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಕೋವಿಶೀಲ್ಡ್ ಲಸಿಕೆ ಪಡೆದ ಬಳಿಕ ಪುನೀತ್ ರಾಜ್‌ಕುಮಾರ್‌ಗೆ ಹೃದಯಾಘಾತವಾಯ್ತು: ಕೊರೊನಾ ಲಸಿಕೆ ಕಾರಣವಾಯ್ತೆ?
ಕೊರೊನಾ ಲಸಿಕೆ ಬಂದಾಗಿನಿಂದ ಅದರ ಅಡ್ಡಪರಿಣಾಮದ ಬಗ್ಗೆ ಜನರಿಗೆ ಆತಂಕವಿತ್ತು. ಇನ್ನು ಕೊರೊನಾ ಬಳಿಕ ಹೃದಯಾಘಾತದ ಸಮಸ್ಯೆ ಹೆಚ್ಚಾಗುತ್ತಿರುವುದರಿಂದ ಕೊರೊನಾ ಲಸಿಕೆಯಿಂದ ಉಂಟಾಗುತ್ತಿರಬಹುದೇ ಎಂಬ ಅನುಮಾನವಿತ್ತು.
ಅದರಲ್ಲೂ ಪುನೀತ್ ರಾಜ್‌ಕುಮಾರ್ ಹೃದಯಾಘಾತದಿಂದ ತೀರಿಕೊಂಡಾಗ ಕೊರೊನಾ ಲಸಿಕೆಗೂ ಇವರಿಗೆ ಹೃದಯಾಘಾತಕ್ಕೂ ಏನಾದರೂ ಸಂಬಂಧವಿದೆಯೇ ಎಂಬ ಅನುಮಾನ ಜನರಿಗೆ ಉಂಟಾಗಿತ್ತು. ಆದರೆ ವೈದ್ಯರುಗಳು ಕೊರೊನಾ ಲಸಿಕೆಗೂ, ಹೃದಯಾಘಾತಕ್ಕೂ ಸಂಬಂಧವಿಲ್ಲ ಎಂದ ಮೇಲೆ ಸುಮ್ಮನಾಗಿದ್ದರು.

ಮತ್ತೆ ಪುನೀತ್ ಸಾವಿನ ಬಗ್ಗೆ ಪ್ರಶ್ನೆ ಹುಟ್ಟಿಕೊಂಡಿದೆ
ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ಕೆಲವರಿಗೆ ಅಡ್ಡ ಪರಿಣಾಮ ಉಂಟಾಗಿದೆ ಎಂದ ಮೇಲೆ ಮತ್ತೆ ಜನರಲ್ಲಿ ಸಂಶಯ ಮೂಡಿದೆ. ಪುನೀತ್ ರಾಜ್‌ಕುಮಾರ್ ಸಾವಿಗೆ ಈ ಕೊರೊನಾ ಲಸಿಕೆ ಕಾರಣವಾಗಿರಬಹುದೇ ಎಂಬ ಪ್ರಶ್ನೆ ಮತ್ತೆ ಮೂಡುತ್ತಿದೆ. ಏಕೆಂದರೆ ಕೊರೊನಾ ಲಸಿಕೆ ಪಡೆದ ಕೆಲವೇ ದಿನಗಳಲ್ಲಿ ಅಷ್ಟೊಂದು ಕಟ್ಟು ಮಸ್ತಾಗಿದ್ದ, ಆರೋಗ್ಯದ ಬಗ್ಗೆ ಅಷ್ಟೊಂದು ಕಾಳಜಿ ವಹಿಸಿದ್ದ ವ್ಯಕ್ತಿ ಸಾವನ್ನಪ್ಪಿದ್ದರು.
ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ ಕೊರೊನಾ ಬಳಿಕ ಜನರಿಗೆ ಹೃದಯಾಘಾತ ಕಾಣಿಸಿಕೊಂಡಂತೆ ಈ ಮೊದಲು ಇರಲಿಲ್ಲ
ಮೊದಲೆಲ್ಲಾ ಹೃದಯಾಘಾತ 45 ವರ್ಷ ಮೇಲ್ಪಟ್ಟವರಲ್ಲಿ ಕಂಡು ಬರುತ್ತಿತ್ತು, ಆದರೆ ಇತ್ತೀಚಿನ 2-3 ವರ್ಷಗಳಲ್ಲಿ ಯುವಕರಲ್ಲಿ, ಹದಿಹರೆಯದ ಪ್ರಾಯದವರಲ್ಲಿ ಹೃದಯಾಘಾತ ಸಮಸ್ಯೆ ಕಂಡು ಬರುತ್ತಿದೆ, ಆ ಮಕ್ಕಳಿಗೇನು ಹೃದಯ ಸಂಬಂಧಿ ಕಾಯಿಲೆ ಇದ್ದಿದ್ದು ಇಲ್ಲ ಎಂದ ಎಷ್ಟೋ ಪೋಷಕರು ಹೇಳಿದ್ದಾರೆ. ಅಷ್ಟೋ ಆರೋಗ್ಯವಾಗಿದ್ದ ಯುವಕ-ಯುವತಿಯರು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪುತ್ತಿದ್ದಾರೆ. ಇದಕ್ಕೆಲ್ಲಾ ಕೊರೊನಾ ಲಸಿಕೆ ಕಾರಣವಿರಬಹುದೇ ಎಂಬ ಸಂಶಯ ಜನರನ್ನು ಕಾಡುತ್ತಲೇ ಇದೆ.
