Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಡೆಂಗ್ಯೂವಿಂದ ಬಹು ಅಂಗಾಂಗ ವೈಫಲ್ಯಕ್ಕೆ ಒಳಗಾದ ಮಗು ಮತ್ತೆ ಜೀವನಕ್ಕೆ ಮರಳಿದ ಸ್ಪೂರ್ತಿದಾಯಕ ಕತೆ
ಇತ್ತೀಚೆಗೆ, ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದು ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ. ಡೆಂಗ್ಯೂ ಜ್ವರದ ಎಲ್ಲ ಪ್ರಕರಣಗಳಿಗೆ ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಇರುವುದಿಲ್ಲ, ಅತಿ ತೀವ್ರವಲ್ಲದ ಪ್ರಕರಣಗಳಲ್ಲಿ ಸಾಮಾನ್ಯವಾಗಿ ವೈದ್ಯರನ್ನು ಭೇಟಿಯಾಗಿ ಔಷದಿ ತೆಗೆದುಕೊಂಡರೆ ಡೆಂಗ್ಯೂ ವಾಸಿಯಾಗುತ್ತದೆ.
ಆದರೆ, ತೀವ್ರತರವಾದ ಪ್ರಕರಣಗಳಿಗೆ ಆಸ್ಪತ್ರೆಗೆ ದಾಖಲು ಮಾಡುವ ಪರಿಸ್ಥಿತಿ ಎದುರಾಗುತ್ತದೆ. ಡೆಂಗ್ಯೂ ಮಾರಣಾಂತಿಕ ಸ್ಥಿತಿಗೆ ತಲುಪಿದ ಅಪರೂಪದ ನಿದರ್ಶನಗಳಿವೆ. ಯಶವಂತಪುರದ ಮಣಿಪಾಲ್ ಆಸ್ಪತ್ರೆಯು, ಇತ್ತೀಚೆಗೆ ಅಂತಹ ಅಪರೂಪದ ಪರಿಸ್ಥಿತಿಗೆ ಸಾಕ್ಷಿಯಾಗಿದೆ.

ಮಗುವಿನಲ್ಲಿ ಕಂಡು ಬಂದ ಗಂಭೀರ ಡೆಂಗ್ಯೂ ಲಕ್ಷಣಗಳು
ಇತ್ತೀಚೆಗೆ, ಐದು ವರ್ಷದ ಮಗು ಮೊಹಮ್ಮದ್ ಅನ್ನು, ನಿರಂತರವಾದ ತೀವ್ರ ಜ್ವರ ಮತ್ತು ಅರಿವಿನ ಸಂಭಂದಿತ ಮೆದುಳಿನ ಕಾರ್ಯಗಳ ಕುಸಿತ, ಮಾನಸಿಕ ಗೊಂದಲದ ಕಾರಣದಿಂದಾಗಿ ಯಶವಂತಪುರದ ಮಣಿಪಾಲ್ ಆಸ್ಪತ್ರೆಗೆ ತರಲಾಯಿತು. ಮಗುವು ತನ್ನ ಹೆತ್ತವರನ್ನು ಗುರುತು ಹಿಡಿಯಲು ವಿಫಲವಾಯಿತು, ಊಟಕ್ಕಿಂತ ನಿದ್ರೆಗೆ ಆದ್ಯತೆ ನೀಡುತಿತ್ತು ಮತ್ತು ರಕ್ತದ ಪರಿಚಲನೆ ಕಡಿಮೆಯಾಗಿ ನಿಶ್ಯಕ್ತವಾಗಿತ್ತು.
ಮಗುವಿನ ಪ್ರಕರಣದ ತೀವ್ರತೆಯನ್ನು ಮನಗಂಡ ಯಶವಂತಪುರದ ಮಣಿಪಾಲ ಆಸ್ಪತ್ರೆಯ ಡಾ.ನಂದಿತಾ ರತ್ನಂ - ಕನ್ಸಲ್ಟೆಂಟ್ ಪಿಡಿಯಾಟ್ರಿಕ್ಸ್ ಮತ್ತು ಮಕ್ಕಳ ತೀವ್ರ ನಿಗಾ ವಿಭಾಗ, ಅವರು ಮಗುವನ್ನು ಕೂಡಲೇ ICUಗೆ ದಾಖಲಿಸಿದರು. ತೀವ್ರವಾದ ಡೆಂಗ್ಯೂ ಹಠಾತ್ ಪಿತ್ತಜನಕಾಂಗದ ವೈಫಲ್ಯಕ್ಕೆ ಕಾರಣವಾಗಿತ್ತು, ಮತ್ತು ಅದರಿಂದಾಗಿ ಮಗುವಿನ ಮೆದುಳಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಿದೆ ಎಂಬುದು ಸ್ಪಷ್ಟವಾಯಿತು.
