Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೂರ್ಛೆ ರೋಗ ಶಾಪವಲ್ಲ, ಈ ಕಾಯಿಲೆ ಬಗ್ಗೆ ಪ್ರತಿಯೊಬ್ಬರು ಅರಿತಿರಲೇಬೇಕಾದ ಸಂಗತಿಗಳಿವು
ಮೂರ್ಛೆರೋಗದ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ, ಆದರೆ ಈ ಮೂರ್ಛೆ ರೋಗದ ಬಗ್ಗೆ ಜನರಿಗೆ ಅರಿವು ಮೂಡಿಸಬೇಕಾಗುತ್ತದೆ. ಇದರ ಬಗ್ಗೆ ಡಾ. ಪ್ರಥಮ್ ಬೈಸಾನಿ,ಹಿರಿಯ ಸಲಹೆಗಾರ ಹಾಗೂ ನ್ಯೂರೋಸರ್ಜನ್,ವಾಸವಿ ಆಸ್ಪತ್ರೆ, ಬೆಂಗಳೂರು, ಇವರು ಓದುಗರಿಗೆ ನೀಡಿರುವ ಉಪಯುಕ್ತ ಸಲಹೆಗಳಿವೆ:

ಮೂರ್ಛೆ ರೋಗ ಎಂಬುವುದು ಒಂದು ಶಾಪವೇ?
ಮೂರ್ಛೆ ಬೀಳುವುದನ್ನು ಅನೇಕರು ಇದೊಂದು ಶಾಪ ಎಂದು ತಪ್ಪಾಗಿ ಭಾವಿಸುತ್ತಾರೆ, ಆದರೆ ಇದೊಂದು ನರವೈಜ್ಞಾನಿಕ ಕಾಯಿಲೆಯಾಗಿದ್ದು, ಇದನ್ನು ಅಪಸ್ಮಾರ ಅಥವಾ ಮೂರ್ಛೆ ರೋಗ ಎಂದು ಕರೆಯಲಾಗುವುದು. ಈ ಮೂರ್ಛೆ ರೋಗ ಯಾವುದೇ ವಯಸ್ಸಿನಲ್ಲಿ ಬೇಕಾದರು ಕಂಡು ಬರಬಹುದು,ಈ ಮೂರ್ಛೆ ರೋಗ ಕಂಡು ಬಂದಾಗ ಮೂಢ ನಂಬಿಕೆ ನಂಬದೆ, ಸೂಕ್ತ ತಜ್ಞರನ್ನು ಭೇಟಿಯಾಗಿ, ರೋಗ ಗುಣಮುಖವಾಗಲು ಚಿಕಿತ್ಸೆ ಪಡೆಯಬೇಕು.
ಈ ಕಾಯಿಲೆ ಬಗ್ಗೆ ಮಾತನಾಡಲು ಯಾವುದೇ ಹಿಂಜರಿಕೆಬೇಡ
ಮೂರ್ಛೆ ರೋಗದ ಬಗ್ಗೆ ಸರಿಯಾದ ಮಾಹಿತಿ ಹಲವರಿಗೆ ಇಲ್ಲ, ಹೀಗಾಗಿ ಈ ಕಾಯಿಲೆ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ, ಇದರ ಬಗ್ಗೆ ಹೇಳಿದರೆ ಎಲ್ಲಿ ಜನರು ತಪ್ಪಾಗಿ ತಿಳಿಯಬಹುದು ಎಂಬ ಆತಂಕ ಜನರಲ್ಲಿದೆ, ಈ ಕಾರಣಕ್ಕೆ ಈ ಕಾಯಿಲೆ ಬಗ್ಗೆ ಮಾತನಾಡಲು ಜನರು ಹಿಂಜರಿಯುತ್ತಾರೆ, ಇದರ ಬಗ್ಗೆ ಅತ್ಯಾಧುನಿಕವಾದ ಚಿಕಿತ್ಸೆಯಿದೆ, ಆದರೆ ಜನರು ಇದರ ಬಗ್ಗೆ ತಿಳಿದುಕೊಳ್ಳದೆ ಸಾವನ್ನಪ್ಪುತ್ತಿದ್ದಾರೆ, ಈ ಅಪಸ್ಮಾರದಿಂದ ಸಾವನ್ನಪ್ಪಿರುವ ಸಂಖ್ಯೆ ಹೆಚ್ಚಿದ್ದು, ಹಠಾತ್ ಸಾವು ಎಂದು ಪರಿಗಣಿಸಲಾಗುತ್ತದೆ ಮತ್ತು ಅದನ್ನು ಎಸ್‌ಯುಡಿಇಪಿ ಎಂದೂ ಕರೆಯಲಾಗುತ್ತದೆ.
ಮೂರ್ಛೆ ರೋಗಕ್ಕೆ ಕಾರಣವೇನು?
ಮೂರ್ಛೆ ರೋಗದ ನಿಖರ ಕಾರಣ ಮತ್ತು ಯಾವ ರೀತಿಯ ಮೂರ್ಛೆ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂಬುನ್ನು ಅರ್ಥ ಮಾಡಿಕೊಂಡಾಗ ಅದರ ಚಿಕಿತ್ಸೆ ಪರಿಣಾಮಕಾರಿಯಾಗುವುದು. ಸಾಮಾನ್ಯವಾಗಿ ರೋಗಿಗಳಿಗೆ ರೋಗ ವಿರೋಧಿ ಔಷಧ ಅಥವಾ ಇತರೆ ಚಿಕಿತ್ಸೆಗಳನ್ನು ಅಗತ್ಯವಿದ್ದಾಗ ನೀಡಲಾಗುತ್ತದೆ.