ಕೋವಿಶೀಲ್ಡ್‌ನಿಂದ ಅಡ್ಡಪರಿಣಾಮವಿದೆ ಎಂದು ಒಪ್ಪಿಕೊಂಡ ಆಸ್ಟ್ರೆಜೆನಿಕಾ ಕಂಪನಿ
ಆಸ್ಟ್ರೆಜೆನಿಕಾ ಕಂಪನಿ ಕೋವಿಶೀಲ್ಡ್ ವ್ಯಾಕ್ಸ್‌ಜೆವೆರಿಯಾ ಮುಂತಾದ ಬ್ರ್ಯಾಂಡ್‌ನ ಅಡಿಯಲ್ಲಿ ಲಸಿಕೆಯನ್ನು ನೀಡಿದೆ. ಭಾರತದಲ್ಲಿ ಕೋವಿಶೀಲ್ಡ್, ಕೊವಾಕ್ಸಿನ್ ಲಸಿಕೆ ನೀಡಲಾಗಿತ್ತು. ಕೋಟ್ಯಾಂತರ ಭಾರತೀಯರು ಕೋವಿಶೀಲ್ಡ್ ಪಡೆದಿದ್ದಾರೆ.
ಕೊರೊನಾ ಲಸಿಕೆಯಿಂದ ಅಡ್ಡಪರಿಣಾಮ
ಕೊರೊನಾ ಲಸಿಕೆ ಪಡೆದಾಗTTS (TTS - Thrombosis with Thrombocytopenia Syndrome) ಅಪಾಯದ ಸಾಧ್ಯತೆ ಇದೆ. ಇದೊಂದು ಗಂಭೀರ ಸಮಸ್ಯೆಯಾಗಿದೆ. ಈ ಬಗೆಯ ಅಡ್ಡಪರಿಣಾಮ ಉಂಟಾದರೆ ರಕ್ತಹೆಪ್ಪುಗಟ್ಟುವುದು, ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾಗುವುದು.
ಕೊರೊನಾ ಲಸಿಕೆ ಪಡೆದವರು ಈಗ ಭಯ ಪಡಬೇಕೆ?
ಕೊರೊನಾ ಲಸಿಕೆಯಿಂದ ಅಡ್ಡಪರಿಣಾಮ ಉಂಟಾಗುವುದಾದರೆ ಕೆಲವೇ ದಿನಗಳಲ್ಲಿ ಅಥವಾ ತಿಂಗಳ ಒಳಗೆ ಗೊತ್ತಾಗುವುದು, ಆದರೆ ಲಸಿಕೆ ಪಡೆದು ವರ್ಷಗಳೇ ಕಳೆದಿದ್ದರೆ ಆತಂಕ ಪಡಬೇಡಿ.
ಚಿಕ್ಕ ಪುಟ್ಟ ಅಡ್ಡಪರಿಣಾಮಗಳ ಬಗ್ಗೆ ಆತಂಕ ಬೇಡ
ಲಸಿಕೆ ಚುಚ್ಚಿದ ಭಾಗದಲ್ಲಿ ನೋವು
ಜ್ವರ ಬರುವುದು
ವಾಂತಿ ಬಂದಂತೆ ಅನಿಸುವುದು
ಈ ರೀತಿಯ ಸಣ್ಣ ಪುಟ್ಟ ಅಡ್ಡಪರಿಣಾಮಗಳು ಬರಬಹುದು ಹಾಗಾಗಿ ಆತಂಕ ಪಡಬೇಕಾಗಿಲ್ಲ
ಗಂಭೀರ ಅಡ್ಡಪರಿಣಾಮ ಬೀರುವುದು ಬಲು ಅಪರೂಪ
ಕೋವಿಶೀಲ್ಡ್ ಲಸಿಕೆ ಪಡೆದ ಎಲ್ಲರಿಗೂ ಸಮಸ್ಯೆ ಬರುತ್ತೆ ಅಂತಲ್ಲ, ಈ ಲಸಿಕೆ ಪಡೆದ ಕೋಟಿಯಲ್ಲಿ ಒಬ್ಬರಿಗೆ ಅಡ್ಡಪರಿಣಾಮವಾದರೂ ಆಗಬಹುದು, ಹಾಗಾಗಿ ಲಸಿಕೆ ಪಡೆದವರು ಎಲ್ಲರೂ ಆತಂಕ ಪಡಬೇಕಾಗಿಲ್ಲ. ಕೊರೊನಾ ಲಸಿಕೆ ಪಡೆದು ತುಂಬಾ ಸಮಯವಾಗಿದ್ದರೆ ಈ ಆತಂಕ ಪಡುವ ಅವಶ್ಯಕತೆಯಿಲ್ಲ.
ವಿಶ್ವ ಆರೋಗ್ಯ ಸಂಸ್ಥೆ ಏನು ಹೇಳುತ್ತದೆ?
ಎಲ್ಲಾ ಔಷಧಿಗಳಂತೆ ಈ ಕೊರೊನಾ ಲಸಿಕೆಯೂ ಕೆಲವರಿಗೆ ಅಡ್ಡಪರಿಣಾಮ ಬೀರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಇದೆ. ಯಾವುದೇ ಔಷಧಿಯಾಗಿರಲಿ ಕೆಲವೊಂದು ಅಡ್ಡಪರಿಣಾಮ ಬೀರುವುದು, ಅದರಂತೆ ಈ ಕೊರೊನಾ ಲಸಿಕೆ ಕೂಡ, ಆದ್ದರಿಂದ ಕೋವಿಶೀಲ್ಡ್ ಲಸಿಕೆ ಪಡೆದ ಮೇಲೆ ಅನಗ್ಯತ ಭಯ ಪಡಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