ICUನಲ್ಲಿ, ಡಾ. ನಂದಿತಾ ರತ್ನಂ ಮತ್ತು ತಂಡವು ಮೊಹಮ್ಮದ್‌ನ ಜ್ವರವು ಆತಂಕಕಾರಿ ಪ್ರಮಾಣದಲ್ಲಿ ಮುಂದುವರಿದಿರುವುದನ್ನು ಗಮನಿಸಿದರು ಮತ್ತು ಅವನ ಯಕೃತ್ತಿನ ವೈಫಲ್ಯವು ವೇಗವಾಗಿ ಮುಂದುವರಿಯುತ್ತಿತ್ತು. ಯಕೃತ್ತು ವಿಫಲವಾದ ಕಾರಣ ಮಗುವಿಗೆ ಎನ್ಸೆಫಲೋಪತಿ (ಮೆದುಳಿನ ಉರಿಯೂತ) ಕೂಡ ಇತ್ತು. ಈ ಎಲ್ಲಾ ಸಂಕೇತಗಳು ಮಗುವಿನ ಡೆಂಗ್ಯೂ ಅಸಾಧಾರಣ ವೇಗದಲ್ಲಿ ಮುಂದುವರೆದಿದೆ ಮತ್ತು ಈಗ ಜೀವಕ್ಕೆ ಅಪಾಯವನ್ನುಂಟುಮಾಡುವ ಸ್ಥಿತಿಯಲ್ಲಿದೆ ಎಂಬುದರ ಸೂಚನೆಯಾಗಿದೆ.
ಬಹು ಅಂಗಾಂಗ ವೈಫಲ್ಯ
ಈ ದುರದೃಷ್ಟಕರ ಘಟನೆಯ ಕಾರಣವನ್ನು ಅರ್ಥಮಾಡಿಕೊಳ್ಳಲು, ವೈದ್ಯಕೀಯ ತಂಡವು ನಿರ್ಣಾಯಕ ಸೂಚಕವಾಗಿರುವ ಫೆರಿಟಿನ್ ಮಟ್ಟವನ್ನು ಪರೀಕ್ಷಿಸಿತು. ಸಾಮಾನ್ಯ ಶ್ರೇಣಿಯು 500 ರ ಆಸುಪಾಸಿನಲ್ಲಿರುತ್ತದೆ, ಆದರೆ ಮೊಹಮ್ಮದ್‌ನ ಮಟ್ಟವು ಸುಮಾರು ಒಂದು ಲಕ್ಷದ ಸಮೀಪದಲ್ಲಿದ್ದು, ಅವನ ಬದುಕುಳಿಯುವ ಬಗ್ಗೆ ಸವಾಲನ್ನು ತೀವ್ರಗೊಳಿಸಿತು. ಮೊಹಮ್ಮದ್‌ಗೆ ಡೆಂಗ್ಯೂನಿಂದ ಉಂಟಾದ ಹಿಮೋಫಾಗೋಸಿಟಿಕ್ ಲಿಂಫೋಹಿಸ್ಟಿಯೊಸೈಟೋಸಿಸ್ (HLH) ಇರುವುದು ಪತ್ತೆಯಾಯಿತು.
ಈ ವೈದ್ಯಕೀಯ ಸ್ಥಿತಿಯ ಬಗ್ಗೆ ಮೌಲ್ಯಯುತವಾದ ಒಳನೋಟಗಳನ್ನು ಹಂಚಿಕೊಂಡ ಡಾ. ನಂದಿತಾ ರತ್ನಂ ಅವರು ಮಾತನಾಡಿ, "HLH, ಅಥವಾ ಹಿಮೋಫಾಗೋಸಿಟಿಕ್ ಲಿಂಫೋಹಿಸ್ಟಿಯೊಸೈಟೋಸಿಸ್, ಪ್ರತಿರಕ್ಷಣಾ ವ್ಯವಸ್ಥೆ (immune system) ಅತಿಯಾಗಿ ಸಕ್ರಿಯವಾಗಿರುವ ಅಪರೂಪದ ಮತ್ತು ಸಂಕೀರ್ಣವಾದ ರೋಗಲಕ್ಷಣವಾಗಿದೆ. ಇದು ಹೆಚ್ಚಿನ ಮಟ್ಟದ ಜ್ವರ, ಯಕೃತ್ತು (liver) ಮತ್ತು ಗುಲ್ಮ (spine) ಗಾತ್ರದಲ್ಲಿ ಹೆಚ್ಚಳ, ಮತ್ತು ಹೈಪೊಟೆನ್ಷನ್ (ತೀವ್ರ ಕಡಿಮೆ ರಕ್ತದೊತ್ತಡ) ನಂತಹ ಗಂಭೀರ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ.
ಇದರಿಂದಾಗಿ ಎಲ್ಲಾ ಜೀವಕೋಶಗಳ ಮೇಲೆ ಗಂಭೀರ ಪರಿಣಾಮಗಳಾಗುವ ಸಾಧ್ಯತೆ ಇರುತ್ತದೆ. HLH ಆನುವಂಶಿಕವಾಗಿ ಅಥವಾ ಇತರ ಕಾರಣಗಳಿಂದ ಉಂಟಾಗಬಹುದು ಮತ್ತು ರೋಗನಿರ್ಣಯವನ್ನು ವ್ಯಕ್ತಿಯ ರೋಗಲಕ್ಷಣಗಳು ಮತ್ತು ಕೆಲವು ಪರೀಕ್ಷಾ ಫಲಿತಾಂಶಗಳನ್ನು ನೋಡುವುದರ ಮೂಲಕ ಮಾಡಬಹುದು." ಎಂದು ಹೇಳಿದರು
ಮೊಹಮ್ಮದ್ ಅವರ ಸ್ಥಿತಿಯ ತೀವ್ರತೆಯಿಂದ ಭರವಸೆ ಕಳೆದುಕೊಳ್ಳದ ಡಾ. ನಂದಿತಾ ರತ್ನಂ ಮತ್ತು ತಂಡವು ಸಮಗ್ರ ಚಿಕಿತ್ಸಾ ತಂತ್ರವನ್ನು ಪ್ರಾರಂಭಿಸಿತು. ಸಮಸ್ಯೆಗಳ ಹೊರತಾಗಿಯೂ, ವೆಂಟಿಲೇಷನ್ ಸೇರಿದಂತೆ ಮಲ್ಟಿ-ಆರ್ಗನ್ ಸಪೋರ್ಟ್ ಗೆ ಮೊಹಮ್ಮದ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದನು. ಒಂದು ವಾರದ ನಂತರ, ಮೊಹಮ್ಮದ್ ನ ಅಂಗಾಂಗ ಕಾರ್ಯಗಳು ಸುಧಾರಣೆಯ ಲಕ್ಷಣಗಳನ್ನು ತೋರಿಸಿದಾಗ ವೆಂಟಿಲೇಟರ್ ಮತ್ತು ಇತರ ಬಾಹ್ಯ ವೈದ್ಯಕೀಯ ಬೆಂಬಲವನ್ನು ಹಿಂತೆಗೆದುಕೊಳ್ಳಲಾಯಿತು. ಆದರೆ, ಅವನನ್ನು ಡಾ. ನಂದಿತಾ ರತ್ನಂ ಅವರ ತಜ್ಞ ಮೇಲ್ವಿಚಾರಣೆಯಲ್ಲಿ ಇರಿಸಲಾಗಿತ್ತು.
ವೈದ್ಯಲೋಕಕ್ಕೆ ಭರವಸೆ ಮೂಡಿಸಿದ ಮಗು
ICUನಲ್ಲಿ ಸುಮಾರು ಎರಡು ವಾರಗಳನ್ನು ಕಳೆದ ನಂತರ ಮೊಹಮ್ಮದ್ ನ ಹೋರಾಟವು ಜಯಗಳಿಸಿತು. ಕ್ರಮೇಣ, ಆರ್ಗನ್ ಸಪೋರ್ಟ್ ಅನ್ನು ಕಡಿಮೆ ಮಾಡಲಾಯಿತು, ಮತ್ತು ಅವನು ಈ ವೈದ್ಯಕೀಯ ಸ್ಥಿತಿಯಿಂದ ಜಯಶಾಲಿಯಾಗಿ ಹೊರಬಂದನು. ಒಂದು ತಿಂಗಳ ನಂತರ, ಈ ಪುಟ್ಟ ಪೋರ, ಮೊಹಮ್ಮದ್ ತನ್ನ ಸಾಮಾನ್ಯ ಜೀವನಕ್ಕೆ ಮರಳಿದನು ಮತ್ತು ಮುಂದಿನ ತಿಂಗಳು ಶಾಲೆಗೆ ಹೋಗಲು ತಯಾರಿ ಮಾಡಲು ಶುರುಮಾಡಿದನು.
ಅವನು ವೈದ್ಯಕೀಯ ತಂಡದ ಅಚಲ ಸಮರ್ಪಣೆ ಮತ್ತು ಅದಮ್ಯ ಮನೋಭಾವಕ್ಕೆ ಜೀವಂತ ಸಾಕ್ಷಿಯಾಗಿ ನಿಂತಿದ್ದಾನೆ. ಡೆಂಗ್ಯೂವಿನಿಂದ ಮಕ್ಕಳಲ್ಲಿ ಬಹು-ಅಂಗಗಳ ನಿಷ್ಕ್ರಿಯ ಕ್ರಿಯಯಾದರೂ ಜೀವನಕ್ಕೆ ಮರಳಬಹುದು ಎಂಬುವುದಕ್ಕೆ ಸಾಕ್ಷಿಯಾಗಿದ್ದಾನೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