ಮೂರ್ಛೆರೋಗಕ್ಕೆ ಸಾಮಾನ್ಯವಾಗಿ ಔಷಧ, ಶಸ್ತ್ರಚಿಕಿತ್ಸೆ ಮತ್ತು ವಿಶೇಷ ಆಹಾರ ಕ್ರಮವನ್ನು ವೈದ್ಯರು ಸೂಚಿಸುತ್ತಾರೆ.ಈ ರೋಗಗ್ರಸ್ತ ವಿರೋಧಿ ಔಷಧಿಗಳು ಮೆದುಳಿನಲ್ಲಿ ರೋಗ ಹರಡುವಿಕೆಯನ್ನು ನಿಯಂತ್ರಿಸುತ್ತದೆ.
ಕೆಲವೊಮ್ಮೆ ಅಪಸ್ಮಾರ ಹೊಂದಿರುವವರಲ್ಲಿ ಔಷಧಿಗಳ ಬಳಕೆ ನಿಜಕ್ಕೂ ಸಹಕಾರಿ. ಏಕೆಂದ್ರೆ ಮೆದುಳಿನ ಯಾವುದೋ ಒಂದು ಭಾಗದಲ್ಲಿ (ಫೋಕಲ್ ರೋಗಗ್ರಸ್ತವಾಗುವಿಕೆ) ಅಪಸ್ಮಾರದ ಲಕ್ಷಣಗಳು ಕಂಡುಬಂದಾಗ ಶಸ್ತ್ರಚಿಕಿತ್ಸೆ ಅಗತ್ಯವಿರುತ್ತದೆ. ಆಗ ರೋಗ ಲಕ್ಷಣದಿಂದ ಬಳಲುತ್ತಿರುವ ಜಾಗವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕುವುದರಿಂದ ಮತ್ತು ಚಿಕಿತ್ಸೆ ನೀಡುವುದರಿಂದ ಮುಂದಿನ ದಿನಗಳಲ್ಲಿ ರೋಗಹರಡುವಿಕೆಯನ್ನು ತಪ್ಪಿಸಲು ಅನುಕೂಲವಾಗುವುದು ಎಂದು ವೈದ್ಯರು ಹೇಳುತ್ತಾರೆ.
ಫೆಬ್ರವರಿ 10 ಅಪಸ್ಮಾರ ದಿನವನ್ನಾಗಿ ಆಚರಿಸಲಾಗುವುದು
ಪ್ರತಿ ವರ್ಷ ಫೆಬ್ರವರಿ 10ರಂದು ಅಂತರಾಷ್ಟ್ರೀಯ ಅಪಸ್ಮಾರ ದಿನವನ್ನು ಆಚರಿಸಲಾಗುತ್ತದೆ. ಅಪಸ್ಮಾರದಿಂದ ಬಳಲುತ್ತಿರುವವರಿಗೆ ಈ ಕಾಯಿಲೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ಅವರನ್ನು ಸಹಜ ಜೀವನದತ್ತ ಮರಳುವಂತೆ ಮಾಡುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುವುದು. ಅಲ್ಲದೆ ಈ ಕಾಯಿಲೆ ಬಗ್ಗೆ ಜನರಿಗಿರುವ ತಪ್ಪು ಕಲ್ಪನೆ ಹೋಗಲಾಡಿಸಲು ಕೂಡ ಈ ದಿನವನ್ನು ಆಚರಿಸಲಾಗುವುದು.
"ಅಂತರಾಷ್ಟ್ರೀಯ ಅಪಸ್ಮಾರ ದಿನವು ಅಪಸ್ಮಾರದ ಬಗೆಗಿನ ತಪ್ಪು ಕಲ್ಪನೆಗಳು, ಈ ಸಮಸ್ಯೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಿಕೆ, ಲಭ್ಯವಿರುವ ಚಿಕಿತ್ಸೆಗಳು ಮತ್ತು ಈ ಸಮಸ್ಯೆ ಕುರಿತ ಹೆಚ್ಚಿನ ಸಂಶೋಧನೆಯ ಅಗತ್ಯತೆಯ ಬಗೆಗೆ ಬೆಳಕು ಚೆಲ್ಲುತ್ತದೆ. ಪ್ರಸ್ತುವಾಗಿ ಅಂತರಾಷ್ಟ್ರೀಯ ಮತ್ತು ಸರ್ಕಾರಿ ಮಟ್ಟದಲ್ಲಿ ಹಾಗೂ ಸಾರ್ವಜನಿಕವಾಗಿ ರೋಗದ ಕುರಿತು ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ಈ ಸಮಸ್ಯೆಯ ಬಗ್ಗೆ ಗಮನಹರಿಸುವ ಅಗತ್ಯತೆ ಹೆಚ್ಚಿದೆ ಎನ್ನುತ್ತಾರೆ ತಜ್ಞರು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications